ಊರವರೇ ಸೇರಿಕೊಂಡು ನಿರ್ಮಿಸಿದರು ಕುಮಾರಧಾರ ನದಿಗೆ ತಾತ್ಕಾಲಿಕ ಸೇತುವೆ ➤ ಪಾಲೋಳಿ ತಾತ್ಕಾಲಿಕ ಸೇತುವೆ ಸಂಚಾರಕ್ಕೆ ಮುಕ್ತ
(ನ್ಯೂಸ್ ಕಡಬ) newskadaba.com ಕಡಬ, ಫೆ.05. ಸುತ್ತು ಬಳಸಿ ಸಂಚರಿಸುವುದನ್ನು ತಪ್ಪಿಸಲು ಊರವರೇ ಸೇರಿಕೊಂಡು ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದು, ಗುರುವಾರದಂದು ಸಂಚಾರಕ್ಕೆ ಮುಕ್ತವಾಗಿದೆ. ತಾಲೂಕು ಕೇಂದ್ರವಾಗಿರುವ ಕಡಬದಿಂದ ಎಡಮಂಗಲ ಸಂಪರ್ಕಿಸಲು ಸುತ್ತು ಬಳಸಿ 15 ಕಿಲೋಮೀಟರ್ ದೂರ ಸಂಚರಿಸುವುದಕ್ಕೆ ಇದೀಗ ಬ್ರೇಕ್ ಬಿದ್ದಿದ್ದು, ಕಡಬದಿಂದ ಪಿಜಕ್ಕಳ – ಪಾಲೋಳಿ ಮಾರ್ಗವಾಗಿ ಸಂಚರಿಸಿದರೆ ಕೇವಲ 5 ಕಿಲೋಮೀಟರ್ ಅಂತರದಲ್ಲಿ ಎಡಮಂಗಲವನ್ನು ಸಂಪರ್ಕಿಸಬಹುದಾಗಿದೆ. ಪಿಜಕ್ಕಳ ಸಮೀಪ ಪಾಲೋಳಿ ಎಂಬಲ್ಲಿ ಕುಮಾರಧಾರ ನದಿಗೆ ಊರವರೇ ಸೇರಿಕೊಂಡು ಅಡ್ಡಲಾಗಿ ತಾತ್ಕಾಲಿಕ […]






