ಕರ್ನಾಟಕ

ಪಂಜ: ಶ್ರೀ ಪಂಚಲಿಂಗೇಶ್ವರ ದೇವರ ಬಲಿ ಉತ್ಸವ ಪ್ರಾರಂಭ

(ನ್ಯೂಸ್ ಕಡಬ) newskadaba.com ಪಂಜ, ಫೆ. 05. ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಆರಂಭ ಗೊಂಡಿದೆ. ಇನ್ನು ಕೆಲವೇ ಹೊತ್ತಿನಲ್ಲಿ ದರ್ಶನ ಬಲಿ ಬಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಪಂಜ: ಶ್ರೀ ಪಂಚಲಿಂಗೇಶ್ವರ ದೇವರ ಬಲಿ ಉತ್ಸವ ಪ್ರಾರಂಭ Read More »

ಕರಾವಳಿ, ಕರ್ನಾಟಕ

ಸುಳ್ಯ: ರಸ್ತೆ ಬದಿನಿಂತಿದ್ದ ಕಾರಿಗೆ ಸ್ಕೂಟಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 05. ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ಯುವತಿಯೋರ್ವಳು ಚಲಾಯಿಸಿಕೊಂಡು ಬಂದ ಸ್ಕೂಟಿ ಡಿಕ್ಕಿ ಹೊಡೆದ ಘಟನೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ನಡೆದಿದೆ. ಘಟನೆಯ ಪರಿಣಾಮ ಕಾರಿನ ಹಿಂಬದಿ ಮತ್ತು ಸ್ಕೂಟಿಯ ಮುಂಭಾಗ ಜಖಂಗೊಂಡಿದೆ.

ಸುಳ್ಯ: ರಸ್ತೆ ಬದಿನಿಂತಿದ್ದ ಕಾರಿಗೆ ಸ್ಕೂಟಿ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅರಂತೋಡು: ಶಿಕಾರಿಗೆಂದು ಹೊರಟಿದ್ದ ನಾಲ್ವರ ಪೈಕಿ ಓರ್ವನಿಗೆ ಗುಂಡೇಟು

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 05. ಶಿಕಾರಿಗೆಂದು ಹೋಗಿದ್ದ ನಾಲ್ವರು ಯುವಕರ ಪೈಕಿ ಓರ್ವನಿಗೆ ಗುಂಡು ತಗುಲಿ ಗಾಯಗೊಂಡ ಘಟನೆ ನಡೆದಿದೆ. ಅರಂತೋಡಿನ ನಾಲ್ವರು ಯುವಕರು ಗುರುವಾರ ರಾತ್ರಿ ಶಿಕಾರಿಗೆಂದು ಪೂಮಲೆ ಕಾಡಿಗೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇವರೆಲ್ಲರೂ ಬೇರೆ ಬೇರೆ ಕಡೆ ಕುಳಿತು ಕಾಡುಪ್ರಾಣಿಗಳ ನಿರೀಕ್ಷೆಯಲ್ಲಿದ್ದಾಗ ಶಬ್ದ ಬಂದ ಕಡೆಗೆ ಓರ್ವ ಗುಂಡು ಹಾರಿಸಿದ್ದು, ಅದು ಆ ಕಡೆ ಕುಳಿತಿದ್ದ ಸತ್ಯಮೂರ್ತಿ ಎಂಬ ಯುವಕನಿಗೆ ತಾಗಿತ್ತು. ಗುಂಡೇಟಿಗೆ ಒಳಗಾದ ಸತ್ಯಮೂರ್ತಿಯನ್ನು ಸುಳ್ಯದ

ಅರಂತೋಡು: ಶಿಕಾರಿಗೆಂದು ಹೊರಟಿದ್ದ ನಾಲ್ವರ ಪೈಕಿ ಓರ್ವನಿಗೆ ಗುಂಡೇಟು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು, ಕೊಣಾಜೆ ಹಾಗೂ ಉಳ್ಳಾಲ‌ ಸೇರಿದಂತೆ‌ ಹಲವು ದೇವಾಲಯಗಳ ಕಳ್ಳತನ‌ ಪ್ರಕರಣ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 05. ದೇವಸ್ಥಾನಗಳ ಕಾಣಿಕೆ ಹುಂಡಿಯನ್ನು ಕದ್ದು ದುಷ್ಕೃತ್ಯವೆಸಗುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಸುಹೈಲ್ ಹಾಗೂ ಸಿರಾಜುದ್ದೀನ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಮಂಗಳೂರಿನ ಹಲವು ಕಡೆಗಳಲ್ಲಿ ಕೊರಗಜ್ಜ ಸ್ವಾಮಿ ದೈವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ಮಂಗಳೂರು, ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ದೇವಾಲಯಗಳಲ್ಲಿ ಕಳ್ಳತನ ನಡೆದಿತ್ತು. ಅಲ್ಲದೇ ಆರೋಪಿಗಳು ಕಾಣಿಕೆ ಹುಂಡಿಯನ್ನು ಕದ್ದ ಬಳಿಕ ಕಾಣಿಕೆ ಹುಂಡಿಗೆ ಬಳಸಿದ ಕಾಂಡೋಮ್ ಹಾಕುತ್ತಿದ್ದರಲ್ಲದೇ

ಮಂಗಳೂರು, ಕೊಣಾಜೆ ಹಾಗೂ ಉಳ್ಳಾಲ‌ ಸೇರಿದಂತೆ‌ ಹಲವು ದೇವಾಲಯಗಳ ಕಳ್ಳತನ‌ ಪ್ರಕರಣ ➤ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊಣಾಜೆ: ಮರಕ್ಕೆ ನೇಣುಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕೊಣಾಜೆ, ಫೆ. 05. ಅವಿವಾಹಿತ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ‌ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ನೆತ್ತಿಲಪದವು ಸೈಟ್ ನಿವಾಸಿ ರಕ್ಷಿತ್ ಸನಿಲ್(22) ಎಂದು ಗುರುತಿಸಲಾಗಿದೆ. ಈತನ ಮೃತದೇಹವು ನರಿಂಗಾನ ಗ್ರಾಮದ ಕೊಲ್ಲರಕೋಡಿ ಶಾಲಾ ಮೈದಾನದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಣಾಜೆ: ಮರಕ್ಕೆ ನೇಣುಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಸ್ ಪಾಸ್ ಅವ್ಯವಸ್ಥೆ ➤ ಜಿಲ್ಲಾದ್ಯಂತ ಸಿಎಫ್ಐ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 05. ಈ ಸಾಲಿನ ಬಸ್ಸು ಪಾಸ್‌ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಗೊಂದಲದ ಗೂಡಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸೇವಾ ಸಿಂಧುವಿನಲ್ಲಿ ನೋಂದಾಯಿಸಿ, ನಂತರ ಅದನ್ನು ಶಾಲಾ – ಕಾಲೇಜಿನ ಸಹಿ ಪಡೆದು ಮತ್ತೆ ಬಸ್ಸು ಡಿಪೋ‌ಗೆ ತಲುಪಿಸಿ ನಂತರ ಬಸ್ಸು ಪಾಸ್ ಪಡೆಯುವಂತೆ ಪ್ರಕ್ರಿಯೆ ಇದೀಗ ನಡೆಯುತ್ತಿದೆ, ಸೇವಾ ಸಿಂದು ಯಾವಾಗ ನೋಡಿದರೂ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು‌ ಇದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಬಸ್ ಪಾಸ್

ಬಸ್ ಪಾಸ್ ಅವ್ಯವಸ್ಥೆ ➤ ಜಿಲ್ಲಾದ್ಯಂತ ಸಿಎಫ್ಐ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಶಿರಾಡಿ: ರಸ್ತೆಗೆ ಉರುಳಿದ್ದ ಗ್ಯಾಸ್ ಟ್ಯಾಂಕರ್ ತೆರವು ➤ ಹೆದ್ದಾರಿ ಸಂಚಾರಕ್ಕೆ ಮುಕ್ತ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.05. ಅನಿಲ ತುಂಬಿದ್ದ ಟ್ಯಾಂಕರೊಂದು ಪಲ್ಟಿಯಾದ ಪರಿಣಾಮ ಬಂದ್ ಆಗಿದ್ದ ರಾಷ್ಟ್ರೀಯ ಹೆದ್ದಾರಿಯು ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಸಮೀಪದ ಕೆಂಪುಹೊಳೆ ಎಂಬಲ್ಲಿ ಶುಕ್ರವಾರದಂದು ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದರಿಂದ ರಸ್ತೆ ತಡೆಯುಂಟಾಗಿತ್ತು. ಅಪರಾಹ್ನ 2 ಗಂಟೆಯ ವೇಳೆಗೆ ಟ್ಯಾಂಕರನ್ನು ತೆರವುಗೊಳಿಸಲಾಗಿದ್ದು, ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.  

ಶಿರಾಡಿ: ರಸ್ತೆಗೆ ಉರುಳಿದ್ದ ಗ್ಯಾಸ್ ಟ್ಯಾಂಕರ್ ತೆರವು ➤ ಹೆದ್ದಾರಿ ಸಂಚಾರಕ್ಕೆ ಮುಕ್ತ Read More »

ಕರ್ನಾಟಕ

ಮಣಿಪಾಲ: ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಣಿಪಾಲ, ಫೆ. 05. ಆಟೋ ರಿಕ್ಷಾವೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಮಣಿಪಾಲ ಪೊಲೀಸರು ಇಂದು ಶೀಂಬ್ರಾ ಸೇತುವೆ ಬಳಿ ಬಂಧಿಸಿದ ಘಟನೆ ನಡೆದಿದೆ. ಬಂಧಿತರನ್ನು ಮಹಾರಾಷ್ಟ್ರ ಮೂಲದ ಗೌತಮ್ ರಾಜು ಶಿಮುಂಗೆ(30), ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ (38) ಹಾಗೂ ಬ್ರಹ್ಮಾವರ ಕೊಳಲಗಿರಿಯ ಕೃಷ್ಣ ಜಲಗಾರ್ (40)ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 2,66,000 ರೂ. ಮೌಲ್ಯದ ಸುಮಾರು 8 ಕೆ.ಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋ

ಮಣಿಪಾಲ: ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ ➤ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಧರ್ಮಸ್ಥಳ ಸ್ನಾನಘಟ್ಟದ ಬಳಿ ಅಪರಿಚಿತ ಮಹಿಳೆಯರ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಫೆ. 05. ಅಪರಿಚಿತ ಮಹಿಳೆಯರಿಬ್ಬರ ಮೃತದೇಹವು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿದೆ. ಮೃತ ಇಬ್ಬರು ಮಹಿಳೆಯರು ಸುಮಾರು 45 ಮತ್ತು 25 ವರ್ಷ ಪ್ರಾಯದವರು ಎಂದು ಅಂದಾಜಿಸಲಾಗಿದೆ. ನದಿ ತೀರಕ್ಕೆ ಸ್ನಾನಕ್ಕೆ ಆಗಮಿಸಿದ್ದ ಯಾತ್ರಾರ್ಥಿಗಳು ಮೃತದೇಹವನ್ನು ಮೊದಲು ನೋಡಿದ್ದು, ಇದರ ಮಾಹಿತಿಯಂತೆ ಪೋಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಮೃತದೇಹಗಳು ಕವುಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ಕಂಡುಬಂದಿದ್ದವು.

ಧರ್ಮಸ್ಥಳ ಸ್ನಾನಘಟ್ಟದ ಬಳಿ ಅಪರಿಚಿತ ಮಹಿಳೆಯರ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಶಿರಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ | ಅನಿಲ ಸೋರಿಕೆ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.05. ಅನಿಲ ತುಂಬಿದ್ದ ಟ್ಯಾಂಕರೊಂದು ಪಲ್ಟಿಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ತಡೆಯುಂಟಾದ ಘಟನೆ ಮಂಗಳೂರು – ಬೆಂಗಳೂರು ರಸ್ತೆಯ ಶಿರಾಡಿ ಸಮೀಪದ ಕೆಂಪುಹೊಳೆ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಸಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗಡ್ಡವಾಗಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದು, ಹೆದ್ದಾರಿಯಲ್ಲಿ ಸಂಚಾರ ವ್ಯತ್ಯವುಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿದ್ದು, ರಸ್ತೆ ತಡೆಯಲಾಗಿದೆ.

ಶಿರಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ | ಅನಿಲ ಸೋರಿಕೆ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top