ಕರ್ನಾಟಕ

ಬಿಜೆಪಿ ಪ್ರಣಾಳಿಕೆ ಬಿಡುಗಡೆ ► ರೈತರು, ಮಹಿಳೆಯರಿಗೆ ಹಲವು ಆಶ್ವಾಸನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ‌.04. ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿಯು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರೈತರು, ಮಹಿಳೆಯರಿಗೆ ಹಲವು ಆಶ್ವಾಸನೆಗಳನ್ನು ನೀಡಿದೆ. ಶುಕ್ರವಾರದಂದು ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ 1 ಲಕ್ಷ ರೂಪಾಯಿವರೆಗಿನ ಕೃಷಿ ಸಾಲ ಮತ್ತು ನೇಕಾರರ 1 ಲಕ್ಷ ರೂಪಾಯಿ ಸಾಲ ಮನ್ನಾ, ವಿವಾಹ ಮಂಗಳ ಯೋಜನೆ ಯಲ್ಲಿ ಬಡ ಯುವತಿಗೆ 25,000 ರೂ ಮತ್ತು 2.5 ಗ್ರಾಂ ಚಿನ್ನಾಭರಣ, ಸ್ತ್ರೀ ಶಕ್ತಿ ಸದಸ್ಯೆಯರಿಗೆ 2 […]

ಬಿಜೆಪಿ ಪ್ರಣಾಳಿಕೆ ಬಿಡುಗಡೆ ► ರೈತರು, ಮಹಿಳೆಯರಿಗೆ ಹಲವು ಆಶ್ವಾಸನೆ Read More »

ಕರ್ನಾಟಕ

ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.3. ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ತರಗತಿಗಳು ಇಂದಿನಿಂದ ಪ್ರಾರಂಭಗೊಳಿಸುವಂತೆ ಪ.ಪೂ. ಶಿಕ್ಷಣ ಇಲಾಖೆಯು ಕಾಲೇಜುಗಳಿಗೆ ಸೂಚನೆ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಹಾಗು ಪೋಷಕರ ಬೇಸರಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳಲ್ಲಿ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಪ್ರಥಮ ಪಿಯುಸಿ ಪರೀಕ್ಷೆಯು ಮುಕ್ತಾಯಗೊಂಡು ಜೂನ್ ಮೊದಲ ವಾರದಂದು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗುತ್ತಿತ್ತು. ಆದರೆ ಈ ವರ್ಷ ಪ.ಪೂ. ಶಿಕ್ಷಣ ಇಲಾಖೆಯು ಪಿಯುಸಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿರುವುದರಿಂದಾಗಿ, ದ್ವಿತೀಯ ಪಿಯುಸಿ

ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭ Read More »

ಕರ್ನಾಟಕ

ಮಟನ್ ಸಾರು ಮಾಡುವ ವಿಚಾರದಲ್ಲಿ ನಡೆಯಿತು ಕೊಲೆ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ2. ಪತ್ನಿಯ ಬಳಿ ಮಟನ್ ಸಾರು ಮಾಡು ಎಂದಿದ್ದಕ್ಕೆ ಪತಿಯ ಕೊಲೆ ಮಾಡಿರುವ ಘಟನೆಯು ಬೆಂಗಳೂರಿನ ಕುಮಾರ್ ಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ. ಕುಡಿದ ಮಂಪರಿನಲ್ಲಿ ಮನೆಗೆ ಬಂದ ಗೋಪಾಲ್ (46) ತನ್ನ ಪತ್ನಿ ರುದ್ರಮ್ಮ ಬಳಿ ಮಟನ್ ಸಾರು ಮಾಡು ಎಂದು ಗಲಾಟೆ ಮಾಡತೊಡಗಿದನು. ಪತಿಯ ನಡವಳಿಕೆಯನ್ನು ಕಂಡು ರೊಚ್ಚಿಗೆದ್ದ ಪತ್ನಿಯು ಆತನ ಕೊಲೆ ಮಾಡಿದ್ದಾಳೆ. ಕೆಲವು ದಿನಗಳ ಹಿಂದೆ ಈ ಘಟನೆಯು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ

ಮಟನ್ ಸಾರು ಮಾಡುವ ವಿಚಾರದಲ್ಲಿ ನಡೆಯಿತು ಕೊಲೆ! Read More »

ಕರ್ನಾಟಕ

ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 30. ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, 11.30 ಗಂಟೆಗೆ ಇಲಾಖಾ ವೆಬ್‌ಸೈಟ್ ಗಳಲ್ಲಿ ಪ್ರಕಟವಾಗಲಿದೆ. ನಾಳೆ (ಮೇ 01) ರಂದು ಕಾಲೇಜುಗಳಲ್ಲಿ ಫಲಿತಾಂಶದ ಸಂಪೂರ್ಣ ವಿವರ ದೊರೆಯಲಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಒಟ್ಟು 6.80 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, ಉತ್ತರ ಪತ್ರಿಕೆ ಮೌಲ್ಯಮಾಪನ ಪೂರ್ಣಗೊಂಡಿದೆ. ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಫಲಿತಾಂಶ

ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ Read More »

ಕರ್ನಾಟಕ

ನಾಳೆ (ಎಪ್ರಿಲ್ 30) ದ್ವಿತೀಯ ಪಿಯುಸಿ ಫಲಿತಾಂಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.29. ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವು ಏ.30 ಸೋಮವಾರದಂದು ಪ್ರಕಟವಾಗಲಿದ್ದು, ಮೇ 01 ರಂದು ಕಾಲೇಜುಗಳಲ್ಲಿ ಫಲಿತಾಂಶದ ಸಂಪೂರ್ಣ ವಿವರ ದೊರೆಯಲಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಒಟ್ಟು 6.80 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, ಉತ್ತರ ಪತ್ರಿಕೆ ಮೌಲ್ಯಮಾಪನ ಪೂರ್ಣಗೊಂಡಿದೆ. ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಿಕೊಂಡಿದ್ದು, ಫಲಿತಾಂಶವನ್ನು ಶಿಕ್ಷಣ ಇಲಾಖೆಯ ವೆಬ್‌ಸೈಟ್

ನಾಳೆ (ಎಪ್ರಿಲ್ 30) ದ್ವಿತೀಯ ಪಿಯುಸಿ ಫಲಿತಾಂಶ Read More »

ಕರ್ನಾಟಕ

ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಹೈಜಾಕ್‌ ಮಾಡಿದ ನಾಲ್ವರು ದುಷ್ಕರ್ಮಿಗಳು ► ಬಸ್ಸನ್ನು ಅಡಗಿಸಿ ಇಟ್ಟಿದ್ದಾದರೂ ಎಲ್ಲಿ ಎಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.28. ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಹೈಜಾಕ್ ಮಾಡಿದ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಮೈಸೂರ್‌ ರೋಡ್‌ನ‌ ಆರ್‌ವಿ ಕಾಲೇಜ್‌ ಬಳಿ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳ ತಂಡ ಚಾಲಕನನ್ನು ಕೆಳಗಿಳಿಸಿ ಬಸ್ಸನ್ನು ಹೈಜಾಕ್‌ ಮಾಡಿ ಆರ್‌.ಆರ್‌.ನಗರದ ಗೋದಾಮೊಂದರಲ್ಲಿ ಇರಿಸಿದ್ದಾರೆ. ಬಸ್‌ ಗೋದಾಮಿನಲ್ಲಿ ಇರುವುದನ್ನು ಕಂಡು ಕಂಗಾಲಾದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಪಶ್ಚಿಮ

ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಹೈಜಾಕ್‌ ಮಾಡಿದ ನಾಲ್ವರು ದುಷ್ಕರ್ಮಿಗಳು ► ಬಸ್ಸನ್ನು ಅಡಗಿಸಿ ಇಟ್ಟಿದ್ದಾದರೂ ಎಲ್ಲಿ ಎಂದು ಗೊತ್ತೇ…? Read More »

ಕರ್ನಾಟಕ

ಎಪ್ರಿಲ್ 30 ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.27. ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೆ ದಿನ ನಿಗದಿಯಾಗಿರುವಂತೆಯೇ ಬಿಜೆಪಿ ಪ್ರಣಾಳಿಕೆ ಎಪ್ರಿಲ್ 30 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ‌. ನಾಲ್ಕು ದಿನಗಳ ಕರ್ನಾಟಕ ಪ್ರವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಕೈಗೊಳ್ಳಬೇಕಾಗಿದ್ದ ಬಳ್ಳಾರಿ ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದಾಗಿದ್ದು, ಶುಕ್ರವಾರ ಸಂಜೆ ಕೊಪ್ಪಳಕ್ಕೆ ಭೇಟಿ ನೀಡಿ ರೋಡ್ ಶೋದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ಪಕ್ಷದ ಪ್ರಣಾಳಿಕೆ ಸಿದ್ಧವಾಗುತ್ತಿದ್ದು, ಎಪ್ರಿಲ್ 30 ರಂದು ಬಿಡುಗಡೆಯಾಗುವ ಸಾಧ್ಯತೆ ಕಂಡುಬಂದಿದೆ.

ಎಪ್ರಿಲ್ 30 ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ Read More »

ಕರ್ನಾಟಕ

ಮರಣದ ವೇಳೆಯಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಐರಾವತ ಚಾಲಕ ► 40 ಪ್ರಯಾಣಿಕರ ಪ್ರಾಣವುಳಿಸಿದ ಚಾಲಕನಿಗೊಂದು ಹ್ಯಾಟ್ಸಪ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.27. ಐರಾವತ ಚಾಲಕನೋರ್ವ ತಾನು ಹೃದಯಾಘಾತಕ್ಕೊಳಗಾಗಿ ಪ್ರಾಣ ಬಿಡುವ ಸಂದರ್ಭದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದು 40 ಪ್ರಯಾಣಿಕರ ಪ್ರಾಣವುಳಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ಐರಾವತ ಕ್ಲಬ್ ಕ್ಲಾಸ್ ಬಸ್‌ ಚಾಲಕ ಜಯಶೀಲನ್‌ ರವರಿಗೆ ಕೋಲಾರದ ನರಸಾಪುರದ ಬಳಿ ಹೃದಯಾಘಾತವುಂಟಾಗಿದ್ದು, ತಕ್ಷಣವೇ ಬಸ್ಸನ್ನು ನಿಲ್ಲಿಸಿದ ಜಯಶೀಲನ್‌ ಪ್ರಾಣ ಬಿಟ್ಟಿದ್ದಾರೆ. ಮರಣದ ವೇಳೆಯಲ್ಲೂ ಬಸ್ ಚಾಲಕನ ಕರ್ತವ್ಯ ಪ್ರಜ್ಞೆಯಿಂದಾಗಿ ಬಸ್ ನಲ್ಲಿದ್ದ 40 ಪ್ರಯಾಣಿಕರ ಜೀವ ಉಳಿದಿದ್ದು,, ಕರ್ತವ್ಯ ನಿಷ್ಠೆ ಮೆರೆದ

ಮರಣದ ವೇಳೆಯಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಐರಾವತ ಚಾಲಕ ► 40 ಪ್ರಯಾಣಿಕರ ಪ್ರಾಣವುಳಿಸಿದ ಚಾಲಕನಿಗೊಂದು ಹ್ಯಾಟ್ಸಪ್ Read More »

ಕರ್ನಾಟಕ

ಭಾರೀ ಗಾಳಿ – ಮಳೆಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ ► ತಾಯಿ – ಮಗಳು ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಹಾಸನ, ಎ.23. ಜಿಲ್ಲೆಯ ವಿವಿಧೆಡೆ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ತಾಯಿ – ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಕಲೇಶಪುರದಲ್ಲಿ ಭಾನುವಾರದಂದು ನಡೆದಿದೆ. ಮೃತ ದುರ್ದೈವಿಗಳನ್ನು ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮದ ಚಿನ್ನಮ್ಮ ಹಾಗೂ ಪುತ್ರಿ ಪ್ರಫುಲ್ಲಾ ಎಂದು ಗುರುತಿಸಲಾಗಿದೆ. ಇವರು ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದಾಗ ಕೊಡ್ಲಿಪೇಟೆ – ಬಾಳ್ಳುಪೇಟೆ ರಸ್ತೆಯಲ್ಲಿದ್ದ ಬೃಹತ್ ಮರವು ಇವರಿದ್ದ ಕಾರಿನ ಮೇಲೆ ಬಿದ್ದು ಈ

ಭಾರೀ ಗಾಳಿ – ಮಳೆಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ ► ತಾಯಿ – ಮಗಳು ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ Read More »

ಕರ್ನಾಟಕ

ಐಪಿಎಲ್ ಹುಚ್ಚಿಗೆ ರಾಜ್ಯದಲ್ಲಿ ಮೊದಲ ಬಲಿ ► ಕಾರಣ ತಿಳಿದರೆ ಬೆಚ್ಚಿ ಬೀಳುತ್ತೀರ…!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.20. ಐಪಿಎಲ್ ನಿಂದಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಸಮೀಪದ ಹೊಟೇಲ್ ಪ್ರಶಾಂತ್ ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಆಗ್ರಹಾರದ ನಿವಾಸಿ ಯೋಗೀಶ್ (30) ಎಂದು ಗುರುತಿಸಲಾಗಿದೆ. ಐಪಿಎಲ್ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರುಪಾಯಿ ಕಳೆದುಕೊಂಡಿರುವುದರಿಂದ ಈತ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇಂದು ಮಧ್ಯಾಹ್ನದ ವೇಳೆಯಲ್ಲಿ ಹೆಚ್.ಎಸ್.ಆರ್ ಲೇಔಟ್ ಸಮೀಪದ ಹೊಟೇಲ್ ಪ್ರಶಾಂತ್ ಗೆ ತೆರಲಿ ಅಲ್ಲಿ ಒಂದು ರೂಮು ಬಾಡಿಗೆಗೆ ಪಡೆದುಕೊಂಡಿರುತ್ತಾನೆ. ನಂತರ 12.30ರ ವೇಳೆಗೆ

ಐಪಿಎಲ್ ಹುಚ್ಚಿಗೆ ರಾಜ್ಯದಲ್ಲಿ ಮೊದಲ ಬಲಿ ► ಕಾರಣ ತಿಳಿದರೆ ಬೆಚ್ಚಿ ಬೀಳುತ್ತೀರ…!! Read More »

ಕರ್ನಾಟಕ
Scroll to Top