ಕರ್ನಾಟಕ

ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡುವುದಾದರೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ ► ಅಚ್ಚರಿಯ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಮೈಸೂರು, ಮೇ.13. ದಲಿತರನ್ನು ಮುಖ್ಯಮಂತ್ರಿ ಮಾಡಲು ಅವಕಾಶ ನೀಡುವುದಾಗಿ ಹೈಕಮಾಂಡ್ ನಿರ್ಧರಿಸಿದರೆ‌ ನಾನು ಮುಖ್ಯಮಂತ್ರಿಯಾಗುವುದರಿಂದ ಹಿಂಜರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಿದರೆ ನಾನು ಮುಖ್ಯಮಂತ್ರಿ ಪಟ್ಟವನ್ನು ತ್ಯಾಗ ಮಾಡಲು ಸಿದ್ಧನಾಗಿದ್ದೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಅದಕ್ಕೆ ನನ್ನದೇನೂ ಆಕ್ಷೇಪವಿಲ್ಲ. 2013 ರ ಮೇ 13 ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ […]

ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡುವುದಾದರೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ ► ಅಚ್ಚರಿಯ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಚುನಾವಣೋತ್ತರ ಸಮೀಕ್ಷೆ ► ಯಾವ ಪಕ್ಷ ಅಧಿಕಾರಕ್ಕೆ ಎಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.13. ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಮತದಾನದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯು ಸಮ ಬಲದ ಫಲಿತಾಂಶ ಪಡೆಯಲಿದ್ದು, ಜೆಡಿಎಸ್ ನಿರ್ಣಾಯಕವಾಗಲಿದೆ ಎಂದು ವಿವಿಧ ಮಾಧ್ಯಮಗಳು ನಡೆಸಿದ ಮತದಾನೋತ್ತರ ಸಮೀಕ್ಷೆಯು ವರದಿ ಮಾಡಿದೆ. ಇಂಡಿಯಾ ಟುಡೆ ಗ್ರೂಪ್, ಆ್ಯಕ್ಸಿಸ್ ಇಂಡಿಯಾ: ಕಾಂಗ್ರೆಸ್ 106 ರಿಂದ 118 ಸ್ಥಾನಗಳನ್ನು ಪಡೆದುಕೊಂಡರೆ ಬಿಜೆಪಿಯು 79 ರಿಂದ 92, ಜೆಡಿಎಸ್ 22 ರಿಂದ 30 ಹಾಗೂ ಇತರ 1 ರಿಂದ 04 ಸ್ಥಾನಗಳನ್ನು ಪಡೆದುಕೊಳ್ಳಲಿದೆ

ಚುನಾವಣೋತ್ತರ ಸಮೀಕ್ಷೆ ► ಯಾವ ಪಕ್ಷ ಅಧಿಕಾರಕ್ಕೆ ಎಂದು ಗೊತ್ತೇ…? Read More »

ಕರ್ನಾಟಕ

ಮತ ಚಲಾಯಿಸಿ ಹಸೆ ಮಣೆ ಏರಿದ ಮದುಮಗಳು!

(ನ್ಯೂಸ್ ಕಡಬ) newskadaba.com ಮಡಿಕೇರಿ,ಮೇ.12. ಇದೀಗ ವಿದಾನ ಸಭಾ ಚುನಾವಣೆಯು ಅತ್ಯಂತ ಬಿರುಸಿನಿಂದ ನಡೆಯಿತ್ತಿದ್ದು, ಮದುಮಗಳೊಬ್ಬಳು ಹಸೆಮಣೆ ಏರುವ ಮುನ್ನ ಚುನಾವಣಾ ಕೇಂದ್ರಕ್ಕೆ ಬಂದು ಮತ ಚಲಾಯಿಸುವುದರ ಮೂಲಕ ತನ್ನ ಜವಾಬ್ದಾರಿಯನ್ನು ವ್ಯಕ್ತ ಪಡಿಸಿದ್ದಾಳೆ. ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರ ಐಮಣಿಯಂಡ ಸ್ಮಿತಾ ಎಂಬವರು ಹಸೆ ಮಣೆ ಏರುವ ಮುನ್ನ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತಗಟ್ಟೆಗೆ ಅಲಂಕೃತವಾಗಿ ಬಂದು ಮತ ಚಲಾಯಿಸಿ ಹಿಂತಿರುಗಿದ್ದಾಳೆ.

ಮತ ಚಲಾಯಿಸಿ ಹಸೆ ಮಣೆ ಏರಿದ ಮದುಮಗಳು! Read More »

ಕರ್ನಾಟಕ

ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ► ಸ್ಥಳದಲ್ಲೇ ಮೃತಪಟ್ಟ ಮಹಿಳೆ

(ನ್ಯೂಸ್ ಕಡಬ) newskadaba.com ಹಾಸನ,ಮೇ.12. ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆಯು ಹಾಸನ ಜಿಲ್ಲೆಯ ಬೇಲೂರು ರಸ್ತೆಯಲ್ಲಿ ಸಂಭವಿಸಿದೆ. ಇಂದು ಬೆಳಗ್ಗೆ ಮತದಾರರನ್ನು ಕೊಂಡೊಯ್ಯುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆಯು  ಬೇಲೂರು ರಸ್ತೆ ರಾಮೇನಹಳ್ಳಿ ಗೇಟ್ ಬಳಿ ಸಂಭವಿಸಿದ್ದು, ಆಟೋದಲ್ಲಿ ಇದ್ದ ಲಕ್ಷ್ಮಮ್ಮ(46) ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಇನ್ನೋರ್ವ ಮಹಿಳೆಗೆ ತೀರ್ವ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ► ಸ್ಥಳದಲ್ಲೇ ಮೃತಪಟ್ಟ ಮಹಿಳೆ Read More »

ಕರ್ನಾಟಕ

ರಾಜ್ಯದಲ್ಲೆಡೆ ಬಿರುಸಿನ ಮತದಾನ ​► ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 11 ಗಂಟೆ ವೇಳೆಗೆ 30.25% ಮತದಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.12. ರಾಜ್ಯದಲ್ಲೆಡೆ ಬಿರುಸಿನ ಮತದಾನವಾಗುತ್ತಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡುಬಂದಿದೆ. ರಾಜ್ಯದ ವಿವಿಧೆಡೆ ಕಳೆದೆರಡು ದಿನಗಳಿಂದ ಸಂಜೆ ವೇಳೆಗೆ ಮಳೆಯಾಗುತ್ತಿರುವುದರಿಂದ ಮತದಾರರು ಅಪರಾಹ್ನಕ್ಕೂ ಮೊದಲೇ ಮತಗಟ್ಟೆಯತ್ತ ಧಾವಿಸಿ ಬರುತ್ತಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 11 ಗಂಟೆಯ ವೇಳೆಗೆ 30.25 ಶೇಕಡಾ ಮತದಾನವಾಗಿದೆ.  

ರಾಜ್ಯದಲ್ಲೆಡೆ ಬಿರುಸಿನ ಮತದಾನ ​► ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 11 ಗಂಟೆ ವೇಳೆಗೆ 30.25% ಮತದಾನ Read More »

ಕರ್ನಾಟಕ

ಅಧಿಕಾರಿಯೋರ್ವರ ತಪ್ಪಿನಿಂದಾಗಿ ಮತದಾನದಿಂದ ವಂಚಿತವಾದ ಕುಟುಂಬ

(ನ್ಯೂಸ್ ಕಡಬ) newskadaba.com ರಾಯಚೂರು, ಮೇ.11. ಬೂತ್ ಮಟ್ಟದ ಅಧಿಕಾರಿಯೋವ್ವರು ಮಾಡಿದ ತಪ್ಪಿನಿಂದಾಗಿ ಕುಟುಂಬವೊಂದು 2018ರ ವಿಧಾನ ಸಭಾ ಚುನಾವಣೆಯಿಂದ ವಂಚಿತವಾಗಿದೆ. ಬೂತ್ ಮಟ್ಟದ ಅಧಿಕಾರಿ ಇಕ್ಬಾಲ್ ಅಹ್ಮದ್ ಅವರು ‘ಮಾನವಿ’ ವಿಧಾನಸಭಾ ಕ್ಷೇತ್ರದ 16ನೇ ವಾರ್ಡಿನ ಸಲಾಲುದ್ದಿನ್ ಮತ್ತು ಅವರ ಕುಟುಂಬದವರ ಹೆಸರನ್ನು ತೆಗೆದುಹಾಕಿದ್ದಾರೆ. ಹಲವಾರು ವರ್ಷಗಳಿಂದಲೂ ಮಾನವಿಯಲ್ಲಿ ತಾವು ವಾಸ್ತವ್ಯ ಹೂಡಿದ್ದು, ತಮ್ಮ ಹೆಸರು ತೆಗೆದು ಹಾಕಿರುವುದರ ಹಿಂದೆ ರಾಜಕೀಯ ಕೈವಾಡವಿದೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಲಾಲುದ್ದಿನ್ ಅವರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಅಧಿಕಾರಿಯೋರ್ವರ ತಪ್ಪಿನಿಂದಾಗಿ ಮತದಾನದಿಂದ ವಂಚಿತವಾದ ಕುಟುಂಬ Read More »

ಕರ್ನಾಟಕ

ಮದುವೆ ಮಂಟಪದಿಂದಲೇ ಪರೀಕ್ಷೆಗೆ ಹಾಜರಾದ ವಧು!

(ನ್ಯೂಸ್ ಕಡಬ) newskadaba.com ಮಂಡ್ಯ, ಮೇ.9. ಪರೀಕ್ಷೆ ಬರೆಯಲೆಂದು ವಧುವು ಮದುವೆ ಮಂಟಪದಿಂದಲೇ ಬಂದು ಪರೀಕ್ಷೆ ಬರೆದಿರುವ ಘಟನೆಯು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಇಂದು ನಡೆದಿದೆ. ತನ್ನ ದ್ವಿತೀಯ ವರ್ಷದ ಪರೀಕ್ಷೆ ಬರೆಯಲೆಂದು ಕಾವ್ಯಾ ಅವರು ಮದುವೆ ಮಂಟಪದಿಂದ ಬಂದಿದ್ದಾರೆ. ಅವರು ಕಲ್ಪತರು ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದಾರೆ. ಇಂದು ಕಾವ್ಯಾರಿಗೆ ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಇತ್ತು, ತನ್ನ ಮದುವೆಯ ಸಂಭ್ರಮದ ನಡುವೆಯೂ ಬಂದು ಪರೀಕ್ಷೆ ಬರೆದಿರುವುದು ಕುತೂಹಲಕಾರಿ ಸಂಗತಿಯೇ ಸರಿ. ಮದುವೆಯ ಕೆಲವು ಶಾಸ್ತ್ರಗಳನ್ನು

ಮದುವೆ ಮಂಟಪದಿಂದಲೇ ಪರೀಕ್ಷೆಗೆ ಹಾಜರಾದ ವಧು! Read More »

ಕರ್ನಾಟಕ

ಎಸ್ಎಸ್ಎಲ್ಸಿ ಫಲಿತಾಂಶ: ತಂದೆಯ ಸಾವಿನ ನೋವಲ್ಲೂ ಪರೀಕ್ಷೆ ಬರೆದ ದರ್ಶಿನಿಗೆ 80% ಅಂಕ

(ನ್ಯೂಸ್ ಕಡಬ) newskadaba.com ಮಂಡ್ಯ,ಮೇ.7. ತನ್ನ ತಂದೆಯ ಸಾವಿನ ನೋವನ್ನು ಇಟ್ಟುಕೊಂಡು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ತ್ಯಾಗರಾಜು ಎಂಬುವವರ ಮಗಳಾದ ದರ್ಶಿನಿ ಅವರು 80% ಅಂಕಗಳನ್ನು ಪಡೆದು ಪಾಸಾಗುವುದರೊಂದಿಗೆ ಸಾಧನೆಯನ್ನು ಮಾಡಿದ್ದಾರೆ. ಎಪ್ರಿಲ್ 2ರಂದು ವಿಜ್ಞಾನ ಪರೀಕ್ಷೆಯ ದಿನದಂದು ದರ್ಶಿನಿಯ ತಂದೆ ತ್ಯಾಗರಾಜು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ದರ್ಶಿನಿಯು ತಂದೆಯ ಸಾವಿನ ನೋವನ್ನು ಮನಸಿನಲ್ಲೇ ಇಟ್ಟುಕೊಂಡು ಪರೀಕ್ಷೆ ಬರೆದಿದ್ದರು. ದರ್ಶಿನಿ ಒಟ್ಟು 500 ಅಂಕ ಗಳಿಸಿದ್ದು, ಮದ್ದೂರು ತಾಲೂಕಿನ ದೇಶಹಳ್ಳಿ

ಎಸ್ಎಸ್ಎಲ್ಸಿ ಫಲಿತಾಂಶ: ತಂದೆಯ ಸಾವಿನ ನೋವಲ್ಲೂ ಪರೀಕ್ಷೆ ಬರೆದ ದರ್ಶಿನಿಗೆ 80% ಅಂಕ Read More »

ಕರ್ನಾಟಕ

ಜೂನ್ 21ರಿಂದ 28ವರೆಗೆ ನಡೆಯಲಿದೆ ಎಸ್ಎಸ್ಎಲ್ಸಿ ಮರು ಪರೀಕ್ಷೆ

(ನ್ಯೂಸ್ ಕಡಬ) newskadaba.com, ಬೆಂಗಳೂರು,ಮೇ.7. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಇದೀಗಾಗಲೇ ಪ್ರಕಟಿಸಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳು 21ರಿಂದ 28ವರೆಗೆ ಮರು ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ. ಮರು ಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳು ಪ್ರತೀ ವಿಷಯಕ್ಕೆ 705 ರೂ. ರಂತೆ ಪಾವತಿಸಬೇಕು ಹಾಗು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮೇ 11 ರಿಂದ ಮೇ 21 ರ ವರೆಗೆ ಆನ್

ಜೂನ್ 21ರಿಂದ 28ವರೆಗೆ ನಡೆಯಲಿದೆ ಎಸ್ಎಸ್ಎಲ್ಸಿ ಮರು ಪರೀಕ್ಷೆ Read More »

ಕರ್ನಾಟಕ

ವಿಧಾನಸಭಾ ಚುನಾವಣಾ ಹಿನ್ನೆಲೆ ► ಮೇ 12 ರಂದು ಎಲ್ಲಾ ಸರಕಾರಿ, ಖಾಸಗಿ ನೌಕರರಿಗೆ ವೇತನ ಸಹಿತ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.05. ವಿಧಾನಸಭಾ ಚುನಾವಣೆಯು ಮೇ 12 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಮೇ 12 ರಂದು ಎಲ್ಲಾ ಸರಕಾರಿ, ಖಾಸಗಿ ನೌಕರರಿಗೆ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳಿಗೆ, ಶಾಲಾ -ಕಾಲೇಜುಗಳಿಗೆ, ಸಂಘ -ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಮೇ 12 ರಂದು ವೇತನ ಸಹಿತ ರಜೆ ಘೋಷಿಸಿದೆ. ಮೇ 15

ವಿಧಾನಸಭಾ ಚುನಾವಣಾ ಹಿನ್ನೆಲೆ ► ಮೇ 12 ರಂದು ಎಲ್ಲಾ ಸರಕಾರಿ, ಖಾಸಗಿ ನೌಕರರಿಗೆ ವೇತನ ಸಹಿತ ರಜೆ ಘೋಷಣೆ Read More »

ಕರ್ನಾಟಕ
Scroll to Top