ಅಧಿಕಾರಿಯೋರ್ವರ ತಪ್ಪಿನಿಂದಾಗಿ ಮತದಾನದಿಂದ ವಂಚಿತವಾದ ಕುಟುಂಬ

(ನ್ಯೂಸ್ ಕಡಬ) newskadaba.com ರಾಯಚೂರು, ಮೇ.11. ಬೂತ್ ಮಟ್ಟದ ಅಧಿಕಾರಿಯೋವ್ವರು ಮಾಡಿದ ತಪ್ಪಿನಿಂದಾಗಿ ಕುಟುಂಬವೊಂದು 2018ರ ವಿಧಾನ ಸಭಾ ಚುನಾವಣೆಯಿಂದ ವಂಚಿತವಾಗಿದೆ.

ಬೂತ್ ಮಟ್ಟದ ಅಧಿಕಾರಿ ಇಕ್ಬಾಲ್ ಅಹ್ಮದ್ ಅವರು ‘ಮಾನವಿ’ ವಿಧಾನಸಭಾ ಕ್ಷೇತ್ರದ 16ನೇ ವಾರ್ಡಿನ ಸಲಾಲುದ್ದಿನ್ ಮತ್ತು ಅವರ ಕುಟುಂಬದವರ ಹೆಸರನ್ನು ತೆಗೆದುಹಾಕಿದ್ದಾರೆ. ಹಲವಾರು ವರ್ಷಗಳಿಂದಲೂ ಮಾನವಿಯಲ್ಲಿ ತಾವು ವಾಸ್ತವ್ಯ ಹೂಡಿದ್ದು, ತಮ್ಮ ಹೆಸರು ತೆಗೆದು ಹಾಕಿರುವುದರ ಹಿಂದೆ ರಾಜಕೀಯ ಕೈವಾಡವಿದೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಲಾಲುದ್ದಿನ್ ಅವರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

 

Scroll to Top