ಮಟನ್ ಸಾರು ಮಾಡುವ ವಿಚಾರದಲ್ಲಿ ನಡೆಯಿತು ಕೊಲೆ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ2. ಪತ್ನಿಯ ಬಳಿ ಮಟನ್ ಸಾರು ಮಾಡು ಎಂದಿದ್ದಕ್ಕೆ ಪತಿಯ ಕೊಲೆ ಮಾಡಿರುವ ಘಟನೆಯು ಬೆಂಗಳೂರಿನ ಕುಮಾರ್ ಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.

ಕುಡಿದ ಮಂಪರಿನಲ್ಲಿ ಮನೆಗೆ ಬಂದ ಗೋಪಾಲ್ (46) ತನ್ನ ಪತ್ನಿ ರುದ್ರಮ್ಮ ಬಳಿ ಮಟನ್ ಸಾರು ಮಾಡು ಎಂದು ಗಲಾಟೆ ಮಾಡತೊಡಗಿದನು. ಪತಿಯ ನಡವಳಿಕೆಯನ್ನು ಕಂಡು ರೊಚ್ಚಿಗೆದ್ದ ಪತ್ನಿಯು ಆತನ ಕೊಲೆ ಮಾಡಿದ್ದಾಳೆ. ಕೆಲವು ದಿನಗಳ ಹಿಂದೆ ಈ ಘಟನೆಯು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top