ತಲಪಾಡಿ ಅಂಡರ್ ಪಾಸ್ ಗೆ ನುಗ್ಗಿದ ನೀರು ➤ ಸ್ಥಳೀಯರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 07. ತಲಪಾಡಿ ರಾ.ಹೆದ್ದಾರಿಯ ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿಯಿರುವ ಅಂಡರ್ ಪಾಸ್ ನಲ್ಲಿ ಬುಧವಾರ ಸುರಿದ ಬಾರೀ ಮಳೆಗೆ ನೀರು ತುಂಬಿದ್ದರಿಂದ ಜನಸಂಚಾರಕ್ಕೆ ಅಡ್ಡಿಯಾಗಿದ್ದು, ಸಾರ್ವಜನಿಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ.


ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣವೆ ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ‌.

Scroll to Top