ರಾಷ್ಟ್ರೀಯ ನ್ಯೂಸ್

ಶ್ರೀ ಆಂಜನೇಯ ಸ್ವಾಮಿ ಗೆ ಇಷ್ಟವಾದ ಈ 4 ವಸ್ತುಗಳನ್ನು ಅರ್ಪಿಸಿ ನಿಮ್ಮ ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳಿ

  ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್ ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ Ph:9380973370 ಸಾಲ ಬಾಧೆಯಿಂದ ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬೇಕಾದರೆ ಆಂಜನೇಯ ಸ್ವಾಮಿಯನ್ನು ನೆನೆದು ಈ ಒಂದು ವಿಧಾನವನ್ನು ಮಾಡಿಕೊಳ್ಳಬೇಕು ಇದರಿಂದ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ. ನಮಸ್ಕಾರ ಸ್ನೇಹಿತರೆ ಮನುಷ್ಯ ಎಂದ ಮೇಲೆ […]

ಶ್ರೀ ಆಂಜನೇಯ ಸ್ವಾಮಿ ಗೆ ಇಷ್ಟವಾದ ಈ 4 ವಸ್ತುಗಳನ್ನು ಅರ್ಪಿಸಿ ನಿಮ್ಮ ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಭವಿಷ್ಯ, ರಾಷ್ಟ್ರೀಯ ನ್ಯೂಸ್

ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ನೀರುಪಾಲಾದ ಯುವಕ..!

(ನ್ಯೂಸ್ ಕಡಬ) Newskadaba.com ಕಲ್ಲಿಕೋಟೆ, ಅ. 15. ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದ ಮೂವರು ಮಕ್ಕಳು ಮುಳುಗುತ್ತಿದ್ದುದನ್ನು ಕಂಡ ಯುವಕನೋರ್ವ ಮೂವರು ಮಕ್ಕಳನ್ನು ರಕ್ಷಿಸಿ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕೇರಳದ ಕುಟ್ಟಿಯಾಡಿ ಪ್ರದೇಶದ ವಿಲಾಪಳ್ಳಿ ಅರಯಾಕೂಲ್ ಎಂಬಲ್ಲಿ ನಡೆದಿದೆ. ಮೃತರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಾರ್ಯಕರ್ತ ಝಹೀರ್(40) ಎಂದು ಗುರುತಿಸಲಾಗಿದೆ. ಇವರು ಮಾಹಿ ಕಾಲುವೆಗೆ ಸ್ನಾನಕ್ಕೆಂದು ತೆರಳಿದ್ದ ಮಕ್ಕಳು ನೀರಿನ ಸುಳಿಗೆ ಸಿಲುಕಿ ಮುಳುಗುತ್ತಿದ್ದು, ಜೊತೆಗಿದ್ದ ಮಕ್ಕಳ ಕಿರುಚಾಟವನ್ನು ಕೇಳಿದ ಝಹೀರ್, ಮೂವರು

ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ನೀರುಪಾಲಾದ ಯುವಕ..! Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗ್ಯಾಸ್ ಟ್ಯಾಂಕ್‌ಗೆ ಬಿದ್ದು ಯುವಕರಿಬ್ಬರು ಮೃತ್ಯು ➤ ಗ್ಯಾಸ್ ಟ್ಯಾಂಕ್‌ ಸ್ವಚ್ಚಗೊಳಿಸುತ್ತಿದ್ದ ವೇಳೆ‌ ದುರ್ಘಟನೆ

(ನ್ಯೂಸ್ ಕಡಬ) Newskadaba.com ಉಜ್ಜಯಿನಿ, ಅ. 15. ಗ್ಯಾಸ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಟ್ಯಾಂಕ್‌ ಗೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL) ಬಾಟ್ಲಿಂಗ್ ಸ್ಥಾವರದಲ್ಲಿ ನಡೆದಿದೆ. ಮೃತರನ್ನು ರಾಜೇಂದ್ರ ಸಿಂಗ್(30) ಮತ್ತು ಲಖನ್ ಸಿಂಗ್(27) ಎಂದು ಗುರುತಿಸಲಾಗಿದೆ. ಗ್ಯಾಸ್ ಟ್ಯಾಂಕ್ ಅನ್ನು ಖಾಲಿ ಮಾಡಿ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎನ್ನಲಾಗಿದೆ.

ಗ್ಯಾಸ್ ಟ್ಯಾಂಕ್‌ಗೆ ಬಿದ್ದು ಯುವಕರಿಬ್ಬರು ಮೃತ್ಯು ➤ ಗ್ಯಾಸ್ ಟ್ಯಾಂಕ್‌ ಸ್ವಚ್ಚಗೊಳಿಸುತ್ತಿದ್ದ ವೇಳೆ‌ ದುರ್ಘಟನೆ Read More »

ಕರಾವಳಿ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಾಯಿ ಫಿಜ್ಜಾ ಕೊಡಲು ತಡವಾಯಿತೆಂದು‌ ಆತ್ಮಹತ್ಯೆಗೆ ಶರಣಾದ ಮಗಳು

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಅ. 14. ತಾನು ಕೇಳಿದ ಸಮಯಕ್ಕೆ ಪಿಜ್ಜಾ ಸಿಗಲಿಲ್ಲ ಎಂಬ ಕಾರಣಕ್ಕೆ ತಾಯಿ ಮೇಲೆ ಕೋಪಗೊಂಡ ನರ್ಸಿಂಗ್​ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ತಾಲಬ್ ಪುರ ಪ್ರದೇಶದ ನಿವಾಸಿ ಶಿಖಾ ಸೋನಿ (18) ಎಂದು ಗುರುತಿಸಲಾಗಿದೆ. ಈಕೆ ತನಗೆ ಪಿಜ್ಜಾ ಬೇಕು ಎಂದು ತಾಯಿಯ ಬಳಿ ಕೇಳಿದಾಗ, ಇದಕ್ಕೆ ಆಕೆಯ ತಾಯಿ ಸ್ವಲ್ಪ ಸಮಯ ಕಾಯಬೇಕು ಎಂದಿದ್ದಾರೆ. ಈ ಕಾರಣದಿಂದ

ತಾಯಿ ಫಿಜ್ಜಾ ಕೊಡಲು ತಡವಾಯಿತೆಂದು‌ ಆತ್ಮಹತ್ಯೆಗೆ ಶರಣಾದ ಮಗಳು Read More »

ಕರಾವಳಿ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟ್ವೆಂಟಿ- 20 ವಿಶ್ವಕಪ್ ಗಾಗಿ ಟೀಂ ‘ಬಿಲಿಯನ್ ಚಿಯರ್ಸ್ ಜೆರ್ಸಿ’ ನೂತನ ಸಮವಸ್ತ್ರ ಅನಾವರಣ

(ನ್ಯೂಸ್ ಕಡಬ) Newskadaba.com ನವದೆಹಲಿ, ಅ. 13. ಭಾರತ ಕ್ರಿಕೆಟ್ ತಂಡದ ನೂತನ ಸಮವಸ್ತ್ರವಾದ ‘ಬಿಲಿಯನ್ ಚಿಯರ್ಸ್ ಜರ್ಸಿ’ ಅನ್ನು ಮುಂಬರುವ ಐಸಿಸಿ ಟ್ವೆಂಟ್- 20 ವಿಶ್ವಕಪ್ ಗಾಗಿ ಬಿಸಿಸಿಐ ಬುಧವಾರದಂದು ಅನಾವರಣಗೊಳಿಸಿದೆ. ಈ ಸಮವಸ್ತ್ರವನ್ನು ಅಭಿಮಾನಿಗಳ ಸ್ಫೂರ್ತಿಯಿಂದ ತಯಾರಿಸಲಾಗಿದೆ. ಇದನ್ನು ಭಾರತದ ಪುರುಷ, ಮಹಿಳಾ ಮತ್ತು ಅಂಡರ್- 19 ತಂಡಗಳ ಅಧಿಕೃತವಾಗಿ ಕಿಟ್ ಪ್ರಾಯೋಜಕರಾದ ಎಂಪಿಎಲ್ ಸ್ಪೋರ್ಟ್ಸ್ ಅನಾವರಣಗೊಳಿಸಿದೆ.

ಟ್ವೆಂಟಿ- 20 ವಿಶ್ವಕಪ್ ಗಾಗಿ ಟೀಂ ‘ಬಿಲಿಯನ್ ಚಿಯರ್ಸ್ ಜೆರ್ಸಿ’ ನೂತನ ಸಮವಸ್ತ್ರ ಅನಾವರಣ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆರ್ ಸಿಬಿ ನಾಯಕ ಸ್ಥಾನಕ್ಕೆ ವಿದಾಯ ಹೇಳಿದ ವಿರಾಟ್ ಕೊಹ್ಲಿ..!

(ನ್ಯೂಸ್ ಕಡಬ) Newskadaba.com ದುಬೈ, ಅ. 13. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ಕಣ್ಣೀರಿನ ವಿದಾಯ ಹೇಳಿದ್ದಾರೆ. ತಮ್ಮ ನಾಯಕತ್ವದ 9 ಟೂರ್ನಿಯಲ್ಲೂ ಆರ್ ಸಿಬಿ ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗದಿರುವ ಹಿನ್ನೆಲೆ ಅವರು ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಹ್ಲಿ ವೃತ್ತಿ ಜೀವನದಲ್ಲಿ ಆರ್ಸಿಬಿಯ ನಿರಂತರ ಸೋಲು ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಈ ವರ್ಷದ ಕೆಕೆಆರ್ ವಿರುದ್ಧದ ಪಂದ್ಯಾಟದಲ್ಲಿ ಸೋಲುಂಡ ಬಳಿಕ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ

ಆರ್ ಸಿಬಿ ನಾಯಕ ಸ್ಥಾನಕ್ಕೆ ವಿದಾಯ ಹೇಳಿದ ವಿರಾಟ್ ಕೊಹ್ಲಿ..! Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮನೆಗೆ ತಡವಾಗಿ ಬಂದ 10ರ ಬಾಲಕಿ ➤ ಕೋಲಿನಿಂದ ಹೊಡೆದು ಕೊಂದ ಪಾಪಿ ತಂದೆ..!

(ನ್ಯೂಸ್ ಕಡಬ) Newskadaba.com ಮಧ್ಯಪ್ರದೇಶ, ಅ. 12. ರಾತ್ರಿ ವೇಳೆ ಮನೆಗೆ ತಡವಾಗಿ ಬಂದಳೆಂಬ ಕಾರಣಕ್ಕೆ ತನ್ನ ಹತ್ತು ವರ್ಷದ ಮಗಳನ್ನು ಕೋಲಿನಿಂದ ಹಿಗ್ಗಾಮುಗ್ಗಾ ಹೊಡೆದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಮೊರೆನಾದ ಉತ್ತಮ್ ಪುರಂ ಎಂಬಲ್ಲಿ ನಡೆದಿದೆ. ನೆರೆಮನೆಯ ಗೆಳತಿಯರೊಂದಿಗೆ ದುರ್ಗಾ ಪೂಜೆಗೆ ತೆರಳಿದ್ದ ಆಕೆ, ಮನೆಗೆ ಮರಳುವಾಗ ತಡವಾಗಿತ್ತು. ಇದರಿಂದ ಸಿಟ್ಟಿಗೆದ್ದ ತಂದೆ ರಾಕೇಶ್ ಜಾತವ್ ಕೋಲಿನಿಂದ ಮನಬಂದಂತೆ ಹೊಡೆದಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತನಿಖೆಯ ವೇಳೆ ಆರೋಪಿ ತಂದೆ

ಮನೆಗೆ ತಡವಾಗಿ ಬಂದ 10ರ ಬಾಲಕಿ ➤ ಕೋಲಿನಿಂದ ಹೊಡೆದು ಕೊಂದ ಪಾಪಿ ತಂದೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

12ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಡಿಸಿಜಿಐ ನಿಂದ ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ) Newskadaba.com ನವದೆಹಲಿ, ಅ. 12. ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಅನ್ನು 2 ರಿಂದ 18 ವರ್ಷದ ವಯೋಮಾನದವರಿಗೆ ನೀಡಲು ತಜ್ಞರ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಕೋವಿಡ್–19 ಲಸಿಕೆಯನ್ನು, 2ರಿಂದ 18 ವರ್ಷದ ಒಳಗಿನವರಿಗೆ ನೀಡಬಹುದೆಂದು ವಿಷಯ ತಜ್ಞರ ಸಮಿತಿಯು ಭಾರತೀಯ ಪ್ರಧಾನ ಔಷಧ ನಿಯಂತ್ರಕಕ್ಕೆ (ಡಿಸಿಜಿಐ) ಶಿಫಾರಸು ಮಾಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

12ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಡಿಸಿಜಿಐ ನಿಂದ ಗ್ರೀನ್ ಸಿಗ್ನಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಮ್ಮು ಕಾಶ್ಮೀರ: ಭದ್ರತಾ ಪಡೆಗಳ ಯಶಸ್ವಿ ಎನ್ ಕೌಂಟರ್ ➤ ಮೂವರು ಉಗ್ರರ ಹತ್ಯೆ

(ನ್ಯೂಸ್ ಕಡಬ) Newskadaba.com ಶ್ರೀನಗರ್, ಅ. 12. ಜಮ್ಮು- ಕಾಶ್ಮೀರದಲ್ಲಿ ಮೂವರು ಉಗ್ರರ ಸದೆಬಡಿಯವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಇತ್ತಿಚೆಗೆ ಬೀದಿ ಬದಿ ವ್ಯಾಪಾರಿಯೋರ್ವನನ್ನು ಹತೈಗೈದಿದ್ದ ಉಗ್ರನ ಸಹಿತ ಟಿಆರ್‌ಎಫ್‌ ಸಂಘಟನೆಯ ಮೂವರು ಉಗ್ರರನ್ನು ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿವೆ. ಶೋಪಿಯಾನ್ ಪ್ರಾಂತ್ಯದ ಇಮಾಮ್‍ಸಾಬ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಆಧರಿಸಿ ಭದ್ರತಾ ಪಡೆಗಳು ರಾತ್ರಿಯಿಡೀ ಕಾರ್ಯಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ: ಭದ್ರತಾ ಪಡೆಗಳ ಯಶಸ್ವಿ ಎನ್ ಕೌಂಟರ್ ➤ ಮೂವರು ಉಗ್ರರ ಹತ್ಯೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಧವೆ ಮಹಿಳೆಯ ಮೇಲೆ ಯುವಕನಿಂದ ಅತ್ಯಾಚಾರ

(ನ್ಯೂಸ್ ಕಡಬ) Newskadaba.com ಮೇದಿನಿ ನಗರ, ಅ. 12. ವಿಧವೆ ಅತ್ತಿಗೆಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್‌ನ ಪಲಮು ಜಿಲ್ಲೆಯ ಮೇದಿನಿ ನಗರದಲ್ಲಿ ನಡೆದಿದೆ. ರಾತ್ರಿ ವೇಳೆ ಮದ್ಯ ಸೇವಿಸಿ ಬಂದಿದ್ದ ಆರೋಪಿಯು ಅತ್ತಿಗೆಯ ಪ್ರತಿರೋಧದ ನಡುವೆಯೂ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆ ಮಹಿಳೆಯ ಪತಿಯು ಮೂರು ವರ್ಷದ ಹಿಂದೆ ಮೃತಪಟ್ಟಿದ್ದು, ಈ ಹಿನ್ನೆಲೆ ಕೃತ್ಯವೆಸಗಿದ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ ಎಂದೆನ್ನಲಾಗಿದೆ. ಸಂತ್ರಸ್ತೆಯ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ವಿಧವೆ ಮಹಿಳೆಯ ಮೇಲೆ ಯುವಕನಿಂದ ಅತ್ಯಾಚಾರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top