ರಾಷ್ಟ್ರೀಯ ನ್ಯೂಸ್

ಜಿಎಸ್‌ಟಿ ಗೆ ಪ್ರಧಾನಿ ಮೋದಿಯಿಂದ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಜು.01. ಸ್ವಾತಂತ್ರದ ನಂತರ ಭಾರತದ ‘ಅತಿ ದೊಡ್ಡ ತೆರಿಗೆ ಸುಧಾರಣೆ’ ಎಂದು ಬಣ್ಣಿಸಲಾದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಹೊಸದಿಲ್ಲಿಯ ಸಂಸತ್ ಭವನದ ಐತಿಹಾಸಿಕ ಸೆಂಟ್ರಲ್ ಭವನದಲ್ಲಿ ರಾತ್ರಿ 11:00 ಗಂಟೆಗೆ ಆರಂಭ ಗೊಂಡ ವಿಶೇಷ ಅಧಿವೇಶನದಲ್ಲಿ ಮಧ್ಯರಾತ್ರಿಯ ಬಳಿಕ ರಾಷ್ಟ್ರ ಪತಿ ಪ್ರಣವ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬೆಲ್ ಹೊಡೆಯುವ ಮೂಲಕ ಜಿಎಸ್‌ಟಿಗೆ ಅಧಿಕೃತ ಚಾಲನೆ ನೀಡಿದರು.   ಲೋಕಸಭಾ ಸ್ಪೀಕರ್ […]

ಜಿಎಸ್‌ಟಿ ಗೆ ಪ್ರಧಾನಿ ಮೋದಿಯಿಂದ ಅಧಿಕೃತ ಚಾಲನೆ Read More »

ರಾಷ್ಟ್ರೀಯ ನ್ಯೂಸ್

ನಾಳೆಯಿಂದ ಹೆದ್ದಾರಿ ಬದಿಯಲ್ಲಿನ ಬಾರ್ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಜೂ.30. ಹೆದ್ದಾರಿ ಬದಿಗಳಲ್ಲಿ ಕಾರ್ಯಾಚರಿಸುತ್ತಿದ್ದ ಬಾರ್ ಗಳನ್ನು 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆನ್ನುವ ಸುಪ್ರೀಂ ಕೋರ್ಟ್ ಆದೇಶವು ನಾಳೆಯಿಂದ ಜಾರಿಗೆ ಬರಲಿದೆ‌. ಮೊದಲು ಹೆದ್ದಾರಿಯಿಂದ 500 ಮೀ. ಅಂತರ ಇರಬೇಕೆಂದು ನೀಡಲಾಗಿದ್ದ ಆದೇಶವನ್ನು ತಿದ್ದುಪಡಿ ಮಾಡಿರುವ ಸುಪ್ರೀಂಕೋರ್ಟ್ 220 ಮೀ. ಅಂತರವನ್ನು ನಿಗದಿಪಡಿಸಿತ್ತು. ಈ ಆದೇಶದನ್ವಯ ದೇಶದಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಗಳಲ್ಲಿನ ಬಾರ್ ಗಳಿಗೆ ಕುತ್ತು ಬಂದಿದ್ದು, ನಾಳೆಯಿಂದ ಮುಚ್ಚಬೇಕಾಗಿದೆ. ಕಡಬದಲ್ಲಿನ ಬಾರ್ ಗಳೂ ಈ ಆದೇಶದ ಹೊರತಾಗಿಲ್ಲ.

ನಾಳೆಯಿಂದ ಹೆದ್ದಾರಿ ಬದಿಯಲ್ಲಿನ ಬಾರ್ ಬಂದ್ Read More »

ರಾಷ್ಟ್ರೀಯ ನ್ಯೂಸ್

ಸಾಲ ಮನ್ನಾ ಮಾಡಿರುವ ಸಿಎಂ ಗೆ ಕೇಂದ್ರದಿಂದ ಖಡಕ್ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.29. ರೈತರ ಸಾಲ ಮನ್ನಾ ಖುಷಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ. ರೈತರ ಉದ್ದಾರಕ್ಕಾಗಿ, ಉತ್ತಮ ರಸ್ತೆಗಳ ನಿರ್ಮಾಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಂಡಿರುವ ಸಾಲವನ್ನೇ ಸರಿಯಾಗಿಯೇ ಬಳಸಿಕೊಂಡಿಲ್ಲ ಅಂತ ಗರಂ ಆಗಿ ಪತ್ರ ಬರೆದಿದೆ. ಮಿಲಿಯನ್ ಗಟ್ಟಲೆ ಸಾಲವಿದೆ.  ಆದರೆ ಆ ಯೋಜನೆಗಳು ಮಾತ್ರ ಶೇ.20ರಷ್ಟು ಮುಗಿದಿಲ್ಲ. ಇನ್ನು ಆ ಯೋಜನೆಗೆ ನಿಗದಿಪಡಿಸಿರುವ ಸಮಯ ಶೇ. 60ರಷ್ಟು ಮುಗಿದಿದೆ ಅಂತಾ ಖಾರವಾಗಿ ಪತ್ರ

ಸಾಲ ಮನ್ನಾ ಮಾಡಿರುವ ಸಿಎಂ ಗೆ ಕೇಂದ್ರದಿಂದ ಖಡಕ್ ಎಚ್ಚರಿಕೆ Read More »

ರಾಷ್ಟ್ರೀಯ ನ್ಯೂಸ್

ಸಾಲಮನ್ನಾ ಇಂದು ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು ಲೇವಡಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜೂ.22. ಸಾಲ ಮನ್ನಾ ಎಂಬುದು ಇಂದಿನ ದಿನಗಳಲ್ಲಿ ಫ್ಯಾಶನ್ ಆಗಿದ್ದು, ತೀವ್ರ ಸಂಕಷ್ಟದ ಸ್ಥಿತಿಯಲ್ಲಿ ಮಾತ್ರ ಸಾಲಮನ್ನಾ ಮಾಡಬೇಕು. ಆದರೆ ಇದು ಸಮಸ್ಯೆಗಳಿಗೆ ಅಂತಿಮ ಪರಿಹಾರವಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಲೇವಡಿ ಮಾಡಿದ್ದಾರೆ. ಕರ್ನಾಟಕ ಸರಕಾರವು ಬುಧವಾರದಂದು ಸಹಕಾರಿ ಬ್ಯಾಂಕ್ ಗಳಲ್ಲಿನ 50 ಸಾವಿರ ರೂ.ವರೆಗಿನ ರೈತರ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಿತ್ತು. ಪ್ರತಿಯೊಬ್ಬ ರೈತನ 50 ಸಾವಿರ ರೂ. ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು,

ಸಾಲಮನ್ನಾ ಇಂದು ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು ಲೇವಡಿ Read More »

ರಾಷ್ಟ್ರೀಯ ನ್ಯೂಸ್

ಮಹಾರಾಷ್ಟ್ರ: ರೈತರ ಸಾಲ ಸಂಪೂರ್ಣ ಮನ್ನಾ

(ನ್ಯೂಸ್ ಕಡಬ) newskadaba.com ಮುಂಬೈ, ಜೂ.11. ಜೂ.1ರಂದು ಸಾಲಮನ್ನಾ ಹಾಗೂ ಇತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಹಾರಾಷ್ಟ್ರದಲ್ಲಿ ರೈತರು ಸರಕಾರದ ವಿರುದ್ಧ ಭಾರೀ ಪ್ರತಿಭಟನೆಯನ್ನು ಆರಂಭಿಸಿದ್ದರ ಪರಿಣಾಮ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರಕಾರ ಘೋಷಿಸಿದ್ದು, ಈ ಬಗೆಗಿನ ಮಾನದಂಡಗಳನ್ನು ನಿರ್ಧರಿಸಲು ಶೀಘ್ರವೇ ಸಮಿತಿಯೊಂದನ್ನು ರಚಿಸಲಿದೆ. “ಸಾಲಮನ್ನಾ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಸರಕಾರ ಒಪ್ಪಿಗೆ ನೀಡಿದೆ. ಒಂದು ವೇಳೆ ಇದರಲ್ಲಿ ಸರಕಾರ ವಿಫಲವಾದಲ್ಲಿ ಮತ್ತೆ ಜುಲೈ 25ರಂದು ನಾವು ಹೋರಾಟ ಆರಂಭಿಸಲಿದ್ದೇವೆ’ ಎಂದು ರೈತ ಮುಖಂಡರು

ಮಹಾರಾಷ್ಟ್ರ: ರೈತರ ಸಾಲ ಸಂಪೂರ್ಣ ಮನ್ನಾ Read More »

ರಾಷ್ಟ್ರೀಯ ನ್ಯೂಸ್

ಉದ್ಯಾವರ: ಮೂವರು ವಿದ್ಯಾರ್ಥಿಗಳು ನೀರು ಪಾಲು

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಜೂ.10. ಸ್ನಾನಕ್ಕೆಂದು ಕೆರೆಗೆ ಇಳಿದಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಇಲ್ಲಿನ ಉದ್ಯಾವರ ಬಿ.ಎಸ್ ನಗರ ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತ ಬಾಲಕರನ್ನು ಪಿ.ಟಿ. ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಶರೀಫ್ (7), ಮುಹಮ್ಮದ್ ಎಂಬವರ ಪುತ್ರ ಅಸ್ಲಂ (8) , ಅಹ್ಮದ್ ಹಸ್ಸನ್ ಕುಂಞಿ ಎಂಬವರ ಪುತ್ರ ಅಬ್ದುಲ್ ಅಫ್ರೀದ್ (12) ಎಂದು ಗುರುತಿಸಲಾಗಿದೆ. ಶನಿವಾರ ಶಾಲೆ ಬಿಟ್ಟು ಮನೆಯಿಂದ ತೆರಳಿದ ವಿದ್ಯಾರ್ಥಿಗಳು ಇಲ್ಲಿಗೆ ಸಮೀಪದ ಕೆರೆಯೊಂದರಲ್ಲಿ ಸ್ನಾನಕ್ಕಿಳಿದಿದ್ದು ಈ

ಉದ್ಯಾವರ: ಮೂವರು ವಿದ್ಯಾರ್ಥಿಗಳು ನೀರು ಪಾಲು Read More »

ರಾಷ್ಟ್ರೀಯ ನ್ಯೂಸ್

ಆರ್ಥಿಕ ತಜ್ಞ ರಾಜಕುಮಾರ್ ರೇ ಅಪಘಾತಕ್ಕೆ ಬಲಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಜೂ.5. ಆರ್ಥಿಕ ಮತ್ತು ಉದ್ಯಮ ವಿಷಯಗಳಲ್ಲಿ ತಜ್ಞರೆಂಬ ಗೌರವಕ್ಕೆ ಪಾತ್ರರಾಗಿದ್ದ ಆಂಗ್ಲ ದೈನಿಕ ಹಿಂದುಸ್ಥಾನ ಟೈಮ್ಸ್‌ನ ಸಹ ಸಂಪಾದಕ ರಾಜಕುಮಾರ್ ರೇ(45) ಅವರು ರವಿವಾರ ದಿಲ್ಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗೋವಿಂದಪುರಿ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿ ರೆಳೆದರು. ಆರೋಪಿ ಬೈಕ್ ಸವಾರ, ತುಘ್ಲಕಾಬಾದ್‌ನ ನಿವಾಸಿಯಾಗಿರುವ 18ರ ಹರೆಯದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಕತ್ತಾ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪದವಿ

ಆರ್ಥಿಕ ತಜ್ಞ ರಾಜಕುಮಾರ್ ರೇ ಅಪಘಾತಕ್ಕೆ ಬಲಿ Read More »

ರಾಷ್ಟ್ರೀಯ ನ್ಯೂಸ್

ಬಿಹಾರ: ಯುವಕರಿಬ್ಬರನ್ನು ತಲೆಕೆಳಗಾಗಿ ಮರಕ್ಕೆ ಕಟ್ಟಿ ಥಳಿಸಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಬಿಹಾರ, ಜೂ.5. ಮದುವೆ ಸಮಾರಂಭಕ್ಕೆಂದು ತಂದಿದ್ದ 5 ಕುರ್ಚಿಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಯುವಕರಿಬ್ಬರನ್ನು ತಲೆಕೆಳಗಾಗಿ ಮರಕ್ಕೆ ಕಟ್ಟಿಹಾಕಿದ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ರಾಜ್ ಕುಮಾರ್ ಬಿಂದ್ ಹಾಗೂ ಬೀರ್ ಬಲ್ ಬಿಂದ್ ಎಂದು ಗುರುತಿಸಲಾಗಿದೆ. ಗಂಟೆಗಳ ಕಾಲ ತಲೆಕೆಳಗಾಗಿ ಕಟ್ಟಿಹಾಕಿದ ಅವರಿಬ್ಬರನ್ನು ಮನೆಮಂದಿ 3 ಸಾವಿರ ರೂ. ನೀಡಿದ ಬಳಿಕ ಬಿಡುಗಡೆಗೊಳಿಸಲಾಯಿತು.   ಕೈಮೂರ್ ಜಿಲ್ಲೆಯ ಸೋನ್ ಬರ್ಸಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಇಬ್ಬರು ಯುವಕರಿಗೆ ಹಲ್ಲೆ ನಡೆಸಿದ

ಬಿಹಾರ: ಯುವಕರಿಬ್ಬರನ್ನು ತಲೆಕೆಳಗಾಗಿ ಮರಕ್ಕೆ ಕಟ್ಟಿ ಥಳಿಸಿದ ದುಷ್ಕರ್ಮಿಗಳು Read More »

ರಾಷ್ಟ್ರೀಯ ನ್ಯೂಸ್

ಎಳೆಯ ಮಗುವನ್ನು ರಸ್ತೆಗೆದು ಮಹಿಳೆಯ ಅತ್ಯಾಚಾರ

(ನ್ಯೂಸ್ ಕಡಬ) newskadaba.com ಗುರುಗಾಂವ್, ಜೂ.6. ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತೋಳಲ್ಲಿದ್ದ ಮಗುವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ರಸ್ತೆಗೆ ಎಸೆದು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಗೆ ಎಸೆಯಲ್ಪಟ್ಟ ಎಂಟು ತಿಂಗಳ ಹೆಣ್ಣು ಮಗು ಮೃತಪಟ್ಟಿದೆ. ಮೇ 29ರಂದು ಮಧ್ಯರಾತ್ರಿ ಘಟನೆ ನಡೆದಿದ್ದು, ಮೂವರು ಆರೋಪಿಗಳ ವಿರುದ್ಧ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಹತ್ಯೆ ಮತ್ತು ಲೈಂಗಿಕ ಕಿರುಕುಳ ಪ್ರಕರಣವನ್ನು ಮೇ 30ರಂದು ದಾಖಲಿಸಲಾಗಿತ್ತು. ನೆರೆಮನೆಯವರ ಜತೆ ಜಗಳವಾದ ಹಿನ್ನೆಲೆಯಲ್ಲಿ

ಎಳೆಯ ಮಗುವನ್ನು ರಸ್ತೆಗೆದು ಮಹಿಳೆಯ ಅತ್ಯಾಚಾರ Read More »

ರಾಷ್ಟ್ರೀಯ ನ್ಯೂಸ್

ಬಿಎಸ್ಎಫ್ ಕಾರ್ಯಾಚರಣೆ: 4 ಲಕ್ಷ ಮುಖಬೆಲೆಯ ನಕಲಿ ನೋಟುಗಳ ವಶ

(ನ್ಯೂಸ್ ಕಡಬ) newskadaba.com ಮಾಲ್ಡಾ, ಜೂ.4. ನೂತನ 2 ಸಾವಿರ ರೂ. ಮುಖಬೆಲೆಯ 4,98,000 ನಕಲಿ ನೋಟುಗಳನ್ನು ಗಡಿಭದ್ರತಾ ಪಡೆ ವಶಪಡಿಸಿಕೊಂಡಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬಿಎಸ್ ಎಫ್ ಭಾರತ-ಬಾಂಗ್ಲಾ ಗಡಿಪ್ರದೇಶದಿಂದ ಈ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, ಕಾರ್ಯಾಚರಣೆಯ ವೇಳೆ ಕತ್ತಲಾಗಿದ್ದರಿಂದ ದಂಧೆಕೋರರು ಪರಾರಿಯಾಗಿದ್ದಾರೆ. ವಶಪಡಿಸಿಕೊಂಡಿರುವ ನೋಟುಗಳನ್ನು ಕಲಿಯಾಚಕ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಬಿಎಸ್ಎಫ್ ಕಾರ್ಯಾಚರಣೆ: 4 ಲಕ್ಷ ಮುಖಬೆಲೆಯ ನಕಲಿ ನೋಟುಗಳ ವಶ Read More »

ರಾಷ್ಟ್ರೀಯ ನ್ಯೂಸ್
Scroll to Top