ಜಮ್ಮು ಕಾಶ್ಮೀರ: ಭದ್ರತಾ ಪಡೆಗಳ ಯಶಸ್ವಿ ಎನ್ ಕೌಂಟರ್ ➤ ಮೂವರು ಉಗ್ರರ ಹತ್ಯೆ



(ನ್ಯೂಸ್ ಕಡಬ) Newskadaba.com ಶ್ರೀನಗರ್, ಅ. 12. ಜಮ್ಮು- ಕಾಶ್ಮೀರದಲ್ಲಿ ಮೂವರು ಉಗ್ರರ ಸದೆಬಡಿಯವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಇತ್ತಿಚೆಗೆ ಬೀದಿ ಬದಿ ವ್ಯಾಪಾರಿಯೋರ್ವನನ್ನು ಹತೈಗೈದಿದ್ದ ಉಗ್ರನ ಸಹಿತ ಟಿಆರ್‌ಎಫ್‌ ಸಂಘಟನೆಯ ಮೂವರು ಉಗ್ರರನ್ನು ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿವೆ.







ಶೋಪಿಯಾನ್ ಪ್ರಾಂತ್ಯದ ಇಮಾಮ್‍ಸಾಬ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಆಧರಿಸಿ ಭದ್ರತಾ ಪಡೆಗಳು ರಾತ್ರಿಯಿಡೀ ಕಾರ್ಯಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.






error: Content is protected !!
Scroll to Top