ರಾಷ್ಟ್ರೀಯ ನ್ಯೂಸ್

ಸಾಮಾನ್ಯ ಮಹಿಳೆಯರಂತೆ ಕೂತು ಪೊಂಗಲ್ ತಯಾರಿಸಿದ ಸುಧಾಮೂರ್ತಿ  

(ನ್ಯೂಸ್ ಕಡಬ)newskadaba.com  ತಿರುವನಂತಪುರಂ,  ಮಾ.10. ತಿರುವನಂತಪುರಂನ ಅಟ್ಟುಕಲ್ ಭಗವತಿ ದೇವಸ್ಥಾನದ ಪ್ರಸಿದ್ಧ ಪೊಂಗಲ ಹಬ್ಬಕ್ಕೆ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ವಿಷೇಶ ವ್ಯಕ್ತಿಯೊಬ್ಬರು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಖ್ಯಾತ ಶಿಕ್ಷಣತಜ್ಞೆ, ಲೇಖಕಿ, ಪರೋಪಕಾರಿ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಸಾವಿರಾರು ಮಹಿಳೆಯರ ನಡುವೆ ಕುಳಿತು ದೇವರಿಗೆ ಪೊಂಗಲ ಅಥವಾ ಪೊಂಗಲ್ (ಅಕ್ಕಿ, ತೆಂಗಿನಕಾಯಿ ಮತ್ತು ಬೆಲ್ಲ ಬಳಸಿ ಮಾಡಿದ ಸಿಹಿ ಖಾದ್ಯ) […]

ಸಾಮಾನ್ಯ ಮಹಿಳೆಯರಂತೆ ಕೂತು ಪೊಂಗಲ್ ತಯಾರಿಸಿದ ಸುಧಾಮೂರ್ತಿ   Read More »

ರಾಷ್ಟ್ರೀಯ ನ್ಯೂಸ್

ಟ್ರಾನ್ಸ್ ಫಾರ್ಮರ್ ಸ್ಫೋಟ ➤ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಥಾಣೆ, ಮಾ. 10. ಟ್ರಾನ್ಸ್ಫಾರ್ಮರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯ ಶಿಲ್ಪಾಟಾ ಪ್ರದೇಶದಲ್ಲಿ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಥಾಣೆ ಮುನ್ಸಿಪಲ್ ಕಾರ್ಪೋರೇಶನ್ ತಿಳಿಸಿದೆ.

ಟ್ರಾನ್ಸ್ ಫಾರ್ಮರ್ ಸ್ಫೋಟ ➤ ಓರ್ವ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಕ್ರಮ ಹಣ ವರ್ಗಾವಣೆ ಆರೋಪ ➤ ಮನೀಶ್ ಸಿಸೋಡಿಯಾ ಇಡಿ ವಶಕ್ಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 10. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯವು(ಇಡಿ) ಗುರುವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅವರನ್ನು 8 ಗಂಟೆಗಳ ಕಾಲ ತಿಹಾರ್ ಜೈಲಿನಲ್ಲಿ ಎರಡನೇ ಸುತ್ತಿನ ವಿಚಾರಣೆ ನಡೆಸಿ, ಬಳಿಕ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸಿಸೋಡಿಯಾ ಅವರು ಇಡಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ ಮತ್ತು

ಅಕ್ರಮ ಹಣ ವರ್ಗಾವಣೆ ಆರೋಪ ➤ ಮನೀಶ್ ಸಿಸೋಡಿಯಾ ಇಡಿ ವಶಕ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
crime, arrest, suspected

ಮಂಗಳೂರು: ವಿವಿಧ ಪ್ರಕರಣಗಳ ಆರೋಪಿ ಕ್ಯಾಲಿಕಟ್ ಏರ್ ಪೋರ್ಟ್ ನಲ್ಲಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 10. ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ ಘಡನೆ ನಡೆದಿದೆ. ಬಂಧಿತನನ್ನು ಕಣ್ಣೂರು ಜಿಲ್ಲೆಯ ಮಹಮ್ಮದ್‌ ಅಸ್ಗರ್‌ ಕರಿಂಕಲ್ಲನ್‌ (26) ಎಂದು ಗುರುತಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತನನ್ನು ಮಾದಕ ವಸ್ತು ಸಾಗಾಟ, ಮಾರಾಟ ಹಾಗೂ ಸೇವಿಸಿರುವ ಶಂಕೆಯ ಹಿನ್ನೆಲೆ ತನಿಖೆ ನಡೆಸಿದಾಗ ಮಂಗಳೂರು ನಗರ ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿಯಲ್ಲಿ ಮಾರ್ಚ್ 6ರಂದು ಗಾಂಜಾ ಖರೀದಿಸಿ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ

ಮಂಗಳೂರು: ವಿವಿಧ ಪ್ರಕರಣಗಳ ಆರೋಪಿ ಕ್ಯಾಲಿಕಟ್ ಏರ್ ಪೋರ್ಟ್ ನಲ್ಲಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಲಿಗೆ ಕ್ಯಾಮರಾ ಅಳವಡಿಸಿದ್ದ ಗೂಢಚಾರ ಪಾರಿವಾಳ ಸೆರೆ    

(ನ್ಯೂಸ್ ಕಡಬ) newskadaba.com ಒಡಿಶಾ, ಮಾ. 09. ಕಾಲಿಗೆ ಕ್ಯಾಮರಾ ಮತ್ತು ಮೈಕ್ರೋಚಿಪ್ ನ್ನು ಅಳವಡಿಸಿ ಹಾರಿಬಿಡಲಾಗಿದ್ದ ಗೂಢಚಾರ ಪಾರಿವಾಳವನ್ನು ಒಡಿಶಾದ ಕಡಲ ತೀರದಲ್ಲಿ ಸೆರೆ ಹಿಡಿದ ಘಟನೆ ವರದಿಯಾಗಿದೆ. ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪರದೀಪ್ ಕರಾವಳಿ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು,  ಈ ಪಾರಿವಾಳವನ್ನು ಗೂಢಚಾರಿಕೆಗಾಗಿ ಬಳಕೆ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಈ ಪಾರಿವಾಳ ತಮ್ಮ ಟ್ರಾಲರ್‌ನಲ್ಲಿ ಕುಳಿತಿದ್ದನ್ನು ಕೆಲವು ಮೀನುಗಾರರು ಕಂಡಿದ್ದರು

ಕಾಲಿಗೆ ಕ್ಯಾಮರಾ ಅಳವಡಿಸಿದ್ದ ಗೂಢಚಾರ ಪಾರಿವಾಳ ಸೆರೆ     Read More »

ರಾಷ್ಟ್ರೀಯ ನ್ಯೂಸ್

ಅಕ್ರಮ ಚಿನ್ನ ಸಾಗಾಟ ➤ ಏರ್ ಇಂಡಿಯಾ ಸಿಬ್ಬಂದಿಯ ಬಂಧನ

(ನ್ಯೂಸ್ ಕಡಬ) newskadaba.com ಕೊಚ್ಚಿ, ಮಾ. 09. ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ವರದಿಯಾಗಿದೆ . ಬಂಧಿತ ಆರೋಪಿಯನ್ನು ವಯನಾಡು ಮೂಲದ ಶಫಿ ಎಂದು ಗುರುತಿಸಲಾಗಿದೆ. ಈತನಿಂದ 1,487 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಬಹ್ರೇನ್, ಕೋಯಿಕ್ಕೋಡ್ ಹಾಗೂ ಕೊಚ್ಚಿ ನಡುವಿನ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿದ್ದು, ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿರುವುದರ ಕುರಿತು ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು.

ಅಕ್ರಮ ಚಿನ್ನ ಸಾಗಾಟ ➤ ಏರ್ ಇಂಡಿಯಾ ಸಿಬ್ಬಂದಿಯ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಟವಾಡಲು ತೆರಳಿದ್ದ ಶಾಲಾ ಬಾಲಕ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ. 09. ಆಟವಾಡಲು ತೆರಳಿದ್ದ ವಿದ್ಯಾರ್ಥಿಯೋರ್ವ ಶಾಲಾ ಸಮೀಪ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡು ಬೇಡಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಕುಂಡಂಗುಳಿ ನಿವಾಸಿ ವಿನೋದ್ ಎಂಬವರ ಪುತ್ರ ಅಭಿನವ್ (17)ದು ಗುರುತಿಸಲಾಗಿದೆ. ಅಭಿನವ್ ಶಾಲೆಯಿಂದ ಮನೆಗೆ ಬಂದು ಸಂಜೆ ಆಟವಾಡಲು ಹೋಗುವುದಾಗಿ ಹೇಳಿ ಹೋಗಿದ್ದ. ಆ ಬಳಿಕ ಸಂಜೆಯಾದರೂ ಮನೆಗೆ ವಾಪಸ್‌ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆ ಸಮೀಪದ ಶಾಲೆಯ ಹಿಂದೆ

ಆಟವಾಡಲು ತೆರಳಿದ್ದ ಶಾಲಾ ಬಾಲಕ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಾಕಿಸ್ತಾನದಲ್ಕಿ ಭಾರತೀಯ ವೈದ್ಯನ ಕತ್ತು ಸೀಳಿ ಹತ್ಯಗೈದ ಚಾಲಕ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.09. ಭಾರತೀಯ ಮೂಲದ ವೈದ್ಯನನ್ನು ಚಾಲಕ ಮನೆಯಲ್ಲೇ ಕತ್ತು ಸೀಳಿ ಹತ್ಯೆಗೈದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಹೈದರಾಬಾದ್ ನ ಕೈಪುರ್ ನಲ್ಲಿ ವೈದ್ಯ ಧರಮ್ ದೇವಿ ರಾತಿ ಎಂಬುವವರ ಹತ್ಯೆ ಆಗಿದ್ದು, ಅವರ ಕಾರಿನ ಚಾಲಕ ಹನೀಫ್ ಲಗಾರಿ ಕೊಲೆ ಮಾಡಿದ ಆರೋಪಿ. ಹನೀಫ್ ಲಗಾರಿಯನ್ನು ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.    

ಪಾಕಿಸ್ತಾನದಲ್ಕಿ ಭಾರತೀಯ ವೈದ್ಯನ ಕತ್ತು ಸೀಳಿ ಹತ್ಯಗೈದ ಚಾಲಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದ ಮೊದಲ ತೃತೀಯಲಿಂಗಿ ದಂಪತಿಯ ಮಗುವಿಗೆ ನಾಮಕರಣ

(ನ್ಯೂಸ್ ಕಡಬ) newskadaba.com ಕೇರಳ, ಮಾ. 09. ಇತ್ತೀಚೆಗಷ್ಟೇ ಮಗುವೊಂದಕ್ಕೆ ಜನ್ಮ ನೀಡಿದ್ದ ಕೋಝಿಕ್ಕೋಡ್ ನ ತೃತೀಯಲಿಂಗಿ ದಂಪತಿ ಜಿಯಾ ಮತ್ತು ಜಹಾದ್ ಇದೀಗ ಮಗುವಿಗೆ ನಾಮಕರಣ ಮಾಡಿದ್ದಾರೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಜಹಾದ್ ಹಾಗೂ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜಹ್ಹಾದ್ ಗೆ ಕಳೆದ ಫೆ. 02ರಂದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಅಂದು ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದ

ದೇಶದ ಮೊದಲ ತೃತೀಯಲಿಂಗಿ ದಂಪತಿಯ ಮಗುವಿಗೆ ನಾಮಕರಣ Read More »

ರಾಷ್ಟ್ರೀಯ ನ್ಯೂಸ್

ಸಾವಿರಕ್ಕೂ ಅಧಿಕ ಬೀದಿನಾಯಿಗಳಿಗೆ ಆಹಾರ ನೀಡದೇ ಉಪವಾಸ ಕೆಡವಿ ಹತ್ಯೆಗೈದ ವ್ಯಕ್ತಿ

(ನ್ಯೂಸ್ ಕಡಬ)newskadaba.com  ಸಿಯೋಲ್, ಮಾ.09. ಬೀದಿ ನಾಯಿಗಳನ್ನು ಸಾಕುವ ನೆಪದಲ್ಲಿ ಸಾವಿರಕ್ಕೂ ಅಧಿಕ ನಾಯಿಗಳನ್ನು ದತ್ತುಪಡೆದ ವ್ಯಕ್ತಿಯೊಬ್ಬ ಬಳಿಕ ಉಪವಾಸ ಕೆಡವಿ ಹತ್ಯೆ ಮಾಡಿರುವ ಅಮಾನವೀಯ ಪ್ರಕರಣ ದಕ್ಷಿಣ ಕೊರಿಯಾದ ಯಾಂಗ್ಪೆಯಂಗ್ ಪ್ರಾಂತದಲ್ಲಿ ವರದಿಯಾಗಿದೆ. ನಾಯಿ ಸಾಕುವವರಿಂದ ಸಾಕುವುದಾಗಿ ಹೇಳಿ ನಾಯಿಮರಿಗಳನ್ನು ಪಡೆಯುವ ಈ ವ್ಯಕ್ತಿ, ಪ್ರತೀ ನಾಯಿಮರಿಯ ಪೋಷಣೆಗಾಗಿ ಸುಮಾರು 700 ರೂ. ಪಡೆಯುತ್ತಿದ್ದ. ಆದರೆ ಬಳಿಕ ಅವನ್ನು ಒಂದು ರೂಮಿನಲ್ಲಿ ಕೂಡಿಹಾಕಿ ಉಪವಾಸ ಕೆಡವಿ ಸಾಯಿಸುತ್ತಿದ್ದ. ಕಳೆದ 2 ವರ್ಷದಿಂದ ಈತ ಈ ಕೃತ್ಯ

ಸಾವಿರಕ್ಕೂ ಅಧಿಕ ಬೀದಿನಾಯಿಗಳಿಗೆ ಆಹಾರ ನೀಡದೇ ಉಪವಾಸ ಕೆಡವಿ ಹತ್ಯೆಗೈದ ವ್ಯಕ್ತಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top