ಸಾವಿರಕ್ಕೂ ಅಧಿಕ ಬೀದಿನಾಯಿಗಳಿಗೆ ಆಹಾರ ನೀಡದೇ ಉಪವಾಸ ಕೆಡವಿ ಹತ್ಯೆಗೈದ ವ್ಯಕ್ತಿ



(ನ್ಯೂಸ್ ಕಡಬ)newskadaba.com  ಸಿಯೋಲ್, ಮಾ.09. ಬೀದಿ ನಾಯಿಗಳನ್ನು ಸಾಕುವ ನೆಪದಲ್ಲಿ ಸಾವಿರಕ್ಕೂ ಅಧಿಕ ನಾಯಿಗಳನ್ನು ದತ್ತುಪಡೆದ ವ್ಯಕ್ತಿಯೊಬ್ಬ ಬಳಿಕ ಉಪವಾಸ ಕೆಡವಿ ಹತ್ಯೆ ಮಾಡಿರುವ ಅಮಾನವೀಯ ಪ್ರಕರಣ ದಕ್ಷಿಣ ಕೊರಿಯಾದ ಯಾಂಗ್ಪೆಯಂಗ್ ಪ್ರಾಂತದಲ್ಲಿ ವರದಿಯಾಗಿದೆ.







ನಾಯಿ ಸಾಕುವವರಿಂದ ಸಾಕುವುದಾಗಿ ಹೇಳಿ ನಾಯಿಮರಿಗಳನ್ನು ಪಡೆಯುವ ಈ ವ್ಯಕ್ತಿ, ಪ್ರತೀ ನಾಯಿಮರಿಯ ಪೋಷಣೆಗಾಗಿ ಸುಮಾರು 700 ರೂ. ಪಡೆಯುತ್ತಿದ್ದ. ಆದರೆ ಬಳಿಕ ಅವನ್ನು ಒಂದು ರೂಮಿನಲ್ಲಿ ಕೂಡಿಹಾಕಿ ಉಪವಾಸ ಕೆಡವಿ ಸಾಯಿಸುತ್ತಿದ್ದ. ಕಳೆದ 2 ವರ್ಷದಿಂದ ಈತ ಈ ಕೃತ್ಯ ನಡೆಸುತ್ತಿದ್ದ.






 

error: Content is protected !!
Scroll to Top