ರಾಷ್ಟ್ರೀಯ ನ್ಯೂಸ್

ಹೊಲದಲ್ಲಿ ಸಿಕ್ಕ ನಾಲ್ಕು ಹುಲಿಮರಿಗಳನ್ನು ರಕ್ಷಣೆ ಮಾಡಿದ ಗ್ರಾಮಸ್ಥರು !

(ನ್ಯೂಸ್ ಕಡಬ)newskadaba.com ತಿರುಪತಿ, ಮಾ.09. ಅಂಧ್ರಪ್ರದೇಶದ ಆತ್ಮಾಕೂರು ಅರಣ್ಯ ವಲಯದಲ್ಲಿ ತಾಯಿಯಿಂದ ತಪ್ಪಿಸಿಕೊಂಡ ನಾಲ್ಕು ಹುಲಿಮರಿಗಳನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ನಂದ್ಯಾಲ ಜಿಲ್ಲೆಯ ಕೋಟಪಲ್ಲಿ ತಾಲೂಕಿನ ಪೆದ್ದ ಗುಮ್ಮದಪುರಂನಲ್ಲಿ ಈ ಘಟನೆ ನಡೆದಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಪೆದ್ದ ಗುಮ್ಮದಪುರಂನ ಹೊಲದಲ್ಲಿನ ಫಾರ್ಮ್ ಹೌಸ್ ಬಳಿ ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಗ್ರಾಮಸ್ಥರು ಅವನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಆತ್ಮಾಕೂರು ಅರಣ್ಯ ವಲಯದ ಅಧಿಕಾರಿಗಳು ‘ಹುಲಿ ಮರಿಗಳನ್ನು ಕಾಡಿನಲ್ಲಿ ಬಿಟ್ಟಿದ್ದು, ಅವುಗಳು […]

ಹೊಲದಲ್ಲಿ ಸಿಕ್ಕ ನಾಲ್ಕು ಹುಲಿಮರಿಗಳನ್ನು ರಕ್ಷಣೆ ಮಾಡಿದ ಗ್ರಾಮಸ್ಥರು ! Read More »

ರಾಷ್ಟ್ರೀಯ ನ್ಯೂಸ್

ತಮಿಳುನಾಡು: 13 ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ

(ನ್ಯೂಸ್ ಕಡಬ) newskadaba.com ಚೆನ್ನೈ, ಮಾ. 09. ತಮಿಳುನಾಡಿನಲ್ಲಿ ಬಿಜೆಪಿಯ 12ಕ್ಕೂ ಅಧಿಕ ಪದಾಧಿಕಾರಿಗಳು ಎಐಎಡಿಎಂಕೆಗೆ ಸೇರಲು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ನೀಡಲು ನಾಯಕತ್ವದ ಕುರಿತು ಇರುವ ಅಸಮಾಧಾನವೇ ಕಾರಣ ಎಂದು ಅವರು ಹೇಳಿದ್ದಾರೆ. ಚೆನ್ನೈ ಪಶ್ಚಿಮದಲ್ಲಿರುವ ಬಿಜೆಪಿ ಐಟಿ ಘಟಕಕ್ಕೆ ಸೇರಿದ ಎಲ್ಲಾ 13 ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜೀನಾಮೆ ನೀಡಿದವರಲ್ಲಿ ಪಕ್ಷದ ರಾಜ್ಯ ಐಟಿ ಘಟಕದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಹಾಗೂ ರಾಜ್ಯ ಕಾರ್ಯದರ್ಶಿ ದಿಲೀಪ್ ಕಣ್ಣನ್

ತಮಿಳುನಾಡು: 13 ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಾಲಿವುಡ್ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್  ವಿಧಿವಶ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.09. ಬಾಲಿವುಡ್‌ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್(66) ಮುಂಬೈನಲ್ಲಿ ನಿಧನರಾದರು ಎಂದು ವರದಿ ತಿಳಿಸಿದೆ. ಸತೀಶ್ ಕೌಶಿಕ್ ನಿಧನವನ್ನು ಹಿರಿಯ ನಟ ಅನುಪಮ್ ಖೇರ್ ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ. ನಟ, ಹಾಸ್ಯನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಖ್ಯಾತಿಗಳಿಸಿದ್ದ ಅವರು ಗುರುಗ್ರಾಮ್‌ ನಲ್ಲಿ ಆಪ್ತರೊಬ್ಬರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.  

ಬಾಲಿವುಡ್ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್  ವಿಧಿವಶ Read More »

ರಾಷ್ಟ್ರೀಯ ನ್ಯೂಸ್

ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌..!      ➤ 46 ಸಾವಿರಕ್ಕೂ ಅಧಿಕ ಬಳಕೆದಾರರ ಪರದಾಟ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.09. ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ ಆಗಿ ಸಾವಿರಾರು ಬಳಕೆದಾರರಿಗೆ ತೊಂದರೆಯುಂಟಾಗಿದೆ ಎಂದು ವರದಿಯಾಗಿದೆ. ಸರ್ವರ್‌ ಸ್ಥಗಿತ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ ಡಿಟೆಕ್ಟರ್ ವರದಿ ಮಾಡಿರುವ ಪ್ರಕಾರ 46 ಸಾವಿರಕ್ಕೂ ಅಧಿಕ ಬಳಕೆದಾರರಿಗೆ ಇನ್‌ಸ್ಟಾಗ್ರಾಮ್ ಬಳಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.  

ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌..!      ➤ 46 ಸಾವಿರಕ್ಕೂ ಅಧಿಕ ಬಳಕೆದಾರರ ಪರದಾಟ Read More »

ರಾಷ್ಟ್ರೀಯ ನ್ಯೂಸ್

ನ್ಯೂಯಾರ್ಕ್ ಜಿಲ್ಲಾ ನ್ಯಾಯಾಧೀಶರಾಗಿ ಭಾರತೀಯ ಮೂಲದ ಅರುಣ್ ಸುಬ್ರಮಣಿಯನ್ ನೇಮಕ

(ನ್ಯೂಸ್ ಕಡಬ)newskadaba.com  ನ್ಯೂಯಾರ್ಕ್, ಮಾ.09. ನ್ಯೂಯಾರ್ಕ್‌ ‌ನ ದಕ್ಷಿಣ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರಾಗಿ ಭಾರತೀಯ-ಅಮೆರಿಕನ್ ವಕೀಲ ಅರುಣ್ ಸುಬ್ರಮಣಿಯನ್ ಅವರನ್ನು ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ನ್ಯೂಯಾರ್ಕ್ ನ ಸದರ್ನ್ ಡಿಸ್ಟ್ರಿಕ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿರುವುದನ್ನ ಯುಎಸ್ ಸೆನೆಟ್ ಮಂಗಳವಾರ ಸಂಜೆ 58-37 ಮತಗಳಿಂದ ದೃಢಪಡಿಸಿದೆ ಎನ್ನಲಾಗಿದೆ.

ನ್ಯೂಯಾರ್ಕ್ ಜಿಲ್ಲಾ ನ್ಯಾಯಾಧೀಶರಾಗಿ ಭಾರತೀಯ ಮೂಲದ ಅರುಣ್ ಸುಬ್ರಮಣಿಯನ್ ನೇಮಕ Read More »

ರಾಷ್ಟ್ರೀಯ ನ್ಯೂಸ್

ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಪತನ

(ನ್ಯೂಸ್ ಕಡಬ)newskadaba.com  ಮುಂಬೈ, ಮಾ.08. ಭಾರತೀಯ ನೌಕಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ ದ್ರುವ್ ಮುಂಬೈನ ಕರಾವಳಿ ತೀರದಲ್ಲಿ ಪತನವಾಗಿದೆ. ಹೆಲಿಕಾಪ್ಟರ್ ನಲ್ಲಿದ್ದ ಮೂವರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ, ಘಟನೆಯ ತನಿಖೆಗೆ ಸಹ ಆದೇಶಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಘಟನೆ ನಡೆದ ಕೂಡಲೇ ತಕ್ಷಣ ಶೋಧ ಮತ್ತು ಪಾರುಗಾಣಿಕಾ ನೌಕಾ ಗಸ್ತು ನೌಕೆ ಮೂಲಕ ಕಾರ್ಯ ಆರಂಭಿಸಿ, ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ತನ್ನ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದೆ.  

ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಪತನ Read More »

ರಾಷ್ಟ್ರೀಯ ನ್ಯೂಸ್

ಗಾಂಜಾ, ಎಂ.ಡಿ.ಎಂ.ಎ ಸಹಿತ ನಾಲ್ವರು ಅರೆಸ್ಟ್

(ನ್ಯೂಸ್ ಕಡಬ)newskadaba.com  ಕಾಸರಗೋಡು, ಮಾ.08. ಗಾಂಜಾ ಮತ್ತು ಎಂ.ಡಿ.ಎಂ.ಎ ಸಹಿತ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೂರು ಗ್ರಾಂ ಗಾಂಜಾ ಸಹಿತ ಕೋಟೆಕ್ಕಾರ್ ಬೀರಿಯ ನಿಖಿಲ್ ಶೆಟ್ಟಿ(23) ಮತ್ತು ರಾಹುಲ್(24) ನನ್ನ ಮಂಜೇಶ್ವರ ಕುಂಜತ್ತೂರು ಪದವಿನಿಂದ ಬಂಧಿಸಲಾಗಿದೆ. ಇವರು ಮಾರಾಟಕ್ಕೆಂದು ಗಾಂಜಾ ಸಹಿತ ತಲಪಿದ್ದು , ಮಾಹಿತಿಯಂತೆ ಇಬ್ಬರನ್ನು ಬಂಧಿಸಿದ್ದಾರೆ. ಮಾದಕ ವಸ್ತು ಸಹೀರ್ತಾ ಅಫ್ರಿದ್(32) ಮತ್ತು ತಹಿಮ್(21) ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.  

ಗಾಂಜಾ, ಎಂ.ಡಿ.ಎಂ.ಎ ಸಹಿತ ನಾಲ್ವರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ಹಲವು ವರ್ಷಗಳ ನಂತರ, ಆಂಧ್ರ ಪ್ರದೇಶದ ನಲ್ಲಮಲ ಅರಣ್ಯದಲ್ಲಿ ಭಾರತೀಯ ತೋಳಗಳು ಪತ್ತೆ!

(ನ್ಯೂಸ್ ಕಡಬ) newskadaba.com. ಓಂಗೋಲು, ಮಾ 7.  ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳು ಬರೊಬ್ಬರಿ 10 ವರ್ಷಗಳ ಬಳಿಕ ಆಂಧ್ರ ಪ್ರದೇಶದ ಅರಣ್ಯ ಪ್ರದೇಶದಲ್ಲಿ  ಕಾಣಿಸಿಕೊಂಡಿವೆ. ಆಂಧ್ರ ಪ್ರದೇಶದ ನಲ್ಲಮಲ ಅರಣ್ಯ ವಲಯದ ಅರಣ್ಯಾಧಿಕಾರಿಗಳು ಇತ್ತೀಚೆಗೆ ದೋರ್ನಾಳ-ಆತ್ಮಕೂರು ಗಡಿ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳನ್ನು ಪತ್ತೆ ಮಾಡಿದ್ದಾರೆ. ಸುಮಾರು ಒಂದು ದಶಕದ ನಂತರ ಈ ವಿಶೇಷ ವನ್ಯಜೀವಿ ಕಾಣಿಸಿಕೊಂಡಿರುವುದು ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪ್ರಿಯರಲ್ಲಿ ಹರ್ಷವನ್ನು ತಂದಿದೆ. ಒಂದು ತಿಂಗಳ ಹಿಂದೆ, ರೊಳ್ಳಪಾಡು ಅರಣ್ಯ ಪ್ರದೇಶದಲ್ಲಿ ತೋಳಗಳ ಗುಂಪನ್ನು

➤ ಹಲವು ವರ್ಷಗಳ ನಂತರ, ಆಂಧ್ರ ಪ್ರದೇಶದ ನಲ್ಲಮಲ ಅರಣ್ಯದಲ್ಲಿ ಭಾರತೀಯ ತೋಳಗಳು ಪತ್ತೆ! Read More »

ರಾಷ್ಟ್ರೀಯ ನ್ಯೂಸ್

ರಷ್ಯಾದ 13 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್‌

(ನ್ಯೂಸ್ ಕಡಬ)newskadaba.com  ರಷ್ಯಾ, ಮಾ.07. ರಷ್ಯಾ ದಕ್ಷಿಣ ಭಾಗದಿಂದ ಹಾರಿಸಿರುವ ಸ್ಫೋಟಕಗಳಿದ್ದ ಇರಾನ್‌ ನಿರ್ಮಿತ 13 ಶಾಹಿದ್‌ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ವಾಯುಪಡೆ ಸೋಮವಾರ ತಿಳಿಸಿದೆ. ಕೀವ್‌ ನಗರದ ನೈರುತ್ಯದಲ್ಲಿರುವ ಬ್ರಿಯಾನ್‌ಸ್ಕ್‌ ಪ್ರದೇಶದಿಂದ 15 ಶಾಹಿದ್‌ ಡ್ರೋನ್‌ಗಳನ್ನು ರಷ್ಯಾ ಸೇನೆ ಭಾನುವಾರ ತಡರಾತ್ರಿ ಉಡಾಯಿಸಿತು. ಇದರಲ್ಲಿ 13 ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಲಾಯಿತು ಎಂದು ವಾಯುಪಡೆ ಹೇಳಿದೆ.  

ರಷ್ಯಾದ 13 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್‌ Read More »

ರಾಷ್ಟ್ರೀಯ ನ್ಯೂಸ್

➤ ಭಾರತಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಭೇಟಿ

(ನ್ಯೂಸ್ ಕಡಬ) newskadaba.com. ನವದೆಹಲಿ. ಮಾ 7.  ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಆಲ್ಬನೀಸ್ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅಪರೂಪದ ಖನಿಜ ವಲಯಕ್ಕೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ರಾಭಾರಿ ಬಾರ್ರಿ ಓ ಫರ್ರೆಲ್ ಈ ಬಗ್ಗೆ ಮಾತನಾಡಿದ್ದು, ಆಸ್ಟ್ರೇಲಿಯಾದಲ್ಲಿ ಪ್ರಮುಖ ಖನಿಜ ನಿಕ್ಷೇಪಗಳಿದ್ದು, ಭಾರತ ನಂಬಿಕಸ್ಥ ಹಾಗೂ ವಿಶ್ವಸನೀಯ ಪಾಲುದಾರ ರಾಷ್ಟ್ರವಾಗಿದೆ. ಈ ವಲಯದಲ್ಲಿ ಸಹಕಾರದ ಬಗ್ಗೆ ಮಾ.08 ರಂದು ಪಿಎಂ ಆಲ್ಬನೀಸ್ ಅವರು ಭಾರತಕ್ಕೆ ಭೇಟಿ ನೀಡಿದಾಗ ಮಾತುಕತೆ ನಡೆಯುವ ಸಾಧ್ಯತೆ

➤ ಭಾರತಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಭೇಟಿ Read More »

ರಾಷ್ಟ್ರೀಯ ನ್ಯೂಸ್
Scroll to Top