➤ ಭಾರತಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಭೇಟಿ

(ನ್ಯೂಸ್ ಕಡಬ) newskadaba.com. ನವದೆಹಲಿ. ಮಾ 7.  ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಆಲ್ಬನೀಸ್ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅಪರೂಪದ ಖನಿಜ ವಲಯಕ್ಕೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ರಾಭಾರಿ ಬಾರ್ರಿ ಓ ಫರ್ರೆಲ್ ಈ ಬಗ್ಗೆ ಮಾತನಾಡಿದ್ದು, ಆಸ್ಟ್ರೇಲಿಯಾದಲ್ಲಿ ಪ್ರಮುಖ ಖನಿಜ ನಿಕ್ಷೇಪಗಳಿದ್ದು, ಭಾರತ ನಂಬಿಕಸ್ಥ ಹಾಗೂ ವಿಶ್ವಸನೀಯ ಪಾಲುದಾರ ರಾಷ್ಟ್ರವಾಗಿದೆ. ಈ ವಲಯದಲ್ಲಿ ಸಹಕಾರದ ಬಗ್ಗೆ ಮಾ.08 ರಂದು ಪಿಎಂ ಆಲ್ಬನೀಸ್ ಅವರು ಭಾರತಕ್ಕೆ ಭೇಟಿ ನೀಡಿದಾಗ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

error: Content is protected !!
Scroll to Top