ರಾಷ್ಟ್ರೀಯ ನ್ಯೂಸ್

ಮಧ್ಯಾಹ್ನದ ಬಿಸಿಯೂಟದಲ್ಲಿ ʻಗೋಸುಂಬೆʼ ಪತ್ತೆ.!➤ ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ

(ನ್ಯೂಸ್ ಕಡಬ)newskadaba.com ಬಿಹಾರ,ಮೇ.30 ಮಧ್ಯಾಹ್ನದ ಬಿಸಿ ಊಟದಲ್ಲಿ ಗೋಸುಂಬೆ ಪತ್ತೆಯಾಗಿದ್ದು, 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ವರದಿಯಾಗಿದೆ. ಭೀಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ತುಡಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನದ ಬಿಸಿ ಊಟ ಸೇವಿಸಿದ ನಂತರ ಅನೇಕ ವಿದ್ಯಾರ್ಥಿಗಳು ವಾಂತಿ ಮತ್ತು ಹೊಟ್ಟೆ ನೋವು ಎಂದು ದೂರಿದ್ದಾರೆ. ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ತಕ್ಷಣ 45 ಮಕ್ಕಳನ್ನು ಸಾಮಾನ್ಯ ಆರೋಗ್ಯ ಕೇಂದ್ರ ನರಪತಗಂಜ್‌ಗೆ ಚಿಕಿತ್ಸೆಗಾಗಿ ಕರೆದೊಯ್ದರು. […]

ಮಧ್ಯಾಹ್ನದ ಬಿಸಿಯೂಟದಲ್ಲಿ ʻಗೋಸುಂಬೆʼ ಪತ್ತೆ.!➤ ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ Read More »

ರಾಷ್ಟ್ರೀಯ ನ್ಯೂಸ್

ಚಾಲಕನ ನಿಯಂತ್ರನ ತಪ್ಪಿ ಸೇತುವೆಯಿಂದ ಕಣಿವೆಗೆ ಬಿದ್ದ ಬಸ್

(ನ್ಯೂಸ್ ಕಡಬ)newskadaba.com ಶ್ರೀನಗರ, ಮೇ ,30. ಸಾರಿಗೆ ಬಸ್​ ಒಂದು ಸೇತುವೆಯಿಂದ ಕಣಿವೆಗೆ ಬಿದ್ದ ಪರಿಣಾಮ 10 ಮಂದಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದ ಸಮಯದಲ್ಲಿ 75 ಪ್ರಯಾಣಿಕರನ್ನು ಹೊತ್ತ ಬಸ್ ಅಮೃತಸರದಿಂದ ಕತ್ರಾಕ್ಕೆ ತೆರಳುತ್ತಿದ್ದರು. ಈ ಅವಘಡದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ನಿಯಂತ್ರನ ತಪ್ಪಿ ಸೇತುವೆಯಿಂದ ಕಣಿವೆಗೆ ಬಿದ್ದ ಬಸ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ ಯುವಕ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.29 ,ದೆಹಲಿಯ ರೋಹಿಣಿಯಲ್ಲಿ ಜನ ಸಂದಣಿ ಪ್ರದೇಶದಲ್ಲಿ 16 ವರ್ಷದ ಬಾಲಕಿಯನ್ನು ಆಕೆಯ ಪ್ರಿಯಕರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ರೋಹಿಣಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಇಬ್ಬರ ನಡುವೆ ನಡೆದ ಜಗಳದ ನಂತರ ಯುವಕ, ಯುವತಿಗೆ ಹಲವು ಬಾರಿ ಇರಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.    

ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ ಯುವಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಕಾರು ➤ ಏಳು ವಿದ್ಯಾರ್ಥಿಗಳು ಮೃತ್ಯು

(ನ್ಯೂಸ್ ಕಡಬ)newskadaba.com ಅಸ್ಸಾಂ, ಮೇ, 29. ನಸುಕಿನ ವೇಳೆ ಗುವಾಹಟಿಯ ಜಲುಕ್ಬರಿ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಸ್ಸಾಂ ಎಂಜಿನಿಯರಿಂಗ್ ಕಾಲೇಜಿನ (ಎಇಸಿ) ಕನಿಷ್ಠ ಏಳು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 01 ಜಿಸಿ 8829 ನೋಂದಣಿ ಸಂಖ್ಯೆಯ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಅನ್ನು ದಾಟಿ ಜಲುಕ್ಬರಿ ಫ್ಲೈಓವರ್ ರಸ್ತೆಯ ಎದುರು ಲೇನ್‌ನಲ್ಲಿ ಬೊಲೆರೋ ಡಿಐ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.  

ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಕಾರು ➤ ಏಳು ವಿದ್ಯಾರ್ಥಿಗಳು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಅಪರಿಚಿತ ವ್ಯಕ್ತಿ.!➤ಆರೋಪಿಗಾಗಿ ಪೊಲೀಸರ ಹುಡುಕಾಟ

(ನ್ಯೂಸ್ ಕಡಬ)newskadaba.com ಲಕ್ನೋ,ಮೇ.29 ಮದುವೆ ಮನೆಯಲ್ಲಿ ವ್ಯಕ್ತಿಯೊಬ್ಬ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಘಟನೆ ಲಕ್ನೋದಲ್ಲಿ ನಡೆದಿದೆ. ಮದುವೆಗೆ ತೆರಳಿದ್ದ ಐದು ಹಾಗೂ ಆರು ವರ್ಷದ ಮಕ್ಕಳ ಮೇಲೆ ಅಪರಿಚಿತನೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿದ್ದು, ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡೆಸ್ಟಿನೇಷನ್ ವೆಡ್ಡಿಂಗ್ ಇದಾಗಿದ್ದು, ಡಿಜೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಕ್ಕಳನ್ನು ಹೊತ್ತೊಯ್ತು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಮಕ್ಕಳು ಅರೆಪ್ರಜ್ಞೆ ಸ್ಥಿತಿಯಲ್ಲಿ ಸಿಕ್ಕಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.    

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಅಪರಿಚಿತ ವ್ಯಕ್ತಿ.!➤ಆರೋಪಿಗಾಗಿ ಪೊಲೀಸರ ಹುಡುಕಾಟ Read More »

ರಾಷ್ಟ್ರೀಯ ನ್ಯೂಸ್

ಪತಿಗೆ ಡಿವೋರ್ಸ್ ಕೊಟ್ಟು ಇನ್ನೋರ್ವ ಯುವತಿ ಜೊತೆ ವಿವಾಹ ಮಾಡಿಕೊಂಡ ಎರಡು ಮಕ್ಕಳ ತಾಯಿ

(ನ್ಯೂಸ್ ಕಡಬ)newskadaba.com ಪ.ಬಂಗಾಳ, ಮೇ.29. ಪತಿಗೆ ಡಿವೋರ್ಸ್ ಕೊಟ್ಟು ಯುವತಿಯೋರ್ವಳು ಇನ್ನೋರ್ವ ಯುವತಿಯ ಜೊತೆ ವಿವಾಹವಾದ ಅಪರೂಪದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮೌಸುಮಿ ದತ್ತಾ ಎಂಬಾಕೆಗೆ ಮೊದಲು ಮದುವೆಯಾಗಿ 2 ಮಕ್ಕಳು ಕೂಡ ಇದ್ದಾರೆ ಎಂದು ವರದಿ ತಿಳಿಸಿದೆ.  

ಪತಿಗೆ ಡಿವೋರ್ಸ್ ಕೊಟ್ಟು ಇನ್ನೋರ್ವ ಯುವತಿ ಜೊತೆ ವಿವಾಹ ಮಾಡಿಕೊಂಡ ಎರಡು ಮಕ್ಕಳ ತಾಯಿ Read More »

ರಾಷ್ಟ್ರೀಯ ನ್ಯೂಸ್

ಪ್ರೇಮ ಕೂಪಕ್ಕೆ ಸಿಕ್ಕಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ.!➤ಗರ್ಭಿಣಿ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಲಕ್ನೋ,ಮೇ.29 ಪ್ರೇಮ ಕೂಪಕ್ಕೆ ಸಿಕ್ಕಿಬಿದ್ದು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣರಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಲಖಿಂಪುರ ಖೇರಿ ನಿವಾಸಿ ಸೀಮಾ ಗೌತಮ್ (24) ಮೃತ ಮಹಿಳೆ. ಈಕೆ ಲಖಿಂಪುರ ಖೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಆರೋಪಿಗಳಾದ ನಾವೇದ್ ಮತ್ತು ಫರ್ಹಾನ್ ಕರೆತಂದಿದ್ದರು. ಆಕೆ ಮೃತಪಟ್ಟಿರುವ ಸುದ್ದಿ ತಿಳಿದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸೀಮಾಗೆ ವಿಷಪ್ರಾಶನ ಮಾಡಲಾಗಿದೆ ಎಂದು ಆಕೆಯ ಸಹೋದರ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆ ಮತ್ತು ಉತ್ತರ

ಪ್ರೇಮ ಕೂಪಕ್ಕೆ ಸಿಕ್ಕಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ.!➤ಗರ್ಭಿಣಿ ಮಹಿಳೆ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ.!➤ಆರೋಪಿಗಾಗಿ  ಪೊಲೀಸರ ಹುಡುಕಾಟ

(ನ್ಯೂಸ್ ಕಡಬ)newskadaba.com ಲಕ್ನೋ,ಮೇ.29  ಮದುವೆ ಮನೆಯಲ್ಲಿ ವ್ಯಕ್ತಿಯೊಬ್ಬ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಘಟನೆ ಲಕ್ನೋದಲ್ಲಿ ನಡೆದಿದೆ. ಮದುವೆಗೆ ತೆರಳಿದ್ದ ಐದು ಹಾಗೂ ಆರು ವರ್ಷದ ಮಕ್ಕಳ ಮೇಲೆ ಅಪರಿಚಿತನೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿದ್ದು, ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡೆಸ್ಟಿನೇಷನ್ ವೆಡ್ಡಿಂಗ್ ಇದಾಗಿದ್ದು, ಡಿಜೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಕ್ಕಳನ್ನು ಹೊತ್ತೊಯ್ತು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಮಕ್ಕಳು ಅರೆಪ್ರಜ್ಞೆ ಸ್ಥಿತಿಯಲ್ಲಿ ಸಿಕ್ಕಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.ಈತ ಮಕ್ಕಳ ಸಂಬಂಧಿಕನೇ ಆಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ.!➤ಆರೋಪಿಗಾಗಿ  ಪೊಲೀಸರ ಹುಡುಕಾಟ Read More »

ರಾಷ್ಟ್ರೀಯ ನ್ಯೂಸ್

ಮೊಬೈಲ್ ಹುಡುಕಲು ಇಡೀ ಡ್ಯಾಂನ ನೀರು ಖಾಲಿ ಮಾಡಿಸಿದ ಅಧಿಕಾರಿ

(ನ್ಯೂಸ್ ಕಡಬ)newskadaba.com ಛತ್ತೀಸ್ ಗಢ, ಮೇ,29. ಡ್ಯಾಂ’ಗೆ ಬಿದ್ದ ತನ್ನ ಮೊಬೈಲ್ ಹುಡುಕಲು ಅಧಿಕಾರಿಯೋರ್ವ ಇಡೀ ಡ್ಯಾಂನ ನೀರು ಖಾಲಿ ಮಾಡಿಸಿದ ಘಟನೆ ಛತ್ತೀಸ್ ಗಢದಿಂದ‌ ವರದಿಯಾಗಿದೆ. ಆಹಾರ ನಿರೀಕ್ಷಕ ರಾಜೇಶ ವಿಶ್ವಾಸ ಇವರ 1 ಲಕ್ಷ ರೂಪಾಯಿಯ ಮೊಬೈಲ್ ಇಲ್ಲಿನ ಖೇರಕಟ್ಟಾ-ಪರಲಕೋಟ ಡ್ಯಾಂ ನಲ್ಲಿ ಬಿದ್ದಾಗ ಅದನ್ನು ಹುಡುಕಲು 4 ದಿನಗಳ ವರೆಗೆ ಪಂಪ್ ಮೂಲಕ ನೀರನ್ನು ಹೊರಗೆ ಬಿಡಲಾಗಿದೆ. ನೀರು ಖಾಲಿ ಮಾಡಿದ ಬಳಿಕ ಮೊಬೈಲ್ ಸಿಕ್ಕಿದ್ದು, ಈ ಡ್ಯಾಂ 15 ಅಡಿ ಆಳವಿದೆ.

ಮೊಬೈಲ್ ಹುಡುಕಲು ಇಡೀ ಡ್ಯಾಂನ ನೀರು ಖಾಲಿ ಮಾಡಿಸಿದ ಅಧಿಕಾರಿ Read More »

ರಾಷ್ಟ್ರೀಯ ನ್ಯೂಸ್

ಜಿಎಸ್‌‌ಎಲ್‌‌ವಿ -ಎಫ್‌12 ನ್ಯಾವಿಗೇಷನ್ ಉಪಗ್ರಹ ಇಸ್ರೋದಿಂದ ಉಡಾವಣೆ

(ನ್ಯೂಸ್ ಕಡಬ)newskadaba.com ಚೆನ್ನೈ, ಮೇ.29. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶ್ರೀ ಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ ಜಿಎಸ್‌‌ಎಲ್‌‌ವಿ – ಎಫ್‌12 (GSLV-F12) ಮತ್ತು ಎನ್‌‌ವಿಎಸ್‌‌ -01 (NVS-01) ಅನ್ನು ಇಂದು ಉಡಾವಣೆ ಮಾಡಿದೆ ಎಂದು ತಿಳಿದುಬಂದಿದೆ. ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಈ ಉಡಾವಣೆ ಮಾಡಲಾಗಿದೆ.

ಜಿಎಸ್‌‌ಎಲ್‌‌ವಿ -ಎಫ್‌12 ನ್ಯಾವಿಗೇಷನ್ ಉಪಗ್ರಹ ಇಸ್ರೋದಿಂದ ಉಡಾವಣೆ Read More »

ರಾಷ್ಟ್ರೀಯ ನ್ಯೂಸ್
Scroll to Top