ರಾಷ್ಟ್ರೀಯ ನ್ಯೂಸ್

ಮತಾಂತರಕ್ಕಾಗಿ ಬಲವಂತದ ಮದುವೆಗೆ ಒತ್ತಡ  ➤ ರೂಪದರ್ಶಿ ಗಂಭೀರ ಆರೋಪ

(ನ್ಯೂಸ್ ಕಡಬ)newskadaba.com  ಜಾರ್ಖಂಡ್, ಮೇ.31.ವ್ಯಕ್ತಿಯೊಬ್ಬ ಮತಾಂತರಗೊಳಿಸುವ ನಿಟ್ಟಿನಲ್ಲಿ ತನ್ನನ್ನು ಒತ್ತಾಯಪೂರ್ವವಾಗಿ ಮದುವೆಯಾಗಲು ಪ್ರಯತ್ನಿಸಿದ್ದಾನೆ ಎಂದು ಮಹಾರಾಷ್ಟ್ರದ ಮುಂಬೈನ ಮೂಲದ ರೂಪದರ್ಶಿ ಆರೋಪಿಸಿದ್ದಾರೆ. ಈ ಸಂಬಂಧ ರಾಂಚಿಯ ಯಶ್ ಮಾಡೆಲ್ಸ್ ಸಂಸ್ಥೆಯ ನಿರ್ದೇಶಕ ತನ್ವೀರ್ ಅಖ್ತರ್ ಖಾನ್ ಎಂಬವರ ವಿರುದ್ಧ ಮುಂಬೈನಲ್ಲಿ ಪೊಲೀಸ್​ ಕೇಸ್​ ಸಹ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.    

ಮತಾಂತರಕ್ಕಾಗಿ ಬಲವಂತದ ಮದುವೆಗೆ ಒತ್ತಡ  ➤ ರೂಪದರ್ಶಿ ಗಂಭೀರ ಆರೋಪ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮದುವೆ ಮನೆಯಿಂದ ಪ್ರಿಯಕರನ ಜೊತೆ ಪರಾರಿಯಾಗುವ ವೇಳೆ ಅಪಘಾತ  ➤ ವಧು ಮತ್ತು ಆಕೆಯ ಪ್ರಿಯಕರ ಮೃತ್ಯು

(ನ್ಯೂಸ್ ಕಡಬ)newskadaba.com  ಉತ್ತರ ಪ್ರದೇಶ, ಮೇ. 31. ಮದುವೆ ಮನೆಯಿಂದ ತಪ್ಪಿಸಿ ಪ್ರಿಯಕರನ ಜೊತೆ ಪರಾರಿಯಾಗುವಾಗ ಅಪಘಾತ ಸಂಭವಿಸಿದ್ದು, ವಧು ಮತ್ತು ಪ್ರಿಯಕರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮದುವೆಯ ಹಿಂದಿನ ದಿನ ಮನೆಬಿಟ್ಟು ತನ್ನ ಪ್ರಿಯಕರನೊಂದಿಗೆ ಪರಾರಿಯಾಗುವಾಗ ಅಪಘಾತಕ್ಕೀಡಾಗಿ ಜೋಡಿ ಸೇರಿ ಮೂವರು ಮೃತಪಟ್ಟಿರುವ ದುರಂತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಮಿರ್ಜಾಪುರ ಮೂಲದ ರಾಣಿ (21), ಕರಣ್ (21) ಮತ್ತು ವಿಕಾಸ್ (21) ಎಂದು ಗುರುತಿಸಲಾಗಿದೆ.  

ಮದುವೆ ಮನೆಯಿಂದ ಪ್ರಿಯಕರನ ಜೊತೆ ಪರಾರಿಯಾಗುವ ವೇಳೆ ಅಪಘಾತ  ➤ ವಧು ಮತ್ತು ಆಕೆಯ ಪ್ರಿಯಕರ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಮಗಳನ್ನು ಚಾಕುವಿನಿಂದ ಇರಿದು ಕೊಂದ ತಂದೆ.!➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಸೂರತ್‌,ಮೇ.31 ಪತಿ -ಪತ್ನಿ ನಡುವಿನ ಜಗಳವನ್ನು ತಡೆಯಲು ಮುಂದಾದ ಮಗಳನ್ನು ಚಾಕುವಿನಿಂದ ತಂದೆ ಇರಿದು ಕೊಂದ ಘಟನೆ ಸೂಸತ್ನಲ್ಲಿ ವರದಿಯಾಗಿದೆ. ಪತಿ -ಪತ್ನಿ ನಡುವಿನ ಜಗಳವನ್ನು ತಡೆಯಲು ಮಗಳು ಸೇರಿದಂತೆ ಮನೆಯ ಇತರ ಸದಸ್ಯರು ಮುಂದಾಗಿದ್ದಾರೆ. ಈ ವೇಳೆ ಮಗಳನ್ನು ಹಿಡಿದು 25 ಬಾರಿ ಚಾಕುವಿನಿಂದ ಚುಚ್ಚಿ ಹತ್ಯೆಗೈದಿದ್ದಾನೆ. ಪತ್ನಿ ರೇಖಾ ದೂರಿನ ಮೆರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಗಳನ್ನು ಚಾಕುವಿನಿಂದ ಇರಿದು ಕೊಂದ ತಂದೆ.!➤ ಆರೋಪಿ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

22 ಕೆಜಿ ಗಾಂಜಾದ ಜೊತೆ ಸಿಕ್ಕಿಬಿದ್ದ ಬಜರಂಗದಳದ ಸಹ ಸಂಚಾಲಕ

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಮೇ.31. ಪನ್ನಾ ಜಿಲ್ಲೆಯ ಭಜರಂಗ ದಳದ ಸಹ ಸಂಚಾಲಕ ಸೇರಿದಂತೆ ಇಬ್ಬರನ್ನು ಸಾತ್ನಾ ಜಿಲ್ಲೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಉಚೆಹ್ರಾ ರೈಲು ನಿಲ್ದಾಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

22 ಕೆಜಿ ಗಾಂಜಾದ ಜೊತೆ ಸಿಕ್ಕಿಬಿದ್ದ ಬಜರಂಗದಳದ ಸಹ ಸಂಚಾಲಕ Read More »

ರಾಷ್ಟ್ರೀಯ ನ್ಯೂಸ್

ಐಟಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸದಂತೆ ತಡೆ.!➤ 9 ಡಿಎಂಕೆ ಬೆಂಬಲಿಗರು ಅರೆಸ್ಟ್

(ನ್ಯೂಸ್ ಕಡಬ)newskadaba.com ತಮಿಳುನಾಡು,ಮೇ.31 ಐಟಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸದಂತೆ ತಡೆದಿದ್ದಕ್ಕಾಗಿ ಕರೂರಿನಲ್ಲಿ ಒಂಬತ್ತು ಡಿಎಂಕೆ ಬೆಂಬಲಿಗರನ್ನು ಬಂಧಿಸಿದ ಪ್ರಕರಣ ವರದಿಯಾಗಿದೆ. ಕರೂರ್ ಪೊಲೀಸರ ಪ್ರಕಾರ, ಆದಾಯ ತೆರಿಗೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸದಂತೆ ತಡೆಯಲು ಮತ್ತು ಸಚಿವ ಸೆಂಥಿಲ್ ಬಾಲಾಜಿ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ಗುತ್ತಿಗೆದಾರರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಅವರ ಮೇಲೆ ದಾಳಿ ಮಾಡಿದ 9 ಡಿಎಂಕೆ ಬೆಂಬಲಿಗರನ್ನು ಬಂಧಿಸಲಾಗಿದೆ.  

ಐಟಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸದಂತೆ ತಡೆ.!➤ 9 ಡಿಎಂಕೆ ಬೆಂಬಲಿಗರು ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

‘ನಾನು ತಪ್ಪಿತಸ್ಥನಲ್ಲ. ನನ್ನ ಯಾವುದೇ ಆರೋಪ ಸಾಬೀತಾದರೆ ಗಲ್ಲಿಗೇರಿಸಿ’➤ಕುಸ್ತಿಪಟುಗಳ ಆಕ್ರೋಶದ ನಡುವೆಯೇ ಬ್ರಿಜ್ ಭೂಷಣ್ ಹೇಳಿಕೆ

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.31 ಲೈಂಗಿಕ ಕಿರುಕುಳದ ಆರೋಪದ ಮೇಲೆ WFI ಮುಖ್ಯಸ್ಥ ಬ್ರಿಜ್ ಭೂಷಣ್ ನನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನಾ ಕಾವು ಜೋರಾಗಿದೆ.ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಬಿಡಿವುದಾಗಿ ಹೇಳಿದ್ದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ (ಎಂಪಿ) ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸರಣ್ ಸಿಂಗ್ ಈ ಹೇಳಿಕೆಗಳಿಂದ ವಿಚಲಿತರಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್, ‘ನಾನು ತಪ್ಪಿತಸ್ಥನಲ್ಲ. ನನ್ನ ಯಾವುದೇ ಸಣ್ಣ ಆರೋಪ

‘ನಾನು ತಪ್ಪಿತಸ್ಥನಲ್ಲ. ನನ್ನ ಯಾವುದೇ ಆರೋಪ ಸಾಬೀತಾದರೆ ಗಲ್ಲಿಗೇರಿಸಿ’➤ಕುಸ್ತಿಪಟುಗಳ ಆಕ್ರೋಶದ ನಡುವೆಯೇ ಬ್ರಿಜ್ ಭೂಷಣ್ ಹೇಳಿಕೆ Read More »

ರಾಷ್ಟ್ರೀಯ ನ್ಯೂಸ್

ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್.! ➤ ಇಬ್ಬರು ಮಹಿಳೆಯರು ಮೃತ್ಯು

(ನ್ಯೂಸ್ ಕಡಬ)newskadaba.com ಹರಿಯಾಣ,ಮೇ,30. ಹರಿಯಾಣದಲ್ಲಿ ಭೀಕರ ಗುದ್ದೋಡು ಪ್ರಕರಣ ದಾಖಲಾಗಿದೆ. ಯುವಕರು ರೀಲ್ಸ್​ ಮಾಡುವಾಗ ಕಾರನ್ನು ರಭಸವಾಗಿ ಮಹಿಳೆಯರಿಗೆ ಗುದ್ದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಯುವಕರ ರೀಲ್ಸ್​ ಮಾಡುವ ಹುಚ್ಚುತನ ಇಬ್ಬರು ಮಹಿಳೆಯರನ್ನು ಬಲಿ ಪಡೆದಿದೆ. ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿ ವಾಕಿಂಗ್​ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಕಾರೊಂದು ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ.ಇದರಿಂದ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.  

ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್.! ➤ ಇಬ್ಬರು ಮಹಿಳೆಯರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ರಷ್ಯಾ ರಾಜಧಾನಿ ಮಾಸ್ಕೋ ನಗರದ ಮೇಲೆ ಡ್ರೋನ್ ದಾಳಿ.!

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.30 ರಷ್ಯಾ ರಾಜಧಾನಿ ಮಾಸ್ಕೋ ನಗರದ ಮೇಲೆ ಡ್ರೋನ್ ದಾಳಿ ನಡೆದಿದೆ.ಸರ್ಕಾರದ ಕೆಲವು ಕಟ್ಟಡಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಜನರಿಗೇನೂ ಅಂಥ ಗಂಭೀರ ಗಾಯಗಳಾಗಿಲ್ಲ. ಕೆಲವು ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ವಿಶೇಷವಾಗಿ ಮಾಸ್ಕೋ ನಗರದ ಪ್ರೊಫೆಸೊಯುಜ್ನಾಯಾ ಸ್ಟ್ರೀಟ್‌ನಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ರಷ್ಯಾದ ಆರ್‌ಐಎ ನ್ಯೂಸ್ ಏಜೆನ್ಸಿ ಸುದ್ದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.    

ರಷ್ಯಾ ರಾಜಧಾನಿ ಮಾಸ್ಕೋ ನಗರದ ಮೇಲೆ ಡ್ರೋನ್ ದಾಳಿ.! Read More »

ರಾಷ್ಟ್ರೀಯ ನ್ಯೂಸ್

ಗಾಳಿ ರಭಸಕ್ಕೆ ಕುಸಿದು ಬಿದ್ದ ಮೊಬೈಲ್​ ಟವರ್

(ನ್ಯೂಸ್ ಕಡಬ)newskadaba.com ರಾಜಸ್ಥಾನ, ಮೇ, 30. ಬಾನೆತ್ತರಕ್ಕೆ ನಿರ್ಮಿಸಿದ್ದ ಬೃಹತ್ ಮೊಬೈಲ್ ಟವರ್  ಗಾಳಿ ರಭಸಕ್ಕೆ ಉರುಳಿ ಬಿದ್ದ ಆಶ್ಚರ್ಯಕಾರಿ ಘಟನೆ ರಾಜಸ್ಥಾನದ ನಗೌರ್‌ನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ 16 ಸೆಕೆಂಡ್‌ಗಳ ವೀಡಿಯೊ ಕ್ಲಿಪ್ ಮೊಬೈಲ್ ಟವರ್ ಎತ್ತರದಲ್ಲಿ ನಿಂತಿದೆ, ನಂತರ ಅದು ರಣಬೀಕರ ಚಂಡಮಾರುತದ ಗಾಳಿಗೆ ಅದು ಹೇಗೆ ಬೀಳುತ್ತದೆ ಎಂದು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡಿದ ಜನರು ಬೇರೆ ಬೇರೆ ರೀತಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು

ಗಾಳಿ ರಭಸಕ್ಕೆ ಕುಸಿದು ಬಿದ್ದ ಮೊಬೈಲ್​ ಟವರ್ Read More »

ರಾಷ್ಟ್ರೀಯ ನ್ಯೂಸ್

ಅಕಾಲಿಕ ಗಾಳಿ, ಆಲಿಕಲ್ಲು ಮಳೆಗೆ ವ್ಯಾಪಕ ಹಾನಿ.!➤9 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಅಹ್ಮದಾಬಾದ್,ಮೇ.30 ಅಕಾಲಿಕ ಗಾಳಿ ಮತ್ತು ಆಲಿಕಲ್ಲು ಮಳೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ವ್ಯಾಪಕ ಹಾನಿಯನ್ನು ಉಂಟು ಮಾಡಿದ್ದು, ವಿವಿಧ ಮಳೆ ಸಂಬಂಧಿ ಅನಾಹುತಗಳಿಂದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಗುಜರಾತ್ ಸರ್ಕಾರ ಪ್ರಕಟಿಸಿದೆ. ಅಹ್ಮದಾಬಾದ್ ಸೇರಿದಂತೆ ಗುಜರಾತ್‌ನ ವಿವಿಧ ಭಾಗಗಳಲ್ಲಿ ರಭಸದ ಗಾಳಿ ಮುಂದುವರಿದಿದೆ. ಇದುವರೆಗೆ ರಾಜ್ಯದಲ್ಲಿ 34.7 ಮಿಲಿಮೀಟರ್ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.      

ಅಕಾಲಿಕ ಗಾಳಿ, ಆಲಿಕಲ್ಲು ಮಳೆಗೆ ವ್ಯಾಪಕ ಹಾನಿ.!➤9 ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್
Scroll to Top