ಮೊಬೈಲ್ ಹುಡುಕಲು ಇಡೀ ಡ್ಯಾಂನ ನೀರು ಖಾಲಿ ಮಾಡಿಸಿದ ಅಧಿಕಾರಿ

(ನ್ಯೂಸ್ ಕಡಬ)newskadaba.com ಛತ್ತೀಸ್ ಗಢ, ಮೇ,29. ಡ್ಯಾಂ’ಗೆ ಬಿದ್ದ ತನ್ನ ಮೊಬೈಲ್ ಹುಡುಕಲು ಅಧಿಕಾರಿಯೋರ್ವ ಇಡೀ ಡ್ಯಾಂನ ನೀರು ಖಾಲಿ ಮಾಡಿಸಿದ ಘಟನೆ ಛತ್ತೀಸ್ ಗಢದಿಂದ‌ ವರದಿಯಾಗಿದೆ.

ಆಹಾರ ನಿರೀಕ್ಷಕ ರಾಜೇಶ ವಿಶ್ವಾಸ ಇವರ 1 ಲಕ್ಷ ರೂಪಾಯಿಯ ಮೊಬೈಲ್ ಇಲ್ಲಿನ ಖೇರಕಟ್ಟಾ-ಪರಲಕೋಟ ಡ್ಯಾಂ ನಲ್ಲಿ ಬಿದ್ದಾಗ ಅದನ್ನು ಹುಡುಕಲು 4 ದಿನಗಳ ವರೆಗೆ ಪಂಪ್ ಮೂಲಕ ನೀರನ್ನು ಹೊರಗೆ ಬಿಡಲಾಗಿದೆ. ನೀರು ಖಾಲಿ ಮಾಡಿದ ಬಳಿಕ ಮೊಬೈಲ್ ಸಿಕ್ಕಿದ್ದು, ಈ ಡ್ಯಾಂ 15 ಅಡಿ ಆಳವಿದೆ. ಅದರಲ್ಲಿ 10 ಅಡಿ ವರೆಗಿನ ನೀರನ್ನು ಹೊರಗೆ ಬಿಡಲಾಗಿದೆ ಎಂದು ವರದಿ ತಿಳಿಸಿದೆ.

 

Scroll to Top