ರಾಷ್ಟ್ರೀಯ ನ್ಯೂಸ್

ಹಾವು ಕಚ್ಚಿ 18 ತಿಂಗಳ ಮಗು ಮೃತ್ಯು.!

(ನ್ಯೂಸ್ ಕಡಬ)newskadaba.com ತಮಿಳುನಾಡು,ಮೇ.29  ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಸರಿಯಾದ ರಸ್ತೆ ಸೌಕರ್ಯ ಇಲ್ಲದ ಕಾರಣ ಹಾವು ಕಡಿತಕ್ಕೆ ತುತ್ತಾಗಿ 18 ತಿಂಗಳ ಮಗು ಮೃತಪಟ್ಟಿರುವ ಘಟನೆ ನಡೆದಿದೆ. 18 ತಿಂಗಳ ಅಂಬೆಗಾಲಿಡುವ ತನುಷ್ಕಾ ತನ್ನ ಪೋಷಕರೊಂದಿಗೆ ತನ್ನ ನಿವಾಸದ ಹೊರಗೆ ಮಲಗಿದ್ದಾಗ ಹಾವು ಕಚ್ಚಿದೆ. ಏನೋ ಗಂಭೀರವಾಗಿದೆ ಎಂದು ತಿಳಿದ ನಂತರ, ಮಗುವನ್ನು ತಂದೆ ವಿಜಿ ಮತ್ತು ತಾಯಿ ಪ್ರಿಯಾ ಆನೈಕಟ್ಟು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.ಆದರೆ ಸರಿಯಾದ ರಸ್ತೆ ಸೌಕರ್ಯ ಇಲ್ಲದ ಕಾರಣ ಆಸ್ಪತ್ರೆಗೆ ತಲುಪುವಾಗಲೇ ಮಗು ಮೃತಪಟ್ಟಿದೆ […]

ಹಾವು ಕಚ್ಚಿ 18 ತಿಂಗಳ ಮಗು ಮೃತ್ಯು.! Read More »

ರಾಷ್ಟ್ರೀಯ ನ್ಯೂಸ್

ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಮೇ.29. ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ವಧು  ನಿದ್ರಿಸುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ. ಪೈಜ್ ರಡ್ಡಿ (19) ವರ್ಷದ ಯುವತಿ  ಈ ಘಟನೆಯಲ್ಲಿ ಮೃತಪಟ್ಟ ವಧು ಎಂದು ಗುರುತಿಸಲಾಗಿದೆ. ಈ ಘಟನೆ ಅಮೇರಿಕಾದ ವಿಸ್ಕಾನ್ಸಿನ್‌ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಎರಡನೇ ಮಹಡಿಯಲ್ಲಿ  ನಿದ್ರಿಸುತ್ತಿದ್ದ ವೇಳೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಹೊಗೆಯಿಂದಾಗಿ ಉಸಿರುಗಟ್ಟಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫ‌ಲಕಾರಿಯಾಗದೆ ಯುವತಿ  ಸಾವನ್ನಪ್ಪಿದ್ದಾಳೆ

ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮತ್ತೇ ಭುಗಿಲೆದ್ದ ಹಿಂಸಾಚಾರ..! ➤ 40 ಕ್ಕೂ ಹೆಚ್ಚು ಉಗ್ರರ ಹತ್ಯೆ

(ನ್ಯೂಸ್ ಕಡಬ)newskadaba.com ಮಣಿಪುರ, ಮೇ.29. ಕೆಲ ದಿನಗಳಿಂದ ತಣ್ಣಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ ಎಂದು ವರದಿ ತಿಳಿಸಿದೆ. ಬಹುಸಂಖ್ಯಾತ ಹಿಂದೂ ಮೀಟಿ ಸಮುದಾಯದವರನ್ನು ಗುರಿಯಾಗಿಸಿ ಕುಕಿ ಉಗ್ರರು ನಡೆಸಿದ ದಾಳಿಗೆ ಇಬ್ಬರು ಬಲಿಯಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಉಗ್ರರು 80ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸೇನೆಯ ಹೆಚ್ಚುವರಿ ಪಡೆಯನ್ನು ರವಾನಿಸಲಾಗಿದೆ. ಸೇನಾ ಮುಖ್ಯಸ್ಥ ನರವಣೆ ಪರಿಸ್ಥಿತಿಯ ಅಧ್ಯಯನಕ್ಕೆ ರಾಜ್ಯಕ್ಕೆ

ಮತ್ತೇ ಭುಗಿಲೆದ್ದ ಹಿಂಸಾಚಾರ..! ➤ 40 ಕ್ಕೂ ಹೆಚ್ಚು ಉಗ್ರರ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ವಿಮಾನದ ತುರ್ತುದ್ವಾರ ತೆರೆದ ಪ್ರಯಾಣಿಕ ➤ ಉಸಿರಾಟ ಸಮಸ್ಯೆಗೆ ಸಿಲುಕಿ 9 ಮಂದಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಸಿಯೋಲ್, ಮೇ.27. ದಕ್ಷಿಣ ಕೊರಿಯಾದ ಡಾಯೆಗು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿದ್ದ  ವಿಮಾನವೊಂದು ಪ್ರಯಾಣಿಕ ಲ್ಯಾಂಡಿಂಗ್‌ಗೆ ಮುಂಚೆಯೇ ತುರ್ತುದ್ವಾರ ತೆರೆದಿದ್ದು ಇದರಿಂದ  9 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. 200 ಪ್ರಯಾಣಿಕರನ್ನು ಏಷಿಯಾನಾ ಏರ್‌ಲೈನ್ಸ್‌ನ ವಿಮಾನವೊಂದು ಹೊತ್ತು ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ಲ್ಯಾಂಡಿಂಗ್‌ ಇನ್ನೂ 200 ಮೀಟರ್‌ (650 ಅಡಿ) ಎತ್ತರವಿರುವಾಗಲೇ ಪ್ರಯಾಣಿಕರೊಬ್ಬರು ತುರ್ತು ದ್ವಾರ ತೆರೆದಿದ್ದು, ಇದರಿಂದ ಗಾಳಿ ವಿಮಾನದ ಒಳನುಗ್ಗಿದ ರಭಸಕ್ಕೆ 9 ಪ್ರಯಾಣಿಕರಿಗೆ ಉಸಿರಾಟದ ಸಮಸ್ಯೆಯಾಗಿದೆ.  

ವಿಮಾನದ ತುರ್ತುದ್ವಾರ ತೆರೆದ ಪ್ರಯಾಣಿಕ ➤ ಉಸಿರಾಟ ಸಮಸ್ಯೆಗೆ ಸಿಲುಕಿ 9 ಮಂದಿ ಆಸ್ಪತ್ರೆಗೆ ದಾಖಲು Read More »

ರಾಷ್ಟ್ರೀಯ ನ್ಯೂಸ್

ಯೂಟ್ಯೂಬ್ ಸ್ಟೋರಿಸ್‌ ಫೀಚರ್‌ ಸ್ಥಗಿತ

(ನ್ಯೂಸ್ ಕಡಬ)newskadaba.com ಅಮೇರಿಕಾ, ಮೇ.27. ಜನಪ್ರಿಯ ಆನ್‌ಲೈನ್ ವಿಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಜೂನ್ 26ರಿಂದ ಸ್ಟೋರಿಸ್‌ ಫೀಚರ್‌ ಅನ್ನು ಸ್ಥಗಿತಗೊಳಿಸಲಿದೆ. ಬಳಕೆದಾರರಿಗೆ ಆ ದಿನದಿಂದ ಯಾವುದೇ ಹೊಸ ಸ್ಟೋರಿಸ್‌ ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ ಪೋಸ್ಟ್‌ಗಳು ಕೂಡ ಏಳು ದಿನಗಳ ನಂತರ ಲಭ್ಯವಿರುವುದಿಲ್ಲ ಎನ್ನಲಾಗಿದೆ.  

ಯೂಟ್ಯೂಬ್ ಸ್ಟೋರಿಸ್‌ ಫೀಚರ್‌ ಸ್ಥಗಿತ Read More »

ರಾಷ್ಟ್ರೀಯ ನ್ಯೂಸ್

ಭಯೋತ್ಪಾದಕ ಸಹಚರನ ಬಂಧನ…! ➤ ಗ್ರೆನೇಡ್ ವಶಕ್ಕೆ

(ನ್ಯೂಸ್ ಕಡಬ)newskadaba.com ಜಮ್ಮು ಕಾಶ್ಮೀರ, ಮೇ.27. ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಭಯೋತ್ಪಾದಕ ಸಹಚರನನ್ನು ಬಾರಾಮುಲ್ಲಾ ಜಿಲ್ಲೆಯ ನಾಗಬಲ್ ಚಂದೂಸಾ ಪ್ರದೇಶದಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ. ಭಯೋತ್ಪಾದಕನನ್ನು ಬಾರಾಮುಲ್ಲಾದ ಲಾರಿದೂರ ಚಂದೂಸಾ ನಿವಾಸಿ ಮೊಹಮ್ಮದ್ ಅಶ್ರಫ್ ಮಿರ್ ಎಂದು ಗುರುತಿಸಲಾಗಿದೆ. ಆತನಿಗಾಗಿ ಹುಡುಕಾಟ ನಡೆಸಿದ ಸಮಯದಲ್ಲಿ  ಪೊಲೀಸರು ಅವನ ಬಳಿ ಇದ್ದ  ಗ್ರೆನೇಡ್ ಅನ್ನು ವಶಪಡಿಸಿಕೊಂಡರು.  ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ  ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ  ಪ್ರಕರಣ ಚಂದೂಸಾ ಪೊಲೀಸ್

ಭಯೋತ್ಪಾದಕ ಸಹಚರನ ಬಂಧನ…! ➤ ಗ್ರೆನೇಡ್ ವಶಕ್ಕೆ Read More »

ರಾಷ್ಟ್ರೀಯ ನ್ಯೂಸ್

ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ.!➤ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಛತ್ತೀಸ್​ಗಢ,ಮೇ.27  ಪತಿಯನ್ನೇ ಸುಪಾರಿ ಕೊಟ್ಟು ಪತ್ನಿ ಕೊಲೆ ಮಾಡಿಸಿರುವ ದಾರುಣ ಘಟನೆಯೊಂದು ಛತ್ತೀಸ್​ಗಢದಲ್ಲಿ ನಡೆದಿದೆ. ಉದ್ಯೋಗಿ ಜಗಜೀವನ್ ರಾಮ್ 2013ರಲ್ಲಿ ಧನೇಶ್ವರಿ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಜಗಜೀವನ್​ ರಾಮ್​ ಮತ್ತು ಧನೇಶ್ವರಿಗೆ ಇಬ್ಬರು ಮಕ್ಕಳಿದ್ದಾರೆ. ಜಗಜೀವನ್ ರಾಮ್ ಕುಡಿದು ಮನೆಗೆ ಬರುತ್ತಿದ್ದರಿಂದ ದಂಪತಿ ನಡುವೆ ಆಗಾಗ ಜಗಳ ಶುರುವಾಗುತ್ತಿತ್ತು. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಹೇಗಾದರೂ ಮಾಡಿ ಗಂಡನನ್ನು ದೂರ ಮಾಡಬೇಕೆಂದು ಧನೇಶ್ವರಿ ತುಷಾರ್ ಸೋನಿ ಅಲಿಯಾಸ್ ಗೋಪಿಯನ್ನು ಸಂಪರ್ಕಿಸಿ, ಗಂಡನನ್ನು ಕೊಲ್ಲಲು

ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ.!➤ಆರೋಪಿ ಅರೆಸ್ಟ್ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಹಿಜಾಬ್ ಧರಿಸಿದ್ದಕ್ಕೆ ವೈದ್ಯೆಗೆ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ➤ ಬಿಜೆಪಿ ಕಾರ್ಯಕರ್ತನ ವಿರುದ್ಧ ಕೇಸ್ ದಾಖಲು

(ನ್ಯೂಸ್ ಕಡಬ)newskadaba.com ತಮಿಳುನಾಡು, ಮೇ.27. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಕರ್ತವ್ಯದ ವೇಳೆ ಮಹಿಳಾ ವೈದ್ಯರೊಬ್ಬರು ಹಿಜಾಬ್ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ತಮಿಳುನಾಡಿನ ನಾಗಪಟ್ಟಣಂನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಕೆಯ ಬಟ್ಟೆಯ ಬಗ್ಗೆ ವ್ಯಕ್ತಿ ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ.ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ಬಿಜೆಪಿ ಸದಸ್ಯ ಭುವನೇಶ್ವರ್ ರಾಮ್ ಅವರು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗದ್ದಲವನ್ನು ಸೃಷ್ಟಿಸುವುದನ್ನು ಕಾಣಬಹುದು ಮತ್ತು ಮಹಿಳಾ ವೈದ್ಯ ಜನ್ನತ್ ಫಿರ್ಧೌಸ್ ಹಿಜಾಬ್ ಅವರು

ಹಿಜಾಬ್ ಧರಿಸಿದ್ದಕ್ಕೆ ವೈದ್ಯೆಗೆ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ➤ ಬಿಜೆಪಿ ಕಾರ್ಯಕರ್ತನ ವಿರುದ್ಧ ಕೇಸ್ ದಾಖಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ.! ➤ ಓರ್ವ ಮೃತ್ಯು, 28 ಮಂದಿಗೆ ಗಾಯ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ,ಮೇ.26  ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಆಶಿಶ್ (11) ಎಂದು ಗುರುತಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಸ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್‌ಪುರ ಗ್ರಾಮದ ಬಳಿಯ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ನಡೆದಿದೆ.ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು

ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ.! ➤ ಓರ್ವ ಮೃತ್ಯು, 28 ಮಂದಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಮಲ್ಯ ಬಳಿಯಿದ್ದ ಟಿಪ್ಪು ಖಡ್ಗ 145 ಕೋಟಿಗೆ ಲಂಡನ್‌ನಲ್ಲಿ ಹರಾಜು

(ನ್ಯೂಸ್ ಕಡಬ)newskadaba.com ಲಂಡನ್, ಮೇ.26. ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಬಳಿಯಿದ್ದ ಖಡ್ಗ ಬರೋಬ್ಬರಿ 145 ಕೋಟಿ ರೂ.ಗೆ ಮತ್ತೊಮ್ಮೆ ಹರಾಜು ಆಗಿದೆ. ಮದ್ಯದ ದೊರೆ ವಿಜಯ್‌ ಮಲ್ಯ ಅವರು ಬ್ರಿಟೀಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004ರಲ್ಲಿ ಹರಾಜಿನಲ್ಲಿ ಖರೀದಿ ಮಾಡಿದ್ದರು. ಇದೀಗ ಈ ಖಡ್ಗ ಮತ್ತೆ ಹರಾಜು ಆಗಿದ್ದು, ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್‌ ಹ್ಯಾಮ್‌ ಹರಾಜು ಸಂಸ್ಥೆ ಲಂಡನ್‌ನಲ್ಲಿ ಅದನ್ನು ಖರೀದಿಸಿರುವುದಾಗಿ ವರದಿಯಾಗಿದೆ. ಗೌಪ್ಯತೆ & ಸುರಕ್ಷತೆ ದೃಷ್ಟಿಯಿಂದ ಹರಾಜು ಪಡೆದವರ

ಮಲ್ಯ ಬಳಿಯಿದ್ದ ಟಿಪ್ಪು ಖಡ್ಗ 145 ಕೋಟಿಗೆ ಲಂಡನ್‌ನಲ್ಲಿ ಹರಾಜು Read More »

ರಾಷ್ಟ್ರೀಯ ನ್ಯೂಸ್
Scroll to Top