ಮಲ್ಯ ಬಳಿಯಿದ್ದ ಟಿಪ್ಪು ಖಡ್ಗ 145 ಕೋಟಿಗೆ ಲಂಡನ್‌ನಲ್ಲಿ ಹರಾಜು

(ನ್ಯೂಸ್ ಕಡಬ)newskadaba.com ಲಂಡನ್, ಮೇ.26. ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಬಳಿಯಿದ್ದ ಖಡ್ಗ ಬರೋಬ್ಬರಿ 145 ಕೋಟಿ ರೂ.ಗೆ ಮತ್ತೊಮ್ಮೆ ಹರಾಜು ಆಗಿದೆ. ಮದ್ಯದ ದೊರೆ ವಿಜಯ್‌ ಮಲ್ಯ ಅವರು ಬ್ರಿಟೀಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004ರಲ್ಲಿ ಹರಾಜಿನಲ್ಲಿ ಖರೀದಿ ಮಾಡಿದ್ದರು.


ಇದೀಗ ಈ ಖಡ್ಗ ಮತ್ತೆ ಹರಾಜು ಆಗಿದ್ದು, ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್‌ ಹ್ಯಾಮ್‌ ಹರಾಜು ಸಂಸ್ಥೆ ಲಂಡನ್‌ನಲ್ಲಿ ಅದನ್ನು ಖರೀದಿಸಿರುವುದಾಗಿ ವರದಿಯಾಗಿದೆ. ಗೌಪ್ಯತೆ & ಸುರಕ್ಷತೆ ದೃಷ್ಟಿಯಿಂದ ಹರಾಜು ಪಡೆದವರ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ.

Scroll to Top