ರಾಷ್ಟ್ರೀಯ ನ್ಯೂಸ್

‘ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇಳನ’- ವಿಪಕ್ಷಗಳ ಸಭೆ ಬಗ್ಗೆ ಮೋದಿ ವಾಗ್ದಾಳಿ 

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜು.18. ಕಟ್ಟರ್‌ ಭ್ರಷ್ಟಾಚಾರಿಗಳ ಸಮ್ಮೇಳ ನಡೆಯುತ್ತಿದೆ”ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಸಭೆ ಕುರಿತು ಟೀಕಾ ಪ್ರಹಾರ ನಡೆಸಿದ್ದಾರೆ. ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇ ರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಉದ್ಘಾಟಿಸಿದರು. ಬಳಿ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳು ವೈಯಕ್ತಿಕ ಲಾಭಗಳಲ್ಲಿ ಮಾತ್ರ ಆಸಕ್ತಿ ಹೊಂದಿವೆ. ಅವರ ಮಂತ್ರ ’ಕುಟುಂಬದಿಂದ ಮತ್ತು ಕುಟುಂಬಕ್ಕಾಗಿ’ ತಮ್ಮಲ್ಲಿರುವ ಭ್ರಷ್ಟರನ್ನು ರಕ್ಷಿಸಲು ಪ್ರತಿ ಪಕ್ಷಗಳು ಒಂದಾಗುತ್ತವೆ’ ಎಂದು […]

‘ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇಳನ’- ವಿಪಕ್ಷಗಳ ಸಭೆ ಬಗ್ಗೆ ಮೋದಿ ವಾಗ್ದಾಳಿ  Read More »

ರಾಷ್ಟ್ರೀಯ ನ್ಯೂಸ್

ಮಗನ ಕಾಲೇಜು ಶುಲ್ಕದ ಆಸೆಗಾಗಿ ಪ್ರಾಣಬಿಟ್ಟ ತಾಯಿ !

(ನ್ಯೂಸ್ ಕಡಬ)newskadaba.com ಚೆನ್ನೈ, ಜು.18. ತಾನು ಸತ್ತರೆ ಮಗನ ಕಾಲೇಜು ಶುಲ್ಕವನ್ನು ಸರ್ಕಾರ ಭರಿಸುತ್ತದೆ ಎಂದು ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್ಸಿನ ಮುಂದೆ ಹಾರಿ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪಾಪತಿ(45) ಎಂದು ಗುರುತಿಸಲಾಗಿದೆ. ಮಹಿಳೆಯು ಕಳೆದ 15 ವರ್ಷದಿಂದ ಗಂಡನಿಂದ ದೂರವಾಗಿ ಕಷ್ಟಪಟ್ಟು ಮಗನನ್ನು ಸಾಕಿ ಬೆಳೆಸಿದ್ದು, ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ಕಳೆದ ಕೆಲ ಸಮಯದಿಂದ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದರು. ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಮಗನ ಕಾಲೇಜು ಶುಲ್ಕದ ಆಸೆಗಾಗಿ ಪ್ರಾಣಬಿಟ್ಟ ತಾಯಿ ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಗುಜರಾತ್‌, ಜು.18. 20 ವರ್ಷದ ಯುವಕನೊರ್ವ ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುಜರಾತ್ ನಲ್ಲಿ ಸಂಭವಿಸಿದೆ. ಯುವಕನೋರ್ವ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಮಾಹಿತಿಯ ಪ್ರಕಾರ, ಪರ್ವ ಸೋನಿ ಅವರು ಅರವಳ್ಳಿಯ ಮೊಡಸದಲ್ಲಿರುವ ಗೋವರ್ಧನ್ ಸೊಸೈಟಿಯಲ್ಲಿರುವ ಶ್ರೈನ್ ಅಪಾರ್ಟ್‌ಮೆಂಟ್‌ ನಲ್ಲಿ ವಾಸಿಸುತ್ತಿದ್ದರು. ಕ್ರಿಕೆಟ್ ಮೈದಾನದಲ್ಲಿ ಆಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ.  

ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಯುವಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೈಲ್ವೇ ಪ್ಲಾಟ್‌ ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನ ಮೇಲೆ ದರ್ಪ ಮೆರೆದ ಪೊಲೀಸ್ ಅಧಿಕಾರಿ

(ನ್ಯೂಸ್ ಕಡಬ)newskadaba.com ಉತ್ತರಪ್ರದೇಶ, ಜು.18. ರೈಲು ನಿಲ್ದಾಣವೊಂದರ ಪ್ಲಾಟ್‌ ಫಾರ್ಮ್‌ ನಲ್ಲಿ ಮಲಗಿದ್ದ ಬಾಲಕನನ್ನು ರೈಲ್ವೆ ಪೊಲೀಸ್ ಪೇದೆಯೊಬ್ಬ ಕಾಲಿನಿಂದ ಒದ್ದು ಎಬ್ಬಿಸಿದ ಅಮಾನವೀಯ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್‌ ಅಧಿಕಾರಿಯ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಉತ್ತರಪ್ರದೇಶ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕನೋರ್ವ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್‌ನಲ್ಲಿ ಮಲಗಿದ್ದು, ಈತನನ್ನು ಬೂಟುಗಾಲಿನಿಂದ ಒದ್ದು ರೈಲ್ವೆ ರಕ್ಷಣಾ ಪಡೆ ಪೊಲೀಸ್ ಪೇದೆ ಎಬ್ಬಿಸಿದ್ದಾನೆ. ವೀಡಿಯೋ

ರೈಲ್ವೇ ಪ್ಲಾಟ್‌ ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನ ಮೇಲೆ ದರ್ಪ ಮೆರೆದ ಪೊಲೀಸ್ ಅಧಿಕಾರಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭದ್ರತಾ ಪಡೆಯ ಕಾರ್ಯಾಚರಣೆ- ನಾಲ್ವರ ಎನ್ ಕೌಂಟರ್

(ನ್ಯೂಸ್ ಕಡಬ) newskadaba.com ಜಮ್ಮು/ಕಾಶ್ಮೀರ, ಜು. 18. ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಕುರಿತು ಪೂಂಚ್‌ನ ಸಿಂಧ್ರಾ ಪ್ರದೇಶದಿಂದ ವರದಿಯಾಗಿದೆ. ಭಾರತೀಯ ಸೇನಾಧಿಕಾರಿಯ ಪ್ರಕಾರ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಂಗಳವಾರ ಮುಂಜಾನೆ ಎನ್‌ಕೌಂಟರ್ ನಡೆಸಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳು, ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಸೇರಿತ್ತು. ಈ ಕಾರ್ಯಾಚರಣೆಯಲ್ಲಿ ಹತರಾದ ಭಯೋತ್ಪಾದಕರು ವಿದೇಶಿ ಭಯೋತ್ಪಾದಕರಾಗಿದ್ದು, ಅವರ

ಭದ್ರತಾ ಪಡೆಯ ಕಾರ್ಯಾಚರಣೆ- ನಾಲ್ವರ ಎನ್ ಕೌಂಟರ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳದ ಮಾಜಿ ಮುಖ್ಯಮಂತ್ರಿ ಊಮನ್ ಚಾಂಡಿ ವಿಧಿವಶ

(ನ್ಯೂಸ್ ಕಡಬ) newskadaba.com ಕೇರಳ, ಜು.18. ಕೇರಳ ಕಾಂಗ್ರೆಸ್ ಮೈತ್ರಿಕೂಟ ಯುಡಿಎಫ್ ನಾಯಕ, ಮಾಜಿ ಮುಖ್ಯಮಂತ್ರಿ ಊಮನ್ ಚಾಂಡಿ (79)ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ಶೋಕಾರ್ಥ ಮಂಗಳವಾರದಂದು ಕೇರಳದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.

ಕೇರಳದ ಮಾಜಿ ಮುಖ್ಯಮಂತ್ರಿ ಊಮನ್ ಚಾಂಡಿ ವಿಧಿವಶ Read More »

ರಾಷ್ಟ್ರೀಯ ನ್ಯೂಸ್

ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆ- ನಾಸಿರ್ ಮಅದನಿ ಜಾಮೀನು ವಿಚಾರದಲ್ಲಿ ಸಡಿಲಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 17. ಬೆಂಗಳೂರು ಸ್ಫೋಟ ಪ್ರಕರಣದ ಆರೋಪ ಎದುರಿಸುತ್ತಿರುವ ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸಿರ್‌ ಮಅದನಿ ಅವರನ್ನು ಸೂಕ್ತ ಚಿಕಿತ್ಸೆಗಾಗಿ ಪೊಲೀಸರ ಬೆಂಗಾವಲು ಇಲ್ಲದೆ ಕೇರಳಕ್ಕೆ ತೆರಳಲು ಸುಪ್ರೀಂ ಕೋರ್ಟ್ ಸೋಮವಾರದಂದು ಅನುಮತಿ ನೀಡಿದೆ. ಬೆಂಗಾವಲು ಇಲ್ಲದೇ ಕೇರಳಕ್ಕೆ ತೆರಳಲು ಮಅದನಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದಲ್ಲದೇ, ವಿಚಾರಣೆ ಮುಗಿಯುವವರೆಗೆ ಬೆಂಗಳೂರಿನಲ್ಲಿಯೇ ಇರಬೇಕು ಎಂದಿದ್ದ ಷರತ್ತು ಕೂಡಾ ರದ್ದಾಗಿರುವ ಕುರಿತು ವರದಿಯಾಗಿದೆ. ಮೊದಲು ನಾಸಿರ್‌ ಮಅದನಿ ಅವರು ಕೊಲ್ಲಂ ಜಿಲ್ಲೆಯಲ್ಲಿಯೇ ಇರುವಂತೆ

ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆ- ನಾಸಿರ್ ಮಅದನಿ ಜಾಮೀನು ವಿಚಾರದಲ್ಲಿ ಸಡಿಲಿಕೆ Read More »

ರಾಷ್ಟ್ರೀಯ ನ್ಯೂಸ್

ಹೈನುಗಾರರಿಗೆ ತಲೆನೋವು ತಂದಿಟ್ಟ “ಒಟೈಟಿಸ್”- ಇದೇನಿದು ಹೊಸ ಕಾಯಿಲೆ…ಇಲ್ಲಿದೆ ಓದಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜಿ. 17. ಕಳೆದ ವರ್ಷ ಜಾನುವಾರುಗಳಿಗೆ ಆವರಿಸಿಕೊಂಡಿದ್ದ ಚರ್ಮಗಂಟು ರೋಗದಿಂದ ರೈತರು ಸುಧಾರಿಸುವ ಮುನ್ನವೇ, ಇನ್ನೊಂದು ಒಟೈಟಿಸ್ ಎಂಬ ಮಾರಕ ಕಾಯಿಲೆ ರಾಜ್ಯಕ್ಕೆ ಕಾಲಿಟ್ಟಿದೆ. ಒಟೈಟಿಸ್ ಎಂಬ ಮಾರಕ ಕಾಯಿಲೆಯು ತಮಿಳುನಾಡು ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ಈ ಕಾಯಿಲೆ ಬಂದಲ್ಲಿ ಹಸು ಸಾವಿಗೀಡಾಗುವ ಸಾಧ್ಯತೆ ಹೆಚ್ಚಿರುವುದಾಗಿ ತಿಳಿದುಬಂದಿದೆ. ಒಟೈಟಿಸ್‍ ಕಾಯಿಲೆ ಇದೀಗ ಬೆಂಗಳೂರು ಭಾಗದ ಹೈನುಗಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ಆನೇಕಲ್ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಈ ಕಾಯಿಲೆ

ಹೈನುಗಾರರಿಗೆ ತಲೆನೋವು ತಂದಿಟ್ಟ “ಒಟೈಟಿಸ್”- ಇದೇನಿದು ಹೊಸ ಕಾಯಿಲೆ…ಇಲ್ಲಿದೆ ಓದಿ Read More »

ರಾಷ್ಟ್ರೀಯ ನ್ಯೂಸ್

ಇಸ್ರೋ ಸಂಸ್ಥೆಯಿಂದ ವಿವಿಧ ಸ್ಪರ್ಧೆ- ಜು. 20ರಂದು ಕೊನೆಯ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 17. ಅಂತರಾಷ್ಟ್ರೀಯ ಚಂದ್ರ ದಿನಾಚರಣೆಯ ಪ್ರಯುಕ್ತ ಇಸ್ರೋ ಸಂಸ್ಥೆಯು ರಾಜ್ಯದ 8 ರಿಂದ  12ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‍ಲೈನ್ ರಸಪ್ರಶ್ನೆ ಮತ್ತು ಪೋಸ್ಟರ್/ಪೇಂಟಿಂಗ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಆನ್‍ಲೈನ್ ಮಾದರಿಯ ರಸಪ್ರಶ್ನೆ 30 ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿದ್ದು, ಪ್ರತಿ ಸರಿ ಉತ್ತರಕ್ಕೆ +2 ಅಂಕ ಮತ್ತು ತಪ್ಪು ಉತ್ತರಕ್ಕೆ-1 ಅಂಕವಿದ್ದು, 15 ನಿಮಿಷಗಳ ಕಾಲಾವಕಾಶವಿರುತ್ತದೆ. ಚಂದ್ರನ ಪರಿಶೋಧನೆ (ಸಮನ್ವಯ ಮತ್ತು ಸುಸ್ಥಿರತೆ) ಮೂಲ ಪೋಸ್ಟರ್/ಪೇಂಟಿಂಗ್‍ನ ಒಂದು ಸ್ಕ್ಯಾನ್ ಮಾಡಿದ ಪ್ರತಿಯನ್ನು

ಇಸ್ರೋ ಸಂಸ್ಥೆಯಿಂದ ವಿವಿಧ ಸ್ಪರ್ಧೆ- ಜು. 20ರಂದು ಕೊನೆಯ ಅವಕಾಶ Read More »

ರಾಷ್ಟ್ರೀಯ ನ್ಯೂಸ್

ಕೇದಾರನಾಥ ದೇಗುಲದಲ್ಲಿ ಮೊಬೈಲ್ ಹಾಗೂ ಫೋಟೋಗ್ರಫಿ ಬಳಕೆ ನಿಷೇಧಿಸಿ ಆದೇಶ

(ನ್ಯೂಸ್ ಕಡಬ) newskadaba.com ಡೆಹ್ರಾಡೂನ್, ಜು. 17. ಇಲ್ಲಿನ ಕೇದಾರನಾಥ ದೇವಾಲಯದ ಆವರಣದಲ್ಲಿ ಭಕ್ತರು ಛಾಯಾಚಿತ್ರ ತೆಗೆಯುವುದು ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಿ ಆದೇಶಿಸಲಾಗಿದೆ. ಇತ್ತೀಚೆಗೆ ಮಹಿಳಾ ಯೂಟ್ಯೂಬ್ ಬ್ಲಾಗರ್ ಓರ್ವರು ದೇವಸ್ಥಾನದ ಮುಂದೆ ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿರುವುದಾಗಿ ತಿಳಿದುಬಂದಿದೆ. ಇದೀಗ ಕೇದಾರನಾಥ ದೇವಾಲಯ ಸಮಿತಿಯು ದೇವಳದ ಆವರಣದಲ್ಲಿ ಮೊಬೈಲ್ ಫೋನ್‌ಗಳೊಂದಿಗೆ ದೇವಾಲಯದ ಆವರಣವನ್ನು ಪ್ರವೇಶಿಸಬೇಡಿ, ದೇವಾಲಯದ ಒಳಗೆ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ

ಕೇದಾರನಾಥ ದೇಗುಲದಲ್ಲಿ ಮೊಬೈಲ್ ಹಾಗೂ ಫೋಟೋಗ್ರಫಿ ಬಳಕೆ ನಿಷೇಧಿಸಿ ಆದೇಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top