ಜುಲೈ.21ಕ್ಕೆ ಗ್ಯಾನವ್ಯಾಪಿ ವೈಜ್ಞಾನಿಕ ಸಮೀಕ್ಷೆಯ ಕೋರ್ಟ್ ತೀರ್ಪು ಪ್ರಕಟ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಜು.15. ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವ್ಯಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ವಾರಾಣಸಿ ಜಿಲ್ಲಾ ಕೋರ್ಟ್ ಜುಲೈ 21ಕ್ಕೆ ತೀರ್ಪು ಪ್ರಕಟಿಸಲಿದೆ.


ಇದೀಗ ಎರಡೂ ಕಡೆಯ ವಾದ -ಪ್ರತಿವಾದ ಆಲಿಸಿರುವ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಪ್ರಕರಣದ ಹಿಂದೂ ಪರ ಅರ್ಜಿದಾರರಿಂದ ಶಿವಲಿಂಗ ಪತ್ತೆ ಸ್ಥಳವಾದ ವಜುಖಾನಾ ಹೊರತುಪಡಿಸಿ ಇಡೀ ಗ್ಯಾನವ್ಯಾಪಿ ಮಸೀದಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

Scroll to Top