ರಾಷ್ಟ್ರೀಯ ನ್ಯೂಸ್

ಮಹಿಳೆಯರ ನಗ್ನ ಮೆರವಣಿಗೆ ವಿಡಿಯೋ ವೈರಲ್ – ಪ್ರಮುಖ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಣಿಪುರ, ಜು. 20. ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಘಟನೆಯ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲೇ, ಒಂದು ದಿನದ ನಂತರ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಹೆರದಾಸ್ (32) ಎಂದು ಗುರುತಿಸಲಾಗಿದೆ. ಆತನನ್ನು ತೌಬಲ್ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಣಿಪುರದಲ್ಲಿ ಕುಕಿ-ಜೋ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಪುರುಷರ ಗುಂಪೊಂದು ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿಸಿದ್ದು, ಇದೀಗ ವಿಡಿಯೋ […]

ಮಹಿಳೆಯರ ನಗ್ನ ಮೆರವಣಿಗೆ ವಿಡಿಯೋ ವೈರಲ್ – ಪ್ರಮುಖ ಆರೋಪಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಪಘಾತ ಸ್ಥಳದಲ್ಲಿ ಜಮಾಯಿಸಿದ್ದ ಜನರ ಮೇಲೆ ಹರಿದ ಕಾರು – ಪೊಲೀಸರ ಸಹಿತ 9 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಗುಜರಾತ್, ಜು. 20.‌ ಜನರ ಗುಂಪಿನ ನಡುವೆ ಕಾರು ಹರಿದು ಪೊಲೀಸ್‌ ಸಿಬ್ಬಂದಿಗಳ ಸಹಿತ 9 ಮಂದಿ ಮೃತಪಟ್ಟಿರುವ ಘಟನೆ ಅಹಮದಾಬಾದ್‌ನ ಇಸ್ಕಾನ್ ಸೇತುವೆ ಬಳಿ ನಡೆದಿದೆ. ಸರ್ಖೇಜ್- ಗಾಂಧಿನಗರ (ಎಸ್‌ಜಿ) ಹೆದ್ದಾರಿಯಲ್ಲಿನ ಇಸ್ಕಾನ್ ಸೇತುವೆ ಬಳಿ ಥಾರ್ ಮತ್ತು ಟ್ರಕ್‌ ನಡುವೆ ತಡರಾತ್ರಿ ಅಪಘಾತ ಸಂಭವಿಸಿತ್ತು. ಈ ಅಪಘಾತವನ್ನು ನೋಡಲು ಪೊಲೀಸರು ಸೇರಿದಂತೆ ಹಲವರು ಜಮಾಯಿಸಿದ್ದರು. ಇದೇ ವೇಳೆ ವೇಗವಾಗಿ ಬಂದ ಜಾಗ್ವಾರ್‌ ಕಾರೊಂದು ಅಪಘಾತದ ಸ್ಥಳದಲ್ಲಿ ನೆರದಿದ್ದ ಜನರ ಮೇಲೆ

ಅಪಘಾತ ಸ್ಥಳದಲ್ಲಿ ಜಮಾಯಿಸಿದ್ದ ಜನರ ಮೇಲೆ ಹರಿದ ಕಾರು – ಪೊಲೀಸರ ಸಹಿತ 9 ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಕಾರು ಹತ್ತಿಸಿ ಮೂವರು ಮಕ್ಕಳ ಕೊಲೆಗೆ ಯತ್ನ – ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಲಕ್ನೋ, ಜು.19. ನಡೆದುಕೊಂಡು ಹೋಗುತ್ತಿದ್ದ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರಪ್ರದೆಶದ ಲಕ್ನೋದಲ್ಲಿ ನಡೆದಿದೆ. ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇಬ್ಬರು ಹುಡುಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಓರ್ವ ಚಿಕ್ಕ ಮಗುವನ್ನು ಎತ್ತಿಕೊಂಡಿದ್ದಾನೆ. ಹೀಗೆ ಅವರು ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿರುವಾಗ ಏಕಾಏಕಿ ಎದುರಿನಿಂದ ಬಂದ ಕಾರನ್ನು ಚಾಲಕ

ಕಾರು ಹತ್ತಿಸಿ ಮೂವರು ಮಕ್ಕಳ ಕೊಲೆಗೆ ಯತ್ನ – ವಿಡಿಯೋ ವೈರಲ್ Read More »

ರಾಷ್ಟ್ರೀಯ ನ್ಯೂಸ್

ಟೀಂ ಇಂಡಿಯಾ ತಂಡಕ್ಕೆ ಮತ್ತೆ ಮರಳಲಿರುವ ಬುಮ್ರಾ- ಟಿ-20 ವಿಶ್ವಕಪ್ ಆಡುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಮುಂಬೈ, ಜು. 19. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಅಭ್ಯಾಸ ಶುರು ಮಾಡಿರುವ ಟೀಂ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ಮರಳಿ ಬರುವ ಸಾಧ್ಯತೆ ಹೆಚ್ಚಾಗಿದೆ. ಭಾರತ ತಂಡದ ವೇಗಿ ಜಸ್​ಪ್ರೀತ್ ಬುಮ್ರಾ ಖ್ಯಾತ ಗಾಯಕಿ ಸ್ಕೈಲರ್ ಗ್ರೇ ಅವರ ಕಮಿಂಗ್ ಹೋಮ್…ಗೀತೆಯ ಮೂಲಕ ಭಾರತ ತಂಡಕ್ಕೆ ಶೀಘ್ರದಲ್ಲೇ ಮರಳಿ ಬರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ

ಟೀಂ ಇಂಡಿಯಾ ತಂಡಕ್ಕೆ ಮತ್ತೆ ಮರಳಲಿರುವ ಬುಮ್ರಾ- ಟಿ-20 ವಿಶ್ವಕಪ್ ಆಡುವ ಸಾಧ್ಯತೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗೃಹಲಕ್ಷ್ಮೀ ಯೋಜನೆಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು..! – ಅರ್ಜಿ ಸಲ್ಲಿಕೆ ಹೇಗೆ…? ಇಲ್ಲಿದೆ ಮಾಹಿತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜುಲೈ 19. ಇಂದಿನಿಂದಲೇ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಶುರುವಾಗಲಿದ್ದು, ರಾಜ್ಯದ ಮಹಿಳೆಯರು ಕಾರು ಕುಳಿತಿರುವ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. ಇಂದು ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2 ಸಾವಿರ ಹಣ ಜಮೆಯಾಗಲಿದೆ. ಇನ್ನು ಅರ್ಜಿ ಸಲ್ಲಿಸುವುದು ಎಲ್ಲಿ ? ಏನೆಲ್ಲ ದಾಖಲೆಗಳು ಬೇಕು ಎನ್ನುವ

ಗೃಹಲಕ್ಷ್ಮೀ ಯೋಜನೆಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು..! – ಅರ್ಜಿ ಸಲ್ಲಿಕೆ ಹೇಗೆ…? ಇಲ್ಲಿದೆ ಮಾಹಿತಿ Read More »

ರಾಷ್ಟ್ರೀಯ ನ್ಯೂಸ್
crime, arrest, suspected

ಗಾಂಜಾ ಸಾಗಾಟ- ಓರ್ವ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 19. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕಿಲೋ ಗಾಂಜಾ ಸಹಿತ ಆರೋಪಿ ಓರ್ವನನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಡಿಕೈ ನೆಲ್ಲಂಗುಯಿಯ ಮನೋಜ್ ಥೋಮಸ್ (43) ಎಮದು ಗುರುತಿಸಲಾಗಿದೆ. ಪೊಲೀಸರು ಮಂಗಳವಾರದಂದು ರಾತ್ರಿ ಚೆಮ್ಮಟ ವಯಲ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಒಂದೂವರೆ ಕಿಲೋ ಗಾಂಜಾ ಪತ್ತೆಯಾಗಿದೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಗಾಂಜಾ ಸಾಗಾಟ- ಓರ್ವ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

ವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 19. ವಿವಾಹಿತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಬೇಳದಲ್ಲಿ ಸಂಭವಿಸಿದೆ. ಮೃತರನ್ನು ದಾಮೋದರ ಪುತ್ರಿ ಅಶ್ವತಿ(25) ಎಂದು ಗುರುತಿಸಲಾಗಿದೆ. ಅಶ್ವಥಿಯವರ ಮೃತದೇಹ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಕೃತ್ಯ ನಡೆದಿದೆ. ತಾಯಿ ಸುಜಾತರವರು ಮನೆ ಸಮೀಪದ ಬೀಡಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮಧ್ಯಾಹ್ನ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಗಿಲು ಬಡಿದರೂ ತೆರೆಯದಿದ್ದುದರಿಂದ

ವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹಠಾತ್ ದೋಷ ಕಂಡು ಬಂದ ಹಿನ್ನೆಲೆ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ವಿಮಾನ ನಿಲ್ದಾನದಲ್ಲಿ ವರದಿಯಾಗಿದೆ. ಕಳೆದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ  ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಿ ದೆಹಲಿಗೆ ವಾಪಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.  

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್- ಸಂಚಾರ ನಿಮಯ ಉಲ್ಲಂಘನೆಯ ದಂಡದ ವಿವರ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 19. ಭಾರತದಲ್ಲಿ ಯಾವ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಎಷ್ಟು ದಂಡ ಕಟ್ಟಬೇಕಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಬಹುಮುಖ್ಯ. ಅದರಲ್ಲೂ ವಾಹನಗಳನ್ನು ರಸ್ತೆಗಿಳಿಸಿದಾಗ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೇ ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಹಲವಾರು ಪ್ರಯೋಜನಗಳಿದ್ದು, ಟ್ರಾಫಿಕ್‌ನಲ್ಲಿ ವಾಹನಗಳು ಸುಗಮವಾಗಿ ಚಲಿಸುತ್ತದೆ. ಸದ್ಯ ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ. ಇದರೊಂದಿಗೆ ಕೆಲವು ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದ ವ್ಯಕ್ತಿ ಜೈಲು ಪಾಲಾಗುವ ಸಾಧ್ಯತೆಯೂ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್- ಸಂಚಾರ ನಿಮಯ ಉಲ್ಲಂಘನೆಯ ದಂಡದ ವಿವರ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಯೂಟ್ಯೂಬರ್‌ ಮೇಲೆ ಐಟಿ ದಾಳಿ- 24 ಲಕ್ಷ ರೂ. ನಗದು ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 18. ಯೂಟ್ಯೂಬ್‌ ಚಾನೆಲ್‌ಗಳಿಂದ ಜನಪ್ರಿಯ ಯೂಟ್ಯೂಬರ್‌ಗಳು ಕೋಟಿಗಟ್ಟಲೆ ಆದಾಯ ಗಳಿಸುತ್ತಿರುವ ಬೆನ್ನಲ್ಲೇ ಇದೀಗ ಯುಟ್ಯೂಬ್‌ ಚಾನೆಲ್‌ ಮಾಲೀಕರ ಮನೆ ಮೇಲೆ ಐಟಿ ದಾಳಿಗಳೂ ನಡೆಯುತ್ತಿವೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯೂಟ್ಯೂಬ್‌ ಚಾನೆಲ್‌ ಒಂದನ್ನು ನಡೆಸುವ ಉತ್ತರ ಪ್ರದೇಶದ ಯೂಟ್ಯೂಬರ್ ಒಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ 24 ಲಕ್ಷ ರೂ. ನಗದು ಪತ್ತೆಯಾಗಿದೆ. ತಸ್ಲೀಮ್‌ ಎಂಬ ವ್ಯಕ್ತಿ ಹಲವು ವರ್ಷಗಳಿಂದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಸುಮಾರು

ಯೂಟ್ಯೂಬರ್‌ ಮೇಲೆ ಐಟಿ ದಾಳಿ- 24 ಲಕ್ಷ ರೂ. ನಗದು ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top