ರೈಲ್ವೇ ಪ್ಲಾಟ್‌ ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನ ಮೇಲೆ ದರ್ಪ ಮೆರೆದ ಪೊಲೀಸ್ ಅಧಿಕಾರಿ

(ನ್ಯೂಸ್ ಕಡಬ)newskadaba.com ಉತ್ತರಪ್ರದೇಶ, ಜು.18. ರೈಲು ನಿಲ್ದಾಣವೊಂದರ ಪ್ಲಾಟ್‌ ಫಾರ್ಮ್‌ ನಲ್ಲಿ ಮಲಗಿದ್ದ ಬಾಲಕನನ್ನು ರೈಲ್ವೆ ಪೊಲೀಸ್ ಪೇದೆಯೊಬ್ಬ ಕಾಲಿನಿಂದ ಒದ್ದು ಎಬ್ಬಿಸಿದ ಅಮಾನವೀಯ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್‌ ಅಧಿಕಾರಿಯ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಉತ್ತರಪ್ರದೇಶ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕನೋರ್ವ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್‌ನಲ್ಲಿ ಮಲಗಿದ್ದು, ಈತನನ್ನು ಬೂಟುಗಾಲಿನಿಂದ ಒದ್ದು ರೈಲ್ವೆ ರಕ್ಷಣಾ ಪಡೆ ಪೊಲೀಸ್ ಪೇದೆ ಎಬ್ಬಿಸಿದ್ದಾನೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕರುಣೆ ಇಲ್ಲದ ಪೊಲೀಸ್ ಪೇದೆಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

 

Scroll to Top