ಕರಾವಳಿ

ಬಂಟ್ವಾಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ – ತಪ್ಪಿದ ದೊಡ್ಡ ಅನಾಹುತ

(ನ್ಯೂಸ್‌ ಕಡಬ) newskadaba.com,  ಜು.30 : ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ನಿವಾಸಿ ಚಂದ್ರಹಾಸ ಅವರ ಮನೆಯಲ್ಲಿ ವಿದ್ಯುತ್ ಸಂಪರ್ಕದ ತಾಂತ್ರಿಕ ದೋಷದಿಂದ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ಹಾಸಿಗೆ, ಅಲಮಾರಿಯಲ್ಲಿದ್ದ ವಸ್ತುಗಳು, ಬಟ್ಟೆಗಳು ಹಾಗೂ ಗೃಹೋಪಯೋಗಿ ಸಾಮಗ್ರಿಗಳು ಬೆಂಕಿಗಾಹುತಿಯಾಗಿದ್ದು, ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಸಂಭವಿಸಿದೆ. ಅವಘಡದ ವೇಳೆ ಮನೆಯಲ್ಲಿದ್ದವರು ತಕ್ಷಣವೇ ಹೊರಬಂದಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.ಸಾರ್ವಜನಿಕರು ಹಾಗೂ ಸ್ಥಳೀಯರು ತಕ್ಷಣ ಸ್ಪಂದಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ […]

ಬಂಟ್ವಾಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ – ತಪ್ಪಿದ ದೊಡ್ಡ ಅನಾಹುತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸರಸ್ವತೀ ವಿದ್ಯಾಲಯ ಕಡಬ ಗುರುಪೂರ್ಣಿಮೆಯ ಅಂಗವಾಗಿ ದಾಸ ಸಾಹಿತ್ಯ ಎಂಬ ಜೀವನ ಮೌಲ್ಯಗಳ ಗಣಿತ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಜು. 29. ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಕಡಬ ತಾಲೂಕು ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ‘ದಾಸ ಸಾಹಿತ್ಯ ಎಂಬ ಜೀವನ ಮೌಲ್ಯಗಳ ಗಣಿ ಎನ್ನುವ ಉಪನ್ಯಾಸ ಕಾರ್ಯಕ್ರಮವು ಜುಲೈ 29ರ ಬುಧವಾರದಂದು ಕೇವಳ ಹನುಮಾನ್ ನಗರದ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.   ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಐ.ಡಿ.ಎಸ್.ಜಿ ಸರಕಾರಿ ಕಾಲೇಜು ಚಿಕ್ಕಮಗಳೂರು

ಸರಸ್ವತೀ ವಿದ್ಯಾಲಯ ಕಡಬ ಗುರುಪೂರ್ಣಿಮೆಯ ಅಂಗವಾಗಿ ದಾಸ ಸಾಹಿತ್ಯ ಎಂಬ ಜೀವನ ಮೌಲ್ಯಗಳ ಗಣಿತ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ Read More »

ಕರಾವಳಿ

ಬೆಂಗಳೂರು: ಐಪಿಎಸ್ ಲೇಔಟ್‌ನಲ್ಲಿ ರೇವ್ ಪಾರ್ಟಿ ಅಡ್ಡೆಗೆ ಸಿಸಿಬಿ ದಾಳಿ ಮೂವರ ಬಂಧನ

(ನ್ಯೂಸ್‌ ಕಡಬ) newskadaba.com  ಜು.29 ಬೆಂಗಳೂರು: ಹೆಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಐಪಿಎಸ್ ಲೇಔಟ್‌ನ ವಿಲ್ಲಾವೊಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ಸಿಸಿಬಿ ಮಹಿಳಾ ಘಟಕದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳು ದೀಕ್ಷಿತ್, ವೇದಾಂತ್ ಪಂಡಿತ್ ಮತ್ತು ಶಂಕರ್. ‘ರೆವ್ ಕೀ ಹಾಸ್ಪಿಟಾಲಿಟಿ ಸರ್ವಿಸ್’ ವಿಲ್ಲಾವನ್ನು ದಿನಕ್ಕೆ ₹20,000 ಬಾಡಿಗೆಗೆ ಪಡೆದು ಪಾರ್ಟಿ ಆಯೋಜಿಸಲಾಗಿತ್ತು. ‘ಅಮಿಗೋಸ್’ ಆಪ್ ಬಳಸಿ ಯುವಕ-ಯುವತಿಯರನ್ನು ಕರೆಯಿಸಲಾಗಿತ್ತು. ಪ್ರವೇಶ ಶುಲ್ಕವಾಗಿ ಯುವಕರಿಗೆ ₹1,099 ಹಾಗೂ ಯುವತಿಯರಿಗೆ

ಬೆಂಗಳೂರು: ಐಪಿಎಸ್ ಲೇಔಟ್‌ನಲ್ಲಿ ರೇವ್ ಪಾರ್ಟಿ ಅಡ್ಡೆಗೆ ಸಿಸಿಬಿ ದಾಳಿ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಪಾನ್‌ನಲ್ಲಿ ಭೀಕರ ಭೂಕಂಪ: 13 ಸಾವು, ಸುನಾಮಿ ಎಚ್ಚರಿಕೆ ರವಾನೆ

(ನ್ಯೂಸ್‌ ಕಡಬ) newskadaba.com  ಜು.29: ಜಪಾನ್‌ನ ದಕ್ಷಿಣ ಭಾಗದ ಕ್ಯುಶು ದ್ವೀಪದಲ್ಲಿರುವ ಕುಮಾಮೊಟೊ ಪ್ರಾಂತ್ಯದಲ್ಲಿ ಮಂಗಳವಾರ ಮಧ್ಯಾಹ್ನ 4:27ಕ್ಕೆ ಪ್ರಬಲ ಭೂಕಂಪ ಸಂಭವಿಸಿದೆ.ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಭೂಕಂಪನದ ತೀವ್ರತೆ 6.8 ರಿಂದ 7.1 ರಷ್ಟು ದಾಖಲಾಗಿದೆ ಎಂದು ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ದುರಂತದಲ್ಲಿ ಈವರೆಗೆ 13 ಮಂದಿ ಸಾವನ್ನಪ್ಪಿದ್ದಾರೆ. ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ಸೇತುವೆಗಳು ಜಖಂಗೊಂಡಿವೆ. ಗೂಡ್ಸ್ ರೈಲುಗಳು ಉರುಳಿಬಿದ್ದಿದ್ದು, ಹಲವೆಡೆ ಬೆಂಕಿ ಕಾಣಿಸಿಕೊಂಡಿದೆ.1 ಮೀಟರ್‌ವರೆಗೆ ಎತ್ತರದ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಕರಾವಳಿ ಜನರಿಗೆ

ಜಪಾನ್‌ನಲ್ಲಿ ಭೀಕರ ಭೂಕಂಪ: 13 ಸಾವು, ಸುನಾಮಿ ಎಚ್ಚರಿಕೆ ರವಾನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಒಮಾನ್‌ನಲ್ಲಿ ದೂಷಿತ ವಾಹನ ಅಪಘಾತ: ಮೂಡುಬಿದಿರೆ ಮೂಲದ ಯುವಕ ದುರಂತ ಮೃತ್ಯು

(ನ್ಯೂಸ್‌ ಕಡಬ) newskadaba.com  ಜು.29:ಒಮಾನ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂಡುಬಿದಿರೆ ಸಮೀಪದ ಸಾಣೂರು ಮೂಲಗುತ್ತು ನಿವಾಸಿ ರಾಜವರ್ಮ ಜೈನ್ (33) ಅವರು ಮೃತಪಟ್ಟಿದ್ದಾರೆ. ಒಮಾನ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ರಾಜವರ್ಮ, ಸಹೋದ್ಯೋಗಿ ವಾಹನವನ್ನು ರಿವರ್ಸ್ ವೇಳೆ ಆಕಸ್ಮಿಕವಾಗಿ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತ ರಾಜವರ್ಮ ಜೈನ್ ಅವರು ಪತ್ನಿ, ಪುತ್ರಿ ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

ಒಮಾನ್‌ನಲ್ಲಿ ದೂಷಿತ ವಾಹನ ಅಪಘಾತ: ಮೂಡುಬಿದಿರೆ ಮೂಲದ ಯುವಕ ದುರಂತ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ತೀವ್ರಗೊಂಡ ಪುಷ್ಯ ನಕ್ಷತ್ರದ ಮಳೆ: ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚನೆ

(ನ್ಯೂಸ್‌ ಕಡಬ) newskadaba.com  ಜು.29: ಕರಾವಳಿ ಕರ್ನಾಟಕದಲ್ಲಿ ‘ಪುಷ್ಯ ನಕ್ಷತ್ರ’ದ ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಜುಲೈ 29ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ತೀವ್ರತೆ ಹೆಚ್ಚಾಗಲಿರುವ ಕಾರಣ ಕರಾವಳಿಯ ಮೂರೂ ಜಿಲ್ಲೆಗಳ ಜನತೆಗೆ ವಿಶೇಷ ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.

ಕರಾವಳಿಯಲ್ಲಿ ತೀವ್ರಗೊಂಡ ಪುಷ್ಯ ನಕ್ಷತ್ರದ ಮಳೆ: ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಪೊಲೀಸರು ಮತ್ತು ಆಹಾರ ಇಲಾಖೆ ಜಂಟಿ ದಾಳಿ, ಲಾರಿ ಜಪ್ತಿ

(ನ್ಯೂಸ್‌ ಕಡಬ) newskadaba.com  ಜು.29: ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಕುಮಟಾದ ನಾಡಾ ಮಸ್ಕೇರಿಯ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲೀಕ ನಾಗರಾಜ ನಾಯ್ಕ್ ಅವರು ಅಕ್ಕಿಯನ್ನು ಲಾರಿಗೆ ತುಂಬಿಸಿದ್ದರು. ಲಾರಿ ಮಾಲೀಕ ಗಿರೀಶ್ ನಾಯ್ಕ್ ಅವರ ಸೂಚನೆಯಂತೆ ಚಾಲಕ ಕೆ. ನರಸಿಂಹ ಈ ಸರ್ಕಾರಿ ಅಕ್ಕಿಯನ್ನು ಕೇರಳದ ಕಾಸರಗೋಡಿನ ಶಾಜಿ ಟ್ರೇಡಿಂಗ್ ಕಂಪನಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾನೆ

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಪೊಲೀಸರು ಮತ್ತು ಆಹಾರ ಇಲಾಖೆ ಜಂಟಿ ದಾಳಿ, ಲಾರಿ ಜಪ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಯಾಚಿನ್‌ನಲ್ಲಿ ಇತಿಹಾಸ ಬರೆದ ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವಾ ಚೌಹಾಣ್!

(ನ್ಯೂಸ್‌ ಕಡಬ) newskadaba.com  ಜು.29: ಭಾರತೀಯ ಸೇನೆಯ ಕ್ಯಾಪ್ಟನ್ ಶಿವಾ ಚೌಹಾಣ್ ಅವರು 2023ರ ಜನವರಿಯಲ್ಲಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಹಿಮನದಿಯ ‘ಕುಮಾರ್ ಪೋಸ್ಟ್’ (15,632 ಅಡಿ ಎತ್ತರ) ನಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ರಾಜಸ್ಥಾನದ ಉದಯಪುರ ಮೂಲದ ಶಿವಾ, ತಮ್ಮ 11ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರೂ ಆರ್ಥಿಕ ಹಾಗೂ ವೈಯಕ್ತಿಕ ಕಷ್ಟಗಳನ್ನು ಮೆಟ್ಟಿನಿಂತು ಸಿವಿಲ್ ಎಂಜಿನಿಯರಿಂಗ್ (ಬಿ.ಟೆಕ್) ಪದವಿ ಪೂರ್ಣಗೊಳಿಸಿದರು. 2020ರ ಸರ್ವಿಸಸ್ ಸೆಲೆಕ್ಷನ್ ಬೋರ್ಡ್ (SSB) ಸಂದರ್ಶನದಲ್ಲಿ

ಸಿಯಾಚಿನ್‌ನಲ್ಲಿ ಇತಿಹಾಸ ಬರೆದ ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವಾ ಚೌಹಾಣ್! Read More »

ಕರಾವಳಿ, ಕರ್ನಾಟಕ

ಸರಸ್ವತಿ ವಿದ್ಯಾಲಯದಲ್ಲಿ ಪಾಲಕರ ಸಭೆ ಹಾಗೂ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸಬೇಕು- ಮಹೇಶ್ ಕೆ ಸವಣೂರು

(ನ್ಯೂಸ್ ಕಡಬ) newskadaba.com ಜು. 28. ಪಾಲಕರ ಸಭೆ ಹಾಗೂ ಮಾದಕ ವ್ಯಸನ ಮುಕ್ತ ಇದರ ಜಾಗೃತಿ ಕಾರ್ಯಕ್ರಮವು ಕಡಬದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.   ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ ಕಡಬ ವಹಿಸಿ ಇವತ್ತಿನ ವಿದ್ಯಾವಂತ ಯುವ ಸಮುದಾಯದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಋಣಾತ್ಮಕ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.   ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ

ಸರಸ್ವತಿ ವಿದ್ಯಾಲಯದಲ್ಲಿ ಪಾಲಕರ ಸಭೆ ಹಾಗೂ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸಬೇಕು- ಮಹೇಶ್ ಕೆ ಸವಣೂರು Read More »

ಕರಾವಳಿ

ದಕ್ಷಿಣ ಕನ್ನಡದ ನಾಡ ಕಚೇರಿಗಳಲ್ಲಿ ಕೆಲಸ ಬಂದ್: ಸರ್ವರ್ ಸಮಸ್ಯೆಯಿಂದ ಕಂಗಾಲಾದ ನಾಗರಿಕರು

(ನ್ಯೂಸ್‌ ಕಡಬ) newskadaba.com, ಜು.28 ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ ಹಾಗೂ ಬೆಳ್ತಂಗಡಿ ಸೇರಿದಂತೆ ಹಲವು ನಾಡ ಕಚೇರಿಗಳಲ್ಲಿ ಕಳೆದ 10 ದಿನಗಳಿಂದ ನೆಟ್ವರ್ಕ್ ಮತ್ತು ಸರ್ವರ್ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕ ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ತಾಂತ್ರಿಕ ದೋಷದಿಂದಾಗಿ ಜಾತಿ, ಆದಾಯ, ನಿವಾಸ ಸೇರಿದಂತೆ ವಿವಿಧ ಅಗತ್ಯ ಪ್ರಮಾಣಪತ್ರಗಳ ವಿತರಣೆ ಸಂಪೂರ್ಣ ವಿಳಂಬವಾಗಿದೆ. ಸಾರ್ವಜನಿಕರು ಗಂಟೆಗಟ್ಟಲೆ ಸರದಿಯಲ್ಲಿ ಕಾದರೂ ಕೆಲಸವಾಗದೆ ಬರಿಗೈಯಲ್ಲಿ ಮನೆಗೆ ಹಿಂದಿರುಗುವಂತಾಗಿದೆ. ವಿದ್ಯಾರ್ಥಿವೇತನ, ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ

ದಕ್ಷಿಣ ಕನ್ನಡದ ನಾಡ ಕಚೇರಿಗಳಲ್ಲಿ ಕೆಲಸ ಬಂದ್: ಸರ್ವರ್ ಸಮಸ್ಯೆಯಿಂದ ಕಂಗಾಲಾದ ನಾಗರಿಕರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top