ತಮಿಳು ಕಾರ್ಮಿಕರು ಬಿಜೆಪಿ ಪರವಾಗಿದ್ದಾರೆ ಎಂಬ ಹೇಳಿಕೆಗೆ ಖಂಡನೆ ► ತಮಿಳರು ಎಂದೆಂದಿಗೂ ಕಷ್ಟಕಾಲದಲ್ಲಿ ನೆರವಾಗಿರುವ ಕಾಂಗ್ರೆಸ್ ಪರ: ರಾಜಕೃಷ್ಣ ಎಸ್.
(ನ್ಯೂಸ್ ಕಡಬ) newskadaba.com ಕಡಬ, ಮೇ.10. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟಗಳಲ್ಲಿ ದುಡಿಯುತ್ತಿರುವ ತಮಿಳು ಕಾರ್ಮಿಕರು ತಮ್ಮ ಕಷ್ಟಕಾಲದಲ್ಲಿ ನೆರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಯನ್ನು ಬೆಂಬಲಿಸುವುದು ಸಾಧ್ಯವೇ ಇಲ್ಲ. ನಾವು ಎಂದೆಂದಿಗೂ ಕಾಂಗ್ರೆಸ್ ಬೆಂಬಲಿಗರು ಎಂದು ತಮಿಳು ಕಾರ್ಮಿಕರ ಕಾಂಗ್ರೆಸ್ ಘಟಕದ ಕಡಬ ತಾಲೂಕು ಸಮಿತಿಯ ಅಧ್ಯಕ್ಷ ರಾಜಕಷ್ಣ ಎಸ್. ಅವರು ಹೇಳಿದರು. ಅವರು ಗುರುವಾರ ಕಡಬದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ತಮಿಳು ಕಾರ್ಮಿಕರು ಬಿಜೆಪಿ ಪರವಾಗಿದ್ದಾರೆ. ಬಿಜೆಪಿಯಿಂದಾಗಿ […]










