ಸುಳ್ಯ: ಬಾಲಕನನ್ನು ಸಲಿಂಗ ಲೈಂಗಿಕ ಕ್ರಿಯೆಗೆ ಬಳಸಿದ ಯುವಕ ► ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಊರವರು

(ನ್ಯೂಸ್ ಕಡಬ) newskadaba.com ಸುಳ್ಯ, ಜ.16. ಒಂಬತ್ತನೇ ತರಗತಿಯ ಬಾಲಕನೋರ್ವನನ್ನು ಸಲಿಂಗಕಾಮಕ್ಕೆ ಬಳಸಿದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ಮಂಗಳವಾರದಂದು ನಡೆದಿದೆ.

ಬಂಧಿತ ಆರೋಪಿಯನ್ನು ಸುಳ್ಯ ಜಯನಗರ ನಿವಾಸಿ ಆಬೀದ್ ಎಂದು ಗುರುತಿಸಲಾಗಿದೆ. ಜ.14 ಭಾನುವಾರದಂದು 9ನೇ ತರಗತಿಯ ಹುಡುಗನೊಬ್ಬನನ್ನು ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಲಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು, ಆಕ್ರೋಶಗೊಂಡ ಊರವರು ಆಬೀದ್‌ನನ್ನು ಪ್ರಶ್ನಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿರುವ ಪೊಲೀಸರು ಪೋಕ್ಸೋ ಕಾಯಿದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top