ಅಡ್ಡಹೊಳೆಗೂ ಬಂದರೇ ನಕ್ಸಲರು..? ► ಮಿತ್ತಮಜಲಿಗೆ ಭೇಟಿ ನೀಡಿದ ಮೂವರ ತಂಡ, ನಕ್ಸಲರೆಂಬ ಶಂಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.15. ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಮೂವರು ಅಪರಿಚಿತರು ಕಾಣಿಸಿಕೊಂಡಿದ್ದು, ನಕ್ಸಲರಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮಿತ್ತಮಜಲಿನ ಮೋಹನ್, ಲೀಲಾ ಹಾಗೂ ಸುರೇಶ್ ಎಂಬವರ ಮನೆಗೆ ಭೇಟಿ ನೀಡಿರುವ ತಂಡದಲ್ಲಿ ಮೂವರಿದ್ದು, ಸುರೇಶ್ ಎಂಬವರ ಮನೆಯಿಂದ ಅಕ್ಕಿ ಪಡೆದು ತೆರಳಿದ್ದಾರೆ‌. ಮನೆಯಂಗಳಕ್ಕೆ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಆಗಮಿಸಿದ್ದು, ಕಾಡಿನಲ್ಲಿ ಇನ್ನೂ ಇಬ್ಬರಿದ್ದರು ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಉಪ್ಪಿನಂಗಡಿ ಪೊಲೀಸರ ವಿಚಾರಣೆಯನ್ನು ಮುಂದುವರಿಸಿದ್ದಾರೆ.

Scroll to Top