ಕರಾವಳಿ

ಸಬಳೂರು ಶಾಲೆಯಲ್ಲಿ ಬಿರುಸಿನ ಮತದಾನ

(ನ್ಯೂಸ್ ಕಡಬ) newskadaba.com  ಕೊೖಲ,ಮೇ.12. ಕಡಬ ತಾಲೂಕಿನ ಸುಳ್ಯ ವಿಧಾನ ಸಭಾ ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಬೆಳಿಗ್ಗೆ ಏಳು ಗಂಟೆಗೆ ಸರತಿ ಸಾಲು ನಿಂತು ಮತದಾನ ಮಾಡಿದರು.

ಸಬಳೂರು ಶಾಲೆಯಲ್ಲಿ ಬಿರುಸಿನ ಮತದಾನ Read More »

ಕರಾವಳಿ

ಪ್ರಥಮ ಮತದಾನದ ಸಂಭ್ರಮ

(ನ್ಯೂಸ್ ಕಡಬ) newskadaba.com ಕೊೖಲ,ಮೇ.12. ಶನಿವಾರ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದ ಯುವಕ ಯುವತಿಯರು ತಮ್ಮ ಮತದಾನದ ಸಂಭ್ರಮವನ್ನು ಹಂಚಿಕೊಂಡರು. ಸುಳ್ಯ ವಿಧಾನಸಭಾ ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದ ಕೀರ್ತಿಕಾ ಬುಡಲೂರು, ಮೋಹನ್ ಖಂಡಿಗಾ, ಜಯಪ್ರಕಾಶ್ ಎಸ್, ಸುಧೀರ್ ಕೆರೆಕೋಡಿ, ವಿನೋದ್ ಏಣಿತಡ್ಕ ಮೊದಲಾದವರು ಮತದಾನ ಮಾಡಿದ ಬಳಿಕ ತಮ್ಮ ಸಂತೋಷವನ್ನು ಹಂಚಿಕೊಂಡರು.

ಪ್ರಥಮ ಮತದಾನದ ಸಂಭ್ರಮ Read More »

ಕರಾವಳಿ

ಉಪ್ಪಿನಂಗಡಿ, ಮುಂಡಾಜೆಯಲ್ಲಿ ತಡವಾಗಿ ಆರಂಭವಾದ ಮತದಾನ ​► ಹೆಚ್ಚುವರಿ ಸಮಯಾವಕಾಶ‌ ನೀಡಲು ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.12. ಜಿಲ್ಲೆಯ ಕೆಲವೆಡೆ ಮತ ಯಂತ್ರಗಳಲ್ಲಿ ದೋಷ ಕಂಡುಬಂದಿದ್ದು, ತಡವಾಗಿ ಮತದಾನ ಆರಂಭವಾಗಿದೆ. ಉಪ್ಪಿನಂಗಡಿ ಒಂದನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದಾಗಿ ಮತ ಯಂತ್ರವನ್ನು ಬದಲಾಯಿಸಲಾಗಿದ್ದು, ಒಂದು ಗಂಟೆ ವಿಳಂಬವಾಗಿ ಮತದಾನ ಆರಂಭವಾಯಿತು. ಮತದಾರರು ಕಾದು ಕಾದು ಮತಗಟ್ಟೆಯಿಂದ ಹಿಂತಿರುಗುತ್ತಿರುವ ದೃಶ್ಯ ಕಂಡುಬಂತು. ವಿಳಂಬವಾಗಿ ಮತದಾನ ಆರಂಭವಾಗಿದ್ದರಿಂದ ಮತದಾರರು ಒಂದು ಗಂಟೆ ಹೆಚ್ಚುವರಿ ಸಮಯಾವಕಾಶ ನೀಡಲು ಆಗ್ರಹಿಸಿದರು. ಮುಂಡಾಜೆ ಮೂರನೇ ವಾರ್ಡ್‌ನಲ್ಲೂ ಮತಯಂತ್ರದ ತೊಂದರೆಯಿಂದಾಗಿ ಅರ್ಧ ಗಂಟೆ ತಡವಾಗಿ ಮತದಾನವಾಯಿತು.

ಉಪ್ಪಿನಂಗಡಿ, ಮುಂಡಾಜೆಯಲ್ಲಿ ತಡವಾಗಿ ಆರಂಭವಾದ ಮತದಾನ ​► ಹೆಚ್ಚುವರಿ ಸಮಯಾವಕಾಶ‌ ನೀಡಲು ಆಗ್ರಹ Read More »

ಕರಾವಳಿ

ಐತ್ತೂರು: ಕಾಂಗ್ರೆಸ್, ಬಿಜೆಪಿಗೆ ಒಟ್ಟಿಗೆ ಬೂತ್ ► ಚುನಾವಣೆಯಲ್ಲೂ ಸೌಹಾರ್ದತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಎಲ್ಲೆಡೆ ವಿವಿಧ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದರೂ, ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ವಿಭಿನ್ನ ಪ್ರಸಂಗ ಕಂಡುಬಂದಿದೆ. ಐತ್ತೂರು ಗ್ರಾಮದ ಮತಗಟ್ಟೆ ಸಮೀಪದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಒಂದೇ ಸ್ಥಳದಲ್ಲಿ ಬೂತ್ ಹಾಕಿದ್ದು, ಯಾವುದೇ ಪಕ್ಷ ಭೇದವಿಲ್ಲದೆ ಸೌಹಾರ್ದಯುತವಾಗಿ ಕುಳಿತಿರುವುದು ಕಂಡುಬಂದಿದೆ.

ಐತ್ತೂರು: ಕಾಂಗ್ರೆಸ್, ಬಿಜೆಪಿಗೆ ಒಟ್ಟಿಗೆ ಬೂತ್ ► ಚುನಾವಣೆಯಲ್ಲೂ ಸೌಹಾರ್ದತೆ Read More »

ಕರಾವಳಿ

ಇಂದು (ಮೇ.12) ರಾಜ್ಯ ವಿಧಾನಸಭಾ ಚುನಾವಣೆ ► ಸುಸೂತ್ರ ಮತದಾನಕ್ಕೆ ಸಕಲ‌ ಸಿದ್ಧತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.12. ಇಂದು ನಡೆಯಲಿರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಸುಸೂತ್ರವಾಗಿ ನಡೆಯಲು ಬೇಕಾದ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಶಾಂತಿ ಮತ್ತು ಸುಸೂತ್ರವಾಗಿ ನಡೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಜಿಲ್ಲೆಯ ಅತ್ಯಂತ ಸೂಕ್ಷ್ಮ ಮತಗಟ್ಟೆಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿರಿಸಿದೆ. ಜಿಲ್ಲೆಯ ವಿವಿಧೆಡೆ

ಇಂದು (ಮೇ.12) ರಾಜ್ಯ ವಿಧಾನಸಭಾ ಚುನಾವಣೆ ► ಸುಸೂತ್ರ ಮತದಾನಕ್ಕೆ ಸಕಲ‌ ಸಿದ್ಧತೆ Read More »

ಕರಾವಳಿ

ಬಲ್ಯ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮೇ.11. ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ರಬ್ಬರ್ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ಶುಕ್ರವಾರದಂದು ನಡೆದಿದೆ.   ಆತ್ಮಹತ್ಯೆ ಮಾಡಿಕೊಂಡವರನ್ನು ಬಲ್ಯ ಗ್ರಾಮದ ಮತ್ರಾಡಿ‌ ನಿವಾಸಿ ಅಬ್ರಹಾಂ(49) ಎಂದು ಗುರುತಿಸಲಾಗಿದೆ. ಮಾನಸಿಕ ಖನ್ನತೆಗೊಳಗಾಗಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಶೆರ್ಲಿ ಅಬ್ರಹಾಂ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಲ್ಯ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಕಡಬ: ಪಿಕಪ್ ಹರಿದು ವ್ಯಕ್ತಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮೇ.11. ಕಾಲಿನ ಮೇಲೆ ಪಿಕಪ್ ವಾಹನವೊಂದು ಚಲಿಸಿದ ಪರಿಣಾಮ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಕಡಬದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗಾಯಾಳುವನ್ನು ಕಡಬ ತಾಲೂಕಿನ ಕೋಡಿಂಬಾಳ ನಿವಾಸಿ ಸತೀಶ್ (30) ಎಂದು ಗುರುತಿಸಲಾಗಿದೆ. ಇವರು ರಸ್ತೆ ದಾಟುತ್ತಿದ್ದಾಗ ಪಿಕಪ್ ವಾಹನದ ಹಿಂಬದಿಯ ಚಕ್ರ ಇವರ ಕಾಲಿನ ಮೇಲೆ ಚಲಿಸಿದ್ದು, ಪರಿಣಾಮ ಕಾಲಿಗೆ ಗಾಯವಾಗಿದೆ. ಇವರಿಗೆ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ.

ಕಡಬ: ಪಿಕಪ್ ಹರಿದು ವ್ಯಕ್ತಿಗೆ ಗಾಯ Read More »

ಕರಾವಳಿ

ಅರ್ಕುಳ: ಬೈಕ್ – ಲಾರಿ ನಡುವೆ ಅಪಘಾತ ► ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಕಾರು ಚಲಿಸಿ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಫರಂಗಿಪೇಟೆ, ಮೇ.11. ಬೈಕ್‌ ಸವಾರನೋರ್ವನ ಮೇಲೆ ಕಾರು ಚಲಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅರ್ಕುಳ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಸವಾರನನ್ನು ಫರಂಗಿಪೇಟೆ ನಿವಾಸಿ ಉಮರ್ (52) ಎಂದು ಗುರುತಿಸಲಾಗಿದೆ. ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯ ತೀವ್ರತೆಗೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟರೆನ್ನಲಾಗಿದೆ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರು ಬೈಕ್ ಸವಾರನ ಮೇಲೆ ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡ

ಅರ್ಕುಳ: ಬೈಕ್ – ಲಾರಿ ನಡುವೆ ಅಪಘಾತ ► ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಕಾರು ಚಲಿಸಿ ಸವಾರ ಮೃತ್ಯು Read More »

ಕರಾವಳಿ

ಕುಂತೂರು: ಮುಂದಿನ ಚುನಾವಣೆಗೆ ಮುನ್ನ ರಸ್ತೆ ದುರಸ್ತಿಗೊಳಿಸದಿದ್ದಲ್ಲಿ ಸ್ಥಳೀಯರಿಂದ ಚುನಾವಣೆ ಬಹಿಷ್ಕಾರ

(ನ್ಯೂಸ್ ಕಡಬ) newskadaba.com ಕಡಬ,ಮೇ.11. ಕಡಬ ತಾಲೂಕಿನ ಕುಂತೂರಿನಿಂದ ಕುಂಟ್ಯಾನ- ಇಡಾಳ-ಕೆದ್ದೊಟ್ಟೆ ಮಾರ್ಗವಾಗಿ ಪದವಿಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಮುಂದಿನ ಲೋಕ ಸಭಾ ಚುನಾವಣೆಗೆ ಮುನ್ನ ದುರಸ್ಥಿಗೊಳಿಸದೇ ಇದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಈ ಮಾರ್ಗವನ್ನು ಅಭಿವೃದ್ಧಿ ಪಡಿಸುವಂತೆ ರಾಜಕೀಯ ಮುಖಂಡರಲ್ಲಿ ಬೇಡಿಕೆಯಿಡಲಾಗಿತ್ತು, ಆದರೆ ಯಾರೊಬ್ಬರೂ ಇದಕ್ಕೆ ಸ್ಪಂದಿಸಿರಲಿಲ್ಲ. ಇದೀಗ ಸಾಮಾಜಿಕ ಜಾಲತಾಣವನ್ನು ತಮ್ಮ ಆಯುಧವಾಗಿ ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ಥಳೀಯ ಯುವಕರು, ಘಟನೆಗೆ ಸಂಭಂದಿಸಿದಂತೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇದೀಗ ನಾವು

ಕುಂತೂರು: ಮುಂದಿನ ಚುನಾವಣೆಗೆ ಮುನ್ನ ರಸ್ತೆ ದುರಸ್ತಿಗೊಳಿಸದಿದ್ದಲ್ಲಿ ಸ್ಥಳೀಯರಿಂದ ಚುನಾವಣೆ ಬಹಿಷ್ಕಾರ Read More »

ಕರಾವಳಿ

ಕಟ್ಟಡ ನಿರ್ಮಾಣಕ್ಕೆಂದು ತೋಡಿದ ಪಾಯದ ಗುಂಡಿಯಲ್ಲಿ ನೀರು ಸಂಗ್ರಹ ► ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಮೇ.11. ಕಟ್ಟಡ ನಿರ್ಮಾಣಕ್ಕೆಂದು ತೆಗೆದಿಟ್ಟ ಪಾಯದಲ್ಲಿ ಮಳೆ ನೀರು ತುಂಬಿದ್ದು, ನಿಂತ ನೀರಲ್ಲಿ ಆಡಲೆಂದು ಇಳಿದ ಇಬ್ಬರು ಮಕ್ಕಳ ಪೈಕಿ ಒಂದು ಮಗು ಮೃತಪಟ್ಟ ಘಟನೆ ಗುರುವಾರ ಸಂಜೆ ಮಲ್ಪೆಯಲ್ಲಿ ನಡೆದಿದೆ. ಮೃತ ಮಗುವನ್ನು ಮಲ್ಪೆಯ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ನಿವಾಸಿ ಮಾಲಿನಿ ಎಂಬವರ ಮೂರುವರೆ ವರ್ಷ ಪ್ರಾಯದ ಪುತ್ರ ರಾಘವೇಂದ್ರ ಎಂದು ಗುರುತಿಸಲಾಗಿದೆ. ಅವರ ಸಹೋದರಿ ಪ್ರಫುಲ್ಲ ಎಂಬವರ ನಾಲ್ಕು ವರ್ಷ ಪ್ರಾಯದ ಪ್ರವೀಣ್ ನನ್ನು

ಕಟ್ಟಡ ನಿರ್ಮಾಣಕ್ಕೆಂದು ತೋಡಿದ ಪಾಯದ ಗುಂಡಿಯಲ್ಲಿ ನೀರು ಸಂಗ್ರಹ ► ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು Read More »

ಕರಾವಳಿ
Scroll to Top