ಕರಾವಳಿ

ನೆಲ್ಯಾಡಿ: ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾದ ಲಾರಿ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.24. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಎಂಬಲ್ಲಿ ಬೈಕಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಪಾಪಚ್ಚನ್(60) ಸ್ಥಳದಲ್ಲೇ ಮೃತಪಟ್ಟಿದ್ದು, ಢಿಕ್ಕಿ ಹೊಡೆದ ನಂತರ ಲಾರಿಯೊಂದಿಗೆ ಚಾಲಕ ಬೆಳ್ತಂಗಡಿ ನಿವಾಸಿ ರಮೇಶ್ ಪರಾರಿಯಾಗಿದ್ದು, ಸ್ಥಳೀಯರ ಮಾಹಿತಿಯಂತೆ ನೆಲ್ಯಾಡಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನನ್ನು ಹಿಡಿದಿಟ್ಟು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ […]

ನೆಲ್ಯಾಡಿ: ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾದ ಲಾರಿ ► ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಚುನಾವಣೆಗೆ ಮುಹೂರ್ತ ಫಿಕ್ಸ್ ► ಮೇ ಮೊದಲ ವಾರ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.24. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮೇ ಮೊದಲ ವಾರದಲ್ಲೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಕಳೆದ ಬಾರಿಗಿಂತ ಮೂರು ದಿನ ಮೊದಲೇ ಚುನಾವಣಾ ನಡೆಸಲು ಆಯೋಗ ಎಲ್ಲಾ ರೀತಿಯ ತಯಾರಿ ನಡೆಸಿದ್ದು, ಮೇ 2, 2018ರಂದು ಚುನಾವಣೆ ನಡೆಯುವ ಸಾಧ್ಯತೆಯಿದೆ. ಏಪ್ರಿಲ್ ಅಂತ್ಯದೊಳಗೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಸೂಚನೆಯನ್ನು ಕೊಟ್ಟಿದೆ. 2018, ಮೇ 28ಕ್ಕೆ ರಾಜ್ಯ ಸರ್ಕಾರದ ಆಡಳಿತ ಅವಧಿ ಅಂತ್ಯವಾಗಲಿದ್ದು, ಅದಕ್ಕೂ ಮೊದಲೇ ಚುನಾವಣಾ

ಚುನಾವಣೆಗೆ ಮುಹೂರ್ತ ಫಿಕ್ಸ್ ► ಮೇ ಮೊದಲ ವಾರ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ Read More »

ಕರಾವಳಿ

ಮಕ್ಕಾ ಮಸೀದಿಯ ಅವಹೇಳನ ಪ್ರಕರಣ ► ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಡಬದಲ್ಲಿ ಮೌನ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.24. ತನ್ನ ವಾಟ್ಸಪ್ ಪ್ರೋಫೈಲ್ನಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾ ಮಸೀದಿಯ ಕಅಬಾ ಶರೀಫಿನ ಚಿತ್ರದ ಮೇಲೆ ಹಿಂದೂ ದೇವರಾದ ಆಂಜನೇಯನ ವಿಗ್ರಹವನ್ನು ಚಿತ್ರಿಸಿ ಮುಸ್ಲಿಂ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರದಂದು ಕಡಬದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಮೌನ ಪ್ರತಿಭಟನೆ ನಡೆಯಿತು.   ಗಂಡಿಬಾಗಿಲು ಕುತುಬಿಯ್ಯಾ ಜುಮಾ ಮಸೀದಿಯ ಸಯ್ಯದ್ ಅನಸ್ ತಂಙಳ್ ರವರ ದುಃವಾದೊಂದಿಗೆ ಕಡಬ ಬಾಜಿನಡಿ ಗೈಬಾನ್ ಷಾ ದರ್ಗಾ ಶರೀಫ್ ವಠಾರದಿಂದ

ಮಕ್ಕಾ ಮಸೀದಿಯ ಅವಹೇಳನ ಪ್ರಕರಣ ► ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಡಬದಲ್ಲಿ ಮೌನ ಪ್ರತಿಭಟನೆ Read More »

ಕರಾವಳಿ

ಬೆನ್ನಿದ ಕಂಡೊಡ್ ನಮ್ಮ ಜವನೆರ್ ತುಳು ಕ್ರೀಡಾಕೂಟ ► ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.24. ನೂಜಿಬಾಳ್ತಿಲ-ರೆಂಜಿಲಾಡಿ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ನೂಜಿಬೈಲ್ ತೆಗ್ರ್ ತುಳುಕೂಟೊ ವತಿಯಿಂದ ದೀಪಾವಳಿ ಪ್ರ್ರಯುಕ್ತ ದಿ.ಜಿನ್ನಪ್ಪ ಗೌಡ ಮಾರಪ್ಪೆ ಸ್ಮರಣಾರ್ಥ ನಡೆದ ಬೆನ್ನಿದ ಕಂಡೊಡ್ ನಮ್ಮ ಜವನೆರ್ ತುಳು ಕ್ರೀಡಾಕೂಟದ ಸಮಾರೋಪ ಸಮಾರಂಭ ಆದಿತ್ಯವಾರ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ನ್ಯಾಯವಾದಿ ದುರ್ಗಾಪ್ರಸಾದ್ ಕುಂಬ್ರ  ಮಾತನಾಡಿ ನಮ್ಮ ತುಳುನಾಡಿನ ಆಚಾರ ವಿಚಾರ, ಜಾನಪದ ಕ್ರೀಡೆಗಳು ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನಾಂಗ

ಬೆನ್ನಿದ ಕಂಡೊಡ್ ನಮ್ಮ ಜವನೆರ್ ತುಳು ಕ್ರೀಡಾಕೂಟ ► ಸಮಾರೋಪ ಸಮಾರಂಭ Read More »

ಕರಾವಳಿ

► ಪುತ್ತೂರು: ನೇಣುಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.23. ಇಲ್ಲಿನ ಪೊಲೀಸ್ ಠಾಣಾ ಸಮೀಪದಲ್ಲಿರುವ ಎಸ್‌ಕೆಪಿ ತರಬೇತಿ ಸಂಸ್ಥೆಯ ಮುಖ್ಯಸ್ಥ ಬೊಳುವಾರು ಪ್ರಭಾಕರ ಆಚಾರ್ಯರವರ ಪುತ್ರ ಸುದೇಶ ಕೆ.ಪಿ. ಎಂಬವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದೆ. ಸುದೇಶ್ ಕುಮಾರ್ ತರಬೇತಿಗೆಂದು ಭಾನುವಾರದಂದು ಹಾಸನಕ್ಕೆ ತೆರಳಿ ಇಂದು ಬೆಳಿಗ್ಗೆ ಮನೆಗೆ ಹಿಂತಿರುಗಿ ಮನೆಯ ಕೊಠಡಿಯಲ್ಲಿ ಮಲಗಿದ್ದರೆನ್ನಲಾಗಿದೆ. ಮಧ್ಯಾಹ್ನ ವೇಳೆ ಅವರ ತಾಯಿ ಊಟ ಮಾಡಲೆಂದು ಹಲವು ಬಾರಿ ಕರೆದರೂ ಅವರು ಬಾಗಿಲು ತೆರೆದಿರಲಿಲ್ಲ. ಇದರಿಂದ

► ಪುತ್ತೂರು: ನೇಣುಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ

ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಜಿರಳೆ ಹಾಕಿದ್ದ ಪ್ರಕರಣ ► ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.23. ಕಳೆದ ಎರಡು ದಿನಗಳಿಂದ ಭಾರೀ ಸುದ್ದಿಯಾಗಿದ್ದ ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಲೆ ಸಿಕ್ಕ ಆರೋಪ ಶುದ್ಧ ಸುಳ್ಳು ಎಂಬುದು ಇದೀಗ ಬಹಿರಂಗವಾಗಿದೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿನ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಬಳಿಕ ಆರೋಪಿಗಳೇ ಉದ್ದೇಶಪೂರ್ವಕವಾಗಿ ಆಹಾರದಲ್ಲಿ ಜಿರಳೆ ಹಾಕಿರುವುದು ಕಂಡು ಬಂದಿದೆ. ಆಟೋ ಡ್ರೈವರ್ ಆಗಿರುವ ಹೇಮಂತ್ ಮತ್ತು ದೇವರಾಜ್ ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯದ ನಿವಾಸಿಗಳಾದ ಈ ಇಬ್ಬರೂ ಪ್ರಚಾರಕ್ಕಾಗಿ ಉಪಹಾರದಲ್ಲಿ

ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಜಿರಳೆ ಹಾಕಿದ್ದ ಪ್ರಕರಣ ► ಇಬ್ಬರು ಪೊಲೀಸ್ ವಶಕ್ಕೆ Read More »

ಕರಾವಳಿ

ಮರಳು ನೀತಿ ಸರಳೀಕರಣಗೊಳಿಸಿ ಸರಕಾರದಿಂದ ಆದೇಶ ► ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್

(ನ್ಯೂಸ್ ಕಡಬ) newskadaba.com ಕಡಬ, ಅ.23. ಕರಾವಳಿ ಜಿಲ್ಲೆಗಳ ಸಿ.ಆರ್.ಝೆಡ್ ಹೊರತುಪಡಿಸಿದ ಪ್ರದೇಶಗಳಲ್ಲಿ ನದಿ ಪಾತ್ರದಲ್ಲಿ ಮರಳು ತೆಗೆಯುವ ನೀತಿಯನ್ನು ಸರಕಾರ ಸರಳಿಕರಿಸಿ ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿದೆ ಎಂದು ಕಡಬ ತಹಶೀಲ್ದಾರ ಜಾನ್ ಪ್ರಕಾಶ್ ರೋಡ್ರಿಗಸ್ ತಿಳಿಸಿದ್ದಾರೆ. ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿಗಳನ್ನು ಗುರುತಿಸಲು ಸಂಬಂದಪಟ್ಟವರಿಂದ ಅಗತ್ಯ ದಾಖಲೆಗಳೊಂದಿಗೆ ಅಜರ್ಿಗಳನ್ನು ಸ್ವೀಕರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿಗಳು ಸ್ಥಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ವರ್ಷದಿಂದ ವಾಸವಾಗಿರಬೇಕು. ಈ ಬಗ್ಗೆ

ಮರಳು ನೀತಿ ಸರಳೀಕರಣಗೊಳಿಸಿ ಸರಕಾರದಿಂದ ಆದೇಶ ► ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ Read More »

ಕರಾವಳಿ

ಇಸ್ಲಾಂ ಧಾರ್ಮಿಕ ಭಾವನೆಗೆ ನಿಂದನೆ ಆರೋಪಿಯನ್ನು ಬಂಧಿಸುವಂತೆ ಆಗ್ರಹ ► ನಾಳೆ ಪ್ರತಿಭಟನೆ: ಕಡಬ ಬಂದ್ ಗೆ ಕರೆ, ವರ್ತಕರಲ್ಲಿ ಮನವಿ

(ನ್ಯೂಸ್) newskadaba.com ಕಡಬ, ಅ.23. ಮಕ್ಕಾದ ಕಅಬಾ ಶರೀಫ್ ಚಿತ್ರದ ಮೇಲೆ ಹಿಂದೂ ದೇವರ ಚಿತ್ರವನ್ನು ಹಾಕಿಕೊಂಡು ತನ್ನ ವಾಟ್ಸಪ್ ಪ್ರೊಫೈಲ್ ಫೊಟೊವನ್ನಾಗಿಸಿಕೊಂಡ ಕಡಬದ ಯುವಕನ ವಿರುದ್ದ ಕಡಬ ಠಾಣೆಗೆ ದೂರು ನೀಡಿದ್ದರೂ ಆರೋಪಿಯ ಬಂಧನವಾಗದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಡಬ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಕಡಬದಲ್ಲಿ ಅ.24 ರಂದು ಶಾಂತಿಯುತ ಮೆರವಣಿಗೆ ನಡೆಸಿ ಕಡಬ ತಹಶೀಲ್ದಾರರ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಕಡಬ ಅಡ್ಡಗದ್ದೆ

ಇಸ್ಲಾಂ ಧಾರ್ಮಿಕ ಭಾವನೆಗೆ ನಿಂದನೆ ಆರೋಪಿಯನ್ನು ಬಂಧಿಸುವಂತೆ ಆಗ್ರಹ ► ನಾಳೆ ಪ್ರತಿಭಟನೆ: ಕಡಬ ಬಂದ್ ಗೆ ಕರೆ, ವರ್ತಕರಲ್ಲಿ ಮನವಿ Read More »

ಕರಾವಳಿ

ಕೋಡಿಂಬಾಳ ಶ್ರೀ ರಾಮ ಭಜನಾ ಮಂದಿರದಲ್ಲಿ ಸಾಮೂಹಿಕ ಗೋಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಅ.6. ವಿಶ್ವಹಿಂದೂ ಪರಿಷದ್, ಬಜರಂಗದಳದ ವತಿಯಿಂದ ಕೋಡಿಂಬಾಳ ಶ್ರೀ ರಾಮ ಭಜನಾ ಮಂದಿರದಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು. ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ತೀರ್ಥೆಶ್ ಪಡೆಜ್ಜಾರು ಮಾತನಾಡಿದರು. ಈ ಸಂದರ್ಭ ಪ್ರಮುಖರಾದ ಮಂಜುನಾಥ ನವಸುಮ, ಪ್ರಶಾಂತ್ ರೈ, ವಿನಯ ಕೋಲ್ಪೆ ಮೊದಲಾದವರು ಇದ್ದರು.

ಕೋಡಿಂಬಾಳ ಶ್ರೀ ರಾಮ ಭಜನಾ ಮಂದಿರದಲ್ಲಿ ಸಾಮೂಹಿಕ ಗೋಪೂಜೆ Read More »

ಕರಾವಳಿ

ಕಡಬ ಅಂಗಡಿ ಮನೆ ಕಾಲೋನಿ ► ಸಾಮೂಹಿಕ ಗೋಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಅ.23. ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಅಂಗಡಿ ಮನೆ ಕಾಲೋನಿಯಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು. ಅಂಗಡಿ ಮನೆ ಕಾಲೋನಿ ಮಹಿಳೆಯರು ಪೂಜೆಯನ್ನು ನೆರವೇರಿಸಿದರು. ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಗೋಪೂಜೆ ಮಹತ್ವದ ಬಗ್ಗೆ ತಿಳಿಸಿದರು. ಈ ಸಂದರ್ಭ ಹಿಂಜಾವೇ ಮುಖಂಡ ರವಿರಾಜ್ ಶೆಟ್ಟಿ, ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ವಿಶ್ವಹಿಂದೂ ಪರಿಷದ್ ಮುಖಂಡ ಜನಾರ್ದನ ರಾವ್, ಬಜರಂಗದಳ ಮುಖಂಡರಾದ

ಕಡಬ ಅಂಗಡಿ ಮನೆ ಕಾಲೋನಿ ► ಸಾಮೂಹಿಕ ಗೋಪೂಜೆ Read More »

ಕರಾವಳಿ
Scroll to Top