ಕರಾವಳಿ

ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ: ಶಕುಂತಲಾ ಶೆಟ್ಟಿ ► ಬಿಜೆಪಿ ಸೇರಲಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಶಕುಂತಲಾ ಶೆಟ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.26. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ನಾನು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಪುತ್ತೂರು ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರಿ ಶಾಸಕಿಯಾಗಿರುವ ಶಕುಂತಲಾ ಶೆಟ್ಟಿಯವರು ಪುನಃ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರಿದ್ದು, ಪಕ್ಷ ಬಿಡುವ ಪ್ರಶ್ನೆಯೇ […]

ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ: ಶಕುಂತಲಾ ಶೆಟ್ಟಿ ► ಬಿಜೆಪಿ ಸೇರಲಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಶಕುಂತಲಾ ಶೆಟ್ಟಿ Read More »

ಕರಾವಳಿ

ಇದು ಜೀವರಕ್ಷಕವೋ…? ಯಮದೂತವೋ…? ► ಅನಾಹುತವನ್ನು ಆಹ್ವಾನಿಸುತ್ತಿರುವ ಕಡಬದ 108 ಆಂಬ್ಯುಲೆನ್ಸ್

(ನ್ಯೂಸ್ ಕಡಬ) newskadaba.com ಕಡಬ, ಅ.25. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಜನರ ಜೀವರಕ್ಷಣೆಗೆಂದು ಸರಕಾರದಿಂದ ನಿಯೋಜಿತವಾಗಿರುವ 108 ಆಂಬ್ಯುಲೆನ್ಸ್ ವಾಹನವು ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಯಮದೂತವಾಗಿ ಪರಿಣಮಿಸುತ್ತಿದೆಯಾ…??   ಹೌದು… ಹೀಗೊಂದು ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ವಾಹನದಲ್ಲಿ ಅಗತ್ಯವಾಗಿ ಇರಬೇಕಾಗಿದ್ದ ಚಕ್ರಗಳೇ ಸರಿಯಿಲ್ಲದಿದ್ದರೆ ಹೇಗೆ….? ಕಡಬ ಪರಿಸರದಲ್ಲಿ ತುರ್ತು ಸಂದರ್ಭಕ್ಕೆಂದು ಕೊಡಮಾಡಿರುವ 108 ಆಂಬ್ಯುಲೆನ್ಸ್ ವಾಹನದ ಹಿಂಭಾಗದ ಎರಡೂ ಚಕ್ರಗಳು ಸವೆದಿದ್ದು ಈಗಲೋ ಆಗಲೋ ಒಡೆಯುವ ಸ್ಥಿತಿಯಲ್ಲಿದೆ. ಚಕ್ರಗಳು ಪೂರ್ತಿ ಸವೆದು ಒಳಗಿನ ತಂತಿಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಇದು ಜೀವರಕ್ಷಕವೋ…? ಯಮದೂತವೋ…? ► ಅನಾಹುತವನ್ನು ಆಹ್ವಾನಿಸುತ್ತಿರುವ ಕಡಬದ 108 ಆಂಬ್ಯುಲೆನ್ಸ್ Read More »

ಕರಾವಳಿ

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ► ಪಟ್ಟಾಭಿಷೇಕದ ಸುವರ್ಣ ಮಹೋತ್ಸವ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಅ.25. ಸೇವೆ ಎನ್ನುವುದು ಜೀವನದಲ್ಲಿ ಮುಖ್ಯವಾದುದು. ಅದರಲ್ಲೂ ಉತ್ತಮ ಸೇವೆ ಎನ್ನುವುದು ಎಲ್ಲದಕ್ಕಿಂತ ಮುಖ್ಯವಾಗುತ್ತದೆ. ಅಂತಹ ಉತ್ತಮ ಸಮಾಜ ಸೇವೆಯಿಂದಾಗಿ ಇಂದು ವೀರೇಂದ್ರ ಹೆಗ್ಗಡೆಯವರನ್ನು ಎಲ್ಲೆಡೆ ಗುರುತಿಸುವಂತಾಗಿದೆ ಎಂದು ಮೈಸೂರು ಅರಮನೆಯ ಮಹಾರಾಜರಾದ ಯದುವೀರದತ್ತ ಒಡೆಯರ್‌ ಅವರು ಹೇಳಿದರು. ಅವರು ಮಂಗಳವಾರ ರಾತ್ರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಅಂಗವಾಗಿ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದರು. ಶುಚಿತ್ವದಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ► ಪಟ್ಟಾಭಿಷೇಕದ ಸುವರ್ಣ ಮಹೋತ್ಸವ Read More »

ಕರಾವಳಿ

100 ಸಿಸಿಯ ಲಿಸ್ಟಲ್ಲಿ ನಿಮ್ಮ ವಾಹನ ರಿಜಿಸ್ಟರ್ ಆಗಿದೆಯೇ..??? ►ನಿಮಗೆ ಈ ಆದೇಶ ಅನ್ವಯಿಸುತ್ತಾ ತಿಳಿದುಕೊಳ್ಳಿ..!!!

(ನ್ಯೂಸ್ ಕಡಬ) newskadaba.com ಕಡಬ, ಅ.25. 100 ಸಿಸಿ.ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವುಳ್ಳ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವುದನ್ನು ನಿಷೇಧಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ರಾಜ್ಯ ಸರಕಾರ ಈ ಆದೇಶ ಹೊರಡಿಸಿದ್ದು , ಇನ್ನು ಮುಂದೆ ಯಾವುದೇ 100 ಸಿಸಿಗಿಂತ ಕಡಿಮೆ ಇರುವ ವಾಹನಗಳ ನೊಂದಣಿಯನ್ನು ರದ್ದುಪಡಿಸಿದೆ. ಆದರೆ 100 ಸಿಸಿ ಗಿಂತ ಕಡಿಮೆ ಇರುವ ವಾಹನಗಳು ಒಂದು ಸೀಟ್ ಆಳವಡಿಸಿಕೊಂಡು ವಾಹನದ ಸಾಮರ್ಥ್ಯ ಒಂದು ಸೀಟು ಎಂದು ನಮೂದಿಸಿ ವಾಹನವನ್ನು ನೊಂದಣಿ

100 ಸಿಸಿಯ ಲಿಸ್ಟಲ್ಲಿ ನಿಮ್ಮ ವಾಹನ ರಿಜಿಸ್ಟರ್ ಆಗಿದೆಯೇ..??? ►ನಿಮಗೆ ಈ ಆದೇಶ ಅನ್ವಯಿಸುತ್ತಾ ತಿಳಿದುಕೊಳ್ಳಿ..!!! Read More »

ಕರಾವಳಿ

ಕಡಬದಲ್ಲಿ ನಸೀಬ್ ಬೋರ್ವೆಲ್ಸ್‌ ಮತ್ತು ಅರ್ಥ್ ಮೂವರ್ಸ್‌ ಶಾಖಾ ಕಚೇರಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.25. ಇಲ್ಲಿನ ಹೃದಯ ಭಾಗದಲ್ಲಿರುವ ರಾಯಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡ ನಸೀಬ್ ಬೋರ್ವೆಲ್ ಮತ್ತು ಅರ್ಥ್ ಮೂವರ್ಸ್‌ ಶಾಖಾ ಕಚೇರಿಯನ್ನು ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಮುದರ್ರಿಸ್ ಎಸ್.ಬಿ ಮೊಹಮ್ಮದ್ ದಾರಿಮಿಯವರು ಸೋಮವಾರ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಜನರೊಂದಿಗೆ ಪ್ರಾಮಾಣಿಕತೆಯಿಂದ ವರ್ತಿಸಿ ವ್ಯಾಪಾರದಲ್ಲಿ ಬಂದ ಲಾಭದಲ್ಲಿ 1 ಅಂಶ ಜನರ ಒಳಿತಿಗಾಗಿ ವಿನಿಯೋಗಿಸಿ ಸೇವೆಗೈಯುವುದೇ ಸಮಾಜ ಸೇವೆ ಎಂದರು. ಹಿಂದು ಸಂಪ್ರದಾಯದಲ್ಲಿ ಸರ್ವೇ ಜನೋ ಸುಖಿನೋ ಭವಂತು ಎಂದು ಸಾರಿದರೆ ಇಸ್ಲಾಂ ಧರ್ಮದಲ್ಲಿ ಸತ್ಯ

ಕಡಬದಲ್ಲಿ ನಸೀಬ್ ಬೋರ್ವೆಲ್ಸ್‌ ಮತ್ತು ಅರ್ಥ್ ಮೂವರ್ಸ್‌ ಶಾಖಾ ಕಚೇರಿ ಉದ್ಘಾಟನೆ Read More »

ಕರಾವಳಿ

ಮಂಗಳೂರು: ನವೆಂಬರ್ 14 ರಿಂದ 18 ರವರೆಗೆ “ಪ್ರೇರಣಾ”ವಿಜ್ಞಾನ ವಿಷಯದ ಶಿಬಿರ ► ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಿ..

(ನ್ಯೂಸ್ ಕಡಬ) newskadaba.com ಮ0ಗಳೂರು, ಅ.25.(ಕರ್ನಾಟಕ ವಾರ್ತೆ): ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ “ಪ್ರೇರಣಾ” ವಿಜ್ಞಾನ ವಿಷಯದಲ್ಲಿ ಶಿಬಿರ(ವಸತಿ ಸಹಿತ)ವನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ  ಮೈಕ್ರೋಬಯಲಾಜಿ ವಿಭಾಗವು “ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಹೊಸದಿಲ್ಲಿ” ಇದರ ಪ್ರಾಯೋಜಕತ್ವದಲ್ಲಿ ನವೆಂಬರ್ 14 ರಿಂದ 18 ರ ವರೆಗೆ “ಪಿಲಿಕುಳ ವಿಜ್ಞಾನ ಕೆಂದ್ರ” ಮಂಗಳೂರು ಇಲ್ಲಿ  ನಡೆಸಲಿದೆ. ಈ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಹಾಗೂ 200 ವಿದ್ಯಾರ್ಥಿಗಳಿಗೆ ಭಾಗವಹಿಸಲು

ಮಂಗಳೂರು: ನವೆಂಬರ್ 14 ರಿಂದ 18 ರವರೆಗೆ “ಪ್ರೇರಣಾ”ವಿಜ್ಞಾನ ವಿಷಯದ ಶಿಬಿರ ► ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಿ.. Read More »

ಕರಾವಳಿ

ಅಕ್ಟೋಬರ್ 29ಕ್ಕೆ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ► ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ನಳಿನ್ ಕುಮಾರ್ ಕಟೀಲ್ ಪರಿಶೀಲನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.25. ಅಕ್ಟೋಬರ್ 29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನಲೆಯಲ್ಲಿ ಧರ್ಮಸ್ಥಳದಲ್ಲಿ ಪ್ರಧಾನಿ ಅವರ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಭೆ ನಡೆಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಭೇಟಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಭೇಟಿ ಬೆಂಗಳೂರಿನಿಂದ ವಿಶೇಷ

ಅಕ್ಟೋಬರ್ 29ಕ್ಕೆ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ► ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ನಳಿನ್ ಕುಮಾರ್ ಕಟೀಲ್ ಪರಿಶೀಲನೆ Read More »

ಕರಾವಳಿ

ಪುತ್ತೂರು: ಡಿವೈಡರ್ ಗೆ ಢಿಕ್ಕಿ ಹೊಡೆದ ಹೋಂಡಾ ಆಕ್ಟಿವಾ ► ಕಾಲೇಜು ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.25. ಹೋಂಡಾ ಆಕ್ಟಿವಾ ವಾಹನವೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಪುತ್ತೂರು ದರ್ಬೆ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಸಹ್ಯಾದ್ರಿ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪುತ್ತೂರು ಸಿಟಿ ಬಝಾರ್ ಮಾಲಕ ಕೂರ್ನಡ್ಕ ನಿವಾಸಿ ಹಸೈನಾರ್ ಹಾಜಿ ಎಂಬವರ ಪುತ್ರಿ ಸಮ್ರೀನಾ ಎಂದು ಗುರುತಿಸಲಾಗಿದೆ. ಈಕೆ ಆಕ್ಟಿವಾದಲ್ಲಿ ತೆರಳುತ್ತಿರುವಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದ್ದು,

ಪುತ್ತೂರು: ಡಿವೈಡರ್ ಗೆ ಢಿಕ್ಕಿ ಹೊಡೆದ ಹೋಂಡಾ ಆಕ್ಟಿವಾ ► ಕಾಲೇಜು ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ

ಬಿಳಿನೆಲೆ, ಕುಲ್ಕುಂದ ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ► ಕಾಣಿಕೆ ಹುಂಡಿ, ಮೊಬೈಲ್ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಕಡಬ, ಅ.24. ಠಾಣಾ ವ್ಯಾಪ್ತಿಯ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಒಳ ನುಗ್ಗಿರುವ ಕಳ್ಳರು ಮುಖ್ಯದ್ವಾರದ ಬೀಗವನ್ನು ಮುರಿದು ಒಳ‌ಪ್ರವೇಶಿಸಿ ನಮಸ್ಕಾರ ಮಂಟಪದ ಬದಿಯಲ್ಲಿದ್ದ 2 ಕಾಣಿಕೆ ಡಬ್ಬಿ ಹಾಗೂ ಗಣಪತಿ ಗುಡಿಯ ಕಾಣಿಕೆ ಡಬ್ಬಿ ಸೇರಿದಂತೆ ಒಟ್ಟು ಮೂರು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 12000 ಹಾಗೂ ಒಂದು ಮೈಕ್ರೋಮ್ಯಾಕ್ಸ್ ಮೊಬೈಲನ್ನು ಕದ್ದೊಯ್ದಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಸೋಮವಾರ ಸಂಜೆ ಅರ್ಚಕರು ಎಂದಿನಂತೆ ಬೀಗ ಹಾಕಿ ಹೋಗಿದ್ದು, ಮಂಗಳವಾರ ಬೆಳಿಗ್ಗೆ ಆಗಮಿಸಿದಾಗ

ಬಿಳಿನೆಲೆ, ಕುಲ್ಕುಂದ ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ► ಕಾಣಿಕೆ ಹುಂಡಿ, ಮೊಬೈಲ್ ಕಳ್ಳರ ಪಾಲು Read More »

ಕರಾವಳಿ

ಮಕ್ಕಾ ಮಸೀದಿ ಅವಹೇಳನ ಪ್ರಕರಣ ► ಆರೋಪಿ ಕಡಬ ಠಾಣೆಗೆ ಶರಣಾಗತಿ

(ನ್ಯೂಸ್ ಕಡಬ) newskadaba.com ಕಡಬ, ಅ.24. ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಮುಸ್ಲಿಂ ಧರ್ಮವನ್ನು ಅವಹೇಳನ ಪ್ರಕರಣದ ಆರೋಪಿ ಕಡಬದ ಪ್ರದೀಪ್ ಕಡಬ ಠಾಣೆಗೆ ಶರಣಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪ್ರದೀಪ್ ಕಾಬಾದ ಫೊಟೋವನ್ನು ತಿರುಚಿ ತನ್ನ ವಾಟ್ಸಪ್ ಪ್ರೊಫೈಲ್ ಫೊಟೊವನ್ನಾಗಿ ಉಪಯೋಗಿಸಿ ಮಕ್ಕಾವನ್ನು ಅವಮಾನಿಸುವ ಕೃತ್ಯವನ್ನು ಮಾಡಿದ್ದಲ್ಲದೆ ಮುಸ್ಲಿಮರ ಭಾವನೆಯನ್ನು ಕೆರಳಿಸುವಂತಹ ಹೀನಕೃತ್ಯವನ್ನು ಎಸಗಲಾಗಿದೆ. ಈತನನ್ನು ಬಂಧಿಸಬೇಕೆಂದು ಬಂಧಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮೌನ ಪ್ರತಿಭಟನೆ ನಡೆಸಲಾಗಿತ್ತು.

ಮಕ್ಕಾ ಮಸೀದಿ ಅವಹೇಳನ ಪ್ರಕರಣ ► ಆರೋಪಿ ಕಡಬ ಠಾಣೆಗೆ ಶರಣಾಗತಿ Read More »

ಕರಾವಳಿ
Scroll to Top