ಕರಾವಳಿ

ಕಡಬ: ರಿಕ್ಷಾ ಚಾಲಕನ ಇರಿದು ಕೊಲೆ ಯತ್ನ ► ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಮೇ.13. ರಿಕ್ಷಾ ಚಾಲಕನೋರ್ವನಿಗೆ ತಂಡವೊಂದು ಬರ್ಬರವಾಗಿ ಇರಿದು ಪರಾರಿಯಾದ ಘಟನೆ ಇಲ್ಲಿನ ನೆಕ್ಕಿತ್ತಡ್ಕ ಎಂಬಲ್ಲಿ ಭಾನುವಾರ ಅಪರಾಹ್ನ ನಡೆದಿದೆ. ಇರಿತಕ್ಕೊಳಗಾದ ರಿಕ್ಷಾ ಚಾಲಕನನ್ನು ಮರ್ಧಾಳ ನಿವಾಸಿ ಉಮೇಶ್ ಎಂದು ಗುರುತಿಸಲಾಗಿದೆ. ಈತ ಕಡಬದಿಂದ ಮರ್ಧಾಳ ಕಡೆಗೆ ತನ್ನ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಜಿನಡಿ ಕ್ರಾಸ್ ಎಂಬಲ್ಲಿ ಕೆಂಪು ಕಾರಿನಲ್ಲಿ ಬಂದ ತಂಡವೊಂದು ರಿಕ್ಷಾವನ್ನು ಅಡ್ಡಗಟ್ಟಿದ್ದು, ಅವರಿಂದ ಸುಮಾರು 200 ಮೋಟರ್ ದೂರ‌ ಓಡಿ ತಪ್ಪಿಸಿಕೊಂಡನಾದರೂ ನೆಕ್ಕಿತ್ತಡ್ಕ ದರ್ಗಾ ಬಳಿ ತಂಡವೊಂದು ಹಿಗ್ಗಾಮುಗ್ಗಾ ಇರಿದಿದು […]

ಕಡಬ: ರಿಕ್ಷಾ ಚಾಲಕನ ಇರಿದು ಕೊಲೆ ಯತ್ನ ► ಚಾಲಕ ಗಂಭೀರ Read More »

ಕರಾವಳಿ

ಸುಳ್ಯ ವಿಧಾನಸಭಾ ಚುನಾವಣೆ ► ಗುತ್ತಿಗಾರಿನಲ್ಲಿ ಗರಿಷ್ಠ 93% ಹಾಗೂ ನೂಜಿಬಾಳ್ತಿಲದಲ್ಲಿ ಕನಿಷ್ಠ 61% ಮತದಾನ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.13. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯು ಸುಸೂತ್ರವಾಗಿ ನಡೆದಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರಿನಲ್ಲಿ ಗರಿಷ್ಟ ಹಾಗೂ ನೂಜಿಬಾಳ್ತಿಲದಲ್ಲಿ ಕನಿಷ್ಟ ಮತದಾನವಾಗಿದೆ. ಗುತ್ತಿಗಾರಿನ ಬಳ್ಳಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 120 ರಲ್ಲಿ 93 ಶೇಕಡಾ ಗರಿಷ್ಠ ಮತದಾನವಾಗಿದ್ದು, ನೂಜಿಬಾಳ್ತಿಲ ಗ್ರಾಮದ ಮತಗಟ್ಟೆ ಸಂಖ್ಯೆ 32 ರಲ್ಲಿ 61% ಕನಿಷ್ಠ ಮತದಾನವಾಗಿದೆ. ಇನ್ನುಳಿದ ಮತಗಟ್ಟೆಗಳಲ್ಲಿ ಎಂದಿನಂತೆ ಮತದಾನವಾಗಿದೆ.

ಸುಳ್ಯ ವಿಧಾನಸಭಾ ಚುನಾವಣೆ ► ಗುತ್ತಿಗಾರಿನಲ್ಲಿ ಗರಿಷ್ಠ 93% ಹಾಗೂ ನೂಜಿಬಾಳ್ತಿಲದಲ್ಲಿ ಕನಿಷ್ಠ 61% ಮತದಾನ Read More »

ಕರಾವಳಿ

ಕಡಬ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ – ಮಳೆ ​► ಅಪಾರ ಪ್ರಮಾಣದ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಡಬ ಪರಿಸರದಲ್ಲಿ ಹಲವರ ಕೃಷಿ ನಾಶಗೊಂಡಿದ್ದು, ಕೆಲವು ಮನೆಗಳಿಗೆ ಹಾನಿಯಾಗಿವೆ. ಇಲ್ಲಿನ ಬಂಟ್ರ ಗ್ರಾಮದ ರಾತ್ರಿ ಬೀಸಿದ ಭಾರೀ ಗಾಳಿಗೆ ಐಸಮ್ಮ ಹಾಗೂ ಫೌಝಿಯಾ ಎಂಬವರ ಮನೆಯ ಶೀಟುಗಳು ಹಾರಿ ಹೋಗಿದ್ದು, ಮಳೆ ನೀರೆಲ್ಲ ಮನೆಯೊಳಗಡೆ ಸುರಿದಿದೆ. ರಾಧಾಕೃಷ್ಣ ಕೊಲ್ಲೆಸಾಗು ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದ್ದು, 30 ಕ್ಕೂ ಅಧಿಕ ರಬ್ಬರ್ ಮರಗಳು ನೆಲಕ್ಕುರುಳಿವೆ. ಹರೀಶ್ ಕೊಲ್ಲೆಸಾಗು ಎಂಬವರ

ಕಡಬ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ – ಮಳೆ ​► ಅಪಾರ ಪ್ರಮಾಣದ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಕಡಬ: ರಸ್ತೆ ದುರಸ್ತಿಯಾಗದ ಹಿನ್ನೆಲೆಯಲ್ಲಿ 140 ಜನರಿಂದ ಮತದಾನ ಬಹಿಷ್ಕರಿಸಿ ಶ್ರಮದಾನ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು-ಮಂಜೋಳಿಮಳೆ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ಇರುವುದರಿಂದ ಈ ರಸ್ತೆ  ಸಂಚಾರಕ್ಕೆ ತೊಂದರೆಯಾಗಿದ್ದು ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಅಲ್ಲಿನ ಸುಮಾರು 140 ರಷ್ಟು ನಾಗರಿಕರು ಚುನಾವಣೆ ಬಹಿಷ್ಕರಿಸಿ ರಸ್ತೆಯನ್ನು ಶ್ರಮದಾನ ಮಾಡಿದ ಘಟನೆ ನಡೆದಿದೆ. ಶ್ರಮದಾನದ ನೇತೃತ್ವ ವಹಿಸಿದ್ದ ಗ್ರಾ.ಪಂ.ಮಾಜಿ ಸದಸ್ಯ ಶ್ರೀಧರ ಕಂಪ ಹೇಳಿಕೆ ನೀಡಿ, ಬದಿಬಾಗಿಲು – ಮಂಜೋಳಿಮಳೆ ರಸ್ತೆಯಲ್ಲಿ ದಿನನಿತ್ಯ ನೂರಾರು ಜನ

ಕಡಬ: ರಸ್ತೆ ದುರಸ್ತಿಯಾಗದ ಹಿನ್ನೆಲೆಯಲ್ಲಿ 140 ಜನರಿಂದ ಮತದಾನ ಬಹಿಷ್ಕರಿಸಿ ಶ್ರಮದಾನ Read More »

ಕರಾವಳಿ

ಬೆಳ್ತಂಗಡಿ: ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಗೆ ಹೃದಯಾಘಾತ ​► ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.12. ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಅಂಡಿಜೆ ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಜಾರಿಗೆದಡಿ ನಿವಾಸಿ ಅಣ್ಣಿ ಅಚಾರ್ಯ ಎಂದು ಗುರುತಿಸಲಾಗಿದೆ. ಇವರು ಮತದಾನ ಮಾಡಲೆಂದು ಅಂಡಿಂಜೆ ಸರಕಾರಿ ಶಾಲೆಗೆ ತೆರಳಿದ್ದು, ಶಾಲೆಯ ಮುಂಭಾಗದಲ್ಲಿ ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು. ವೇಣೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ: ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಗೆ ಹೃದಯಾಘಾತ ​► ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಮೃತ್ಯು Read More »

ಕರಾವಳಿ

ಆಲಂಕಾರು: ಒಂದೇ ಕುಟುಂಬದ ಐವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ► ಅಧಿಕಾರಿಗಳ ಎಡವಟ್ಟಿಗೆ ಮತದಾರರು ಕಂಗಾಲು

(ನ್ಯೂಸ್ ಕಡಬ) newskadaba.com ಆಲಂಕಾರು, ಮೇ.12.  ಜೀವಂತವಾಗಿದ್ದರೂ ಮತದಾರರ ಪಟ್ಟಿಯಿಂದ ಒಂದೇ ಕುಟುಂಬದ 5 ಜನರ ಹೆಸರನ್ನು ಡಿಲೀಟ್ ಮಾಡಿದ ಪ್ರಕರಣ ಮತದಾನದ ವೇಳೆ ಬೆಳಕಿಗೆ ಬಂದಿದೆ. ಇದರಿಂದಾಗಿ ಈ 5ಮಂದಿ ಸದಸ್ಯರು ಮತದಾನ ಮಾಡಲು ಅಸಾಧ್ಯವಾಗಿ ಹಿಂತಿರುಗಿದರು. ಡಿಲೀಟ್ ಮಾಡಿರುವ ಘಟನೆ ತಿಳಿಯುತ್ತಿದ್ದಂತೆ ಒಂದು ಪಕ್ಷದ ಕಾರ್ಯಕರ್ತರು ಯಾರೋ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಮತದಾರರಿಗೆ ಅನ್ಯಾಯವಾಗಬಾರದು, ಮತ ಚಲಾಯಿಸಲು ಅವಕಾಶ ನೀಡಿ ಎಂದು ಆಗ್ರಹಿಸಿದರು. ಆದರೆ 6 ತಿಂಗಳಿನಿಂದ ವಾಸ್ತವ್ಯ ಇಲ್ಲದ ಜನರ ಹೆಸರನ್ನು ಮತದಾರರ

ಆಲಂಕಾರು: ಒಂದೇ ಕುಟುಂಬದ ಐವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ► ಅಧಿಕಾರಿಗಳ ಎಡವಟ್ಟಿಗೆ ಮತದಾರರು ಕಂಗಾಲು Read More »

ಕರಾವಳಿ

ಕೊಕ್ಕಡ: ಮತದಾನ ಮಾಡಿದ ಎಲ್ಲಾ 19 ಎಂಡೋ ಸಂತ್ರಸ್ಥರು

(ನ್ಯೂಸ್ ಕಡಬ) newskadaba.com ಕೊಕ್ಕಡ,ಮೇ.12. ಈ ಬಾರಿಯ ಮತದಾನವನ್ನು ಬಹಿಷ್ಕರಿಸುವುದಾಗಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿಯಿಯ ಅಧ್ಯಕ್ಷ ಶ್ರೀಧರ ಗೌಡ ಕೊಕ್ಕಡ ಎಂಡೋ ಸಂತ್ರಸ್ಥರ ಸಮಲೋಚನಾ ಸಭೆಯಲ್ಲಿ ಘೋಷಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ತಮ್ಮ ನಿಲುವನ್ನು ಬದಲಾಯಿಸಿದ ಶ್ರೀಧರ ಗೌಡರವರು ಎಂಡೋ ಸಂತ್ರಸ್ಥರು ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಎಲ್ಲಾ 19 ಎಂಡೋ ಸಂತ್ರಸ್ಥರು ಮತದಾನಕ್ಕೆ ಆಗಮಿಸಿ ಮತದಾನ ಮಾಡುವುದುರ ಮೂಲಕ ಶ್ರೀಧರ ಗೌಡರ ವಾಗ್ದಾನಕ್ಕೆ ಗೌರವ ಸಲ್ಲಿಸಿದರು.

ಕೊಕ್ಕಡ: ಮತದಾನ ಮಾಡಿದ ಎಲ್ಲಾ 19 ಎಂಡೋ ಸಂತ್ರಸ್ಥರು Read More »

ಕರಾವಳಿ

ಬಲ್ಯ: ಕೈಕೊಟ್ಟ ವಿವಿಪ್ಯಾಟ್ ► ಒಂದೂವರೆ ತಾಸು ಮತದಾನ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಬಲ್ಯ ಮತದಾನ ಕೇಂದ್ರದ ಬೂತ್‌ ಸಂಖ್ಯೆ 50 ರಲ್ಲಿ ವಿವಿಪ್ಯಾಟ್ ಕೈಕೊಟ್ಟ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡ ಘಟನೆ ನಡೆದಿದೆ. 11 ಗಂಟೆಯಿಂದ ಮತದಾನ ಸ್ಥಗಿತಗೊಂಡಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದುದು ಕಂಡುಬಂದಿತು. ಆ ಬಳಿಕ ಸ್ಥಳಕ್ಕಾಗಮಿಸಿದ ಮತಯಂತ್ರ ತಜ್ಞರು ವಿವಿಪ್ಯಾಟನ್ನು ದುರಸ್ತಿಗೊಳಿಸಿದ ಬಳಿಕ ಮತದಾನ ಆರಂಭವಾಯಿತು.

ಬಲ್ಯ: ಕೈಕೊಟ್ಟ ವಿವಿಪ್ಯಾಟ್ ► ಒಂದೂವರೆ ತಾಸು ಮತದಾನ ಸ್ಥಗಿತ Read More »

ಕರಾವಳಿ

ಮತಗಟ್ಟೆಯತ್ತ ಒಲವು ತೋರುತ್ತಿರುವ ಮತದಾರರು ► ಮಡ್ಯಡ್ಕ ಮತಗಟ್ಟೆಯಲ್ಲಿ 59% ಮತ ಚಲಾವಣೆ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಗ್ರಾಮೀಣ ಭಾಗದಲ್ಲಿ ಬಿರುಸಿನ ಚಲಾವಣೆಯಾಗುತ್ತಿದ್ದು, ಮತದಾರರು ಮತದಾನ ಕೇಂದ್ರದತ್ತ ಒಲವನ್ನು ತೋರಿಸುತ್ತಿದ್ದಾರೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸರಕಾರಿ ಶಾಲೆಯ ಮತಗಟ್ಟೆ 96 ರಲ್ಲಿ 12 ಗಂಟೆಯ ವೇಳೆಗೆ 59 ಶೇಕಡಾ ಮತದಾನವಾಗಿದೆ. ಮಡ್ಯಡ್ಕ ಸರಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 93 ರಲ್ಲಿ ಮತಯಂತ್ರವು ಎರಡು ಮೂರು ಸಲ ಕೈಕೊಟ್ಟಿದ್ದರಿಂದಾಗಿ ಮತದಾನ ವಿಳಂಬವಾದ ಬಗ್ಗೆ ವರದಿಯಾಗಿದೆ.

ಮತಗಟ್ಟೆಯತ್ತ ಒಲವು ತೋರುತ್ತಿರುವ ಮತದಾರರು ► ಮಡ್ಯಡ್ಕ ಮತಗಟ್ಟೆಯಲ್ಲಿ 59% ಮತ ಚಲಾವಣೆ Read More »

ಕರಾವಳಿ

ಬೆಳ್ಳಾರೆ ಜ್ಞಾನದೀಪಕ್ಕೆ ಶೇ.100 ಫಲಿತಾಂಶ ► ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.12. 2017-18ನೇ ಸಾಲಿನ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಬೆಳ್ಳಾರೆ ಜ್ಞಾನದೀಪ ಶಿಕ್ಷಣ  ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಸಂಸ್ಥೆಯಲ್ಲಿ ನಡೆಯಿತು. ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ ತಂದುಕೊಟ್ಟ ಸಂಸ್ಥೆಯ ಎಲ್ಲಾ 16 ಮಂದಿ ವಿದ್ಯಾರ್ಥಿಗಳನ್ನು ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಭಿನಂದಿಸಿ ಮಾತನಾಡಿ, ಶೈಕ್ಷಣಿಕ ಜೀವನದಲ್ಲಿ ಒಮ್ಮೆ ಎಡವಿದರೂ ಆಸಕ್ತಿಯಿಂದ ಅಧ್ಯಯನ ನಡೆಸಿದಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಿದೆ ಎಂಬುದನ್ನು ಸಾಬೀತು

ಬೆಳ್ಳಾರೆ ಜ್ಞಾನದೀಪಕ್ಕೆ ಶೇ.100 ಫಲಿತಾಂಶ ► ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ Read More »

ಕರಾವಳಿ
Scroll to Top