ವಿಟ್ಲ: ವ್ಯಕ್ತಿಗೆ ಆ್ಯಸಿಡ್ ಎರಚಿದ ದಂಪತಿ



(ನ್ಯೂಸ್ ಕಡಬ) newskadaba.com ವಿಟ್ಲ, ಜ.18. ಜಾಗದ ತಕರಾರು ತಾರಕಕ್ಕೇರಿ ವ್ಯಕ್ತಿಯೊಬ್ಬರ ಮೇಲೆ ಆ್ಯಸಿಡ್ ಎರಚಿದ ಘಟನೆ ವಿಟ್ಲದ ಪುಣಚ ಸಮೀಪದ ಮಲ್ಲಿಕಟ್ಟೆ ಎಂಬಲ್ಲಿ ಗುರುವಾರದಂದು ನಡೆದಿದೆ.







ಪುಣಚ ಗ್ರಾಮದ ಮಲ್ಲಿಕಟ್ಟೆ ನಿವಾಸಿ ಗಂಗಾಧರ್ ಹಾಗೂ ನೆರೆಮನೆಯ ರಾಮಚಂದ್ರ ಮಣಿ ಎಂಬವರಿಗೆ ಜಾಗದ ತಕರಾರಿತ್ತೆನ್ನಲಾಗಿದೆ. ಜಾಗದ ವಿಷಯದಲ್ಲಿ ಮಾತನಾಡುತ್ತಾ ರಾಮಚಂದ್ರರ ಮನೆಗೆ ಹೋದ ಗಂಗಾಧರ್ ರವರಿಗೆ ರಾಮಚಂದ್ರ ಮಣಿ ಹಾಗೂ ಅವರ ಪತ್ನಿ ಅನ್ನಪೂರ್ಣ ಎಂಬವರು ಆ್ಯಸಿಡ್ ಎರಚಿದ್ದು, ತಕ್ಷಣವೇ ಗಂಗಾಧರ್ ರವರನ್ನು ವಿಟ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top