ಕರಾವಳಿ

ಪೆರ್ನೆ: ಖಾಸಗಿ ಬಸ್ – ಕಾರು ಮುಖಾಮುಖಿ ಢಿಕ್ಕಿ ► ಹಲವರಿಗೆ ಗಾಯ

 ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜಶ್ರೀ ಹೆಸರಿನ ಖಾಸಗಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಆಗಮಸುತ್ತಿದ್ದ ಸ್ವಿಫ್ಟ್ ಕಾರು ನಡುವೆ ಪೆರ್ನೆಯ ದೋರ್ಮೆ ಮಸೀದಿ ಬಳಿ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಪೆರ್ನೆ: ಖಾಸಗಿ ಬಸ್ – ಕಾರು ಮುಖಾಮುಖಿ ಢಿಕ್ಕಿ ► ಹಲವರಿಗೆ ಗಾಯ Read More »

ಕರಾವಳಿ

ಕುಂತೂರು: ಸುಸಜ್ಜಿತ ವಸತಿ ಸಮುಚ್ಚಯ ‘ಯುಕೆಎಂ ಆರ್ಕೇಡ್’ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಜೀವನದಲ್ಲಿ ದುಡಿದಿದ್ದರಲ್ಲಿ ಒಂದಂಶವನ್ನು ಸಮಾಜಕ್ಕೆ‌ ವಿನಿಯೋಗಿಸುವುದರಲ್ಲಿ ಅರ್ಥವಿದೆ ಎಂದು ಕುಂಬೋಳ್ ಕೆ.ಎಸ್. ಆಟಕೋಯ ತಂಙಳ್ ರವರ ಪುತ್ರ ಮುಖ್ತಾರ್ ತಂಙಳ್ ಕುಂಬೋಳ್ ಹೇಳಿದರು. ಅವರು ಇಲ್ಲಿನ ಕುಂತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ವಸತಿ ಸಮುಚ್ಚಯ ಯು.ಕೆ.ಎಮ್. ಆರ್ಕೇಡ್ ಉದ್ಘಾಟಿಸಿ ಮಾತನಾಡಿದರು. ಕಷ್ಟದಿಂದ ಮೇಲೆ ಬಂದಿರುವ ಕಟ್ಟಡದ ಮಾಲಕ ಯು.ಕೆ. ಮಹಮ್ಮದ್ ರವರ ಶ್ರಮದಿಂದಾಗಿ ಈ ಒಂದು ಸುಸಜ್ಜಿತ ವಸತಿ ಸಮುಚ್ಚಯವು ಇಂದು ತಲೆ‌ಯೆತ್ತಿ ನಿಂತಿದೆ. ಬೆಳೆಯುತ್ತಿರುವ ಕುಂತೂರಿಗೆ ಅಗತ್ಯವಾಗಿ ಬೇಕಾಗಿದ್ದ

ಕುಂತೂರು: ಸುಸಜ್ಜಿತ ವಸತಿ ಸಮುಚ್ಚಯ ‘ಯುಕೆಎಂ ಆರ್ಕೇಡ್’ ಉದ್ಘಾಟನೆ Read More »

ಕರಾವಳಿ

ಕಳಪೆ ಕಾಮಗಾರಿಯಿಂದ ಹದಗೆಟ್ಟ ಗೋಳಿತ್ತಡಿ – ನೆಲ್ಯೊಟ್ಟು ರಸ್ತೆ ► ಕಾಮಗಾರಿ ಪೂರ್ತಿಯಾಗಿ ಎರಡು ತಿಂಗಳೊಳಗೆ ಕಿತ್ತು ಹೋದ ಡಾಮರು

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಗೋಳಿತ್ತಡಿ- ನೆಲ್ಯೊಟ್ಟು ಭಾಗದ ಜನರ ರಸ್ತೆ ಅಭಿವೃದ್ದಿಯ ಹಲವು ವರ್ಷಗಳ ಬೇಡಿಕೆಯು ಈಡೇರಿದೆ ಎನ್ನುವ ಖುಷಿಯಲ್ಲಿ ಇರುವಾಗಲೇ ದೊಡ್ಡ ಶಾಕೊಂದು ಎದುರಾಗಿದೆ. ರಸ್ತೆ ಮರುಡಾಮರಿಕರಣ ಕಾಮಗಾರಿ ಪೂರ್ತಿಯಾಗಿ ಎರಡು ತಿಂಗಳು ಕಳೆಯುವುದರೊಳಗೆ ಡಾಮರು ಕಿತ್ತು ಹೋಗುತ್ತಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ. ಉಪ್ಪಿನಂಗಡಿ – ಕಡಬ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಗೋಳಿತ್ತಡಿ ಎಂಬಲ್ಲಿ ಕವಲೊಡೆದ ಗೋಳಿತ್ತಡಿ- ನೆಲ್ಯೋಟ್ಟು ರಸ್ತೆಗೆ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆಸಿದ ಮರುಡಾಮರೀಕರ ಕಾಮಗಾರಿ ಕಳಪೆಯಿಂದಾಗಿ ಇದೀಗ ಎರಡು

ಕಳಪೆ ಕಾಮಗಾರಿಯಿಂದ ಹದಗೆಟ್ಟ ಗೋಳಿತ್ತಡಿ – ನೆಲ್ಯೊಟ್ಟು ರಸ್ತೆ ► ಕಾಮಗಾರಿ ಪೂರ್ತಿಯಾಗಿ ಎರಡು ತಿಂಗಳೊಳಗೆ ಕಿತ್ತು ಹೋದ ಡಾಮರು Read More »

ಕರಾವಳಿ

ಕಡಬದ ಅಡಿಗ ಟಿವಿಎಸ್ ನಲ್ಲಿ ಮಾನ್ಸೂನ್ ಮೆಗಾ ಎಕ್ಸ್‌ಚೇಂಜ್‌ ಮತ್ತು ಲೋನ್ ಮೇಳ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಇಲ್ಲಿನ ಮುಖ್ಯ ರಸ್ತೆಯ ವೈಭವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಅಡಿಗ ಮೋಟಾರ್ಸ್ ವತಿಯಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಮಾನ್ಸೂನ್ ಮೆಗಾ ಎಕ್ಸ್‌ಚೇಂಜ್‌ ಮತ್ತು ಲೋನ್ ಮೇಳ ನಡೆಯುತ್ತಿದೆ. ಜುಲೈ 20 ರಿಂದ ಆರಂಭಗೊಂಡಿರುವ ಈ ಮೇಳದಲ್ಲಿ ವಿಶೇಷ ಆಫರ್ ಗಳೊಂದಿಗೆ ಉಚಿತ ಬಡ್ಡಿ ಹಾಗೂ ಉಚಿತ ದಾಖಲಾತಿ ದರಗಳೊಂದಿಗೆ ಪ್ರತೀ ಖರೀದಿಗೆ ಉಚಿತ ರೈನ್ ಕೋಟ್ ನೀಡಲಾಗುತ್ತಿದ್ದು, ಕೇವಲ 6555 ಮುಂಗಡ

ಕಡಬದ ಅಡಿಗ ಟಿವಿಎಸ್ ನಲ್ಲಿ ಮಾನ್ಸೂನ್ ಮೆಗಾ ಎಕ್ಸ್‌ಚೇಂಜ್‌ ಮತ್ತು ಲೋನ್ ಮೇಳ Read More »

ಕರಾವಳಿ

ಕೋಡಿಂಬಾಳ: ಕತ್ತಿಯಿಂದ ಕಡಿದು ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ► ಇತ್ತಂಡಗಳಿಂದಲೂ ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.23. ಯುವತಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಠಾಣಾ ವ್ಯಾಪ್ತಿಯ ಕೋಡಿಂಬಾಳದಲ್ಲಿ ಶುಕ್ರವಾರ ರಾತ್ರಿ ನಾಲ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತಂಡಗಳ ಒಟ್ಟು ಏಳು ಜನರ ವಿರುದ್ಧ ಶನಿವಾರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 102 ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ನಿವಾಸಿ ಅಬ್ದುಲ್ ಜಾಹಿದ್ ಎಂಬವರು ದೂರು ನೀಡಿ ತನ್ನ ಸಹೋದರಿಗೆ ಕೋಡಿಂಬಾಳ ಗ್ರಾಮದ ಮಜ್ಜಾರ್ ನಿವಾಸಿ ಅಲ್ಫಾಸ್ ಎಂಬವರು ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆತನಲ್ಲಿ ವಿಚಾರಿಸಲು ಹೋದಾಗ ಆತನ

ಕೋಡಿಂಬಾಳ: ಕತ್ತಿಯಿಂದ ಕಡಿದು ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ► ಇತ್ತಂಡಗಳಿಂದಲೂ ದೂರು Read More »

ಕರಾವಳಿ

ಮಿಹ್ ರಜಾನುಲ್ ಬಿದಾಯ: ಹಿದಾಯತುಲ್ ಇಸ್ಲಾಂ ಮದರಸ ಬೆಳ್ಳಾರೆ ಮದರಸ ಪ್ರಾರಂಭೋತ್ಸವ

(ನ್ಯೂಸ್ ಕಡಬ)newskadaba.com ಬೆಳ್ಳಾರೆ,ಜೂ.23. ಪ್ರಸಕ್ತ ಶೈಕ್ಷಣಿಕ ವರುಷದ 2018-19 ನೇ ಸಾಲಿನ ಹಿದಾಯತುಲ್ ಇಸ್ಲಾಂ ಮದರಸದ ಪ್ರಾರಂಭೋತ್ಸವವು  ಇಂದು ನಡೆಯಿತು. ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ ದರ್ಗಾ ಝಿಯಾರತಿನೊಂದಿಗೆ ಚಾಲನೆ ನೀಡಿ,ಶೈಕ್ಷಣಿಕ ವರುಷದ ಉದ್ಘಾಟನೆಯನ್ನು ನೆರವೇರಿಸಿ,ಬಳಿಕ ಪ್ರಾಸ್ತವಿಕ ಮಾತುಗಳನ್ನಾಡಿ ದುಆ ಕೆ ನೇತೃತ್ವವನ್ನು ನೀಡಿದರು .ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಉಪಾಧ್ಯಕ್ಷ ರಾದ ಯು ಹೆಚ್ ಅಬೂಬಕ್ಕರ್ ಅಧ್ಯಕ್ಷ ತೆ ವಹಿಸಿದ್ದರು .ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಂ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ

ಮಿಹ್ ರಜಾನುಲ್ ಬಿದಾಯ: ಹಿದಾಯತುಲ್ ಇಸ್ಲಾಂ ಮದರಸ ಬೆಳ್ಳಾರೆ ಮದರಸ ಪ್ರಾರಂಭೋತ್ಸವ Read More »

ಕರಾವಳಿ

ರಾಮಕುಂಜ: ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ ಉದ್ಘಾಟನೆ

(ನ್ಯೂಸ್ ಕಡಬ)newskadaba.com ರಾಮಕುಂಜ,ಜೂ.23. ಬೆಂಗಳೂರಿನ ಸಿಸ್ಕೋ ಸಂಭ್ರಮ, ಯೂತ್ ಫಾರ್ ಸೇವಾ ಇದರ ಪ್ರಾಯೋಜಕತ್ವದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸುಮಾರು 13ಲಕ್ಷ ರೂ. ವೆಚ್ಚದಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ‘ರಾಮನ್’ ಹಾಗೂ ಗಣಿತ ಪ್ರಯೋಗಾಲಯ ‘ಬ್ರಹ್ಮಗುಪ್ತ’ ಇದರ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದ ಕಡಬ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ರಮೇಶ್ ಕಲ್ಪುರೆ ಮಾತನಾಡಿ ಗ್ರಾಮೀಣ ಪ್ರದೇಶದ ಬಡಜನತೆ ಕಡಿಮೆ ಖರ್ಚಿನಲ್ಲಿ ಉತ್ತಮ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ಪಡೆಯಬೇಕು ಎನ್ನುವ ಮಹಾತ್ವಾಕಾಂಕ್ಷೆಯೊಂದಿಗೆ ಪೇಜಾವರ

ರಾಮಕುಂಜ: ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ ಉದ್ಘಾಟನೆ Read More »

ಕರಾವಳಿ

ಬೆಳ್ಳಾರೆ: ಬೃಹತ್ ವೈದ್ಯಕೀಯ ರಕ್ತದಾನ ಮತ್ತು ದಂತ ಚಿಕಿತ್ಸಾ ಶಿಬಿರ

(ನ್ಯೂಸ್ ಕಡಬ)newskadaba.com ಬೆಳ್ಳಾರೆ,ಜೂ.23. ಜೆಸಿಐ, ಯುವ ಜೇಸಿ ವಿಭಾಗ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವುಗಳ ಆಶ್ರಯದಲ್ಲಿ ಕೆ.ಎಮ್.ಸಿ ಆಸ್ಪತ್ರೆ ಮಂಗಳೂರು, ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ ಮತ್ತು ಇಂಡಿಯನ್ ರೆಡ್ಕ್ರಾಸ್ ರಕ್ತದ ನಿಧಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರುಗಳ ಸಹಕಾರದೊಂದಿಗೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಲ್ಮಡ್ಕದ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಬೆಳ್ಳಾರೆಯ ಪ್ರತಿಷ್ಠಿತ ವೈದ್ಯರಾಗಿದ್ದ ದಿವಂಗತ ಡಾ|| ನಾರಾಯಣ ಭಟ್ ಇವರ ಸ್ಮರಾಣಾರ್ಥ ಬೃಹತ್ ವೈದ್ಯಕೀಯ, ದಂತ ಚಿಕಿತ್ಸಾ ಮತ್ತು ರಕ್ತದಾನ

ಬೆಳ್ಳಾರೆ: ಬೃಹತ್ ವೈದ್ಯಕೀಯ ರಕ್ತದಾನ ಮತ್ತು ದಂತ ಚಿಕಿತ್ಸಾ ಶಿಬಿರ Read More »

ಕರಾವಳಿ

ನೆಲ್ಯಾಡಿ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ► ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.23. ಇಲ್ಲಿನ ಅಲ್ಫೋನ್ಸಾ ಚರ್ಚ್‌ನ ಮುಂಭಾಗದಲ್ಲಿ ಕಳೆದ ಗುರುವಾರದಂದು ನಡೆದ ಬೈಕ್ ಗಳ ಪರಸ್ಪರ ಢಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತ ಸವಾರನನ್ನು ನೆಲ್ಯಾಡಿಯ ಪಾಂಡಿಬೆಟ್ಟು ಹೊಸಮನೆ ನಿವಾಸಿ ಕೊರಗಪ್ಪ ಗೌಡರ ಕಿರಿಯ ಪುತ್ರ ಲಕ್ಷ್ಮಣ ಗೌಡ (ಸುರೇಶ್) ಎಂದು‌ ಗುರುತಿಸಲಾಗಿದೆ. ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದ ಮೃತರು ಮಾಜಿ ಪಂಚಾಯತ್ ಸದಸ್ಯನಾಗಿ ಸಮಾಜಮುಖಿ ಸೇವೆಗಳಿಂದ ಪರಿಸರದಲ್ಲಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಮಕ್ಕಳು

ನೆಲ್ಯಾಡಿ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ► ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಕರಾವಳಿ

ಬಿಳಿನೆಲೆ: ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ ► ಮುಂದೇನಾಯ್ತು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಜೂ.23. ಕಾಡಾನೆಯೊಂದು ಕಾರಿಗೆ ಸೊಂಡಿಲಿನಿಂದ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಓರ್ವ ಗಂಭೀರ ಗಾಯಗೊಂಡು, ಆರು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಮಾರುತಿ ಓಮ್ನಿ ಕಾರು ಬಿಳಿನೆಲೆ ಸಿಪಿಸಿಆರ್ಐ ಸಮೀಪ ತಲುಪಿದಾಗ ಕಾಡಾನೆ ರಸ್ತೆಯನ್ನು ಹಾದುಹೋಗುತ್ತಿದ್ದುದನ್ನು ಕಂಡ ಚಾಲಕ ಆನೆಯ ಸಮೀಪದಲ್ಲೇ ಕಾರನ್ನು ನಿಲ್ಲಿಸಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ

ಬಿಳಿನೆಲೆ: ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ ► ಮುಂದೇನಾಯ್ತು ಗೊತ್ತೇ..? Read More »

ಕರಾವಳಿ
Scroll to Top