ಪಾಂಗಾಳ ಸೇತುವೆಯಲ್ಲಿ ಸರಣಿ ಅಪಘಾತ ► ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಾಪು, ಮಾ.05. ಕಾಂಕ್ರೀಟ್ ರೆಡಿ ಮಿಕ್ಸ್ ಲಾರಿ, ಖಾಸಗಿ ಎಕ್ಸ್‌ಪ್ರೆಸ್‌ ಬಸ್ ಹಾಗೂ ಡ್ರೈವಿಂಗ್ ಸ್ಕೂಲ್‌ನ ಕಾರೊಂದರ‌ ನಡುವೆ ಸರಣಿ ಅಪಘಾತವುಂಟಾಗಿ ಹಲವರು ಗಾಯಗೊಂಡ ಘಟನೆ ಕಾಪು ಸಮೀಪದ ಪಾಂಗಾಳ ಸೇತುವೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮಂಗಳೂರಿನಿಂದ ತೆರಳುತ್ತಿದ್ದ ನವಯುಗ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಸೇರಿದ ಕಾಂಕ್ರೀಟ್ ರೆಡಿ ಮಿಕ್ಸ್ ಲಾರಿಯನ್ನು ಚಾಲಕ ರಸ್ತೆಯ ಬಲಬದಿಯ ಡಿವೈಡರ್ ಗೆ ತಿರುಗಿಸುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆದಿದ್ದು, ಬಸ್ಸಿನ ಬದಿಯಲ್ಲಿದ್ದ ಡ್ರೈವಿಂಗ್ ಸ್ಕೂಲ್‌ಗೆ ಸೇರಿದ ವ್ಯಾಗನರ್ ಕಾರು ಬಸ್ಸಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top