ಕೊಂಬಾರು: ಕಾಡಾನೆ ದಾಳಿಗೆ ಓರ್ವ ಮೃತ್ಯು ► ಇನ್ನೋರ್ವನಿಗೆ ಗಾಯ, ಮತ್ತೋರ್ವ ಪಾರು



(ನ್ಯೂಸ್ ಕಡಬ) newskadaba.com ಕಡಬ, ಮಾ.07. ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.







ಮೃತನನ್ನು ರೈಲ್ವೇ ಕಾರ್ಮಿಕ ಮಧುರೈ ನಿವಾಸಿ ರಂಜಿತ್ (52) ಹಾಗೂ ಗಾಯಾಳುವನ್ನು ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಇವರು ಕೊಂಬಾರು ಗ್ರಾಮದ ಆನೇಕಲ್ ರೈಲ್ವೆ ಸೇತುವೆಯ ಬಳಿ ಸೇತುವೆ ಕಾಮಗಾರಿಗೆಂದು ಆಗಮಿಸಿದ್ದು, ಮಂಗಳವಾರ ರಾತ್ರಿ ಶೆಡ್ ನಿಂದ ಹೊರಬಂದು ಮಲಗಿದ್ದರೆನ್ನಲಾಗಿದೆ. ತಡರಾತ್ರಿ ಕಾಡಾನೆ ಬಂದು ತಿವಿದು ಓರ್ವನನ್ನು ಕೊಂದು ಹಾಕಿದ್ದು, ಇನ್ನೋರ್ವನನ್ನು ಗಾಯಗೊಳಿಸಿದೆ.






error: Content is protected !!
Scroll to Top