ಕರಾವಳಿ

ಸವಣೂರು: ದಾಸ್ತಾನು ಕೊಠಡಿಗೆ ನುಗ್ಗಿದ ಕಳ್ಳರು ► ಅಡಿಕೆ, ಕರಿಮೆಣಸು, ತೆಂಗಿನಕಾಯಿ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.17. ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿದ್ದ 10 ಚೀಲ ಸುಲಿಯದ ಒಣ ಅಡಿಕೆ ಮತ್ತು 50 ಕಿಲೋ ತೂಕದ ಕರಿಮೆಣಸು 2 ಚೀಲ ಹಾಗೂ ಕೊಟ್ಟಿಗೆಯಲ್ಲಿ 4 ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಲಿದ 200 ತೆಂಗಿನಕಾಯಿಗಳನ್ನು ಕಳವುಗೈದ ಘಟನೆ ಸವಣೂರಿನಲ್ಲಿ ಸೋಮವಾರದಂದು ಬೆಳಕಿಗೆ ಬಂದಿದೆ. ಸವಣೂರು ಗ್ರಾಮದ ಮುಂಡತ್ತಡ್ಕ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ ದಾಸ್ತಾನು ಕೊಠಡಿಗೆ ಭಾನುವಾರ ರಾತ್ರಿ ಒಳ ನುಗ್ಗಿದ ಕಳ್ಳರು ಸುಮಾರು 58 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಅಬ್ದುಲ್ ರಹಿಮಾನ್ […]

ಸವಣೂರು: ದಾಸ್ತಾನು ಕೊಠಡಿಗೆ ನುಗ್ಗಿದ ಕಳ್ಳರು ► ಅಡಿಕೆ, ಕರಿಮೆಣಸು, ತೆಂಗಿನಕಾಯಿ ಕಳ್ಳರ ಪಾಲು Read More »

ಕರಾವಳಿ

ರಬ್ಬರ್ ನಿಗಮದ ಗಿಡ ಸಾಗಾಟದಿಂದಾಗಿ ಕೆಸರುಗದ್ದೆಯಾದ ಬ್ರಾಂತಿಕಟ್ಟೆ – ಕೊಡೆಂಕಿರಿ ರಸ್ತೆ ► ವಾಹನ ತಡೆದು ಪ್ರತಿಭಟನೆ, ರಸ್ತೆ ದುರಸ್ಥಿಗೆ ಆಗ್ರಹ, ಸಂಜೆಯೊಳಗೆ ದುರಸ್ಥಿಗೆ ಒಪ್ಪಿಗೆ

(ನ್ಯೂಸ್ ಕಡಬ) newskadaba.com ಕಡಬ, ಜು.17. ಐತ್ತೂರು ಗ್ರಾ.ಪಂ.ವ್ಯಾಪ್ತಿಯ ಬ್ರಾಂತಿಕಟ್ಟೆ, ಕೊಡೆಂಕಿರಿ ರಸ್ತೆಯ ದುರಾವಸ್ಥೆ, ಕೆಎಫ್‍ಡಿಸಿ ನಿಗಮದಿಂದ ಸಾಗಿಸುತ್ತಿದ್ದ ರಬ್ಬರ್ ಗಿಡಗಳ ವಾಹನವನ್ನು ತಡೆಗಟ್ಟಿ ಗುತ್ತಿಗೆದಾರರನ್ನು ತಡೆದು ಸಾರ್ವಜನಿಕರಿಂದ ಸೋಮವಾರದಂದು ಬ್ರಾಂತಿಕಟ್ಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕಳೆದ ಹಲವಾರು ವರ್ಷಗಳಿಂದ ದುರಸ್ಥಿ ಕಾಣದೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿರುವ ಈ ರಸ್ತೆಯನ್ನು ಊರಿನ ಗ್ರಾಮಸ್ಥರೇ ಒಟ್ಟಾಗಿ ಹೋರಾಟ ಸಮಿತಿಯೊಂದನ್ನು ರಚಿಸಿಕೊಂಡು ಪ್ರತೀ ವರ್ಷ ತಾವೇ ಹಣ ಹೊಂದಿಸಿಕೊಂಡು ಸುಮಾರು 50, 60 ಲಾರಿ ಟಿಪ್ಪರ್‍ಗಳಲ್ಲಿ ಚರಲ್ (ದಪ್ಪ ಮರಳು) ಹಾಕಿ ಶ್ರಮದಾನದ

ರಬ್ಬರ್ ನಿಗಮದ ಗಿಡ ಸಾಗಾಟದಿಂದಾಗಿ ಕೆಸರುಗದ್ದೆಯಾದ ಬ್ರಾಂತಿಕಟ್ಟೆ – ಕೊಡೆಂಕಿರಿ ರಸ್ತೆ ► ವಾಹನ ತಡೆದು ಪ್ರತಿಭಟನೆ, ರಸ್ತೆ ದುರಸ್ಥಿಗೆ ಆಗ್ರಹ, ಸಂಜೆಯೊಳಗೆ ದುರಸ್ಥಿಗೆ ಒಪ್ಪಿಗೆ Read More »

ಕರಾವಳಿ

ರಾಮಕುಂಜ: ಸರಕಾರಿ ಬಸ್ಸುಗಳಿಲ್ಲದ ಕಾರಣ ವಿದ್ಯಾರ್ಥಿಗಳಿಂದ ರಾಜ್ಯ ಹೆದ್ದಾರಿ ತಡೆ ► ಪ್ರತಿಭಟನೆಗೆ ಮಣಿದ ಕೆಎಸ್ಸಾರ್ಟಿಸಿಯಿಂದ 3 ಹೆಚ್ಚಿನ ಬಸ್ಸುಗಳ ಓಡಾಟ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಜು.17. ಸಮಯಕ್ಕೆ ಸರಿಯಾಗಿ ಬಸ್ಸು ಸೌಲಭ್ಯ ದೊರೆಯುತ್ತಿಲ್ಲ ಆರೋಪಿಸಿ ಎಬಿವಿಪಿ ರಾಮಕುಂಜ ಘಟಕದ ವತಿಯಿಂದ ಶ್ರೀ ರಾಮಕುಂಜೇಶ್ವರ  ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸೋಮವಾರ ಸಾಯಂಕಾಲ ರಾಮಕುಂಜ ಕ್ರಾಸ್ ಬಳಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.     ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆಯ ಪದವಿ, ಪದವಿಪೂರ್ವ, ಪ್ರೌಢಶಾಲಾ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು ಹದಿನೈದು ನಿಮಿಷ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ಸಂದರ್ಭ ಎಬಿವಿಪಿ ರಾಮಕುಂಜ ಕಾಲೇಜು ಘಟಕದ

ರಾಮಕುಂಜ: ಸರಕಾರಿ ಬಸ್ಸುಗಳಿಲ್ಲದ ಕಾರಣ ವಿದ್ಯಾರ್ಥಿಗಳಿಂದ ರಾಜ್ಯ ಹೆದ್ದಾರಿ ತಡೆ ► ಪ್ರತಿಭಟನೆಗೆ ಮಣಿದ ಕೆಎಸ್ಸಾರ್ಟಿಸಿಯಿಂದ 3 ಹೆಚ್ಚಿನ ಬಸ್ಸುಗಳ ಓಡಾಟ ಆರಂಭ Read More »

ಕರಾವಳಿ

ಕಲ್ಲಾಜೆ: ಕೆಎಸ್ಸಾರ್ಟಿಸಿ ಬಸ್ – ಟಾಟಾ ವೆಂಚರ್ ಪರಸ್ಪರ ಢಿಕ್ಕಿ ► ಓರ್ವ ಮಹಿಳೆ ಗಂಭೀರ, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜು.17. ಕೆಎಸ್ಸಾರ್ಟಿಸಿ ಎಕ್ಸ್‌ಪ್ರೆಸ್‌ ಬಸ್ ಹಾಗೂ ಟಾಟಾ ವೆಂಚರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಗಂಭೀರ ಗಾಯಗೊಂಡು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ‌. ಭಟ್ಕಳ ಮೂಲದ ಕುಟುಂಬವೊಂದು ಟಾಟಾ ವೆಂಚರ್ ವಾಹನದಲ್ಲಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದಾಗ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಕಲ್ಲಾಜೆ ತಿರುವಿನಲ್ಲಿ ಪರಸ್ಪರ

ಕಲ್ಲಾಜೆ: ಕೆಎಸ್ಸಾರ್ಟಿಸಿ ಬಸ್ – ಟಾಟಾ ವೆಂಚರ್ ಪರಸ್ಪರ ಢಿಕ್ಕಿ ► ಓರ್ವ ಮಹಿಳೆ ಗಂಭೀರ, ಹಲವರಿಗೆ ಗಾಯ Read More »

ಕರಾವಳಿ

ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.17. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಮೃತ ದಂಪತಿಯನ್ನು ಬಾರ್ಯ ಗ್ರಾಮದ ಪಿಳಿಗೂಡು ನಿವಾಸಿ ಸಂಜೀವ ಪೂಜಾರಿ (60) ಹಾಗೂ ಸೀತಾ (59) ಎಂದು ಗುರುತಿಸಲಾಗಿದೆ. ಸಂಜೀವ ಪೂಜಾರಿಯವರು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿ ಕೆಲಸಕ್ಕೆ ಹೋಗಲು ಅಸಮರ್ಥರಾಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದ ದಂಪತಿ ಸೋಮವಾರದಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ Read More »

ಕರಾವಳಿ

ನೆಲ್ಯಾಡಿ: ವಿವಾಹಿತ ಮಹಿಳೆ ಹಾಗೂ ಮಕ್ಕಳಿಬ್ಬರ ಅಪಹರಣ ► ಆರೋಪಿ ಕಡಬ ನಿವಾಸಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.16. ವಿವಾಹಿತ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದ ಪ್ರಕರಣವನ್ನು ಭೇದಿಸಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ನಿವಾಸಿ ತೊಮಸ್. ಪಿ.ಕೆ. ಎಂಬವರ ಪುತ್ರ ಅನಿಲ್ ಎಂದು ಗುರುತಿಸಲಾಗಿದೆ. ನೆಲ್ಯಾಡಿ ಮೂಲದ ಮಹಿಳೆಯು ಜುಲೈ 11 ರಂದು ತನ್ನ ಇಬ್ಬರು ಮಕ್ಕಳನ್ನು ವಿಟ್ಲ ಸಮೀಪದ ಶಾಲೆಯೊಂದಕ್ಕೆ ಸೇರಿಸಲೆಂದು ತೆರಳಿದ್ದ ವೇಳೆ ಆರೋಪಿಯು ಮಕ್ಕಳ ಸಹಿತ ಮಹಿಳೆಯನ್ನು ಅಪಹರಿಸಿದ್ದಾನೆಂದು ಮಹಿಳೆಯ ಪತಿ ರಾಜೇಶ್ ಕಡಬ

ನೆಲ್ಯಾಡಿ: ವಿವಾಹಿತ ಮಹಿಳೆ ಹಾಗೂ ಮಕ್ಕಳಿಬ್ಬರ ಅಪಹರಣ ► ಆರೋಪಿ ಕಡಬ ನಿವಾಸಿಯ ಬಂಧನ Read More »

ಕರಾವಳಿ

ಹೊಸ್ಮಠ: ತಗ್ಗಿದ ನೀರಿನ ಪ್ರಮಾಣ ► ವಾರದ ನಂತರ ಸಂಚಾರ ಮುಕ್ತವಾದ ‘ಮುಳುಗು ಸೇತುವೆ’

(ನ್ಯೂಸ್ ಕಡಬ) newskadaba.com ಕಡಬ, ಜು.15. ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯ ಮೇಲೆ ಭಾನುವಾರ ಸಂಜೆ ನೀರಿನ ಹರಿವು ಇಳಿದ ಕಾರಣ ವಾರದ ನಂತರ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ ಒಂದು ವಾರದಿಂದ ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿ ಇದ್ದುದರಿಂದ ಸಂಚಾರಕ್ಕೆ ತಡೆಯುಂಟಾಗಿತ್ತು. ಇದರಿಂದಾಗಿ ಉಪ್ಪಿನಂಗಡಿ ಹಾಗೂ ಕಡಬ ಕಡೆಗೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಹಳೆಯ ಮುಳುಗು ಸೇತುವೆಯ ಪಕ್ಕದಲ್ಲೇ

ಹೊಸ್ಮಠ: ತಗ್ಗಿದ ನೀರಿನ ಪ್ರಮಾಣ ► ವಾರದ ನಂತರ ಸಂಚಾರ ಮುಕ್ತವಾದ ‘ಮುಳುಗು ಸೇತುವೆ’ Read More »

ಕರಾವಳಿ

ಪಂಜ: ಕೆಎಸ್ಸಾರ್ಟಿಸಿ ಬಸ್ – ಸ್ವಿಫ್ಟ್ ಡಿಸೈರ್ ಕಾರು ಢಿಕ್ಕಿ ► ಓರ್ವ ಗಂಭೀರ, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪಂಜ, ಜು.15. ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರು‌ನಡುವೆ ಪರಸ್ಪರ ಢಿಕ್ಕಿಯುಂಟಾದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಪಂಜದಲ್ಲಿ ನಡೆದಿದೆ. ಗಾಯಾಳು ಚಾಲಕನನ್ನು ಕಲ್ಮಕಾರಿನ ಅಂಜನಕಜೆ ನಿವಾಸಿ ರಾಮಣ್ಣ ಗೌಡರ ಪುತ್ರ ಗಿರೀಶ್ ಎಂದು ಗುರುತಿಸಲಾಗಿದೆ. ಇವರು ಸುಬ್ರಹ್ಮಣ್ಯದ ಮೋಹನ್‌ದಾಸ್ ರೈಯವರಿಗೆ ಸೇರಿದ ಟೂರಿಸ್ಟ್ ಡಿಸೈರ್ ಕಾರಿನಲ್ಲಿ ಬಾಡಿಗೆಗೆಂದು ತೆರಳುತ್ತಿದ್ದ ವೇಳೆ ಪಂಜದ ಕೃಷ್ಣನಗರ ಎಂಬಲ್ಲಿ ಕಡಬದಿಂದ ಸುಳ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಪಂಜ: ಕೆಎಸ್ಸಾರ್ಟಿಸಿ ಬಸ್ – ಸ್ವಿಫ್ಟ್ ಡಿಸೈರ್ ಕಾರು ಢಿಕ್ಕಿ ► ಓರ್ವ ಗಂಭೀರ, ಹಲವರಿಗೆ ಗಾಯ Read More »

ಕರಾವಳಿ

ಆತೂರು ಪರಿಸರದಲ್ಲಿ ಭಾರೀ ಸುಂಟರಗಾಳಿ ► ರಸ್ತೆಗಡ್ಡವಾಗಿ ಬಿದ್ದ ಮರಗಳು – ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.14. ಅತೂರು ಪರಿಸರದಲ್ಲಿ ಬೀಸಿದ ಭಾರೀ ಸುಂಟರಗಾಳಿಗೆ ಹಲವು ಮರಗಳು ಧರಾಶಾಹಿಯಾಗಿ ರಸ್ತೆ ಸಂಚಾರಕ್ಕೆ ತಡೆಯಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಪರಿಸರದ ಗೋಳಿತ್ತಡಿ, ನೇಲ್ಯೊಟ್ಟು, ಅಂಬಾ, ಆಯಿಷಾ ಸ್ಕೂಲ್ ಹಾಗೂ ಕುಂಡಾಜೆ ಪರಿಸರದಲ್ಲಿ ಬೀಸಿದ ಭಾರೀ ಗಾಳಿಗೆ ಹಲವು ಮರಗಳು ನೆಲಕ್ಕುರುಳಿವೆ. ಪರಿಣಾಮ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆಯುಂಟಾಗಿ ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಯಿತು. ತಕ್ಷಣವೇ ಸ್ಥಳೀಯ ಯುವಕರು ಸೇರಿ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ಆತೂರು ಪರಿಸರದಲ್ಲಿ ಭಾರೀ ಸುಂಟರಗಾಳಿ ► ರಸ್ತೆಗಡ್ಡವಾಗಿ ಬಿದ್ದ ಮರಗಳು – ಸಂಚಾರದಲ್ಲಿ ವ್ಯತ್ಯಯ Read More »

ಕರಾವಳಿ

ಕಡಬ: ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿರುವ ಕಾರು

(ನ್ಯೂಸ್ ಕಡಬ) newskadaba.com ಕಡಬ,ಜು.14. ಕಡಬ ಪ್ಭೆಟೆಯ ಹೃದಯ ಭಾಗದ ಕೂಗಳತೆ ದೂರದಲ್ಲಿ ಉಪ್ಪಿನಂಗಡಿ-ಕಡಬ-ಸಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಾರೊಂದನ್ನು ವಾರಸುದಾರರು ಬಿಟ್ಟು ಹೋಗಿ ಅನಾಥವಾಗಿ ನಿಂತಿದೆ. ಕಡಬ ಸೈಂಟ್ ಆ್ಯನ್ಸ್ ಶಾಲಾ ಬಳಿಯಲ್ಲಿರುವ ಮಾರುತಿ 800 ಕಾರು ಕಳೆದ ಹತ್ತು ದಿನಗಳಿಂದ ಇದ್ದ ಸ್ಥಳದಲ್ಲೇ ಇದೆ. ಯಾರೂ ಅಕ್ರಮ ವ್ಯವಹಾರಕ್ಕೆ ಬಳಸಿ ಅಲ್ಲೇ ಬಿಟ್ಟು ಹೋಗಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ಇದೇ ವೇಳೆ ಠಾಣಾ ದಕ್ಷಿಣ ಭಾಗದ ಕಳಾರ ಎಂಬಲ್ಲಿ ಕೂಡಾ ಕಾರೊಂದು ಕಳೆದ ಕೆಲವು

ಕಡಬ: ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿರುವ ಕಾರು Read More »

ಕರಾವಳಿ
Scroll to Top