ಶುಚಿತ್ವಕ್ಕೆ ಆದ್ಯತೆ ನೀಡಿದ್ದ ಆಲಂಕಾರು ಪಂಚಾಯತ್ ನಿಂದ ಇದೀಗ ಕಾನೂನು ಸಡಿಲಿಕೆ ► ನಾಯಿ, ಆಡುಗಳ ಆಶ್ರಯ ತಾಣವಾದ ಹಸಿ ಮೀನು ಮಾರುಕಟ್ಟೆ
(ನ್ಯೂಸ್ ಕಡಬ) newskadaba.com ಸವಣೂರು, ಜು.21. ಆಲಂಕಾರು ಗ್ರಾಮ ಪಂಚಾಯಿತಿ ಶುಚಿತ್ವಕ್ಕೆ ಆಧ್ಯತೆ ನೀಡಿ ನಿರ್ಮಾಣ ಮಾಡಿದ ಹಸಿ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳಿಲ್ಲದೆ ನಾಯಿ, ಆಡುಗಳ ಆಶ್ರಯ ತಾಣವಾಗಿದೆ. ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಿದರೆ ವ್ಯಾಪಾರಿಗೆ ನಷ್ಟವಾಗುತ್ತದೆ ಎಂದು ಪಂಚಾಯಿತಿ ಆಡಳಿತ ನಿರ್ದಾರದಿಂದ ಪೇಟೆಯ ವಿವಿದೆಡೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಟ್ಟಿರುವುದೆ ಮಾರುಕಟ್ಟೆ ಬಿಕೋ ಎನ್ನಲು ಕಾರಣವಾಗಿದೆ. ಮೂರು ವರ್ಷದ ಹಿಂದೆ ಆಲಂಕಾರು ಪೇಟೆಯಲ್ಲಿ ಖಾಸಗಿ ವ್ಯಕ್ತಿಯೋರ್ವರು ಹಸಿ ಮೀನು ಮಾರುಕಟ್ಟೆ ನಿರ್ಮಿಸಿ ಮೀನು […]










