ಕರಾವಳಿ

ಮತ್ತೆ ಮುಳುಗಿದ ‘ಹೊಸ್ಮಠ ಸೇತುವೆ’

(ನ್ಯೂಸ್ ಕಡಬ)newskadaba.com ಕಡಬ, ಜು.24. ಪದೇ ಪದೇ ಮುಳುಗಡೆಗೊಂಡು ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಹೊಸ್ಮಠ ಮುಳುಗು ಸೇತುವೆಯು ಸೋಮವಾರ ಸಂಜೆ ಮತ್ತೆ ಮುಳುಗಡೆಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲವು ದಿನಗಳಿಂದ ಪದೇ ಪದೇ ಮುಳುಗಡೆಗೊಳ್ಳುತ್ತಿದ್ದು, ಉಪ್ಪಿನಂಗಡಿ – ಕಡಬ ಸಂಚಾರದಲ್ಲಿ ತಡೆಯಾಗಿದ್ದು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಕೆಲಸ ನಿಮಿತ್ತ ತೆರಳಿರುವ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ.

ಮತ್ತೆ ಮುಳುಗಿದ ‘ಹೊಸ್ಮಠ ಸೇತುವೆ’ Read More »

ಕರಾವಳಿ

ಮಲಂಕರ ಕ್ಯಾಥೋಲಿಕ್ ಚರ್ಚ್ ಸ್ಥಾಪಕ ಮಾರ್ ಇವಾನಿಯೋಸ್ ರ 65 ನೇ ಪುಣ್ಯಸ್ಮರಣೆ ► ಕೆರ್ಮಾಯಿ ಸೈಂಟ್ ಮೇರೀಸ್ ಚರ್ಚ್‌ನಲ್ಲಿ ಅನುಸ್ಮರಣಾ ಪಾದಯಾತ್ರೆ

(ನ್ಯೂಸ್ ಕಡಬ) newskadaba.com ಕಡಬ, ಜು.23. ಮಲಂಕರ ಕ್ಯಾಥೋಲಿಕ್ ಚರ್ಚ್ನ ಸ್ಥಾಪಕ ದೇವದಾಸ ಮಾರ್ ಇವಾನಿಯೋಸ್ ಅವರ 65 ನೇ ಪುಣ್ಯಸ್ಮರಣೆ ಹಾಗೂ ಅನುಸ್ಮರಣಾ ಪಾದಯಾತ್ರೆಯು ಮಲಂಕರ ಕ್ಯಾಥೋಲಿಕ್ ಚರ್ಚ್ನ ಪುತ್ತೂರು ಧರ್ಮಪ್ರಾಂತ್ಯದ ದಕ್ಷಿಣ ಕನ್ನಡ ವಲಯದ ಕರ್ಮಾಯಿ ಸೈಂಟ್ ಮೇರೀಸ್ ಚರ್ಚ್ನ ಆತಿಥ್ಯದಲ್ಲಿ ರವಿವಾರ ಜರಗಿತು. ಮಲಂಕರ ಕ್ಯಾಥೋಲಿಕ್ ಚರ್ಚ್ನ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ|ಡಾ| ಎಲ್ದೋ ಪುತ್ತನ್ಕಂಡತ್ತಿಲ್ ಅವರೊಂದಿಗೆ ಪುತ್ತೂರು ಧರ್ಮಪ್ರಾಂತ್ಯದ ಚಾನ್ಸಿಲರ್ ವಂ| ಫಿಲಿಪ್ ನೆಲ್ಲಿವಿಳ, ದಕ್ಷಿಣ ಕನ್ನಡ ವಲಯದ ಪೆÇ್ರೀಟೋ ವಿಕಾರ್

ಮಲಂಕರ ಕ್ಯಾಥೋಲಿಕ್ ಚರ್ಚ್ ಸ್ಥಾಪಕ ಮಾರ್ ಇವಾನಿಯೋಸ್ ರ 65 ನೇ ಪುಣ್ಯಸ್ಮರಣೆ ► ಕೆರ್ಮಾಯಿ ಸೈಂಟ್ ಮೇರೀಸ್ ಚರ್ಚ್‌ನಲ್ಲಿ ಅನುಸ್ಮರಣಾ ಪಾದಯಾತ್ರೆ Read More »

ಕರಾವಳಿ

ಗೊಂದಲದ ನಡುವೆ ನಡೆದ ಕೊಯಿಲ ಗ್ರಾಮ ಸಭೆ ► ಸಭೆಯಲ್ಲಿ ಚರ್ಚೆಗೀಡಾದ ಕಂದಾಯ ಇಲಾಖೆಯ ಲಂಚಾವತಾರ

(ನ್ಯೂಸ್ ಕಡಬ) newskadaba.com  ಕಡಬ, ಜು.23. ಕೊಲ ಪಶುಸಂಗೋಪನಾ ಇಲಾಖಾ ಜಾಗದಲ್ಲಿ ಹಾದು ಹೋಗಿರುವ ಸಾರ್ವಜನಿಕರು ಉಪಯೋಗಿಸುತ್ತಿರುವ ರಸ್ತೆ ಅಭಿವೃದ್ದಿಗೆ ಇಲಾಖೆ ಅಡ್ಡಿಪಡಿಸುತ್ತಿದೆ. ಹಾಗಾಗಿ ನಾದುರಸ್ತಿಯಲ್ಲಿರುವ ರಸ್ತೆಯನ್ನು ಅಭಿವೃದ್ದಿಪಡಿಸಬೇಕು. ಗ್ರಾಮ ಸಭೆಯನ್ನು ಮೊಟಕುಗೊಳಿಸಿ ಅದಿಕಾರಿಗಳು ಜನಪ್ರನಿದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದಾಗ ಸಭೆಯಲ್ಲಿ ಗೊಂದಲವೇರ್ಪಟ್ಟು ಬಳಿಕ ಸಭೆಯಲ್ಲಿದ್ದ ಕೆಲ ಜನಪ್ರತಿನಿಧಿಗಳು, ಅಧಿಕಾರಗಳು ಸ್ಥಳಕ್ಕೆ ತೆರಳಿ ತಾತ್ಕಲಿಕ ಪರಿಹಾರ ನೀಡುವ ಭರವಸೆ ನೀಡಿದ ಘಟನೆ ಕೊೈಲ ಗ್ರಾಮ ಸಭೆಯಲ್ಲಿ ನಡೆದಿದೆ. ಶನಿವಾರ  ಗ್ರಾಮ ಪಂಚಾಯಿತಿ

ಗೊಂದಲದ ನಡುವೆ ನಡೆದ ಕೊಯಿಲ ಗ್ರಾಮ ಸಭೆ ► ಸಭೆಯಲ್ಲಿ ಚರ್ಚೆಗೀಡಾದ ಕಂದಾಯ ಇಲಾಖೆಯ ಲಂಚಾವತಾರ Read More »

ಕರಾವಳಿ

ಕಡಬ ಗೃಹರಕ್ಷಕ ದಳದವರಿಂದ ವನಮಹೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿನ ಗೃಹರಕ್ಷಕ ದಳದವರಿಂದ ವನಮಹೋತ್ಸವ ಆಚರಣೆ ಜು.22ರಂದು ಕಡಬ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ| ಮುರಳಿಮೋಹನ್ ಚೂಂತಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕಡಬ ಶ್ರೀ ದುರ್ಗಾಣಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ,ನಿವೃತ್ತ ಮುಖ್ಯ ಗುರು ಜನಾರ್ದನ ಗೌಡ ಪಣೆಮಜಲು ರವರು ಮಾತನಾಡಿ, ಮನುಷ್ಯ ಸಂಕುಲ ಮುಂದೆ ಉಳಿಯಬೇಕಾದರೆ ನಮಗೆ ಆಮ್ಲಜನಕ ಬೇಕು, ಈ ಆಮ್ಲಜನಕ ಮರ ಗಿಡಗಳಿಗೆ ಬಿಟ್ಟು ಯಾವುದೇ ಪ್ಯಾಕ್ಟರಿಯಿಂದ

ಕಡಬ ಗೃಹರಕ್ಷಕ ದಳದವರಿಂದ ವನಮಹೋತ್ಸವ ಆಚರಣೆ Read More »

ಕರಾವಳಿ

ಕೋಡಿಂಬಾಳ: ಅರ್ಪಾಜೆ ಕೆರೆ ಒತ್ತುವರಿ ಆರೋಪ ►ಸರ್ವೆ ನಡೆಸಿ ಗಡಿ ಗುರುತು ಮಾಡಿದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಜು.22. ಕೋಡಿಂಬಾಳ ಗ್ರಾಮದ ಅರ್ಪಾಜೆ ಎಂಬಲ್ಲಿರುವ ಕೆರೆಯನ್ನು ಒತ್ತುವರಿ ಮಾಡಿ ಸ್ಥಳೀಯರು ರಸ್ತೆ ನಿರ್ಮಿಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಜು.21ರಂದು ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರ ನೇತೃತ್ವದಲ್ಲಿ ಸರ್ವೆ ನಡೆಸಲಾಯಿತು. ಕೋಡಿಂಬಾಳ ಗ್ರಾಮದ ಅರ್ಪಾಜೆಯಲ್ಲಿ ಸರ್ವೆ ನಂ.33/3ರಲ್ಲಿ 0.62 ಎಕ್ರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿ ನೀರು ಸಂಗ್ರಹವಾಗದಂತೆ ಮಾಡಲಾಗಿದೆ ಎನ್ನುವ ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಗಡಿ ಗುರುತು ಮಾಡಿ ಕೆರೆಯನ್ನು ಸಂರಕ್ಷಿಸಲು ಮುಂದಾಗಿರುವ ಕಂದಾಯ ಇಲಾಖೆ, ಭೂಮಾಪನ

ಕೋಡಿಂಬಾಳ: ಅರ್ಪಾಜೆ ಕೆರೆ ಒತ್ತುವರಿ ಆರೋಪ ►ಸರ್ವೆ ನಡೆಸಿ ಗಡಿ ಗುರುತು ಮಾಡಿದ ಅಧಿಕಾರಿಗಳು Read More »

ಕರಾವಳಿ

ಮೇಲ್ಛಾವಣಿ ಸಮೇತ ನೆಲಕ್ಕುರುಳಿದ ಕಡಬದ ಸರಕಾರಿ ಕಾಲೇಜು ಕಟ್ಟಡ ► ವಿದ್ಯಾರ್ಥಿಗಳು ಇಲ್ಲದಿದ್ದರಿಂದ ತಪ್ಪಿದ ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಜು.22. ಇಲ್ಲಿನ ಸರಕಾರಿ ಪ.ಪೂ.ಕಾಲೇಜಿನ ಗೋಡೆಯು ಈ ಹಿಂದೆ ಬಿರುಕು ಬಿಟ್ಟಿದ್ದು, ಶನಿವಾರದಂದು ಮೇಲ್ಛಾವಣಿ ಸಮೇತ ಗೋಡೆಯು ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿದೆ. ಮಳೆಗಾಲ ಪ್ರಾರಂಭದಲ್ಲಿಯೇ ಕಟ್ಟಡ ಕುಸಿಯುವ ಹಂತದಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದು ಬದಲಿ ವ್ಯವಸ್ಥೆ ಮಾಡಿ ಪಾಠ ಪ್ರವಚನ ನಡೆಯುತ್ತಿದೆ. ಜಿ.ಪಂ. ಇಂಜಿನಿಯರ್ ಭರತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೊದಲೇ ಕಟ್ಟಡ, ಕೊಠಡಿ ಸ್ಥಳವಕಾಶದ ಕೊರತೆಯಿರುವ ಈ ಕಾಲೇಜಿನಲ್ಲಿ ಈಗ ಕಟ್ಟಡ ಕುಸಿದಿರುವುದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಕಡಬ

ಮೇಲ್ಛಾವಣಿ ಸಮೇತ ನೆಲಕ್ಕುರುಳಿದ ಕಡಬದ ಸರಕಾರಿ ಕಾಲೇಜು ಕಟ್ಟಡ ► ವಿದ್ಯಾರ್ಥಿಗಳು ಇಲ್ಲದಿದ್ದರಿಂದ ತಪ್ಪಿದ ಸಂಭಾವ್ಯ ಅನಾಹುತ Read More »

ಕರಾವಳಿ

►►ಕವರ್ ಸ್ಟೋರಿ ► ಪೇರಡ್ಕ – ಕಾಯರಡ್ಕ ರಸ್ತೆಯಲ್ಲಿ ಸಂಚಾರ ದುಸ್ತರ ► ಅಪತ್ಭಾಂದವ ರಸ್ತೆಯಲ್ಲಿ ಎರಡು ಕಿ.ಮೀ. ಸಂಚರಿಸಲು 20 ನಿಮಿಷ..!!

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಒಂದು ಕಡೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪತಗೊಂಡು ಸಂಚಾರದಲ್ಲಿ ಸುಗಮವಾಗುವ ಈ ಕಾಲದಲ್ಲಿ, ಅದೆಷ್ಟೋ ಗ್ರಾಮೀಣ ಭಾಗದ ರಸ್ತೆಗಳಿಗೆ ಇಂದಿಗೂ ದುರಸ್ಥಿ ಭಾಗ್ಯ ದೊರೆಯದೆ, ನಿತ್ಯ ನರಕಯಾತನೆಯಲ್ಲಿ ಸಂಚರಿಸುವ ಸ್ಥಿತಿ ಉಂಟಾಗಿರುವುದು, ಆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅದರ ಕಷ್ಟದ ಅನುಭವ.! ಈ ಸಾಲಿಗೆ ಕಡಬ ತಾಲೂಕು ಕೇಂದ್ರವನ್ನು ಮತ್ತು ಸುಬ್ರಹ್ಮಣ್ಯ -ಧರ್ಮಸ್ಥಳ ರಾ.ಹೆ. ಹಾಗೂ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪ್ರಮುಖ ರಸ್ತೆಯಾದ  ಪೇರಡ್ಕ -ಕಾಯರಡ್ಕ ಜಿ.ಪಂ.ರಸ್ತೆಯು ಒಂದಾಗಿದೆ.

►►ಕವರ್ ಸ್ಟೋರಿ ► ಪೇರಡ್ಕ – ಕಾಯರಡ್ಕ ರಸ್ತೆಯಲ್ಲಿ ಸಂಚಾರ ದುಸ್ತರ ► ಅಪತ್ಭಾಂದವ ರಸ್ತೆಯಲ್ಲಿ ಎರಡು ಕಿ.ಮೀ. ಸಂಚರಿಸಲು 20 ನಿಮಿಷ..!! Read More »

ಕರಾವಳಿ

ನಾಳೆ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ತರ ಪೂರ್ವ ತಯಾರಿ ಸಭೆ

(ನ್ಯೂಸ್ ಕಡಬ) newskadaba.com ಆಲಂಕಾರು, ಜು.21. 2019ರಲ್ಲಿ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಿಸಲಿದ್ದು ಇದರ ಬಗ್ಗೆ ಪೂರ್ವ ತಯಾರಿ ಸಬೆಯು ಜು.22 ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಸಭಾಭವನದಲ್ಲಿ ನಡೆಯಲಿದೆ. ಇದೇ ವೇಳೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ಪೊಷಕರು, ಊರ ವಿದ್ಯಾಭಿಮಾನಿಗಳ ಸಮ್ಮುಖದಲ್ಲಿ ಶತಮಾನೋತ್ಸವ ಸಮಿತಿಯ ರಚನೆಯನ್ನು ಮಾಡಲಿದ್ದು, ಈ ಪೂರ್ವಭಾವಿ ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಸಂಬಂಧಪಟ್ಟವರು ಭಾಗವಹಿಸುವಂತೆ ಶಾಲೆಯ ಪ್ರಕಟಣೆ ತಿಳಿಸಿದೆ.

ನಾಳೆ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ತರ ಪೂರ್ವ ತಯಾರಿ ಸಭೆ Read More »

ಕರಾವಳಿ

ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ(ರಿ) ► ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪುತ್ತೂರು ಘಟಕದ ಹತ್ತನೆ ಮಾಸಿಕ ಸಹಾಯ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಮಂಗಳೂರಿನ ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ ಪುತ್ತೂರು  ಘಟಕದ ಹತ್ತನೆ ಮಾಸಿಕ ಸಹಾಯ ಯೋಜನೆಯಡಿಯಲ್ಲಿ ಬಡ ಮತ್ತು  ಕ್ಕಾಗಿ ಸಹಾಯದ ಅಂಗವಾಗಿ  ಎರಡನೇ ದತ್ತು ಯೋಜನೆಯಾಗಿ ಪುತ್ತೂರು ತಾಲೂಕಿನ ಗೋಳಿತ್ತಡಿ ನಡುಕೂಟೇಲು ಸಂಜೀವ ಪೂಜಾರಿಯವರ ಪುತ್ರಿ ನವ್ಯಶ್ರೀ  ಮತ್ತು ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಜತ್ತಪ್ಪರವರ ಪುತ್ರಿ ಪೂಜಾ  ಅವರಿಗೆ ಆರ್ಥಿಕ ಸಹಾಯವನ್ನು  ನೀಡಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ವಿಧ್ಯೆಯಿಂದ ಸ್ವತಂತ್ರರಾಗಿ ತತ್ವದಡಿಯಲ್ಲಿ ಬಡ ಮತ್ತು ಪ್ರತಿಭಾವಂತ

ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ(ರಿ) ► ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪುತ್ತೂರು ಘಟಕದ ಹತ್ತನೆ ಮಾಸಿಕ ಸಹಾಯ Read More »

ಕರಾವಳಿ

ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ► ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಅರಣ್ಯ ರಕ್ಷಣೆ ಮತ್ತು ಅಂತರ್ಜಲ ವೃದ್ದಿಯ ಮೂಲಕ ಮುಂದಿನ ಜನಾಂಗಕ್ಕೆ ಆರೋಗ್ಯ ಪೂರ್ಣ ಸಮಾಜವನ್ನು ಬಳುವಳಿಯಾಗಿ ನೀಡಬೇಕಾಗಿದೆ ಎಂದು ಜಲಾನಯನಾ ಯೋಜನೆಯ ಐದನೇ ಘಟಕದ ನಾಯಕ ಚಿದಾನಂದ ಹೇಳಿದರು.    ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ಜಲಾನಯನ ಯೋಜನೆ ಐದನೇ ಘಟಕದ ಆಶ್ರಯದಲ್ಲಿ ಅರಣ್ಯ ಘಟಕಗಳ ಗಿಡ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.  ಮನುಷ್ಯ ಇಂದು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಬಲಿಕೊಡುತ್ತಿದ್ದಾನೆ. ಇದರ

ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ► ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ Read More »

ಕರಾವಳಿ
Scroll to Top