ಉಪ್ಪಿನಂಗಡಿ: ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.30. ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.







ಮೃತ ಬಾಲಕಿಯನ್ನು ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಲಯದ 7 ನೇ ತರಗತಿಯ ವಿದ್ಯಾರ್ಥಿನಿ, ಮೂಲತಃ ಉತ್ತರ ಪ್ರದೇಶ ನಿವಾಸಿ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸ್ತವ್ಯವಿರುವ ರಾಜಕುಮಾರ್ ಚೌಹಾನ್ ಎಂಬವರ ಪುತ್ರಿ ಅಂಜಲಿ ಚೌಹಾನ್(13) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ತನ್ನ ತಮ್ಮ ಹಾಗೂ ಅಮ್ಮನ ಜೊತೆ ಆಟವಾಡಿದ್ದ ಅಂಜಲಿ ವೇಗವಾಗಿ ಮನೆಯೊಳಗೆ ತೆರಳುವಾಗ ತಮ್ಮನಿಗೆ ಆಟವಾಡಲು ಕಟ್ಟಿದ್ದ ತೆಳುವಾದ ಹಗ್ಗ ಆಕೆಯ ಕುತ್ತಿಗೆಗೆ ಸಿಲುಕಿದ ಪರಿಣಾಮ ಅಸ್ವಸ್ಥಳಾಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟಿದ್ದಾಳೆ.






error: Content is protected !!
Scroll to Top