ಕರಾವಳಿ

ಮಂಗಳೂರಿಗೂ ಬಂತು ಬೆಲೆಬಾಳುವ ನಿಷೇಧಿತ ಮಾದಕ ವಸ್ತು MDMA ► ಲಕ್ಷಾಂತರ ಮೌಲ್ಯದ 90 ಗ್ರಾಂ MDMA ಸಹಿತ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.27. ಬೆಲೆಬಾಳುವ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಟಿಪಳ್ಳ ನಿವಾಸಿ ಟಿ.ಅಬ್ದುಲ್ ಖಾದರ್ ಎಂಬವರ ಪುತ್ರ ಮಹಮ್ಮದ್ ಶಾಫಿ(32) ಎಂದು ಗುರುತಿಸಲಾಗಿದೆ. ಆರೋಪಿಯು ನಿಷೇಧಿತ ಮಾದಕ ವಸ್ತುವಾದ (Methylene dioxy methamphetamine) MDMA ಯನ್ನು ಮುಂಬೈಯಿಂದ ಅಕ್ರಮವಾಗಿ ಖರೀದಿಸಿ ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ […]

ಮಂಗಳೂರಿಗೂ ಬಂತು ಬೆಲೆಬಾಳುವ ನಿಷೇಧಿತ ಮಾದಕ ವಸ್ತು MDMA ► ಲಕ್ಷಾಂತರ ಮೌಲ್ಯದ 90 ಗ್ರಾಂ MDMA ಸಹಿತ ಆರೋಪಿಯ ಬಂಧನ Read More »

ಕರಾವಳಿ

ಮಂಗಳೂರು: ನಗರದ ಬಟ್ಟೆ ಮಳಿಗೆಯಲ್ಲಿ ಬೆಂಕಿ ► ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.27. ಬಟ್ಟೆ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿಯುಂಟಾಗಿ ಹೊತ್ತಿ ಉರಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಮಂಗಳೂರಲ್ಲಿ ಗುರುವಾರದಂದು ನಡೆದಿದೆ. ನಗರದ ಜಿಎಚ್ಎಸ್ ರಸ್ತೆಯ ಜನತಾ ಬಝಾರ್ ಬಳಿಯಲ್ಲಿನ ‘ಸೆಲೆಕ್ಷನ್ ಸೆಂಟರ್’ ಬಟ್ಟೆ ಮಳಿಗೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಪರಿಸರವಿಡೀ ಹಬ್ಬಿದೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದ ಶಂಕಿಸಲಾಗಿದ್ದು, ಘಟನೆಯಿಂದಾಗಿ ಅಪಾರ ನಷ್ಟವುಂಟಾಗಿದೆ.

ಮಂಗಳೂರು: ನಗರದ ಬಟ್ಟೆ ಮಳಿಗೆಯಲ್ಲಿ ಬೆಂಕಿ ► ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಇಲಿ ಜ್ವರದಿಂದಾಗಿ ಬಿಜೆಪಿ ಕೋಡಿಂಬಾಳ ಬೂತ್ ಸಮಿತಿಯ ಅಧ್ಯಕ್ಷ ಮೃತಪಟ್ಟ ಹಿನ್ನೆಲೆ ► ಮರಳು ನೀತಿಯ ವಿರುದ್ಧ ಬಿಜೆಪಿಯಿಂದ ನಡೆಯಬೇಕಿದ್ದ ಪ್ರತಿಭಟನೆ ರದ್ದು

(ನ್ಯೂಸ್ ಕಡಬ) newskadaba.com ಕಡಬ, ಸೆ.27. ಇಲಿ ಜ್ವರಕ್ಕೆ ತುತ್ತಾಗಿ ಕೋಡಿಂಬಾಳ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಹರೀಶ್ ಮಜ್ಜಾರು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯದ ಮರಳು ನೀತಿಯ ವಿರುದ್ಧ ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಇಂದು ನಡೆಯಲಿದ್ದ ಬೃಹತ್ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದ್ದು, ಕಡಬ ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಸರಕಾರದ ಮರಳು ನೀತಿಯನ್ನು ವಿರೋಧಿಸಿ ಸೆಪ್ಟೆಂಬರ್ 27 ಗುರುವಾರದಂದು ಕಡಬ ಬಿಜೆಪಿ ಕಛೇರಿಯ ಮುಂಭಾಗದಿಂದ ಮೆರವಣಿಗೆ ಹೊರಟು ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ

ಇಲಿ ಜ್ವರದಿಂದಾಗಿ ಬಿಜೆಪಿ ಕೋಡಿಂಬಾಳ ಬೂತ್ ಸಮಿತಿಯ ಅಧ್ಯಕ್ಷ ಮೃತಪಟ್ಟ ಹಿನ್ನೆಲೆ ► ಮರಳು ನೀತಿಯ ವಿರುದ್ಧ ಬಿಜೆಪಿಯಿಂದ ನಡೆಯಬೇಕಿದ್ದ ಪ್ರತಿಭಟನೆ ರದ್ದು Read More »

ಕರಾವಳಿ

ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀಣೋದ್ದಾರದ ಬಗ್ಗೆ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ.27. ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀಣೋದ್ದಾರ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ದೇವಳದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತಾಯ ಮಾತನಾಡಿ, ಶಿಕ್ಷಣ ಕೇಂದ್ರ, ದೇವಾಲಯದ ಅಭಿವೃದ್ದಿಯಾದಲ್ಲಿ ಆ ಊರಿನಲ್ಲಿ ಶಾಂತಿ ನೆಮ್ಮದಿ ಸುಖ ನೆಲೆಸುತ್ತದೆ. ದೇವಸ್ಥಾನದ ಜೀಣೋದ್ದಾರ ಪಾಲ್ಗೊಂಡಲ್ಲಿ ನಮ್ಮ ಪಾಪ ಕರ್ಮಗಳಿಗೆ ಮುಕ್ತಿ ದೊರೆಯುತ್ತದೆ. ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರ ಕಾರ್ಯದಲ್ಲಿ ಭಕ್ತ ಸಮೂಹ ಸ್ವ್ವಚ್ಚೆಯಿಂದ ಪಾಲ್ಗೊಂಡು

ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀಣೋದ್ದಾರದ ಬಗ್ಗೆ ಪೂರ್ವಭಾವಿ ಸಭೆ Read More »

ಕರಾವಳಿ

ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.27. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಭಕ್ತಾದಿ ಮಹಿಳೆಯೋರ್ವರು ಇಲ್ಲಿನ ಸಾರ್ವಜನಿಕ ಬಸ್‌ ನಿಲ್ದಾಣದ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರದಂದು ನಡೆದಿದೆ. ಮೂಲತಃ ಚಿಕ್ಕಮಗಳೂರಿನವರಾದ ತುಂಬು ಗರ್ಭಿಣಿ ಆಶಾ ಎಂಬಾಕೆ ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಂದಿದ್ದು, ಮಂಗಳವಾರ ರಾತ್ರಿ ಬಸ್‌ ನಿಲ್ದಾಣದಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದು, ಆಕೆ ಅಲ್ಲಿ ಗಂಡು‌ ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ

ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ Read More »

ಕರಾವಳಿ

ಕಡಬ: ಜ್ವರ ಉಲ್ಬಣಗೊಂಡು ಯುವಕ ಮೃತ್ಯು ► ಇಲಿಜ್ವರಕ್ಕೆ ಬಲಿಯಾದರೇ ಹರೀಶ್..??

(ನ್ಯೂಸ್ ಕಡಬ) newskadaba.com ಕಡಬ, ಸೆ.27. ತೀವ್ರ ಜ್ವರದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಯುವಕನನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಮಜ್ಜಾರು ನಿವಾಸಿ ಜತ್ತಪ್ಪ ಗೌಡ ಎಂಬವರ ಪುತ್ರ ಹರೀಶ್(26) ಎಂದು ಗುರುತಿಸಲಾಗಿದೆ. ವಾರದ ಹಿಂದೆ ಜ್ವರದಿಂದಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಗುಣಮುಖನಾಗಿ ಮನೆಗೆ ಆಗಮಿಸಿದ್ದು, ಜ್ವರ ಉಲ್ಬಣಗೊಂಡ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರದಂದು ಚಿಕಿತ್ಸೆ ಫಲಕಾರಿಯಾಗದೆ

ಕಡಬ: ಜ್ವರ ಉಲ್ಬಣಗೊಂಡು ಯುವಕ ಮೃತ್ಯು ► ಇಲಿಜ್ವರಕ್ಕೆ ಬಲಿಯಾದರೇ ಹರೀಶ್..?? Read More »

ಕರಾವಳಿ

ಸುಳ್ಯ: ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.27. ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ಸುಳ್ಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ಸುಳ್ಯ ಕೆವಿಜಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ, ಕೇರಳ ಮೂಲದ ನೇಹಾ ಎ. ಥಾಮ್ಸನ್ ಎಂದು ಗುರುತಿಸಲಾಗಿದೆ. ಸುಳ್ಯದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಈಕೆ ಬುಧವಾರ ಸಂಜೆ ಕಾಲೇಜಿನಿಂದ ಹಿಂತಿರುಗಿದ್ದು, ಆ ಬಳಿಕ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಸುಳ್ಯ ಪೊಲೀಸರು

ಸುಳ್ಯ: ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Read More »

ಕರಾವಳಿ

ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ

ಸವಣೂರು : ಸವಣೂರು ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ವಾರ್ಷಿಕ ಸಭೆ ಸವಣೂರು ಅಶ್ವಿನಿ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಸಂಜೆ ನಡೆಯಿತು. ಸಭೆಯಲ್ಲಿ ಕರ್ನಾಟಕ ಟೈಲರ್ ಅಸೋಸಿಯೇಶನ್‌ನ ನಿಕಟಪೂರ್ವ ರಾಜ್ಯ ಕಾರ್ಯದರ್ಶಿರಘುನಾಥ ಅವರು,ಟೈಲರ್‌ಗಳಿಗೆ ಸಿಗುವ ವಿವಿಧ ಸವಲತ್ತು ಹಾಗೂ ಸರಕಾರದ ಯೋಜನೆಗಳನ್ನು ಹೇಗೆ ಜೋಡಿಸಿಕೊಂಡು ಸಂಘದ ಸದಸ್ಯರ ಬೆಳವಣಿಗೆಗೆ ಪೂರಕವಾಗಿ ಮಾಡುವ ಕುರಿತು ಮಾಹಿತಿ ನೀಡಿದರು. ಕೊಡಗು ನೆರೆಯಿಂದ ಸಂತ್ರಸ್ತರಾದ ಅಲ್ಲಿನ ಟೈಲರ್‌ಗಳಿಗೆ ಇಲ್ಲಿನ ಸಮಿತಿಯ ಮೂಲಕ ನೆರವು ನೀಡುವ ಕುರಿತು ವಿವರಿಸಿದರು. ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ

ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ Read More »

ಕರಾವಳಿ

ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆ : ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿ ಪ್ರಥಮ

ಸವಣೂರು : ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ  ಪುಣ್ಚಪ್ಪಾಡಿಯ ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿಯೇ ಹೆಚ್ಚು ಅಂಕಪಡೆದು  ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಮಂಗಳೂರು ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರಿಂದ ತರಬೇತು ಪಡೆದುಕೊಂಡಿದ್ದಾರೆ. ಎಂಎಸ್ಸಿ,ಮೆಥಮೆಟಿಕ್ಸ್,ಸಂಗೀತದಲ್ಲೂ ಸೀನಿಯರ್ ಪದವಿ ಪಡೆದುಕೊಂಡಿರುವ ಇವರು ಕೂಚುಪುಡಿ ನೃತ್ಯ ತರಬೇತಿಯನ್ನೂ ಪಡೆದುಕೊಂಡಿರುವ ಇವರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗಣಿತ ಉಪನ್ಯಾಸಕಿಯಾಗಿದ್ದಾರೆ. ಇವರು ಪುಣ್ಚಪ್ಪಾಡಿ

ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆ : ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿ ಪ್ರಥಮ Read More »

ಕರಾವಳಿ, ಕರ್ನಾಟಕ

ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೭-೧೮ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ನಡೆಯಿತು. ಸಂಘವು ೨೦೧೭-೧೮ನೇ ಸಾಲಿನಲ್ಲಿ ೧೩,೧೦,೮೧೫.೭೧ ಲಕ್ಷ ರೂ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ ೨೦ ಡಿವಿಡೆಂಡ್ ನೀಡಲು ಸಂಘ ನಿರ್ಧರಿಸಿದೆ.  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಸಂಘವು ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು, ನಮ್ಮ ಆಡಳಿತ ಮಂಡಳಿಯು ಪ್ರಾಮಾಣಿಕವಾಗಿ ಸಂಘವನ್ನು ಮುನ್ನಡೆಸಿದ್ದೇವೆ ಎಂಬ ತೃಪ್ತಿ

ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ Read More »

ಕರಾವಳಿ
Scroll to Top