ಕರಾವಳಿ

ಮಂಗಳೂರು: ಕರಾವಳಿಗೆ ಕಾಲಿಟ್ಟ ಹಿಂಗಾರು ಮಳೆ ► ಬಂದರ್ ನಲ್ಲಿ ಚಂಡಮಾರುತದ ಬಗ್ಗೆ ಮೈಕ್ ಮೂಲಕ ಎಚ್ಚರಿಕೆ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಅ.04. ಕರಾವಳಿಗೆ ಹಿಂಗಾರು ಮಳೆಯು ಕಾಲಿಟ್ಟಿದ್ದು, ಶುಕ್ರವಾರದಿಂದ ಮಳೆಯ ಅಬ್ಬರ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ಶುಕ್ರವಾರದಿಂದ ತೀವ್ರ ರೀತಿಯ ವಾಯುಭಾರ ಕುಸಿತವುಂಟಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಂಭವವಿದ್ದು, ಈಗಾಗಲೇ ಸಮುದ್ರಕ್ಕಿಳಿದಿರುವ ಮೀನುಗಾರರು ಅಕ್ಟೋಬರ್ 05 ರ ಒಳಗೆ ಹಿಂತಿರುಗಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಮಲ್ಪೆ […]

ಮಂಗಳೂರು: ಕರಾವಳಿಗೆ ಕಾಲಿಟ್ಟ ಹಿಂಗಾರು ಮಳೆ ► ಬಂದರ್ ನಲ್ಲಿ ಚಂಡಮಾರುತದ ಬಗ್ಗೆ ಮೈಕ್ ಮೂಲಕ ಎಚ್ಚರಿಕೆ..!! Read More »

ಕರಾವಳಿ

ಮರ್ಧಾಳ: ರಿಕ್ಷಾದಲ್ಲಿಟ್ಟು ಅಕ್ರಮ ಮದ್ಯ ಸರಬರಾಜು ► 23 ಪ್ಯಾಕೆಟ್ ಮದ್ಯಗಳೊಂದಿಗೆ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಅ.02. ರಿಕ್ಷಾವೊಂದರಲ್ಲಿ ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದ ಘಟನೆಯನ್ನು ಪತ್ತೆ ಹಚ್ಚಿರುವ ಕಡಬ ಪೊಲೀಸರು 23 ಮದ್ಯದ ಪ್ಯಾಕೆಟ್ ನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮರ್ಧಾಳದಲ್ಲಿ ರಿಕ್ಷಾ ಚಾಲಕನಾಗಿರುವ ನವಾಝ್ ಎಂದು ಗುರುತಿಸಲಾಗಿದೆ. ಮಂಗಳವಾರದಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮದ್ಯದಂಗಡಿ ಮುಚ್ಚಿದ್ದು, ಆರೋಪಿಯು ಬೊಳ್ಳೂರು ಕ್ರಾಸ್ ಬಳಿ ರಿಕ್ಷಾದಲ್ಲಿ ಮದ್ಯವನ್ನು ಸರಬರಾಜು ಮಾಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಡಬ ಪೊಲೀಸರು ಮದ್ಯದ ಪ್ಯಾಕೆಟ್ ಗಳೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.

ಮರ್ಧಾಳ: ರಿಕ್ಷಾದಲ್ಲಿಟ್ಟು ಅಕ್ರಮ ಮದ್ಯ ಸರಬರಾಜು ► 23 ಪ್ಯಾಕೆಟ್ ಮದ್ಯಗಳೊಂದಿಗೆ ಆರೋಪಿಯ ಬಂಧನ Read More »

ಕರಾವಳಿ

ಕಡಬ ಠಾಣಾ ಪೊಲೀಸರಿಗೆ ಹಲ್ಲೆ ಪ್ರಕರಣ ► ಆರೋಪಿಗಳಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಅ.02. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸ್ ವಾಹನಕ್ಕೆ ಹಾನಿಗೈದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಭಾನುವಾರ ರಾತ್ರಿ ಕಡಬ ಎಸ್‍ಐ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳಾದ ಶಿವಪ್ರಸಾದ್, ಪುಟ್ಟಸ್ವಾಮಪ್ಪ, ಶ್ರೀಶೈಲ ಹಾಗೂ ಗಹರಕ್ಷಕ ದಳದ ಸಿಬಂದಿ ಯೋಗೀಶ್ ಅವರು ಮರ್ದಾಳ ಸಮೀಪದ ಚಾಕೊಟೆಕೆರೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಇಚ್ಲಂಪಾಡಿ ಗ್ರಾಮದ ಮುಚ್ಚಿಲ ಮನೆ

ಕಡಬ ಠಾಣಾ ಪೊಲೀಸರಿಗೆ ಹಲ್ಲೆ ಪ್ರಕರಣ ► ಆರೋಪಿಗಳಿಗೆ ನ್ಯಾಯಾಂಗ ಬಂಧನ Read More »

ಕರಾವಳಿ

ಕಂದಾಯ ಹಾಗೂ ಪೊಲೀಸ್ ಇಲಾಖೆಯಿಂದ ದಲಿತರಿಗೆ ಅನ್ಯಾಯದ ಆರೋಪ ► ಅ.18 ರಂದು ಕಡಬ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.01. ಕಡಬ ತಾಲೂಕು ಕಂದಾಯ ಇಲಾಖೆ ಹಾಗೂ ಪೋಲೀಸ್ ಇಲಾಖೆಯಿಂದ ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಡಬ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಅ.18 ರಂದು ಕಂದಾಯ ಇಲಾಖೆಯ ಕಚೇರಿ ಹಾಗೂ ಪೋಲೀಸ್ ಠಾಣೆಯ ಎರಡು ಕಡೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ವಸಂತ ಕುಬಲಾಡಿ ಹೇಳಿದರು. ಅವರು ಸೆ.30ರಂದು ಕಡಬ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಲಿತರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ

ಕಂದಾಯ ಹಾಗೂ ಪೊಲೀಸ್ ಇಲಾಖೆಯಿಂದ ದಲಿತರಿಗೆ ಅನ್ಯಾಯದ ಆರೋಪ ► ಅ.18 ರಂದು ಕಡಬ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ Read More »

ಕರಾವಳಿ

ಕಡಬ: ಪಿಕಪ್ ಗೆ ಹಿಂದಿನಿಂದ ದ್ವಿಚಕ್ರ ವಾಹನ ಢಿಕ್ಕಿ ► ಸುಬ್ರಹ್ಮಣ್ಯ ಕಾಲೇಜಿನ ವಿದ್ಯಾರ್ಥಿ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಅ.01. ಪಿಕಪ್ ಗೆ ಹಿಂದಿನಿಂದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಕೃಷ್ಣನಗರ ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನವನ್ನು ಪರಿಚಯಸ್ಥರನ್ನು ಕರೆದುಕೊಳ್ಳುವ ಸಲುವಾಗಿ ನಿಲ್ಲಿಸಿದ್ದು, ಹಿಂದಿನ ತೆರಳುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುಬ್ರಹ್ಮಣ್ಯದ ಕಾಲೇಜು ವಿದ್ಯಾರ್ಥಿ ಕೊಣಾಜೆ ಗ್ರಾಮದ ಕಲ್ಲೂರು ನಿವಾಸಿ ಎಲ್ಯಣ್ಣ ಗೌಡ ಎಂಬವರ

ಕಡಬ: ಪಿಕಪ್ ಗೆ ಹಿಂದಿನಿಂದ ದ್ವಿಚಕ್ರ ವಾಹನ ಢಿಕ್ಕಿ ► ಸುಬ್ರಹ್ಮಣ್ಯ ಕಾಲೇಜಿನ ವಿದ್ಯಾರ್ಥಿ ಗಂಭೀರ Read More »

ಕರಾವಳಿ

ಕೊಣಾಜೆ: ಯುವಕನಿಗೆ ಚೂರಿ ಇರಿತ ► ಮೂವರ ತಂಡದಿಂದ ಕೃತ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.01. ಯುವಕನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಗರದ ಹೊರವಲಯದ ಕೊಣಾಜೆ ಸಮೀಪದ ಅಸೈಗೋಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಹಾವೇರಿಯ ರಮೇಶ್ (26) ಚೂರಿ ಇರಿತಕ್ಕೊಳಗಾದವರು. ರಮೇಶ್ ಅಸೈಗೋಳಿ ಜಂಕ್ಷನ್ ನಲ್ಲಿ ನಿಂತಿದ್ದ ವೇಳೆ ಮೂವರ ತಂಡವೊಂದು ಚೂರಿಯಿಂದ ಇರಿದು ಪರಾರಿಯಾಗಿದೆ‌. ಗಾಯಾಳುವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಶಮೀರ್, ಶವಾಝ್ ಹಾಗೂ ಇಲ್ಯಾಸ್ ಎಂಬವರು ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಕೊಣಾಜೆ: ಯುವಕನಿಗೆ ಚೂರಿ ಇರಿತ ► ಮೂವರ ತಂಡದಿಂದ ಕೃತ್ಯ Read More »

ಕರಾವಳಿ

►► Big Breaking News ► ಕಡಬ ಠಾಣಾ ಎಸ್ಐ ಹಾಗೂ ಸಿಬ್ಬಂದಿಗಳಿಗೆ ಪಾನಮತ್ತ ಗುಂಪಿನಿಂದ ಹಲ್ಲೆ ► ಆಸ್ಪತ್ರೆಗೆ ದಾಖಲಾದ ಪೊಲೀಸರು..!!

(ನ್ಯೂಸ್ ಕಡಬ) newskadaba.com ಕಡಬ, ಸೆ.30. ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪಾನಮತ್ತರಾಗಿ ಆಗಮಿಸಿದ ನಾಲ್ವರು ಕಡಬ ಪೊಲೀಸ್ ಉಪ ನಿರೀಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಮರ್ಧಾಳದ ಚಾಕೋಟೆಕೆರೆಯಲ್ಲಿರುವ ಮದ್ಯದಂಗಡಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ಶಿವಪ್ರಸಾದ್, ಶ್ರೀಶೈಲ, ಗೃಹರಕ್ಷಕ ದಳದ ಸಿಬ್ಬಂದಿ ಯೋಗೀಶ್ ಮದ್ಯಪಾನ ಮಾಡಿರುವುದನ್ನು

►► Big Breaking News ► ಕಡಬ ಠಾಣಾ ಎಸ್ಐ ಹಾಗೂ ಸಿಬ್ಬಂದಿಗಳಿಗೆ ಪಾನಮತ್ತ ಗುಂಪಿನಿಂದ ಹಲ್ಲೆ ► ಆಸ್ಪತ್ರೆಗೆ ದಾಖಲಾದ ಪೊಲೀಸರು..!! Read More »

ಕರಾವಳಿ

ಕೊಯಿಲ: ಕಾಲೇಜು ವಿದ್ಯಾರ್ಥಿನಿಯ ಜುಟ್ಟು ಹಿಡಿದು ಜೀವ ಬೆದರಿಕೆ ► ಐವರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಸೆ.30. ವಿದ್ಯಾರ್ಥಿನಿಯೋರ್ವಳು ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಠಾಣಾ ವ್ಯಾಪ್ತಿಯ ಕೊಯಿಲ ಎಂಬಲ್ಲಿ ಐವರು ಬಂದು ತನ್ನನ್ನು ಅಪಹರಣಕ್ಕೆ ಯತ್ನಿಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ‌ ಎಂದು ಬಾಲಕಿಯೋರ್ವಳು ಕಡಬ ಠಾಣೆಗೆ ದೂರು ನೀಡಿದ್ದಾಳೆ. ಗುರುವಾರದಂದು ಕಾಲೇಜು ಬಿಟ್ಟು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೊಲೆರೋ ಕಾರಿನಲ್ಲಿ ಆಗಮಿಸಿದ ಪರಿಚಯಸ್ಥರಾದ ಮಹಮ್ಮದ್ ಕೋಲ್ಪೆ, ಅಶ್ರಫ್ ಸಾಲ್ಮರ, ಆದಂ ಕೊಯಿಲ ಹಾಗೂ ಇತರ ಇಬ್ಬರು ತನ್ನ ಕೈ ಹಿಡಿದು, ಜುಟ್ಟನ್ನು ಎಳೆದು ಅಪಹರಣಕ್ಕೆ

ಕೊಯಿಲ: ಕಾಲೇಜು ವಿದ್ಯಾರ್ಥಿನಿಯ ಜುಟ್ಟು ಹಿಡಿದು ಜೀವ ಬೆದರಿಕೆ ► ಐವರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು Read More »

ಕರಾವಳಿ

ಕೊಂಬಾರು: ದ್ವಿತೀಯ ಪಿಯು ವಿದ್ಯಾರ್ಥಿನಿ ಜಾಂಡೀಸ್ ಗೆ ತುತ್ತಾಗಿ ಮೃತ್ಯು ► ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 2017 ಎಸ್ಸೆಸ್ಸೆಲ್ಸಿ ಟಾಪರ್ ಹರ್ಷಾ..!!

(ನ್ಯೂಸ್ ಕಡಬ) newskadaba.com ಕಡಬ, ಸೆ.30. ಜ್ವರ ಹಾಗೂ ಹಳದಿ ಕಾಯಿಲೆಗೆ ತುತ್ತಾಗಿ ಪ್ರಥಮ ಪಿಯು ವಿದ್ಯಾರ್ಥಿನಿಯೋರ್ವಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಕೊಂಬಾರು ಶಾಲಾ ಮುಖ್ಯೋಪಾಧ್ಯಾಯರಾದ ಕೊಂಬಾರು ಹೊಸಬೀಡು ನಿವಾಸಿ ಚಿದಾನಂದ ಗೌಡ ಎಂಬವರ ಪುತ್ರಿ ಹರ್ಷಾ ಕೆ.ಸಿ.(17) ಎಂದು ಗುರುತಿಸಲಾಗಿದೆ. 2017 ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 609 ಅಂಕಗಳನ್ನು ಪಡೆಯುವ ಮೂಲಕ ಕಡಬದ ಕ್ನಾನಾಯ ಜ್ಯೋತಿ ವಿದ್ಯಾಸಂಸ್ಥೆಯ ಟಾಪರ್ ಆಗಿದ್ದ ಈಕೆ, ಬಳಿಕ ಮಂಗಳೂರಿನ ಶಾರದಾ ಪದವಿ

ಕೊಂಬಾರು: ದ್ವಿತೀಯ ಪಿಯು ವಿದ್ಯಾರ್ಥಿನಿ ಜಾಂಡೀಸ್ ಗೆ ತುತ್ತಾಗಿ ಮೃತ್ಯು ► ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 2017 ಎಸ್ಸೆಸ್ಸೆಲ್ಸಿ ಟಾಪರ್ ಹರ್ಷಾ..!! Read More »

ಕರಾವಳಿ

ಮೂಡಬಿದಿರೆ: ಪ್ರೀತಿ ನಿರಾಕರಿಸಿದ ಯುವತಿಯನ್ನು ಇರಿದು ಕೊಂದ..!! ► ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಸೆ.28. ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಇರಿದು ಕೊಂದ ಭಗ್ನ ಪ್ರೇಮಿಯೋರ್ವ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆಯ ಪ್ರಾಂತ್ಯ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಯುವತಿಯನ್ನು ಮೂಡಬಿದ್ರೆಯ ಪ್ರಾಂತ್ಯ ಶಾಲಾ ಬಳಿಯ‌ ನಿವಾಸಿ ಚಂಪವತಿ ಕರ್ಕೇರಾ ಎಂಬವರ ಪುತ್ರಿ ಕು. ಚರಿಷ್ಮಾ ಆರ್. ಎಂದು ಗುರುತಿಸಲಾಗಿದೆ. ಬಜಾಲ್ ನಿವಾಸಿ ಲೋಹಿತ್ ಎಂಬಾತನು ಚರೀಷ್ಮಾಳನ್ನು ಪ್ರೀತಿಸುತ್ತಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರಾಕರಿಸಿದ್ದಳು ಎನ್ನಲಾಗಿದೆ. ಶುಕ್ರವಾರದಂದು ಚರೀಷ್ಮಾ ಮನೆಯಲ್ಲಿ ಓರ್ವಳೇ ಇದ್ದ ಸಂದರ್ಭದಲ್ಲಿ

ಮೂಡಬಿದಿರೆ: ಪ್ರೀತಿ ನಿರಾಕರಿಸಿದ ಯುವತಿಯನ್ನು ಇರಿದು ಕೊಂದ..!! ► ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ Read More »

ಕರಾವಳಿ
Scroll to Top