ಹೆಬ್ರಿ: ಬ್ರೇಕ್ ವೈಫಲ್ಯಕ್ಕೀಡಾಗಿ ಚೆಕ್ ಪೋಸ್ಟ್ ಗೆ ನುಗ್ಗಿದ ಟೆಂಪೋ ಟ್ರಾವೆಲ್ಲರ್ ► ತಪ್ಪಿದ ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಾರ್ಕಳ, ಮೇ‌.01. ಬ್ರೇಕ್ ವೈಫಲ್ಯಕ್ಕೀಡಾದ ಟೆಂಪೋ ಟ್ರಾವೆಲ್ಲರೊಂದು ವಿಧಾನಸಭಾ ಚುನಾವಣಾ ದೃಷ್ಟಿಯಿಂದ ನಿರ್ಮಿಸಲಾದ ಚೆಕ್‌ಪೋಸ್ಟ್ ನಲ್ಲಿ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಮುನ್ನುಗ್ಗುತ್ತಿರುವ ಘಟನೆಯ ವೀಡಿಯೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚುನಾವಣೆಯ ಹಿನ್ನೆಲೆಯಲ್ಲಿ  ಸೋಮೇಶ್ವರದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಸೋಮವಾರ ಸಂಜೆ ವೇಳೆಗೆ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಆಗುಂಬೆ ಘಾಟಿಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರೊಂದು ಬ್ರೇಕ್ ವೈಫಲ್ಯಕ್ಕೀಡಾಗಿ ವೇಗವಾಗಿ ಬಂದು ಚೆಕ್‌ಪೋಸ್ಟ್ ನಲ್ಲಿ ನಿಂತಿದ್ದ ವಾಹನಗಳ ಮಧ್ಯೆ ಬ್ಯಾರಿಕೇಡ್ ತಳ್ಳಿಕೊಂಡು ಮುಂದೆ ಸಾಗಿದೆ. ಇದರಿಂದಾಗಿ ಭದ್ರತಾ ಸಿಬ್ಬಂದಿಗಳು ಹಾಗೂ ಉಳಿದ ವಾಹನ ಚಾಲಕರು ಗಾಬರಿಗೊಂಡಿದ್ದಾರೆ. ಟ್ರಾವೆಲ್ಲರ್ ಚಾಲಕ ಬೆಂಗಳೂರು ಮೂಲದ ವೆಂಕಟೇಶ್‌ ರಾಜು(26) ರವರ ಸಮಯಪ್ರಜ್ಞೆಯಿಂದ ಸಂಭವೀಯ ಅವಘಡವೊಂದು ತಪ್ಪಿದಂತಾಗಿದೆ.

Scroll to Top