
(ನ್ಯೂಸ್ ಕಡಬ) newskadaba.com, ಅ. 07. ಪಣಂಬೂರು ಬೀಚ್ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದ 14 ವರ್ಷದ ಬಾಲಕನ ಮೃತದೇಹ ಮಂಗಳವಾರ ಸಂಜೆ ಹೆಜಮಾಡಿ ಕೋಡಿಯ ಶಾಂಭವಿ ನದಿ ತೀರದಲ್ಲಿ ಪತ್ತೆಯಾಗಿದೆ.
ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿಯಾದ ಶ್ರೇಯಸ್, ಹುಲಿವೇಷ ಕುಣಿತದ ತರಬೇತಿಗಾಗಿ ಅಕ್ಟೋಬರ್ 4ರಂದು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದನು.ತರಬೇತಿ ಮುಗಿಸಿ ಪಣಂಬೂರು ಬೀಚ್ಗೆ ತೆರಳಿದ್ದ ವೇಳೆ ಸಂಜೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲಾಗಿದ್ದನು.
ಘಟನೆಯಿಂದ ಭಯಬಿದ್ದ ಸ್ನೇಹಿತರು ತಕ್ಷಣವೇ ಕುಟುಂಬಸ್ಥರಿಗೆ ಮಾಹಿತಿ ನೀಡದೆ, ಮರುದಿನ ಬೆಳಿಗ್ಗೆ ತಿಳಿಸಿದ್ದರು.ಮಾಹಿತಿ ತಿಳಿಯುತ್ತಿದ್ದಂತೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ನಡೆಸಲಾಗಿತ್ತು. ಪ್ರಸ್ತುತ ತಂದೆ ಶೇಷಪ್ಪ ಅವರು ಮೃತದೇಹವನ್ನು ಗುರುತಿಸಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




