ಕರಾವಳಿ

ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ

ಸವಣೂರು: ರಾಜ್ಯ ಸರಕಾರ ಸಾಲಮನ್ನಾ ಮಾಡಿ ರೈತರನ್ನು ಸಾಲಮುಕ್ತರನ್ನಾಗಿಸುವ ಪ್ರಕ್ರಿಯೆಯಲ್ಲಿರುವಾಗ ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮರುಪಾವತಿಸಲು ಅಡಕೆ ಬೆಳೆಗಾರರಿಗೆ ಲೀಗಲ್ ನೊಟೀಸ್ ಕಳುಹಿಸಲಾಗುತ್ತಿದ್ದು ಇದನ್ನು ಖಂಡಿಸಿ  ಅ.1ರಂದು  ಸವಣೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೊಟೀಸ್ ಮೂಲಕ ರೈತರನ್ನು  ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ.ಎಚ್ಚರಿಕೆ ನೀಡುವ ಸಲುವಾಗಿ ಸವಣೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ನರಿಮೊಗರು : ಯುವತಿ ಮಂಡಲದಿಂದ  ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ

ನರಿಮೊಗರು  ; ಇಲ್ಲಿನ ಪ್ರಖ್ಯಾತಿ ಯುವತಿ ಮಂಡಲ ಪುರುಷರಕಟ್ಟೆ ಇದರ ವತಿಯಿಂದ ತಾಲೂಕು ಯುವಜನ ಒಕ್ಕೂಟ ಪುತ್ತೂರು ಮತ್ತು ನೆಹರು ಯುವಕೇಂದ್ರ ಮಂಗಳೂರು ಇದರ  ಸಹಕಾರದೊಂದಿಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತೆ ಮಾಡಲಾಯಿತು.   ಪುರುಷರಕಟ್ಟೆ-ಶಾಂತಿಗೋಡು ರಸ್ತೆಯ ಬದಿಯಲ್ಲಿ ಇದ್ದ ಪ್ಲಾಸ್ಟಿಕ್, ಕಾಗದ, ಕಸ ಕಡ್ಡಿಗಳನ್ನು ತೆಗೆದು ಶುಚಿಗೊಳಿಸಿ-ಎಲ್ಲೆಂದರಲ್ಲಿ ಕಸವನ್ನು ಎಸೆಯದಂತೆ, ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡುವಂತೆ ವಿನಂತಿಸಲಾಯಿತು.   ಈ ಸಂದರ್ಭ ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಕು.ಜಿಸ್ಮಿತಾ ಕೆ.ಆರ್ ಸಹಕರಿಸಿದರು,

ನರಿಮೊಗರು : ಯುವತಿ ಮಂಡಲದಿಂದ  ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ Read More »

ಕರಾವಳಿ

ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ

ಪುತ್ತೂರು : ರಾಷ್ಟ್ರೀಯತೆ ಯ ಚಿಂತನೆ ಎಲ್ಲರಲ್ಲೂ ಬರಬೇಕು.ಪಕ್ಷ ,ಸರಕಾರದ ಕುರಿತು ಚಿಂತನೆ ಮಾಡುವ ಬದಲು ದೇಶದ ಕುರಿತು ಚಿಂತನೆ ಮಾಡಬೇಕು. ಭಾರತ ದೇಶದ ಬೆಳವಣಿಗೆ ಯುವಜನರ ಕೈಯಲ್ಲಿದೆ.ಸಾಂಸ್ಕೃತಿಕ, ಆದ್ಯಾತ್ಮಿಕತೆ ಹಾಗೂ ಮಾನವ ಸಂಪನ್ಮೂಲ ದಲ್ಲಿ ಅಗ್ರ ಸ್ಥಾನಿಯಾಗಿದೆ.ದೇಶದ ಕುರಿತು ಒಳ್ಳೆಯ ಭಾವನೆ ಇರಬೇಕು. ದಶವನ್ನು ಗೌರವಿಸುವನೋಭಾವ ಬೆಳೆಸಬೇಕು ಎಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಲಿಯೋ ನೊರೊನ್ಹಾ ಹೇಳಿದರು. ಅವರು  ಪುತ್ತೂರು ಸಂತ ಫಿಲೋಮಿನಾ ಪದವಿ ಕಾಲೇಜಿನಲ್ಲಿ  ಭಾರತ ಸರಕಾರದ ಯುವ ಕಾರ್ಯ ಮತ್ತು

ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ Read More »

ಕರಾವಳಿ

ಮಾನವೀಯತೆಯಿಂದ ಮಹಿಳೆಗೆ ಸಹಾಯ ಮಾಡಿದ ಕಡಬದ ಯುವಕರಿಬ್ಬರಿಗೆ ಪೊಲೀಸರಿಂದ ಹಲ್ಲೆ ► ಮಂಗಳೂರು ಪೊಲೀಸರ ಅಮಾನವೀಯ ವರ್ತನೆಗೆ ವ್ಯಾಪಕ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.26. ತನ್ನ ಮೊಬೈಲ್‌ ಗೆ ಬಂದ ಕೊನೆಯ ಕರೆಯ ಸಂಖ್ಯೆಯನ್ನು ತೆಗೆದು ಕೊಡುವಂತೆ ಮಹಿಳೆಯೋರ್ವರು ವಿನಂತಿಸಿದ್ದಕ್ಕೆ ಮಾನವೀಯತಾ ದೃಷ್ಟಿಯಿಂದ ಸಹಾಯ ಮಾಡಲು ತೆರಳಿದ ಕಡಬದ ಇಬ್ಬರು ಯುವಕರಿಗೆ ಮಫ್ತಿಯಲ್ಲಿದ್ದ ಪೊಲೀಸರು ಹಿಗ್ಗಾ ಮುಗ್ಗಾ ಝಾಡಿಸಿ ಒದ್ದು ಹಲ್ಲೆ ನಡೆಸಿದ ಅಮಾನವೀಯ ಘಟನೆ ಬುದ್ದಿವಂತರ ಜಿಲ್ಲೆಯ ಹೃದಯಭಾಗದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೂಲತಃ ಕಡಬ ನಿವಾಸಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಜೋಬಿನ್ ಎಂಬವರ ಚಿಕ್ಕಪ್ಪ ಅನಾರೋಗ್ಯದ ನಿಮಿತ್ತ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ

ಮಾನವೀಯತೆಯಿಂದ ಮಹಿಳೆಗೆ ಸಹಾಯ ಮಾಡಿದ ಕಡಬದ ಯುವಕರಿಬ್ಬರಿಗೆ ಪೊಲೀಸರಿಂದ ಹಲ್ಲೆ ► ಮಂಗಳೂರು ಪೊಲೀಸರ ಅಮಾನವೀಯ ವರ್ತನೆಗೆ ವ್ಯಾಪಕ ಆಕ್ರೋಶ Read More »

ಕರಾವಳಿ

ಕಡಬ: ಬೈಕ್ ಹಾಗೂ ಸ್ವಿಫ್ಟ್ ಗೆ ಢಿಕ್ಕಿ ಹೊಡೆದ ಮಾರುತಿ 800 ಕಾರು ► ಓರ್ವನಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.25. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಸ್ವಿಫ್ಟ್ ಕಾರೊಂದಕ್ಕೆ ಮಾರುತಿ 800 ಕಾರು ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಳಾರ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಕಡಬ ಮಾಲೇಶ್ವರ ನಿವಾಸಿ ಕ್ರೇನ್ ಆಪರೇಟರ್ ಅನಿಲ್ ರವರ ಕಾಲಿಗೆ ಗಂಭೀರ ಸ್ವರೂಪದಲ್ಲಿ ಗಾಯಗಳಾಗಿದ್ದು, ಕಡಬದ 108 ಆಂಬ್ಯಲೆನ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ

ಕಡಬ: ಬೈಕ್ ಹಾಗೂ ಸ್ವಿಫ್ಟ್ ಗೆ ಢಿಕ್ಕಿ ಹೊಡೆದ ಮಾರುತಿ 800 ಕಾರು ► ಓರ್ವನಿಗೆ ಗಂಭೀರ ಗಾಯ Read More »

ಕರಾವಳಿ

ಕೊಲ್ಯೊಟ್ಟು : ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ

ಕಾಣಿಯೂರು :  ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಪ್ರಮುಖಿ ಮಹಿಳಾ ಮಂಡಲ ಕೊಲ್ಯೊಟ್ಟು ನೆಲ್ಯಾಡಿ ಇದರ ವತಿಯಿಂದ ಕೊಲ್ಯೊಟ್ಟು ಅಂಗನವಾಡಿ  ಕೇಂದ್ರದಲ್ಲಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ ಮಂಗಳವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಪಾವತಿ ಮಾತನಾಡಿ, ಕ್ರೀಯಾಶೀಲತೆ ಮತ್ತು ವೈಚಾರಿಕತೆಯಿಂದ ಬದುಕಿದ ಪಂಡಿತ್ ದೀನ್ ದಯಾಳ್ ಉಪಾದ್ಯಾಯರು ಯಾವುದೇ ಸ್ಥಾನವನ್ನು ಬಯಸದೇ ಸಾಮಾನ್ಯ ವ್ಯಕ್ತಿಯಾಗಿಯೇ ಅಸಾಮಾನ್ಯ ಸಾಧನೆ ತೋರಿದವರು.ಅವರ ಜೀವನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಕೊಲ್ಯೊಟ್ಟು : ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ Read More »

ಕರಾವಳಿ, ಕರ್ನಾಟಕ

ಭರತ ನಾಟ್ಯ ಮನಸ್ವಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ

ಸವಣೂರು : : ಕರ್ನಾಟಕ ರಾಜ್ಯ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಲಿಯವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ  ಪುತ್ತೂರು ದರ್ಬೆ ಶ್ರೀ ಶಾರದಾ ಕಲಾ ಕೇಂದ್ರದ ಸುದರ್ಶನ್ ಭಟ್ ಅವರ ಶಿಷ್ಯೆ ದೀಪ್ತಿಯವರ ಶಿಷ್ಯೆ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ೬ನೇ ತರಗತಿ ವಿದ್ಯಾರ್ಥಿನಿ ಮನಸ್ವಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಸವಣೂರು ಗ್ರಾ.ಪಂ.ಲೆಕ್ಕ ಸಹಾಯಕ ಎ.ಮನ್ಮಥ ಮತ್ತು ಪ್ರಮೀಳಾ ದಂಪತಿಯ ಪುತ್ರಿ.

ಭರತ ನಾಟ್ಯ ಮನಸ್ವಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ Read More »

ಕರಾವಳಿ, ಕರ್ನಾಟಕ

ಬಂಬಿಲ  ಹಾಲು ಉತ್ಪಾದಕರ ಸ.ಸಂ.ವಾರ್ಷಿಕ ಸಭೆ

ಸವಣೂರು :ಪಾಲ್ತಾಡಿ ಗ್ರಾಮದ  ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ  ಟಿ.ಕೆ.ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ವರದಿ ಸಾಲಿನಲ್ಲಿ ೧ ಕೋಟಿ ೩೯ ಲಕ್ಷದ ೧೫೭ ರೂ ವ್ಯವಹಾರ ಮಾಡಿದ್ದು,ಸಂಘವು ಹಾಲು ಉತ್ಪಾದಕರಿಂದ ೪ ಲಕ್ಷದ  ೪೪೦ ರೂಗಳ ಹಾಲು ಖರೀದಿಸಿ ಒಕ್ಕೂಟಕ್ಕೆ  ೪೩ ಲಕ್ಷದ  ೫ ಸಾವಿರದ ೯೦೭ ರೂ.ಗಳ ಹಾಲನ್ನು ಹಾಗೂ ಸ್ಥಳೀಯರಿಗೆ ೩೬ ಸಾವಿರದ ೭೮೭ ರೂ ಗೆ ಹಾಗೂ ಸ್ಯಾಂಪಲ್ ಹಾಲನ್ನು ೧೯

ಬಂಬಿಲ  ಹಾಲು ಉತ್ಪಾದಕರ ಸ.ಸಂ.ವಾರ್ಷಿಕ ಸಭೆ Read More »

ಕರಾವಳಿ

ಮರ್ಧಾಳ: ಗುಡ್ ಶೆಫರ್ಡ್ ಶಾಲೆಯ ಶಿಕ್ಷಣದ ಗುಣಮಟ್ಟ ಕುಸಿತದ ಹಿನ್ನೆಲೆ ► ಶಾಲಾ ಮ್ಯಾನೇಜರ್ ಬದಲಾಯಿಸುವಂತೆ ಆಗ್ರಹಿಸಿ ಶಾಲೆಗೆ ಜಮಾಯಿಸಿದ ಪೋಷಕರು

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಐತ್ತೂರು ಗ್ರಾಮದಲ್ಲಿರುವ ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ, ಈ ಹಿನ್ನಲೆಯಲ್ಲಿ ವಿದ್ಯಾಥಿಗಳು ಈ ಶಾಲೆಯಿಂದ ಬೇರೆ ಶಾಲೆಗಳಿಗೆ ಸೇರುತ್ತಿದ್ದಾರೆ, ಹೀಗೆ ಮುಂದುವರಿದರೆ ಎಲ್ಲಾ ವಿದ್ಯಾರ್ಥಿಗಳು ಬೇರೆ ಶಾಲೆಗೆ ಹೋಗಲಿದ್ದು ಕೂಡಲೇ ಶಾಲಾ ಮುಖ್ಯಸ್ಥರು ಕ್ರಮ ಕೈಗೊಳ್ಳುವಂತೆ ಮಕ್ಕಳ ಪೋಷಕರು ಆಗ್ರಹಿಸಿದ ಘಟನೆ ಸೆ.24ರಂದು ನಡೆದಿದೆ. ಹಲವಾರು ವರ್ಷಗಳಿಂದ ದೇಶದ ನಾನಾ ಭಾಗದಲ್ಲಿ ಗುಡ್‍ಶೆಫರ್ಡ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಆಂಗ್ಲ ಮಾಧ್ಯಮ ಶಾಲೆಯು ಉತ್ತಮ ಶಿಕ್ಷಣ ನೀಡಿ,

ಮರ್ಧಾಳ: ಗುಡ್ ಶೆಫರ್ಡ್ ಶಾಲೆಯ ಶಿಕ್ಷಣದ ಗುಣಮಟ್ಟ ಕುಸಿತದ ಹಿನ್ನೆಲೆ ► ಶಾಲಾ ಮ್ಯಾನೇಜರ್ ಬದಲಾಯಿಸುವಂತೆ ಆಗ್ರಹಿಸಿ ಶಾಲೆಗೆ ಜಮಾಯಿಸಿದ ಪೋಷಕರು Read More »

ಕರಾವಳಿ

ಕೊಳಚೆ ನೀರಿನ ಪೈಪು ಒಡೆದು ರಸ್ತೆಯಲ್ಲೇ ಹರಿಯುತ್ತಿರುವ ತ್ಯಾಜ್ಯ ನೀರು ► ಕಡಬದ ವರ್ತಕರಿಂದ ಗ್ರಾಮ ಪಂಚಾಯತ್ ಗೆ ಮುತ್ತಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಇಲ್ಲಿನ ಮುಖ್ಯ ಪೇಟೆಯಲ್ಲಿ ಕೊಳಚೆ ನೀರಿನ ಪೈಪ್ ಒಡೆದಿರುವುದನ್ನು ಸರಿಪಡಿಸದೇ ಇರುವ ಗ್ರಾಮ ಪಂಚಾಯತ್ ನಿರ್ಲಕ್ಷ್ಯದ ವಿರುದ್ಧ ತೊಂದರೆಗೊಳಗಾಗಿರುವ ವರ್ತಕರು ಕಡಬ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರದಂದು ನಡೆದಿದೆ. ಕಳೆದ ಸುಮಾರು ಆರು ತಿಂಗಳಿನಿಂದ ಮುಖ್ಯ ಪೇಟೆಯಲ್ಲಿ ಅಳವಡಿಸಲಾಗಿದ್ದ ಕೊಳಚೆ ನೀರು ಹರಿಯುವ ಪೈಪ್ ಒಡೆದು ಹೋಗಿದ್ದು, ಈ ಬಗ್ಗೆ ಹಲವು ಬಾರಿ ಕಡಬ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ. ತೀವ್ರ

ಕೊಳಚೆ ನೀರಿನ ಪೈಪು ಒಡೆದು ರಸ್ತೆಯಲ್ಲೇ ಹರಿಯುತ್ತಿರುವ ತ್ಯಾಜ್ಯ ನೀರು ► ಕಡಬದ ವರ್ತಕರಿಂದ ಗ್ರಾಮ ಪಂಚಾಯತ್ ಗೆ ಮುತ್ತಿಗೆ Read More »

ಕರಾವಳಿ
Scroll to Top