ಕರಾವಳಿ

ಕಡಬ: ಒಂಭತ್ತನೇ ತರಗತಿಯ ಬಾಲಕನನ್ನು ‘ಚಂದವಾಗಿದ್ದೀಯಾ.. ನನ್ನ ಜೊತೆ ಬಾ ಎಂದ ಅಸ್ಸಾಮಿ’ ► ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಒಂಭತ್ತನೆಯ ತರಗತಿಯ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಘಟನೆ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ನಡೆದಿದ್ದು, ಈ ಬಗ್ಗೆ ಫೋಕ್ಸೋ ಕಾಯ್ದೆಯಡಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 21 ರಂದು ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಒಂಭತ್ತನೆಯ ತರಗತಿಯ ವಿದ್ಯಾರ್ಯೋರ್ವ ಸ್ನೇಹಿತನ ಮನೆಗೆ ಹೋಗಿ ಆಟವಾಡಿ ವಾಪಾಸು ಬರುತ್ತಿರುವಾಗ ಬೈಕಿನಲ್ಲಿ ಬಂದ ಪರಿಚಯದ ಮುಸ್ತಾಫ ಎಂಬಾತ ನೀನು ಬಾರಿ ಚಂದವಾಗಿದ್ದು, ನನ್ನ ಜೊತೆಯಲ್ಲಿ ಬಾ ಎಂದು ಕರೆದಾಗ ತಾನು ಬೈಕಿನಲ್ಲಿ ಹೋಗಲು ನಿರಾಕರಿಸಿದ್ದು, […]

ಕಡಬ: ಒಂಭತ್ತನೇ ತರಗತಿಯ ಬಾಲಕನನ್ನು ‘ಚಂದವಾಗಿದ್ದೀಯಾ.. ನನ್ನ ಜೊತೆ ಬಾ ಎಂದ ಅಸ್ಸಾಮಿ’ ► ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು Read More »

ಕರಾವಳಿ

ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆ ಯತ್ನ ► ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಸೆ.24. ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿ ಮೂಡುಬಿದಿರೆ ನಿವಾಸಿ ಇಮ್ತಿಯಾಝ್(32) ಎಂಬಾತನ ಮೇಲೆ ತಂಡವೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಸೋಮವಾರದಂದು ನಡೆದಿದೆ. ಮೂಡುಬಿದಿರೆಯ ಗಂಟಾಲ್‌ಕಟ್ಟೆ ಮಸೀದಿಯ ಕಟ್ಟಡವೊಂದರಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದ ಇಮ್ತಿಯಾಝ್ ಎಂದಿನಂತೆ ಇಂದು ಬೆಳಗ್ಗೆ ಹೊಟೇಲ್‌ನಲ್ಲಿದ್ದ ವೇಳೆ ಆಗಮಿಸುತ್ತಾರೆ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ಘಟನೆಯಲ್ಲಿ ಇಮ್ತಿಯಾಝ್‌ರ ತಲೆ, ಕೈ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್

ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆ ಯತ್ನ ► ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು Read More »

ಕರಾವಳಿ

ಕಡಬ: ಒಂಟಿ ಮಹಿಳೆಯ ಕೊಲೆಗೆ 5 ವರ್ಷ ► ಇನ್ನೂ ಪತ್ತೆಯಾಗದ ಹಂತಕರು – ಫಲ ನೀಡದ ಪೊಲೀಸರ ಪ್ರಯತ್ನ

(ನ್ಯೂಸ್ ಕಡಬ) newskadaba.com ಕಡಬ, ಸೆ.21. ಇಲ್ಲಿಗೆ ಸಮೀಪದ ನೂಜಿಬಾಳ್ತಿಲ ಗ್ರಾಮದ ಕೋರಿಜಾಲು ನಿವಾಸಿ ವೃದ್ಧೆ ಚಿನ್ನಮ್ಮ ಅವರ ಕೊಲೆ ನಡೆದು 5 ವರ್ಷ ಕಳೆದರೂ ಕೊಲೆಗಾರರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರು ನಡೆಸುತ್ತಿರುವ ಪ್ರಯತ್ನಕ್ಕೆ ಇನ್ನೂ ಯಶಸ್ಸು ಲಭಿಸಿಲ್ಲ. ತನ್ನ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 60 ವರ್ಷ ಪ್ರಾಯದ ವೃದ್ಧ ಮಹಿಳೆ ಚಿನ್ನಮ್ಮ ಅವರನ್ನು ಆ.28, 2013 ರಂದು ತಡರಾತ್ರಿ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಮರುದಿನ ಸಂಜೆಯ ವೇಳೆಗೆ ಪ್ರಕರಣ ಬೆಳಕಿಗೆ ಬಂದಿತ್ತು. ಮೃತರ

ಕಡಬ: ಒಂಟಿ ಮಹಿಳೆಯ ಕೊಲೆಗೆ 5 ವರ್ಷ ► ಇನ್ನೂ ಪತ್ತೆಯಾಗದ ಹಂತಕರು – ಫಲ ನೀಡದ ಪೊಲೀಸರ ಪ್ರಯತ್ನ Read More »

ಕರಾವಳಿ

ಬಂಟ್ವಾಳ: ನಾಲ್ಕನೇ ತರಗತಿಯ ಬಾಲಕಿಯ ಅತ್ಯಾಚಾರ ಯತ್ನ ► ತಡವಾಗಿ ಬೆಳಕಿಗೆ ಬಂತು ಪೈಶಾಚಿಕ ಕೃತ್ಯ ► ವೃದ್ಧ ಸೇರಿದಂತೆ ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.20. ನಾಲ್ಕನೇ ತರಗತಿಯ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಸರಣಿ ಅತ್ಯಾಚಾರ ನಡೆಸಿದ ಪೈಶಾಚಿಕ ಕೃತ್ಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗೂಡಿನಬಳಿ ಕೆಲದಿನಗಳ ಹಿಂದೆ ನಡೆದಿದ್ದು, ಬುಧವಾರದಂದು ಬೆಳಕಿಗೆ ಬಂದಿದೆ. ಕಳೆದ ಕೆಲದಿನಗಳಿಂದ ಬಾಲಕಿ ಮಂಕಾಗಿದ್ದು, ವಿಚಾರಿಸಿದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದು ಬಯಲಿಗೆ ಬಂದಿದೆ. ಪ್ರಕರಣದ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರು ಪ್ರಕರಣದ ಆರೋಪಿಗಳಾದ ಗೂಡಿನಬಳಿಯ ನಿವಾಸಿ ಗುಜರಿ ವ್ಯಾಪಾರಿ ಶೇಕಬ್ಬ(65), ಬೇಕರಿ ಐಟಂ

ಬಂಟ್ವಾಳ: ನಾಲ್ಕನೇ ತರಗತಿಯ ಬಾಲಕಿಯ ಅತ್ಯಾಚಾರ ಯತ್ನ ► ತಡವಾಗಿ ಬೆಳಕಿಗೆ ಬಂತು ಪೈಶಾಚಿಕ ಕೃತ್ಯ ► ವೃದ್ಧ ಸೇರಿದಂತೆ ಮೂವರು ಆರೋಪಿಗಳ ಬಂಧನ Read More »

ಕರಾವಳಿ

ಪುತ್ತೂರು: ನಗ, ನಗದಿನೊಂದಿಗೆ ನವ ವಿವಾಹಿತೆ ನಾಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.20. ನವ ವಿವಾಹಿತೆಯೋರ್ವಳು ನಗ ಹಾಗೂ ನಗದಿನೊಂದಿಗೆ ನಾಪತ್ತೆಯಾಗಿರುವ ಘಟನೆ ಪುತ್ತೂರಿನ ಹಾರಾಡಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ನಾಪತ್ತೆಯಾಗಿರುವ ನವವಧುವನ್ನು ಪುತ್ತೂರು ಹಾರಾಡಿ ನಿವಾಸಿ ಫಯಾಝ್‌ ಎಂಬವರ ಪತ್ನಿ ಅಫ್ರೀನಾ(19.ವ) ಎಂದು ಗುರುತಿಸಲಾಗಿದೆ. ಸುಮಾರು ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈಕೆ ಎಂದಿನಂತೆ ಊಟ ಮಾಡಿ ಮಲಗಿದ್ದು, ತಡರಾತ್ರಿ ವೇಳೆಗೆ ನೋಡಿದಾಗ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಹದಿಮೂರು ಸಾವಿರ ನಗದು ಹಾಗೂ ಹನ್ನೆರಡು ಪವನ್ ಚಿನ್ನಾಭರಣ ಕಾಣೆಯಾಗಿದ್ದು, ಆಕೆ ತೆಗೆದುಕೊಂಡು ಹೋಗಿರುವ ಶಂಕೆ

ಪುತ್ತೂರು: ನಗ, ನಗದಿನೊಂದಿಗೆ ನವ ವಿವಾಹಿತೆ ನಾಪತ್ತೆ Read More »

ಕರಾವಳಿ

ಕಾಣಿಯೂರು : ಶ್ರೀ ಲಕ್ಷ್ಮೀನರಸಿಂಹ ಯುವಕಮಂಡಲದಿಂದ ಪ್ರತಿಭಾ ಪುರಸ್ಕಾರ

ಕಾಣಿಯೂರು : ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆದ ೩೧ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀವರ್ಷದಂತೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ೨೦೧೭-೧೮ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸರಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರು ಇಲ್ಲಿನ ವಿದ್ಯಾರ್ಥಿ ಚರಣ್ ಕುಮಾರ್ ಎಂ. ಹಾಗೂ ದ್ವಿತೀಯ ಸ್ಥಾನ ಪಡೆದ ಹರ್ಷಿತಾ ಕೆ.ಎಸ್. ಮತ್ತು ೭ ನೇ ತರಗತಿಯ ಅತ್ಯಽಕ ಅಂಕ

ಕಾಣಿಯೂರು : ಶ್ರೀ ಲಕ್ಷ್ಮೀನರಸಿಂಹ ಯುವಕಮಂಡಲದಿಂದ ಪ್ರತಿಭಾ ಪುರಸ್ಕಾರ Read More »

ಕರಾವಳಿ, ಕರ್ನಾಟಕ

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ  ಕು.ಕುಶಿತಾ.ಕೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

ನರಿಮೊಗರು: ಕರ್ನಾಟಕ ಪೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ಕಳೆದ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ “ಜೂನಿಯರ್ ಗ್ರೇಡ್ ಪರೀಕೆ”ಯಲ್ಲಿ ಶ್ರೀ ಶಾರದಾ ಕಲಾ ಕೇಂದ್ರ ಭಕ್ತಕೋಡಿಯ ನೃತ್ಯ ಗುರು ವಿದ್ವಾನ್ ಗೋಪಾಲಕೃಷ  ವೀರಮಂಗಲ ಇವರ ಶಿಷ್ಯೆ ಕು.ಕುಶಿತಾ.ಕೆ ಶೇ.೯೦ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿರುತ್ತಾರೆ. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಇಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಗುರುಕುಲ ಸಂಗೀತ ಕಲಾಕೇಂದ್ರ ಪುರುಷರಕಟ್ಟೆಯಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ. ಹಾಗೆಯೇ ಜಿಲ್ಲಾ ಪ್ರಶಸ್ತಿ ಪುರಸ್ಕೃತ  ನರಿಮೊಗರು

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ  ಕು.ಕುಶಿತಾ.ಕೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ Read More »

ಕರಾವಳಿ

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ ಕು.ಸ್ವಾತಿ ನರಿಮೊಗರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

ನರಿಮೊಗರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ಕಳೆದ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕೆ ಯಲ್ಲಿ ಶ್ರೀ ಶಾರದಾ ಕಲಾ ಕೇಂದ್ರ ಭಕ್ತಕೋಡಿಯ ನೃತ್ಯ ಗುರು ವಿದ್ವಾನ್ ಗೋಪಾಲಕೃಷ  ವೀರಮಂಗಲ ಇವರ ಶಿಷ್ಯೆ ಕು.ಸ್ವಾತಿ ನರಿಮೊಗರು ಶೇ.೮೫ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿರುತ್ತಾರೆ. ಸ.ಪ.ಪೂ. ಕಾಲೇಜು ಕೊಂಬೆಟ್ಟು ಇಲ್ಲಿ ಪ್ರಥಮ ಪಿ,ಯು.ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಗುರುಕುಲ ಸಂಗೀತ ಕಲಾಕೇಂದ್ರ ಪುರುಷರಕಟ್ಟೆಯಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ.ಜಿಲ್ಲಾ ಪ್ರಶಸ್ತಿ ಪುರಸ್ಕೃತ  ನರಿಮೊಗರು ಪ್ರಖ್ಯಾತಿ

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ ಕು.ಸ್ವಾತಿ ನರಿಮೊಗರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ Read More »

ಕರಾವಳಿ

ಮಂಗಳೂರು: ಹಾಡುಹಗಲೇ ಕುಡಿದು ತೂರಾಡಿದ ಟ್ರಾಫಿಕ್ ಪೊಲೀಸ್ ► ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19. ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೋರ್ವ ಕರ್ತವ್ಯದಲ್ಲಿದ್ದಾಗಲೇ ಕಂಠಪೂರ್ತಿ ಕುಡಿದು ಮುಖ್ಯ ರಸ್ತೆಯಲ್ಲಿ ತೂರಾಡಿದ ಘಟನೆ ಬುಧವಾರ ಹಾಡುಹಗಳು ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ಅಶೋಕ್ ಗೌಡ ಎಂಬಾತ ಬುಧವಾರ ಹಾಡುಹಗಲು ಕರ್ತವ್ಯದಲ್ಲಿದ್ದ ವೇಳೆ ಪೂರ್ತಿ ನಶೆಯೇರಿಸಿ ನಡೆಯಲು ಸಾಧ್ಯವಾಗದೆ ತೂರಾಡುತ್ತಾ ಬರುತ್ತಿದ್ದುದನ್ನು ಸಾರ್ವಜನಿಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಲಾಲ್ ಬಾಗ್ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಎದ್ದು ನಿಲ್ಲಲೂ ಸಾಧ್ಯವಿಲ್ಲದ ಈತ

ಮಂಗಳೂರು: ಹಾಡುಹಗಲೇ ಕುಡಿದು ತೂರಾಡಿದ ಟ್ರಾಫಿಕ್ ಪೊಲೀಸ್ ► ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read More »

ಕರಾವಳಿ

ಓವರ್‌ಟೇಕ್ ಭರಾಟೆ: ಕೆಎಸ್‌ಆರ್‌ಟಿಸಿ ಬಸ್‌ – ಬೊಲೇರೋ ಢಿಕ್ಕಿ ► ಶಾಲಾ ವಿದ್ಯಾರ್ಥಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.19. ಓವರ್ ಟೇಕ್ ಮಾಡುವ ಭರದಲ್ಲಿ ಮಹೀಂದ್ರ ಬೊಲೇರೋ ವಾಹನವೊಂದು ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾದ ಘಟನೆ ಸೆ.19ರಂದು ಬೆಳಿಗ್ಗೆ ಮಾಣಿ-ಮೈಸೂರು ಹೆದ್ದಾರಿಯ ಕಾವು ಎಂಬಲ್ಲಿ ನಡೆದಿದೆ. ಸುಳ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಮಹೀಂದ್ರ ಬೊಲೇರೋ(ಕೆಎ19ಡಿ2737) ವಾಹನ ಕಾವು ಬುಶ್ರಾ ಶಾಲೆಯ ಸಮೀಪ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್(ಕೆಎ21ಎಫ್0132)ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೊಲೇರೋ ನಜ್ಜುಗುಜ್ಜಾಗಿ ಬೊಲೇರೋದಲ್ಲಿದ್ದ ಬುಶ್ರಾ ಶಾಲಾ ವಿದ್ಯಾರ್ಥಿ ರಾಝಿಕ್(13.ವ) ಎಂಬವರಿಗೆ ಗಾಯವಾಗಿದೆ.

ಓವರ್‌ಟೇಕ್ ಭರಾಟೆ: ಕೆಎಸ್‌ಆರ್‌ಟಿಸಿ ಬಸ್‌ – ಬೊಲೇರೋ ಢಿಕ್ಕಿ ► ಶಾಲಾ ವಿದ್ಯಾರ್ಥಿಗೆ ಗಾಯ Read More »

ಕರಾವಳಿ, ಕರ್ನಾಟಕ
Scroll to Top