ಕ್ರೈಮ್ ನ್ಯೂಸ್

Death, deadbody, Waterfall

ಬಸ್ ನಿಂದ ಬಿದ್ದು ಪ್ರಯಾಣಿಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 06. ಕೆಎಸ್ಸಾರ್ಟಿಸಿ ಬಸ್‌ನಿಂದ ಪ್ರಯಾಣಿಕರೊಬ್ಬರು ಬಿದ್ದು ಮೃತಪಟ್ಟ ಘಟನೆ ಕೆಮ್ಮಾಯಿ ಸಮೀಪ ನಡೆದಿದೆ.   ಮೃತರನ್ನು ಕೆದಿಲ ಗ್ರಾಮದ ಮುದ್ರಾಜೆ ನಿವಾಸಿ ಪ್ರಸ್ತುತ ಕೆಮ್ಮಾಯಿಯಲ್ಲಿ ಬಾಡಿಗೆ ಮನೆಯಲ್ಲಿರುವ ಸೋಮಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನಿಂದ ಉಪ್ಪಿನಂಗಡಿಯ ಹಳೆನೇರಂಕಿ ಕಡೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು, ಕೆಮ್ಮಾಯಿ ಬಳಿ ಬಸ್ ನಿಲುಗಡೆ ವೇಳೆ ಬಸ್‌ನಿಂದ ಬಿದ್ದು ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಬಸ್ ನಿಂದ ಬಿದ್ದು ಪ್ರಯಾಣಿಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಡಿ. 05. ಚಾಲಕನ ನಿಯಂತ್ರಣ ತಪ್ಪಿದ ಟೂರಿಸ್ಟ್‌ ಕಾರೊಂದು ಕೆರೆಗೆ ಉರುಳಿಬಿದ್ದ ಘಟನೆ ಬ್ರಹ್ಮಾವರ ತಾಲೂಕಿನ ಉಳ್ಳೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲು ಡಿವೈಡರ್ ಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿಯ ಕೆರೆಗೆ ಬಿದ್ದಿದೆ. ಘಟನೆಯಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೈಟೆನ್ಯನ್ ವಿದ್ಯುತ್ ತಗುಳಿ ಗಂಭೀರ ಗಾಯಗೊಂಡಿದ್ದ ಬಾಲಕ ಸಾವು!

ಬೆಂಗಳೂರು: ಕಳೆದ 4ದಿನಗಳ ಹಿಂದಷ್ಟೇ ಹೈಟೆನ್ಯನ್ ವಿದ್ಯುತ್ ತಗುಳಿ ಗಾಯಗೊಂಡಿದ್ದ ಇಬ್ಬರು ಬಾಲಕರ ಪೈಕಿ ಒಬ್ಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಡಿ. 4 ರಂದು ನಡೆದಿದೆ.

ಹೈಟೆನ್ಯನ್ ವಿದ್ಯುತ್ ತಗುಳಿ ಗಂಭೀರ ಗಾಯಗೊಂಡಿದ್ದ ಬಾಲಕ ಸಾವು! Read More »

ಕ್ರೈಮ್ ನ್ಯೂಸ್
Crime

ಬಂದೂಕುಧಾರಿ ಗುಂಪಿನಿಂದ ಮಸೀದಿ ಮೇಲೆ ದಾಳಿ ➤ 12 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 05. ಬಂದೂಕುಧಾರಿ ಢಕಾಯಿತರ ಗುಂಪೊಂದು ಮಸೀದಿಯೊಂದರ ಮೇಲೆ ದಾಳಿ ಮಾಡಿ 12 ಮಂದಿಯನ್ನು ಹತ್ಯೆಗೈದು, ಇತರರನ್ನು ಅಪಹರಿಸಿರುವ ಘಟನೆ ನೈಜೀರಿಯಾದಲ್ಲಿ ವರದಿಯಾಗಿದೆ. ಮೈಗಾಮ್ಜಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಬೈಕ್‌ ನಲ್ಲಿ ಬಂದ ಗುಂಪೊಂದು ಏಕಾಏಕಿ ಗುಂಡು ಹಾರಿಸಿದ್ದರಿಂದ ಆತಂಕಗೊಂಡ ಜನರು ಅತ್ತಿತ್ತ ಓಡಿದ್ದಾರೆ. ಬಂದೂಕುಧಾರಿಗಳು ಕೆಲವರನ್ನು ಶೂಟ್‌ ಮಾಡಿದ್ದು, ಮಸೀದಿಯ ಮುಖ್ಯ ಧರ್ಮಗುರು ಸೇರಿದಂತೆ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಪೊಲೀಸರು ಬಂದೂಕುಧಾರಿ ಗುಂಪಿನ ಪತ್ತೆಗೆ

ಬಂದೂಕುಧಾರಿ ಗುಂಪಿನಿಂದ ಮಸೀದಿ ಮೇಲೆ ದಾಳಿ ➤ 12 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 05. ಲಾರಿಯಡಿಗೆ ಬಿದ್ದು ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೊಡಂಕಾಪು ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತ ಮಹಿಳೆಯನ್ನು ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉಷಾ (32) ಎಂದು ಗುರುತಿಸಲಾಗಿದೆ. ಬೆಂಜನಪದವು ಎಂಬಲ್ಲಿ ಅಂಗಡಿ ಹೊಂದಿದ್ದ ಉಷಾ ಅವರು, ಸಾಮಗ್ರಿ ತರಲು ಪೇಟೆಗೆ ಹೋಗುತ್ತಿದ್ದಾಗ ಮೊಡಂಕಾಪು ಎಂಬಲ್ಲಿ ಸ್ಕೂಟರ್ ಡಿಕ್ಕಿ ಹೊಡೆದು, ರಸ್ತೆಗೆಸೆಯಲ್ಪಟ್ಟ ಇವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 05. ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕೈಂತಿಲ ಎಂಬಲ್ಲಿ ನಡೆದಿದೆ.   ಆತ್ಮಹತ್ಯೆ ಮಾಡಿಕೊಂಡವರನ್ನು ಕಸಬಾ ಗ್ರಾಮದ ಕೈಂತಿಲ ನಿವಾಸಿ ಗಿರಿಯಪ್ಪ ಗೌಡರ ಪತ್ನಿ ಸವಿತ ಯಾನೆ ಸೇಸಮ್ಮ (50) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು, ಮನೆ ಸಮೀಪದ ತೋಟದಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಕೂಡಲೇ ಅವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತಾದರೂ ಆ

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಬೆಂಗಳೂರು ಮೂಲದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ ➤ ಕಾರಣ ನಿಗೂಢ..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 05. ಬೆಂಗಳೂರು ಮೂಲದ ಯುವಕನ ಮೃತದೇಹವು ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಮೃತ ಯುವಕನನ್ನು ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಮಹಂತೇಶ್ ಎ.ಎಸ್ (36) ಎಂದು ಗುರಿತಿಸಲಾಗಿದೆ. ನ. 30ರಂದು ಬೆಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಬಂದಿದ್ದ ಮಹಂತೇಶ್ ರಾ.ಹೆ.66 ರಲ್ಲಿರುವ ಕಾಪಿಕಾಡಿನ ನಿರ್ವಿಕಲ್ಪ ಲಾಡ್ಜ್ ನಲ್ಲಿ ತಂಗಿದ್ದರು. ಡಿ. 01 ರಂದು ಸಂಜೆ ಲಾಡ್ಜ್ ರೂಮಿನ ಅವಧಿ ಮುಗಿದ ಹಿನ್ನೆಲೆ ರೂಮ್

ಮಂಗಳೂರು: ಬೆಂಗಳೂರು ಮೂಲದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ ➤ ಕಾರಣ ನಿಗೂಢ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿ.ಸಿ.ರೋಡ್: ಆಟೋ ರಿಕ್ಷಾ ಪಲ್ಟಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 05. ಆಟೋರಿಕ್ಷಾ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಬಿಸಿರೋಡು ತಲಪಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಆಟೋ ತಲಪಾಡಿಯಲ್ಲಿ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಘಟನೆಯ ವೇಳೆ ಆಟೋದಲ್ಲಿ ಇಬ್ಬರೇ ಇರುವುದಾಗಿ ಸ್ಥಳೀಯರು ತಿಳಿಸಿದ್ದು, ಚಾಲಕ ಗಂಭೀರ ಗಾಯಗೊಂಡರೆ ಪ್ರಯಾಣಿಕನಿಗೂ ಗಾಯವಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಿ.ಸಿ.ರೋಡ್: ಆಟೋ ರಿಕ್ಷಾ ಪಲ್ಟಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ಬಸ್ ಗೆ ಹತ್ತುವ ವೇಳೆ ನಿಯಂತ್ರಣ ತಪ್ಪಿ ಚಕ್ರದಡಿಗೆ ಬಿದ್ದು ವ್ಯಕ್ತಿ ಮೃತ್ಯು…!

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ. 05. ಬಸ್ಸಿಗೆ ಹತ್ತುವ ವೇಳೆ ನಿಯಂತ್ರಣ ತಪ್ಪಿ ಚಕ್ರದಡಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಹಿರ್ಗಾನ ಬಸ್ಸು ನಿಲ್ದಾಣದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಚಿಕ್ಕಲ್ ಬೆಟ್ಟಿನ ಕೃಷ್ಣ ನಾಯಕ್(71) ಎಂದು ಗುರುತಿಸಲಾಗಿದೆ. ಇವರು ಹಿರ್ಗಾನದಿಂದ ಚಿಕ್ಕಲ್ ಬೆಟ್ಟು ಕ್ರಾಸ್’ಗೆ ಹೋಗಲು ಬಸ್ಸು ಹತ್ತುವ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ತಕ್ಷಣವೇ ಅವರನ್ನು ಅಂಬ್ಯುಲೆನ್ಸ್(108) ಮೂಲಕ ಆಸ್ಪತ್ರೆಗೆ ದಾಖಲಿಸಿದರೂ ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಬಸ್ ಗೆ ಹತ್ತುವ ವೇಳೆ ನಿಯಂತ್ರಣ ತಪ್ಪಿ ಚಕ್ರದಡಿಗೆ ಬಿದ್ದು ವ್ಯಕ್ತಿ ಮೃತ್ಯು…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಲಾರಿಗಳ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 05. ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಚಾಲಕರಿಬ್ಬರು ಮೃತಪಟ್ಟ ಘಟನೆ ಗುರುಪುರ- ಕೈಕಂಬ ಬಳಿ ನಡೆದಿದೆ.   ಮೂಡಬಿದ್ರೆ ಕಡೆಯಿಂದ ಮಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿಯು ವಿರುದ್ದ ದಿಕ್ಕಿನಿಂದ ತೆರಳುತ್ತಿದ್ದ ಲಾರಿಗೆ ಇಳಿಜಾರು ಪ್ರದೇಶದಲ್ಲಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಲಾರಿಗಳು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿವೆ. ಎರಡೂ ಲಾರಿಗಳು ಸಂಪೂರ್ಣ ಜಖಂಗೊಂಡಿದ್ದು, ಚಾಲಕರ ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮಂಗಳೂರು: ಲಾರಿಗಳ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top