ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 05. ಲಾರಿಯಡಿಗೆ ಬಿದ್ದು ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೊಡಂಕಾಪು ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತ ಮಹಿಳೆಯನ್ನು ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉಷಾ (32) ಎಂದು ಗುರುತಿಸಲಾಗಿದೆ. ಬೆಂಜನಪದವು ಎಂಬಲ್ಲಿ ಅಂಗಡಿ ಹೊಂದಿದ್ದ ಉಷಾ ಅವರು, ಸಾಮಗ್ರಿ ತರಲು ಪೇಟೆಗೆ ಹೋಗುತ್ತಿದ್ದಾಗ ಮೊಡಂಕಾಪು ಎಂಬಲ್ಲಿ ಸ್ಕೂಟರ್ ಡಿಕ್ಕಿ ಹೊಡೆದು, ರಸ್ತೆಗೆಸೆಯಲ್ಪಟ್ಟ ಇವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top