ಬಂದೂಕುಧಾರಿ ಗುಂಪಿನಿಂದ ಮಸೀದಿ ಮೇಲೆ ದಾಳಿ ➤ 12 ಮಂದಿ ಮೃತ್ಯು

Crime

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 05. ಬಂದೂಕುಧಾರಿ ಢಕಾಯಿತರ ಗುಂಪೊಂದು ಮಸೀದಿಯೊಂದರ ಮೇಲೆ ದಾಳಿ ಮಾಡಿ 12 ಮಂದಿಯನ್ನು ಹತ್ಯೆಗೈದು, ಇತರರನ್ನು ಅಪಹರಿಸಿರುವ ಘಟನೆ ನೈಜೀರಿಯಾದಲ್ಲಿ ವರದಿಯಾಗಿದೆ.

ಮೈಗಾಮ್ಜಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಬೈಕ್‌ ನಲ್ಲಿ ಬಂದ ಗುಂಪೊಂದು ಏಕಾಏಕಿ ಗುಂಡು ಹಾರಿಸಿದ್ದರಿಂದ ಆತಂಕಗೊಂಡ ಜನರು ಅತ್ತಿತ್ತ ಓಡಿದ್ದಾರೆ. ಬಂದೂಕುಧಾರಿಗಳು ಕೆಲವರನ್ನು ಶೂಟ್‌ ಮಾಡಿದ್ದು, ಮಸೀದಿಯ ಮುಖ್ಯ ಧರ್ಮಗುರು ಸೇರಿದಂತೆ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಪೊಲೀಸರು ಬಂದೂಕುಧಾರಿ ಗುಂಪಿನ ಪತ್ತೆಗೆ ತನಿಖೆ ಆರಂಭಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ

Scroll to Top