ಕ್ರೈಮ್ ನ್ಯೂಸ್

ನಾಪತ್ತೆಯಾಗಿದ್ದ ಬಾಲಕನ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ.07. ನಾಪತ್ತೆಯಾಗಿದ್ದ  ಬಾಲಕನ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ  ಪತ್ತೆಯಾದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ  ನಡೆದಿದೆ.   16 ವರ್ಷದ ಬಾಲಕನನ್ನು  ಆತನ ನಿವಾಸದಿಂದ ಅಪಹರಿಸಿದ ನಂತರ ಹತ್ಯೆ ಮಾಡಲಾಗಿದ್ದು, ಈ ಕೃತ್ಯವನ್ನು ನರಬಲಿಗಾಗಿ ಬಾಲಕನ ನೆರೆಮನೆಯಾತ ಮಾಡಿದ್ದಾನೆಂದು ಶಂಕಿಸಲಾಗಿದೆ.  ಈ ಕುರಿತು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿಯು ಬಾಲಕನನ್ನು ಕೊಲೆ ಮಾಡಿ ಮೀರತ್ನ ಕಬ್ಬಿನ ಗದ್ದೆಯಲ್ಲಿ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಘಟನಾ ಸ್ಥಳಕ್ಕೆ ತೆರಳಿದ […]

ನಾಪತ್ತೆಯಾಗಿದ್ದ ಬಾಲಕನ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಕಾಲೇಜು ವಿದ್ಯಾರ್ಥಿನಿ ರೈಲ್ವೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ…!

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 07. ಕಾಲೇಜು ವಿದ್ಯಾರ್ಥಿನಿಯೋರ್ವಳು ರೈಲ್ವೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತರನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ಎಂಎಸ್ಸಿ ಬಯೋ ಕೆಮಿಸ್ಟ್ರಿ ವಿದ್ಯಾರ್ಥಿನಿ, ಚೌಕಿ ಕಾವುಗೋಳಿ ಕಡಪ್ಪುರದ ಸುರೇಂದ್ರನ್ ರವರ ಪುತ್ರಿ ಅಂಜನಾ ಎಸ್.(22) ಎಂದು ಗುರುತಿಸಲಾಗಿದೆ. ಸೋಮವಾರದಂದು ರಾತ್ರಿ ಊಟ ಮಾಡಿ ಮಲಗಿದ್ದ ಅಂಜನಾ ಬೆಳಿಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಮನೆಯ ಅಲ್ಪ ದೂರದ ರೈಲು ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎನ್ನಲಾಗಿದೆ. ಘಟನಾ

ಮಂಗಳೂರು: ಕಾಲೇಜು ವಿದ್ಯಾರ್ಥಿನಿ ರೈಲ್ವೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ತಮ್ಮನ ಕೊಲೆಗೈದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 07. ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಶೆಡ್ ನಲ್ಲಿ ಒಡಹುಟ್ಟಿದ ತಮ್ಮನನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಅಣ್ಣನನ್ನು ಪುತ್ತೂರು ನಗರ ಠಾಣಾ ಪೊಲೀಸರು ಹಾವೇರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಿಂಗನ ಗೌಡ ಯಾನೆ ನಿಂಗಪ್ಪ ಗೌಡ ಎಂದು ಗುರುತಿಸಲಾಗಿದೆ. ತಮ್ಮ ಮಹಾದೇವ ಕೊಲೆಗೀಡಾದ ದುರ್ದೈವಿ. ಮುಕ್ರಂಪಾಡಿಯ ನಿರ್ಮಾಣ ಹಂತದ ಕಟ್ಟವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಇವರ ನಡುವೆ, ಡಿ. 01ರಂದು ರಾತ್ರಿ ಹೊತ್ತು ಕಟ್ಟಡದ ಶೆಡ್

ಪುತ್ತೂರು: ತಮ್ಮನ ಕೊಲೆಗೈದು ಪರಾರಿಯಾಗಿದ್ದ ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಗಣಿ ಗುಂಡಿಗೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) ಹೆಬ್ರಿ, ಡಿ. 07. ಮಗುವೊಂದು ಸೆಗಣಿ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಬಚ್ಚಪ್ಪು ಎಂಬಲ್ಲಿ ನಡೆದಿದೆ.   ಮೃತ ಮಗುವನ್ನು ಜಾರ್ಖಂಡ್ ಮೂಲದ ಓಕನ್ ಎಂಬವರ ಪುತ್ರ ಮುನೇಶ್ವರ (4) ಎದು ಗುರುತಿಸಲಾಗಿದೆ. ಆಂಟನಿ ಎಂಬವರ ಜಮೀನಿನಲ್ಲಿ ಓಕನ್ ಕೂಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಜಮೀನಿನಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಸಗಣಿ ಗುಂಡಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಗಣಿ ಗುಂಡಿಗೆ ಬಿದ್ದು ಮಗು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Theft, crime, Robbery

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನ, ಡೈಮಂಡ್ ಆಭರಣ ಕಳವು…!

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 07. ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಡೈಮಂಡ್ ಆಭರಣಗಳನ್ನು ಕಳ್ಳರು‌ ಕಳವು ಮಾಡಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ ಎಂಬವರು ಡಿ.6ರಂದು ನಡೆಯಲಿದ್ದ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬೈ ಯ ಪನ್ವೇಲಿನಿಂದ ತಮ್ಮ ಮನೆಯಾದ ಕಟಪಾಡಿಗೆ ಡಿ.5ರಂದು ತಂದೆ-ತಾಯಿಯ ಜೊತೆ ಮತ್ಸ್ಯಗಂದ ರೈಲಿನಲ್ಲಿ ಉಡುಪಿಗೆ ಹೊರಟಿದ್ದರು. ಜೊತೆಗೆ ಮದುವೆಯಲ್ಲಿ ಧರಿಸುವುದಕ್ಕಾಗಿ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನ, ಡೈಮಂಡ್ ಆಭರಣ ಕಳವು…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಣಕಲ್: ನೀರಿನ ಟ್ರ್ಯಾಕ್ಟರ್ ಪಲ್ಟಿ ಒರ್ವ ಸಾವು ಮತ್ತೊಬ್ಬ ಗಂಭೀರ

(ನ್ಯೂಸ್ ಕಡಬ) newskadaba.com ಬಣಕಲ್, ಡಿ. 06. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ  ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.   ಮರತಪಟ್ಟವರನ್ನು ಜಾರ್ಖಂಡ್ ಮೂಲದ ಶಂಕರ್ ನಾಯಕ್(22) ಎಂದು ಗುರುತಿಸಲಾಗಿದೆ. ಇವರು ಚಾರ್ಮಾಡಿ ಘಾಟ್ನಲ್ಲಿ ಕಾಮಗಾರಿ ಕೆಲಸಕ್ಕೆ ಬೇಕಾದ ನೀರು ಒದಗಿಸುವ ಕಾರ್ಯನಿರ್ವಹಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರ್ಘಟಣೆ ಸಂಭವಿಸಿದೆನ್ನಲಾಗಿದೆ.    

ಬಣಕಲ್: ನೀರಿನ ಟ್ರ್ಯಾಕ್ಟರ್ ಪಲ್ಟಿ ಒರ್ವ ಸಾವು ಮತ್ತೊಬ್ಬ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 06. ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಯುವಕರಿಬ್ಬರು ಗಾಯಗೊಂಡ ಘಟನೆ ನೆಹರು ನಗರ ವಿವೇಕಾನಂದ ಕಾಲೇಜು ಬಳಿಯ ತಿರುವಿನಲ್ಲಿ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು: ಅಜ್ಜಿಯ ಭೀಕರ ಕೊಲೆ

ಅನೇಕಲ್: ಬೆಂಗಳೂರು ನಗರದ ಅನೇಕಲ್ ಸಮೀಪದ ನೆರಳೂರು ಬಳಿ ಮಹಿಳೆಯೊಬ್ಬಳು ಅಜ್ಜಿಯನ್ನು ಕೊಲೆ ಮಾಡಿ ತನ್ನ ಕಬರ್ೋಡ್ನಲ್ಲಿ ಮೃತದೇಹ ಸುತ್ತಿಟ್ಟು ಪರಾರಿಯಾದ ಘಟನೆ ಡಿ. 4 ರಂದು ನಡೆದಿದೆ. ಒಂದೇ ಕಟ್ಟಡದ ಅಕ್ಕ ಪಕ್ಕದ ಬಾಡಿಗೆ ಮನೆಯಲ್ಲಿ ಮಹಿಳೆ ಹಾಗೂ ಅಜ್ಜಿ ವಾಸವಿದ್ದರು. ಮಹಿಳೆ ತನ್ನ ಮನೆಗೆ ಅಜ್ಜಿಯನ್ನು ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ.   

ಬೆಂಗಳೂರು: ಅಜ್ಜಿಯ ಭೀಕರ ಕೊಲೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ಕಿಂಡಿ ಅಣೆಕಟ್ಟಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ‌. 06. ಕಿಂಡಿ ಅಣೆಕಟ್ಟಿನ ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಾಡಾವು ಬೊಳಿಕ್ಕಳ ಗೌರಿ ಹೊಳೆಯಲ್ಲಿ ನಡೆದಿದೆ.   ಮೃತರನ್ನು ಮೂಲತಃ ಉಪ್ಪಿನಂಗಡಿ ನಿವಾಸಿ ಮಾಡಾವು ಬೊಳಿಕ್ಕಳದಲ್ಲಿ ಸಂಬಂಧಿಕರ ಮನೆಯಲ್ಲಿರುವ ಹರೀಶ್ಚಂದ್ರ(45) ಎಂದು ಗುರುತಿಸಲಾಗಿದೆ. ಸೋಮವಾರದಂದು ಸಂಜೆ ನಾಲ್ವರು ವ್ಯಕ್ತಿಗಳು ಬೊಳಿಕ್ಕಳ ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರಿನಲ್ಲಿ ಸ್ನಾನಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

ಕಿಂಡಿ ಅಣೆಕಟ್ಟಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು: ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ!

ಬೆಂಗಳೂರು: ಕೆ ಪಿ ಅಗ್ರಹಾರ ಐದನೆ ಕ್ರಾಸ್ ಬಳಿ ಭೀಕರ ಹತ್ಯೆ ನಡೆದಿದ್ದು, ಕೊಲೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಬರೋಬ್ಬರಿ ಆರು ಮಂದಿ ಸೇರಿ ಅಪರಿಚಿತ ವ್ಯಕ್ತಿಯನ್ನು ಕೊಲೆ ಗೈದಿದ್ದಾರೆ. ಈ ಪ್ರಕರಣದಲ್ಲಿ ಮೂವರು ಮಹಿಳೆಯರು ಭಾಗಿಯಾಗಿದ್ದು, ಈ ಕೊಲೆಯ ಭಯಾನಕತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸುಮಾರು ಇಪ್ಪತ್ತು ಭಾರಿ ಕಲ್ಲು ಎತ್ತಿಹಾಕಿ ಅಮಾನುಷವಾಗಿ ದುಷಕೃತ್ಯ ಮೆರೆದಿದ್ದಾರೆ. ಸದ್ಯ ಕೊಲೆ ಅರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳು ಕಾರ್ಯಚರಣೆ ನಡೆಸುತ್ತಿವೆ.

ಬೆಂಗಳೂರು: ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top