ಉಪ್ಪಿನಂಗಡಿ ಠಾಣಾ ಎದುರಿನಲ್ಲೇ ಕಳ್ಳರ ಕೈಚಳಕ ➤‌ ಮೂರು ಅಂಗಡಿಗೆ ನುಗ್ಗಿದ ಕಳ್ಳರು



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 13. ಇಲ್ಲಿನ ಪೊಲೀಸ್ ಠಾಣಾ ಮುಂಭಾಗದಲ್ಲಿರುವ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿದ ಘಟನೆ ಅ.13ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.







ಇಲ್ಲಿನ ಲಕ್ಷ್ಮೀ ಸ್ಟೋರ್ ಎಂಬ ಅಂಗಡಿಯ ಷಟರ್ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು 40 ಸಾವಿರ ರೂಪಾಯಿ ನಗದು ಹಾಗೂ ಸೊತ್ತುಗಳನ್ನು ದೋಚಿದ್ದಾರೆ. ಹಾಗೂ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯ ಸೆಲ್ ಸೈಟ್ ಮೊಬೈಲ್ ಶಾಪ್ ಗೆ ನುಗ್ಗಿದ ಕಳ್ಳರು 5 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಅಲ್ಲದೇ ಬ್ಯಾಂಕ್ ರಸ್ತೆಯಲ್ಲಿರುವ ಕಾಮತ್ ಕೋಲ್ಡ್ ಹೌಸ್ ಗೆ ನುಗ್ಗಿದ್ದು ಅಲ್ಲಿ ಡ್ರಾಯರ್ ಜಾಲಾಡಿ ಬರಿ ಕೈಯಲ್ಲಿ ಮರಳಿದ್ದಾರೆ ಎನ್ನಲಾಗಿದೆ. ಕಳೆದ ರಾತ್ರಿ ಕಳ್ಳರು ಈ ಕೃತ್ಯ ನಡೆಸಿದ್ದು, ಪೊಲೀಸ್ ಠಾಣೆಯ ಎದುರಿನಲ್ಲೆ ಕಳ್ಳರು ತಮ್ಮ ಕೈಚಳಕ ತೋರಿದ್ದು, ನಾಗರಿಕ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದೆ.






error: Content is protected !!
Scroll to Top